ನವದೆಹಲಿ: ಸೆಪ್ಟೆಂಬರ್‌ 28ರಿಂದ 30ರವರೆಗೆ ಮೂರು ದಿನಗಳ ರಾಷ್ಟ್ರವ್ಯಾಪಿ ಬ್ಯಾಂಕ್‌ ಮುಷ್ಕರ ನಡೆಯಲಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಸೆಪ್ಟೆಂಬರ್‌ ತಿಂಗಳ ವೇತನ ಮತ್ತು ಪಿಂಚಣಿಯನ್ನು ನಿಗದಿತ ದಿನಾಂಕಕ್ಕಿಂತ ಮುಂಚಿತವಾಗಿ ಪಾವತಿಸಲು ತೀರ್ಮಾನಿಸಲಾಗಿದೆ.

ಇದರಂತೆ ರಕ್ಷಣೆ, ಅಂಚೆ, ದೂರಸಂಪರ್ಕ ಸೇರಿದಂತೆ ಎಲ್ಲ ಕೇಂದ್ರ ಸರ್ಕಾರಿ ಇಲಾಖೆಗಳ ಸಿಬ್ಬಂದಿಗೆ ಸೆಪ್ಟೆಂಬರ್‌ ತಿಂಗಳ ವೇತನವನ್ನು ಸೆಪ್ಟೆಂಬರ್‌ 25ರಂದೇ ಪಾವತಿಸಲಾಗುವುದು. ಅಂದರೆ, ಸಾಮಾನ್ಯವಾಗಿ ದೊರೆಯುವ ದಿನಾಂಕಕ್ಕಿಂತ ಸುಮಾರು ಐದು ದಿನ ಮುಂಚಿತವಾಗಿ ವೇತನ ಖಾತೆಗೆ ಜಮೆಯಾಗಲಿದೆ.

ಬ್ಯಾಂಕ್‌ ಮುಷ್ಕರವು ತಿಂಗಳ ಅಂತ್ಯದ ಬ್ಯಾಂಕಿಂಗ್‌ ವಹಿವಾಟಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಇದರಿಂದ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ವೇತನ ಹಾಗೂ ಪಿಂಚಣಿ ಪಾವತಿಯಲ್ಲಿ ಯಾವುದೇ ಅಡಚಣೆ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಮುಷ್ಕರದ ಅವಧಿಯಲ್ಲಿ ಬ್ಯಾಂಕಿಂಗ್‌ ಸೇವೆಗಳಿಗೆ ವ್ಯತ್ಯಯ ಉಂಟಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ, ಮುಂಚಿತವಾಗಿಯೇ ವೇತನ ಮತ್ತು ಪಿಂಚಣಿ ಪಾವತಿ ಮಾಡುವ ಮೂಲಕ ಕೇಂದ್ರ ಸರ್ಕಾರ ಸಮಸ್ಯೆಯನ್ನು ತಪ್ಪಿಸಲು ಕ್ರಮ ಕೈಗೊಂಡಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ