ಆಫೀಸಿನಲ್ಲಿ ಕುಳಿತಿದ್ದ ರಾಧಾಳ ದೃಷ್ಟಿ ಇದ್ದಕ್ಕಿದ್ದಂತೆ ಕ್ಯಾಲೆಂಡರ್‌ ಮೇಲೆ ಬಿತ್ತು. ದೀಪಾವಳಿ ಹಬ್ಬದ ತಾರೀಖು ಹತ್ತಿರ ಬರುತ್ತಿರುವುದನ್ನು ನೋಡಿದ ಕೂಡಲೇ ಅವಳಿಗೆ ಹೊಳೆದ ಪ್ರಶ್ನೆ ಒಂದೇ. ರಿಸರ್ವೇಶನ್‌ ಸಿಗುವುದೋ ಇಲ್ಲವೇ? ಮರುಕ್ಷಣವೇ ಅವಳ ಬೆರಳುಗಳು ಲ್ಯಾಪ್‌ಟಾಪ್‌ನ ಕೀಬೋರ್ಡ್‌ ಮೇಲೆ ಓಡತೊಡಗಿದವು. ಆದರೆ ಅವಳಿಗೆ ಹತಾಶೆ ಮೂಡಿತು. ಎಲ್ಲ ಸೀಟ್‌ಗಳೂ ಭರ್ತಿಯಾಗಿದ್ದವು. ಟ್ರೇನ್‌ ಅಷ್ಟೇ ಅಲ್ಲ, ಅವಳಿಗೆ ಬಸ್‌ ಮತ್ತು ವಿಮಾನದ ಟಿಕೆಟ್‌ ಸಹ ಸಿಗಲಿಲ್ಲ. ತಾನು ಹೇಗೆ ಊರಿಗೆ ಹೋಗುವುದು? ಒಂದು ವೇಳೆ ಹೋಗಲಾಗದಿದ್ದರೆ ಮನೆಯವರಿಂದ ದೂರವಿದ್ದು ಹಬ್ಬ ಹೇಗೆ ಆಚರಿಸುವುದು ಎಂದು ಚಿಂತಾಮಗ್ನಳಾದಳು.

ರಾಧಾಳಂತೆಯೇ ಇನ್ನೂ ಅದೆಷ್ಟೋ ಜನ ಮನೆಯವರಿಂದ ದೂರವಿದ್ದು ನಗರಗಳಲ್ಲಿ ವಾಸಿಸುತ್ತಿದ್ದಾರೆ. ಮನೆಯವರಿಂದ ದೂರ ಇರಲು ಎಲ್ಲರಿಗೂ ತಮ್ಮದೇ ಆದ ಕಾರಣಗಳಿವೆ. ಕೆಲವರು ಶಿಕ್ಷಣಕ್ಕಾಗಿಯೂ, ಕೆಲವರು ನೌಕರಿಯ ಕಾರಣದಿಂದಾಗಿಯೂ ಬೇರೊಂದು ನಗರದಲ್ಲಿ ವಾಸಿಸುತ್ತಿದ್ದಾರೆ. ಕೆಲಸ ಹಾಗೂ ಓದಿನ ಜಂಜಾಟದಲ್ಲಿ ಸಿಲುಕಿದ ಇಂತಹವರಿಗೆ ಪ್ರತಿದಿನ ಅಲ್ಲದಿದ್ದರೂ ಹಬ್ಬಗಳಂದು ಮನೆಯವರು ಹತ್ತಿರ ಇಲ್ಲದಿರುವುದು ಬಹಳ ಬಾಧಿಸುತ್ತದೆ. ಆದ್ದರಿಂದ ಅವರು ಹಬ್ಬಗಳಲ್ಲಿ ಊರಿಗೆ ಹೋಗಲು ಹಂಬಲಿಸುತ್ತಾರೆ. ರಿಸರ್ವೇಶನ್‌ ಶುರುವಾದಾಗ ಜನ ತಮ್ಮ ಸೀಟ್‌ ಬುಕ್‌ ಮಾಡಿಸಲು ಇಂಟರ್‌ನೆಟ್‌ನಲ್ಲಿ ಅಂಟಿಕೊಳ್ಳುತ್ತಾರೆ. ಕೆಲವರು ರಿಸರ್ವೇಶನ್‌ ಮಾಡಿಸಲು ಆಫೀಸಿಗೆ ರಜೆ ಹಾಕಿ ರೇಲ್ವೆ ಸ್ಟೇಷನ್‌ನಲ್ಲಿನ ಉದ್ದನೆಯ ಕ್ಯೂಗಳಲ್ಲಿ ಗಂಟೆಗಟ್ಟಲೇ `ಕ್ಯೂ' ನಿಲ್ಲುತ್ತಾರೆ. ಅದರ ನಂತರ ಅನೇಕ ಬಾರಿ ರಿಸರ್ವೇಶನ್‌ ಸಿಗುವುದಿಲ್ಲ. ಹೀಗಿರುವಾಗ ತಮ್ಮ ಊರಿನವರಾದ, ಮನೆಗೆ ಹೊಗಲು ಸೀಟ್‌ ಸಿಕ್ಕ ಗೆಳೆಯರನ್ನು ಅಭಿನಂದಿಸಬೇಕು. ಕೆಲವೊಮ್ಮೆ ಲಂಚ ಕೊಡಬೇಕಾಗುತ್ತದೆ. ಹೀಗೆ ಹಲವಾರು ತೊಂದರೆಗಳು ಆಗ ಒಂದು ದಿನದ ಹಬ್ಬಕ್ಕೆ ಇಷ್ಟು ಹೋರಾಟ ಏಕೆ ಎಂದು ಅನ್ನಿಸುತ್ತದೆ.  ಹಬ್ಬವನ್ನು ಅವರು ಇರುವ ಸ್ಥಳದಲ್ಲೇ ಆಚರಿಸಬಹುದು. ಊರಿಗೆ ಹೋಗುವ ವ್ಯವಸ್ಥೆ ಆಗದಿದ್ದರೆ ಚಿಂತಿಸುವುದಾದರೂ ಏಕೆ? ಹಬ್ಬದ ನಂತರ ಬಿಡುವು ಪಡೆದು ಊರಿಗೆ ಹೋಗಬಹುದು.  ಹೌದು, ನಮ್ಮವರ ಜೊತೆಯಲ್ಲಿ ಆಚರಿಸಿದರೇನೇ ಹಬ್ಬಗಳ ಮಜಾ ಬಹಳ ಸವಿಯಾಗಿರುತ್ತದೆ. ಅದಕ್ಕಾಗಿ ಜಾಗೃತರಾಗಿರಬೇಕು. ಅಂದರೆ ಊರಿಗೆ  ಹೊರಡಲು ಮುಂಚಿತವಾಗಿಯೇ ವ್ಯವಸ್ಥೆ ಮಾಡಿಕೊಳ್ಳುವುದು ಒಳ್ಳೆಯದು. ಇಲ್ಲದಿದ್ದರೆ ಈ ಗಡಿಬಿಡಿಯಿಂದ ಹಲವಾರು ತೊಂದರೆಗಳು ಉದ್ಭವಿಸುತ್ತವೆ.

ಮೊದಲನೆಯ ಹಾಗೂ ದೊಡ್ಡ ತೊಂದರೆ ನಿಮ್ಮ ಜೇಬಿಗೆ ಸಂಬಂಧಿಸಿದ್ದು. ಒಂದು ವೇಳೆ ಸಮಯಕ್ಕೆ ಸರಿಯಾಗಿ ನೀವು ಬುಕ್ ಮಾಡಿಸಲಾಗದಿದ್ದರೆ ತತ್ ಕಾಲ್ ಟಿಕೆಟ್‌ಸಿಗುವುದು ಅಸಂಭವ. ಯಾರಾದರೂ ಏಜೆಂಟ್‌ರಿಂದ ತತ್ ಕಾಲ್ ಟಿಕೆಟ್‌ ಬುಕ್ ಮಾಡಿಸಿದರೆ ಬಹಳ ದುಬಾರಿಯಾಗುವುದು. ಒಂದು ವೇಳೆ ನೀವು ಬಸ್‌ ಅಥವಾ ಫ್ಲೈಟ್‌ನಿಂದ ಹೋಗಲು ಯೋಚಿಸುತ್ತಿದ್ದರೆ ಆಗಲೂ ಬಹಳ ದುಬಾರಿಯಾಗುತ್ತದೆ.

ಹಣವಲ್ಲದೆ ಇನ್ನೊಂದು ತೊಂದರೆಯೆಂದರೆ ಆಫೀಸ್‌ ಕೆಲಸ. ನೀವು ಊರಿಗೆ ಹೋಗಬೇಕೆಂದು ನಿರ್ಧರಿಸಿದರೆ ಅದಕ್ಕೆ ಮೊದಲು ಎಲ್ಲ ಕೆಲಸಗಳನ್ನು ಮುಗಿಸಬೇಕೆಂದು ಯೋಚಿಸಿರುತ್ತೀರಿ. ನಿಮ್ಮ ಅನುಪಸ್ಥಿತಿಯಲ್ಲಿ ನಿಮ್ಮ ಕೆಲಸದ ಹೊರೆ ಇನ್ನೊಬ್ಬರ ಮೇಲೆ ಬೀಳಬಾರದು. ಆದರೆ ಕೆಲಸಗಳನ್ನು ತಕ್ಷಣವೇ ಮಾಡಿ ಮುಗಿಸಲಾಗುವುದಿಲ್ಲ. ಮನೆಗೆ ಹೋಗುವ ಗಡಿಬಿಡಿಯಲ್ಲಿ ಹೆಚ್ಚು ಸಮಯ ಹಿಡಿಯುವ ಕೆಲಸವನ್ನು ಕಡಿಮೆ ಸಮಯದಲ್ಲಿ ನಿರ್ವಹಿಸಿದರೆ ಅದರ ಗುಣಮಟ್ಟ ಹೇಗಿರಬಹುದು? ಹೀಗಿರುವಾಗ ಕೆಲಸವನ್ನು ಕುಶಲತೆಯಿಂದ ಮಾಡದಿದ್ದರೆ ನಿಮ್ಮ ಅಪ್ರೈಸ್‌ ಸಮಯ ಬಂದಾಗ ತೊಂದರೆಯಾಗುತ್ತದೆ. ಏಕೆಂದರೆ ಸಂಸ್ಥೆಗಳಲ್ಲಿ ನೌಕರರು ಕೆಲಸದ ಬಗ್ಗೆ , ತೋರುವ ಪ್ರಾಮಾಣಿಕತೆ, ಪರಿಶ್ರಮ ಮತ್ತು ನಿಷ್ಠೆಗಳನ್ನು ಪರೀಕ್ಷಿಸಲಾಗುತ್ತದೆ.  ಹೀಗಿರುವಾಗ ಈ ಒಂದು ಮೈನಸ್‌ ಪಾಯಿಂಟ್‌ ನಿಮ್ಮ ಇಡೀ ವರ್ಷದ ಪರಿಶ್ರಮಕ್ಕೆ ತಣ್ಣೀರೆರಚಿದಂತಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ