ಆಕರ್ಷಕ ಡೈಮಂಡ್‌ ನೆಕ್ಲೇಸ್‌ ಸಂಗ್ರಹದೊಂದಿಗೆ ಕೇವಲ 77,000 ರೂ.ಗಳಿಂದ ಇದೀಗ ವಜ್ರದ ನೆಕ್ಲೇಸ್‌ಗಳ ಮಾರಾಟ ಆರಂಭಗೊಂಡಿದೆ!

ಭಾರತದ ಪ್ರಸಿದ್ಧ ವಜ್ರಾಭರಣ ಬ್ರ್ಯಾಂಡ್‌ ಆಗಿರುವ ಕೀರ್ತಿಲಾಲ್ ‌ನಂಬಲಾಗದ ಬೆಲೆಯಲ್ಲಿ ಆಕರ್ಷಕ, ಹಗುರ ತೂಕದ ವಜ್ರದ ನೆಕ್ಲೇಸ್‌ಗಳೊಂದಿಗೆ ಬೆಂಗಳೂರಿನಲ್ಲಿ ತನ್ನ ಮೊದಲನೇ ವಾರ್ಷಿಕೋತ್ಸವವನ್ನು ಇತ್ತೀಚೆಗೆ ಆಚರಿಸಿತು. ಈ ಅನಾವರಣದ ವೇಳೆ ಕೀರ್ತಿಲಾಲ್‌, ಸಾಂಪ್ರದಾಯಿಕ ವಿನ್ಯಾಸದಲ್ಲಿ ಮತ್ತು ಸಮಕಾಲೀನ ಶೈಲಿಗಳಲ್ಲಿ ಬಹು ಕೋರಿಕೆಯ ಹೊಳೆಯು ವಜ್ರದ ನೆಕ್ಲೇಸ್‌ಗಳ ವ್ಯಾಪಕ ಶ್ರೇಣಿಯನ್ನು ಪ್ರದರ್ಶಿಸಿತು.

ಈ ಅನಾವರಣದೊಂದಿಗೆ, ವಜ್ರಾಭರಣ ಉದ್ಯಮದಲ್ಲಿ  ಇರುವ ಎರಡು ಅಂಶಗಳನ್ನು ಕೀರ್ತಿಲಾಲ್‌ ಪ್ರಸ್ತಾಪಿಸಿತು.

ಹೊಸ ಪೀಳಿಗೆಯ ಖರೀದಿದಾರರಲ್ಲಿ ವಜ್ರಾಭರಣ ಬೇಡಿಕೆಯು ಹೆಚ್ಚುತ್ತಿದೆ. ಆದರೆ ಬೆಲೆ ಅಂಶ ಸದಾ ಕಳವಳಕ್ಕೆ ಕಾರಣವಾಗಿದೆ. ಮಾರುಕಟ್ಟೆಯಲ್ಲಿನ ಈ ಅಂತರವನ್ನು ಸರಿದೂಗಿಸಲು ಕೀರ್ತಿಲಾಲ್ 77,000 ರೂ.ಗಳಿಂದ ಆರಂಭವಾಗುವಂತೆ ಡೈಮಂಡ್‌ ನೆಕ್ಲೇಸ್‌ಗಳನ್ನು ಅನಾವರಣಗೊಳಿಸಿತು.

ಬದಲಾಗುತ್ತಿರುವ ಪ್ರವೃತ್ತಿಯೊಂದಿಗೆ, ಗ್ರಾಹಕರು ವಜ್ರಾಭರಣವನ್ನು ಸಾಂದರ್ಭಿಕವಾಗಿ ಧರಿಸುವ ಬದಲು ಪ್ರತಿದಿನ ಧರಿಸಲು ಹೆಚ್ಚು ಒಲವು ತೋರುತ್ತಿದ್ದಾರೆ. ಕೀರ್ತಿಲಾಲ್ ‌ನಲ್ಲಿ ವಿನ್ಯಾಸಕರು ಹೊಸ ತಲೆಮಾರಿನ ಮಹಿಳೆಯರ ಆಯ್ಕೆಯ ಲಕ್ಷಣಗಳನ್ನು ಅಧ್ಯಯನ ಮಾಡಲು ಮತ್ತು ಅವರಿಗೆ ಒಂದು ಅನ್ವೇಷಣಾತ್ಮಕ ಶೈಲಿಯಲ್ಲಿ ಪ್ರಸ್ತುತಪಡಿಸಲು ಜಗತ್ತಿನಾದ್ಯಂತ ಪ್ರವಾಸ ಮಾಡಿದ್ದಾರೆ.

“ನಮ್ಮ ಗ್ರಾಹಕರಿಗೆ ಸಮಂಜಸ ಬೆಲೆಯಲ್ಲಿ ಡೈಮಂಡ್‌ ನೆಕ್ಲೇಸ್‌ಗಳ ಹೊಸ ಶ್ರೇಣಿಯನ್ನು ನೀಡಲು ನಮಗೆ ಸಂತೋಷ ಎನಿಸುತ್ತದೆ. ವಜ್ರದ ಆಭರಣಕ್ಕೆ ಹೋಲಿಸಿದರೆ ಚಿನ್ನಾಭರಣ ಹೆಚ್ಚು ಕೈಗೆಟುಕುತ್ತದೆ ಎಂಬ ಗ್ರಹಿಕೆ ಇದೆ. ಆದಾಗ್ಯೂ, ಈ ಡೈಮಂಡ್‌ ನೆಕ್ಲೇಸ್‌ಗಳ ಅನಾವರಣದೊಂದಿಗೆ ಚಿನ್ನದ ನೆಕ್ಲೇಸ್‌ಗಿಂತ ಕಡಿಮೆ ಬೆಲೆಯಲ್ಲಿ ಇದನ್ನು ಖರೀದಿಸಬಹುದಾಗಿದೆ,” ಎಂದು ಕೀರ್ತಿಲಾಲ್ ವ್ಯಾವಹಾರಿಕ ಕಾರ್ಯತಂತ್ರ ವಿಭಾಗದ ನಿರ್ದೇಶಕ ಸೂರಜ್‌ ಶಾಂತಕುಮಾರ್‌ ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೀರ್ತಿಲಾಲ್ನ ಮಾರುಕಟ್ಟೆ ವಿಭಾಗದ ಮುಖ್ಯಸ್ಥರಾದ ಅರುಣ್‌ಕುಮಾರ್‌, “ನಮ್ಮ ಗ್ರಾಹಕರ ನಿರೀಕ್ಷೆಗಳನ್ನು ಪೂರೈಸಲು ನಾವು ಸದಾ ಶ್ರಮಿಸುತ್ತಿದ್ದೇವೆ. ವಜ್ರನ್ನು ಖರೀದಿಸುವುದು ಅದರ ಮೌಲ್ಯಕ್ಕಿಂತ ಅದರೊಂದಿಗಿನ ಭಾವನೆಗಳಿಗೆ ಹೆಚ್ಚು ಸಂಬಂಧಪಟ್ಟಿದ್ದಾಗಿರುತ್ತದೆ.

`ಮೊದಲ ಡೈಮಂಡ್‌ ನೆಕ್ಲೇಸ್‌’ ಹೊಸ ತಲೆಮಾರಿನ ಗ್ರಾಹಕರಿಗೆ ಅವಿಸ್ಮರಣೀಯವಾಗುತ್ತದೆ,” ಎಂದು ವ್ಯಾಖ್ಯಾನಿಸಿದರು.

ಕೀರ್ತಿಲಾಲ್ ಕುರಿತು : ಕೀರ್ತಿಲಾಲ್ ಒಂದು ಉತ್ಕೃಷ್ಟ ವಜ್ರ ಮತ್ತು ಸ್ವರ್ಣಾಭರಣಗಳ ಬ್ರ್ಯಾಂಡ್‌. ಕೀರ್ತಿಲಾಲ್ ‌ಕಾಳಿದಾಸ್‌ಜ್ಯೂವೆಲರ್ಸ್‌ ಪ್ರೈವೇಟ್‌ ಲಿಮಿಟೆಡ್‌ `ಕೀರ್ತಿಲಾಲ್‌’ ಬ್ರ್ಯಾಂಡ್‌ ಹೆಸರಿನಲ್ಲಿ 11 ವಿಶೇಷ ಶೋರೂಂಗಳೊಂದಿಗೆ ಭಾರತದಾದ್ಯಂತ ಕಾರ್ಯ ನಿರ್ಹಿಸುತ್ತಿದೆ. ರೀಟೇಲ್ ‌ಮತ್ತು ತಯಾರಿಕಾ ಘಟಕ ಇವೆರಡರಲ್ಲೂ ಐಎಸ್‌ಓ 9001-2008ರಿಂದ ಪ್ರಮಾಣಪತ್ರ ಪಡೆದ ಪ್ರಥಮ ಜ್ಯೂವೆಲರಿ ಬ್ರ್ಯಾಂಡ್‌ ಎಂಬ ಕೀರ್ತಿಗೆ, ಕೀರ್ತಿಲಾಲ್ ‌ಪಾತ್ರವಾಗಿದೆ. ಈ ಬ್ರ್ಯಾಂಡ್‌ ಕೊಯಂಬತ್ತೂರಿನಲ್ಲಿ ತನ್ನ ಪ್ರಮುಖ ಮಳಿಗೆಯನ್ನು ಹೊಂದಿದ್ದು, 5 ಖಂಡಗಳಲ್ಲಿ ವ್ಯಾಪಿಸಿರುವ 3,00,000ಕ್ಕೂ ಅಧಿಕ ಗ್ರಾಹಕರೊಂದಿಗೆ 75 ವರ್ಷಗಳ ಕಾರ್ಯಾಚರಣೆಯ ಪರಂಪರೆ ಹೊಂದಿದೆ. ಕೊಯಂಬತ್ತೂರು, ಚೆನ್ನೈ, ಮದುರೈ, ತಿರುಪ್ಪೂರು, ಕೊಚ್ಚಿ, ಬೆಂಗಳೂರು, ಹೈದರಾಬಾದ್‌, ವಿಜಯಾಡ, ವಿಶಾಖಪಟ್ಟಣಂ ನಗರಗಳಲ್ಲಿ ಈ ಬ್ರ್ಯಾಂಡ್‌ ಇದೆ.

ಬೆಂಗಳೂರಿನಲ್ಲಿ ಹೆಚ್ಚಿನ ವಿರಗಳಿಗಾಗಿ ಸಂಪರ್ಕಿಸಿ : ಜಯನಗರ : 080  65692011 ರಿಚ್ಮಂಡ್‌ ವೃತ್ತ : 080  22103311

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ