ಒಬ್ಬ ಚಿತ್ರಕಲಾವಿದೆಯಾಗಿ ಮಾತ್ರವಲ್ಲದೆ, ಕುಂಚದ ಜೊತೆ ಲೇಖನಿಯನ್ನೂ ಹಿಡಿದು, ಅಪೂರ್ವ ಅನನ್ಯ ಲೇಖನ ಕಥೆ, ಕಾದಂಬರಿಗಳನ್ನು ಕನ್ನಡಿಗರಿಗೆ ಇತ್ತಿರುವ ಶಾಂತಿ ವಾಸು ಅವರ ಸಂಪೂರ್ಣ ಪರಿಚಯ ಪಡೆಯೋಣವೇ......?

ದೇಹದ ಬೇನೆಗೆ ಬದಲಾಗದ ದೇವತೆ, ನಂಬಿದ ಕೆಲ, ನೀಡುವ ದ್ರೋಹದ ಪೆಟ್ಟಿಗೆ ಬದಲಾಗುವುದು....

ಸಣ್ಣ ಬಿರುಕೂ ಪ್ರವೇಶಿಸು ಗಾಳಿಯ ನೋಡಿ ತಿಳಿ....

ಸಾಂಗತ್ಯದಲ್ಲಿ ದೊರೆತ ಸಣ್ಣ ಸಾಂತ್ವಾನದಿ,

ಬಾಡಿದ ಮನ ಚಿಗುರಿಸಲು ಕಲಿ......

ಅದೆಷ್ಟು ಒಳ ಅರ್ಥಗಳಿಂದ ತುಂಬಿದೆ ಈ ವಚನಗಳು!

ಜೀವನದ ಸುಖ ಸೌಕರ್ಯಗಳನ್ನು ಅನುಭವಿಸುವ ದಿನಗಳಲ್ಲಿ ಆಘಾತಗಳು ಸುಳಿವು ಕೊಡದೆ ಬಂದೆರಗಿದಾಗ ಕೋಮಲ ಮನಸ್ಸಿಗಾಗುವ ಘಾಸಿಗಳು, ಹೇಳತೀರದ ಬಾಧೆಗಳನ್ನು ತಂದೊಡ್ಡುತ್ತದೆ. ವಿಪರ್ಯಾಸವೇ, ಇಲ್ಲ ವಿಧಿಯಾಟವೇ...? ಏನ್ನೆನ್ನೋಣ ಇದಕ್ಕೆ!

ನಿಶ್ಶಬ್ದ ವಾತಾವರಣ, ಸುಂದರವಾದ ಗೃಹ ನಿರ್ಮಾಣ. ಒಳ ಅಡಿಯಿಡುತ್ತಿದ್ದಂತೆಯೇ ಎದುರಾಯಿತು ಈ ಕವಿಯಿತ್ರಿಯ ಭಾವಾಲೋಕದ ಪ್ರಪಂಚಕುಲದ ಮನ ಚಿಂತಿಸದೆ, ಒಂದರೆ ಕ್ಷಣ ಇರದು ನೋಡು, ಚಿಂತೆ ತೊರೆದು, ದೇವತೆಯ ಮನಕೆ ಗುರುವನ್ನು ನೀಡಿ ನೋಡು.

ಕುಲದೇವತೆ ಕಾವ್ಯ ನಾಮಾಂಕಿತ ಕಾವ್ಯನಾಮದವರು ಇವರು. ಈ ಅದ್ಭುತ ಸಾಲಗಳು, ನಮ್ಮನ್ನು ಸ್ವಾಗತಿಸಿದ್ದು ಹೀಗೆ. ತನ್ನ ಆರಾಧ್ಯ ದೈವ ಸಾಯಿಬಾಬಾನ ಗುಡಿ, ಅಲ್ಲಲ್ಲ ಮನಮೋಹಕ ಮರದ ಕೆತ್ತನೆಯ ಮಂದಿರವದು. ನನಗೆ ಅರಿವಿಲ್ಲದಂತೆಯೇ ಹಸ್ತಗಳು ಒಂದಾಗಿ ಗುರುವಿಗೆ ನಮಸ್ಕರಿಸಿದವು. ಎಲ್ಲೆಲ್ಲೂ ಚಿತ್ತಾರ ಸುಂದರ ವಿನ್ಯಾಸದ ಮನೆ, ಬುದ್ಧನ ಧ್ಯಾನದ ಮಂದಹಾಸ ಬೀರುವ ಮೊಗ ಗೋಡೆಯ ಮೇಲೆ ಶಾಂತವಾಗಿತ್ತು. ತನ್ನದೇ ವಿನ್ಯಾಸದಲ್ಲಿ ಮನೆಯ ರೂಪುರೇಷೆಗಳು ಮೂಡಿಬಂದದ್ದನ್ನು ಬಹಳ ಹೆಮ್ಮೆಯಿಂದ ಹೇಳಿದಾಗ, ಆ ಮೊಗದಲ್ಲೇನೋ ಹೆಮ್ಮೆಯಿತ್ತು. ನೋವಿನ ಛಾಯೆಯು ಮೂಡಿತ್ತು. ಗೋಡೆಯ ಆಸುಗಳಿಗೆ ತಾವೇ ಬಿಡಿಸಿದ ಜಲವರ್ಣದ ಕಲಾಕುಂಚಗಳು ನಗುತ್ತಾ ಬೀಗುತ್ತಿದ್ದವು. ಇವರಲ್ಲೊಬ್ಬ ಕಲಾಕಾರರು, ಕವಿಯಿತ್ರಿ, ಕಥೆಗಾರ್ತಿ, ವಚನಗಾರ್ತಿ.... ಇನ್ನೂ ಮುಂದಕ್ಕೆ ಸಾಗಿದರೆ ಭಾಷಾ ಹೋರಾಟಗಾರ್ತಿ, ಛಲಗಾತಿ, ಹಿಡಿದ ಕೆಲಸ ಮಾಡಿ ಮುಗಿಸುವವರೆವಿಗೂ ಬಿಡದೇ ಸಾಗುವ ಮಾನಿನಿ. ಇವರೇ, ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಪ್ರಶಸ್ತಿಗಳ ವಿಜೇತರಾದ ಶಾಂತಿ ವಾಸು.

ಬಾಲ್ಯದಿಂದಲೇ ಕಲಾಸಕ್ತಿ

ಕಸ್ತೂರಮ್ಮ ಮತ್ತು ವಾಸು ದಂಪತಿಗಳ ನಾಲ್ವರು ಪುತ್ರಿಯರಲ್ಲಿ ದ್ವಿತೀಯ ಪುತ್ರಿಯಾಗಿ ಬೆಂಗಳೂರಿನಲ್ಲಿ ಜನಿಸಿದರು. ಬಾಲ್ಯದಲ್ಲಿ ಬಹಳ ತುಂಟತನ ಚೇಷ್ಟೆಗಳಿಗೇ ಹೆಸರು ಮಾಡಿದ್ದರು. ಓದಿದ್ದು ಮಲ್ಲೇಶ್ವರದ ನಿರ್ಮಲಾ ರಾಣಿಸ್‌. ತರಗತಿಯೊಳಗೆ ಗಂಭೀರವಾಗಿ ಕುಳಿತು ಪಾಠ ಕೇಳಿದ ನೆನಪೇ ಇಲ್ಲವಂತೆ! ಬೋರ್ಡ್‌ ಮೇಲೆ ಕ್ಲಾಸ್‌ ಲೀಡರ್‌ ನಿಂದ ಹೆಸರು ಬರೆಸಿಕೊಂಡು ಹೊರಗೆ ಕುಳ್ಳಿರಿಸುತ್ತಿದ್ದ ಪ್ರಸಂಗಗಳೇ ಹೆಚ್ಚು. ಅಂದಿನ ಆ ಲೀಡರ್‌ ಗೆಳತಿ ಇಂದು ಹೇಳುತ್ತಾರಂತೆ... `ಬೋರ್ಡ್‌ ಮೇಲೆ ಹೆಸರು ಬರೆದ ನಾನೇನನ್ನೂ ಸಾಧಿಸದೇ ಹೋದೆ ಕಣೇ.... ಆದರೆ ನೀನು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿ ಸಾಧಕರ ಗುಂಪಲ್ಲಿ ಇರುವೆ. ನಿಜ ಗೆಳತಿ ನೀನು ನನ್ನ ಹೆಮ್ಮೆಯ ಗೆಳತಿ,' ಎನ್ನುತ್ತಿರುತ್ತಾರಂತೆ.

ಓದಿನಲ್ಲಿ ಆಸಕ್ತಿ ಇರಲಿಲ್ಲ. ಚಿಕ್ಕಂದಿನಲ್ಲಿ ಅಲ್ಲಲ್ಲಿ ಕಳೆದುಹೋಗೋದೇ ಇವರ ದಿನಚರಿಯಾಗಿತ್ತಂತೆ. ತಾಯಿ ತಂದೆ ಹುಡುಕಿ ಕರೆತರೋದು ಮತ್ತೆ ಕಳೆದುಹೋಗೋದು.... ಇದನ್ನೆಲ್ಲಾ ಈಗ ನೆನೆಸಿಕೊಂಡರೆ ನಗು ಬರುತ್ತದೆ.... ಏಕೆ ಹೀಗೆ ಮಾಡುತ್ತಿದ್ದೆನೋ ಎನ್ನುತ್ತಾ ನಗುತ್ತಾರೆ, ಮಹಿಳಾ ಸಾಧಕಿ ಶಾಂತಿ ವಾಸು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ