ಹುಡುಗ (ಹುಡುಗಿಯ ತಂದೆಗೆ) : ನಾನು ನಿಮ್ಮ ಮಗಳನ್ನು ಮದುವೆಯಾಗಲು ಬಯಸುತ್ತೇನೆ.
ಹುಡುಗಿ ತಂದೆ : ಅದು ಸರಿ... ನೀನು ನನ್ನ ಹೆಂಡತಿಯನ್ನು ಭೇಟಿ ಆಗಿದ್ದಿ ತಾನೇ?
ಹುಡುಗ : ಇಲ್ಲ... ಇಲ್ಲ.... ನನಗೆ ನಿಮ್ಮ ಮಗಳು ಮಾತ್ರ ಒಪ್ಪಿಗೆ.
ವರನ ಕಡೆಯರು : ಅದು ಸರಿ, ನಿಮ್ಮ ಮಗಳು ಏನೆಲ್ಲ ಮಾಡುತ್ತಾಳೆ?
ವಧುವಿನ ಕಡೆಯವರು : ಅವಳನ್ನು ಎಷ್ಟೂಂತ ಹೊಗಳೋದು.... ಸೆಲ್ಛಿ ತೆಗೆದುಕೊಳ್ಳುವಾಗ ಇವಳು 4-5 ತರಹ ಮುಖ ಮಾಡುತ್ತಾಳೆ.
ಗುಂಡನ ಮದುವೆಯಾಗಿ 2 ವರ್ಷ ಆಗಿತ್ತು. ವಿವಾಹ ವ್ಯವಸ್ಥೆ ಬಗ್ಗೆ ಒಂದು ಲೇಖನ ಸಿದ್ಧಪಡಿಸಲೆಂದು ಮರಿ ವರದಿಗಾರನೊಬ್ಬ ಅವನನ್ನು ಭೇಟಿಯಾಗಿ ಪ್ರಶ್ನಿಸಿದ, ``ಮದುವೆಗೆ ಮುಂಚೆ ನೀವು ಏನು ಮಾಡುತ್ತಿದ್ರಿ?'' ಗುಂಡನ ಕಂಗಳಲ್ಲಿ ಕಂಬನಿ ತುಳುಕುವುದೊಂದು ಬಾಕಿ, ``ನನ್ನ ಮನ ಬಯಸಿದ್ದನ್ನು ಮಾಡುತ್ತಿದ್ದೆ...'ಮದುವೆಯ ಆರತಕ್ಷತೆ ವೈಭವದಿಂದ ನಡೆದಿತ್ತು. ವೇದಿಕೆ ಮೇಲಿದ್ದ ವಧೂವರರಿಗೆ ಶುಭ ಕೋರು ಜನ ಸಾಲಾಗಿ ಬರುತ್ತಿದ್ದರು.
ವರನ ಗೆಳೆಯರ ಗುಂಪು ಬಂದಾಗ ವಧು ಪಕ್ಕ ಅವಳ ತಂಗಿ ಸಹ ನಿಂತಿದ್ದಳು. ವರ ಅವಳನ್ನು ಗೆಳೆಯರಿಗೆ ಪರಿಚಯಿಸುತ್ತಾ, ``ಇವಳು ನನ್ನ ನಾದಿನಿ.... ನಾನು ಇವಳ ಅಕ್ಕನ ಗಂಡನಾದ್ದರಿಂದ ಅರ್ಧ ಭಾಗ ಹೆಂಡತಿ ಆದಹಾಗೇ....'' ಎಂದಾಗ ಎಲ್ಲರೂ ಜೋರಾಗಿ ನಕ್ಕು ನಲಿದಾಡಿದರು.
ಮತ್ತೊಂದು ಗುಂಪು ವಧುವಿನ ಗೆಳತಿಯರದು ಬಂದಿತು. ಈ ಬಾರಿ ವರನ ಪಕ್ಕ ಅವನ ತಮ್ಮ ನಿಂತಿದ್ದ. ವಧು ಅವನನ್ನು ಗೆಳತಿಯರಿಗೆ ಪರಿಚಯಿಸುತ್ತಾ, ``ಇವರು ನನ್ನ ಮೈದುನ.... ದುಬೈನಲ್ಲಿ ಕೆಲಸದಲ್ಲಿದ್ದಾರೆ..... ನಾನು ಇವರ ಅಣ್ಣನ ಹೆಂಡತಿಯಾದ್ದರಿಂದ ಇವರು ನನಗೆ ಅರ್ಧ ಭಾಗ ಪತಿ ಪರಮೇಶ್ವರನಂತೆಯೇ!'' ಎಂದಾಗ ಕಕ್ಕಾಬಿಕ್ಕಿಯಾದ ವರ ಕಣ್ಕಣ್ಣು ಬಿಟ್ಟ!
ಇತ್ತೀಚಿನ ಒಂದು ಸಮೀಕ್ಷೆ ಪ್ರಕಾರ ನಮ್ಮ ದೇಶದಲ್ಲಿ ವಿಚ್ಛೇದನದ ಪ್ರಕರಣಗಳು ಎಷ್ಟೋ ಕಡಿಮೆ ಆಗಿಹೋಗಿದೆಯಂತೆ.... ಕಾರಣ? ಪತಿಪತ್ನಿ ಇಬ್ಬರೂ ಸದಾ ವಾಟ್ಸ್ಆ್ಯಪ್‌ನಲ್ಲಿ ತಲ್ಲೀನರಾಗಿರುತ್ತಾರೆ, ಹೀಗಾಗಿ ಜಗಳವಾಡಲಿಕ್ಕೇ ಅವರಿಗೆ ಪುರಸತ್ತಿಲ್ಲವಂತೆ.... ಅಂದ್ರೆ? ನಮ್ಮ ಪ್ರಧಾನಿಯವರ, ಕನಸಿನಂತೆ `ಒಳ್ಳೆಯ ದಿನಗಳು ಬಂದೇಬಿಟ್ಟವು!'
ಮದುವೆಯಾದ ಮೊದಲ ರಾತ್ರಿ ಪತಿಪತ್ನಿ ತಮ್ಮ ಪ್ರಸ್ತದ ಕೋಣೆಯಲ್ಲಿ ಮಾತಿನಲ್ಲಿ ಬಿಝಿಯೋ ಬಿಝಿ.
ಪತ್ನಿ : ನಾವೀಗ ಒಂದು ಗೇಮ್ ಆಡೋಣ.
ಪತಿ : ಎಂಥ ಗೇಮ್?
ಪತ್ನಿ : ನಾನೀಗ ಒಂದು ಬಣ್ಣದ ಹೆಸರು ಹೇಳಿದರೆ, ನೀವು ಎಡಗೋಡೆ ಮುಟ್ಟಬೇಕು. ಬದಲಿಗೆ ಹಣ್ಣಿನ ಹೆಸರು ಹೇಳಿದರೆ ಬಲಗಡೆ ಗೋಡೆ ಮುಟ್ಟಬೇಕು.
ಪತಿ : ಇದರಲ್ಲಿ ನಾನು ಗೆದ್ದರೆ....?
ಪತ್ನಿ : ಯಾರು ಸೋಲುತ್ತಾರೋ ಅವರು ಜೀವನಪೂರ್ತಿ ಗೆದ್ದರ ಮಾತನ್ನು ಕೇಳಬೇಕು, ಅವರಿಗೆ ತಗ್ಗಿಬಗ್ಗಿ ನಡೆದುಕೊಳ್ಳಬೇಕು.
ಪತಿ : ಓ ಅಷ್ಟೇನಾ..... ನಾನು ಇದರಲ್ಲಿ ಸುಲಭವಾಗಿ ಗೆಲ್ಲುತ್ತೇನೆ ಬಿಡು. ಎಲ್ಲಿ ಬೇಗ ಬೇಗ ಹೇಳು....
ಪತ್ನಿ : ಹಾಗಿದ್ದರೆ ಸರಿ..... ರೆಡಿ, ಸ್ಟೆಡಿ, ಗೋ.... ಆರೆಂಜ್!
ಪತಿ : ್ಶ್ಲಾರ್ಬಿ!??
ವಿಮಲಮ್ಮ : ಯಾಕಮ್ಮ ಮಹಾರಾಣಿ.... ಮೇಲಿನ ರಾಯರ ಕೋಣೆ ಕ್ಲೀನ್‌ಮಾಡಿ ಬರಲು ಇಷ್ಟು ತಡ ಆಯಿತೇ?