ಕೇವಲ 8 ದಿನದ ಅವಧಿಗೆ ಅಂತರಿಕ್ಷಕ್ಕೆ ಹಾರಿದ್ದ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ 9 ತಿಂಗಳು ಅಲ್ಲೇ ಲಾಕ್ ಹಾಕಿದ್ರು. ಗಗನಯಾತ್ರಿಗಳ ಸುರಕ್ಷತೆಯ ಬರುವಿಕೆಗಾಗಿ ಪ್ರಪಂಚವೇ ಪ್ರಾರ್ಥನೆ ಮಾಡ್ತಿತ್ತು. ಕೊನೆಗೂ ಗಗನಯಾನಿಗಳ ಆತ್ಮಸ್ಥೈರ್ಯ, ವಿಜ್ಞಾನಿಗಳ ಅವಿರತ ಶ್ರಮ, ಜನರ ಪ್ರಾರ್ಥನೆ ಫಲಿಸಿದೆ. ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಅವರನ್ನ ಕರೆತರಲು ಹಾರಿದ್ದ ಎಲಾನ್ ಮಸ್ಕ್ ಒಡೆತನದ ಸ್ಪೆಸ್ಟ್ ಎಕ್ಸ್​​​ನ ಡ್ರ್ಯಾಗನ್ ಕ್ರಾಫ್ಟ್ ಕ್ರ್ಯೂ-10 ಬಾಹ್ಯಾಕಾಶ ನೌಕೆ ಗಗನಯಾತ್ರಿಗಳನ್ನ ಸುರಕ್ಷಿತವಾಗಿ ಕರೆತಂದಿದೆ. 9 ತಿಂಗಳ ನಂತರ ಗಗನಯಾತ್ರಿಗಳು ಭೂಮಿ ಮೇಲೆ ಕಾಲಿಟ್ಟಿದ್ದಾರೆ.

ಕೋಟ್ಯಾನು ಕೋಟಿ ಜನರ ಪ್ರಾರ್ಥನೆ.. ನೂರಾರು ವಿಜ್ಞಾನಿಗಳ ಹಗಲಿರುಳಿನ ಅವಿರತ ಶ್ರಮ.. ಭೂಮಿಗೆ ಹಿಂತಿರುಗಬೇಕೆನ್ನುವ ಗಗನಯಾತ್ರಿಗಳ ಬಯಕೆ.. ಕೊನೆಗೂ 9 ತಿಂಗಳ ಬಾಹ್ಯಾಕಾಶದ ವನವಾಸಕ್ಕೆ ಮುಕ್ತಿ ಸಿಕ್ಕಿದೆ. ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿರುವ ಅಮೃತಘಳಿಗೆ ಬಂದೇ ಬಿಟ್ಟಿದೆ. ಅಂತರಿಕ್ಷಯಾನಿಗಳಾದ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಸುರುಕ್ಷಿತವಾಗಿ ಭೂಮಿಗೆ ಮರಳಿದ್ದಾರೆ.

ಗಟ್ಟಿಗಿತ್ತಿ ನಮ್ಮ ಸುನಿತಾ :

ಸುನಿತಾ ವಿಲಿಯಮ್ಸ್ ಭಾರತ ಮೂಲದ ಅಂತರಿಕ್ಷಯಾನಿ. ಸಾಮಾನ್ಯ ವಿಜ್ಞಾನಿ, ಸಾಮಾನ್ಯ ಗಗನಯಾತ್ರಿ ಅಲ್ಲ. ಅಂತರಿಕ್ಷ ಯಾನದಲ್ಲೇ ಯಾರು ಮಾಡಿರದ ಸಾಧನೆ ಮಾಡಿದ ಗಟ್ಟಿಗಿತ್ತಿ. 9 ಬಾರಿ ಒಟ್ಟು 62 ಗಂಟೆ 6 ನಿಮಿಷಗಳ ಕಾಲ ಸ್ಪೇಸ್ ವಾಕ್ ಮಾಡಿದ ಸಾಧಕಿ. ಇಷ್ಟೆಲ್ಲಾ ಸಾಧನೆ ಮಾಡಿರೋ ಸುನಿತಾ ವಿಲಿಯಮ್ಸ್ ಅಂತರಿಕ್ಷದಲ್ಲೇ ಸಿಕ್ಕಾಕೊಳ್ತಾರೆ ಅಂತ ಯಾರಿಗೂ ಗೊತ್ತಿರ್ಲಿಲ್ಲ. ಅಮೆರಿಕದ ನಾಸಾ ತಂಡ ಊಹಿಸೋದಕ್ಕೂ ಸಾಧ್ಯವಿರ್ಲಿಲ್ಲ. ಅದೇನೋ ಹೇಳ್ತಾರಲ್ಲ. ತಾನೊಂದು ಬಗೆದರೆ ದೈವವೊಂದು ಬಗೆದಂತೆ ಅಂತ. ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ವಿಷಯದಲ್ಲೂ ಆಗಿದ್ದೂ ಆದೆ.

ಕೇವಲ 8 ದಿನದ ಅಂತರಿಕ್ಷ ಯಾನಕ್ಕೆ ಎಂದು ಈ ಜೋಡಿ ಕಳೆದ ವರ್ಷ ಜೂನ್ 5ರಂದು ಗಗನಕ್ಕೆ ಹಾರಿದ್ದಷ್ಟೆ. ಅಂದುಕೊಂಡಂತೆ ಸ್ಟಾರ್ಲೈನರ್ನ ಆಕಾಶ ನೌಕೆ ಸುರಕ್ಷಿತವಾಗಿ ಅಂತರಿಕ್ಷವೇನೋ ತಲುಪಿತು. ಸ್ಟಾರ್ ಲೈನರ್ನಲ್ಲಿ ಕಾಣಿಸಿಕೊಂಡು ತಾಂತ್ರಿಕ ದೋಷದಿಂದ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಅವ್ರನ್ನ ಸ್ಪೇಸ್ ಸೆಂಟರ್ನಲ್ಲೇ ಬಿಟ್ಟು ಬರ್ಬೇಕಾಯ್ತು. 8 ದಿನದ ಅವಧಿಗೆ ಅಂತ ತೆರಳಿದ್ದ ಸುನಿತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಅಲ್ಲೇ ತಗಲಾಕಿಕೊಂಡ್ರು. ಪ್ರಾರಂಭದಲ್ಲಿ 15 ರಿಂದ 20 ದಿನಗಳಲ್ಲಿ ಭೂಮಿಗೆ ಮರಳುತ್ತಾರೆ ಅಂತ ಹೇಳಲಾಗ್ತಿತ್ತು. 10 ದಿನವಾಯ್ತು.. ಒಂದು ತಿಂಗಳಾಯ್ತು.. ಐದು ತಿಂಗಳಾಯ್ತು.. ಒಂದು ಸಮಯದಲ್ಲಿ ಭೂಮಿಗೆ ಬರುವ ಸಾಧ್ಯತೆ ಕಮ್ಮಿಯಿದೆ ಅಂತಲೂ ಹೇಳಲಾಗಿತ್ತು.

ಎಲಾನ್​ ಮಸ್ಕ್​​ ಸಾಹಸ :

ಆತ್ಮಸ್ಥೈರ್ಯವೊಂದಿದ್ರೆ ಮನುಷ್ಯ ಏನ್ ಬೇಕಾದ್ರು ಸಾಧನೆ ಮಾಡ್ತಾನೆ ಅನ್ನೋದಕ್ಕೆ ಇದೇ ಸಾಕ್ಷಿ. ಅಂತರಿಕ್ಷದಲ್ಲಿ ತಗಲಾಕ್ಕೊಂಡ ಸುನಿತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಆತ್ಮಸ್ಥೈರ್ಯ ಕಳೆದುಕೊಳ್ಳಲಿಲ್ಲ. ಇವರನ್ನ ಭೂಮಿಗೆ ಕರೆತರುವ ನಾಸಾ ತಂಡ ಹಠ, ಛಲ, ಶ್ರಮ ಬಿಡಲಿಲ್ಲ. 9 ತಿಂಗಳ ನಂತರ ಸ್ಪೇಸ್ ಸರದಾರ ಎಲಾನ್ ಮಸ್ಕ್ ಒಡೆತನದ ಸ್ಪೆಸ್ ಎಕ್ಸ್ನ ಡ್ರ್ಯಾಗನ್ ಕ್ರಾಫ್ಟ್ನ  ಕ್ರೂ-10 ಬಾಹ್ಯಾಕಾಶ ನೌಕೆ ಅಮೆರಿಕದ ಗಗನಯಾತ್ರಿ ನಿಕ್ ಹೇಗ್ ಹಾಗೂ ರಷ್ಯಾದ ಗಗನ ಯಾತ್ರಿ ಅಲೆಕ್ಸಾಂಡರ್ ಗೋರ್ಬುನೋವ್ ಅವರನ್ನು ಹೊತ್ತು ಭಾನುವಾರ ಅಂತರಿಕ್ಷ ಬಾಹ್ಯಾಕಾಶ ನಿಲ್ದಾಣಕ್ಕೆ ಹಾರಿತ್ತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ