ಸಿಂಗಪುರ್‌ ಮಾರ್ಕೆಟ್‌, ಸ್ಯಾಂಟೋ ಸಾ ಐಲೆಂಡ್‌, ನೈಟ್‌ ಸಫಾರಿ, ಭಾರಿ ಮಾಲ್‌ಗಳು, ಇತರೆ ಪ್ರವಾಸಿ ಕೇಂದ್ರಗಳ ಬಗ್ಗೆ ಬಹಳಷ್ಟು ಬರೆಯಲಾಗುತ್ತದೆ. ಇಲ್ಲಿನ `ಡೌನ್‌ ಟೌನ್‌' ಒಂದು ಅಪರೂಪದ ತಾಣ. ಸಿಂಗಪುರ್‌ ನಿವಾಸಿಗಳಿಗೆ ನಿರ್ಮಿಸಲಾದ ಕ್ಲಬ್‌ ಈಗ ಪರಿಪೂರ್ಣವಾಗಿ ಒಂದು ರೆಸಾರ್ಟ್‌ ಆಗಿ ಮಾರ್ಪಟ್ಟಿದೆ. ಇಲ್ಲಿ ಹಲವು ಬಗೆಯ ವಾಟರ್‌ ಗೇಮ್ ಗಳಿವೆ. ತಿಂಡಿ ತಿನ್ನುವ ಬಗೆಬಗೆಯ ವ್ಯವಸ್ಥೆಗಳಿವೆ. ಇಲ್ಲಿ ಕಠೋರ ನಿಯಮಗಳೇನೂ ಇಲ್ಲ. ಹೀಗಾಗಿ ಪ್ರವಾಸಿಗರಿಗೆ ಸ್ವತಂತ್ರ ವಾತಾವರಣ.

ತನ್ನಷ್ಟಕ್ಕೆ ತಾನು ಸ್ವತಂತ್ರವಾಗಿರುವ ಒಂದು ಪುಟ್ಟ ನಗರ. ನಿಮಗೆ ಬೇರೆಡೆ ಹೋಗಬೇಕಾದ ಅಗತ್ಯವೇ ಇಲ್ಲ. ಇಲ್ಲಿ ಯಾವುದೇ ರಸ್ತೆಗಳು ಹಾಯ್ದು ಹೋಗುವುದಿಲ್ಲ. ಟ್ರಾಫಿಕ್‌ ಜಾಮ್ ನ ಮಾತೇ ಇಲ್ಲ. ವಾಸಕ್ಕೆ ಹಲವು ಬಗೆಯ ವ್ಯವಸ್ಥೆಗಳಿವೆ. ಭಾರತೀಯ ಪ್ರವಾಸಿಗರಿಗೆ ದೇಶಿ ಖಾದ್ಯ ಕೂಡ ಸುಲಭವಾಗಿ ಲಭಿಸುತ್ತದೆ.

ನೂರಾರು ಎಕರೆಯಲ್ಲಿ  ಪಸರಿಸಿರುವ ನದಿ ತಟದ ಡೌನ್‌ ಟೌನ್‌ ಈಸ್ಟ್ ಮೇನ್‌ ಸಿಂಗಪುರದಿಂದ ಪ್ರತ್ಯೇಕವಾಗಿರುವಂತೆ ಭಾಸವಾಗುತ್ತದೆ. ಇದು ಛಂಗಿ ಏರ್‌ಪೋರ್ಟ್‌ನಿಂದ ಬಹಳ ದೂರವೇನೂ ಇಲ್ಲ. ಇಲ್ಲಿ ಪ್ರವಾಸಿಗರು ಬಂದರೆ 2-3 ದಿನಗಳ ಕಾಲ ತಂಗದೇ ಹೋಗುವುದಿಲ್ಲ.

ಇವನ್ನು ಅವಶ್ಯ ನೋಡಿ

ಡೌನ್‌ ಟೌನ್‌ ಈಸ್ಟ್ ನ ಮುಖ್ಯ ಆಕರ್ಷಣೆ ಇಲ್ಲಿನ ವೈಲ್ಡ್‌ ವೈಲ್ಡ್ ವೆಟ್‌ ವಾಟರ್‌ಪಾರ್ಕ್‌.

ಇಲ್ಲಿ ಟ್ಯೂಬ್‌ನಿಂದ ಹೊರಹೊಮ್ಮುವ ವೋರ್ಟೆಕ್ಸ್ ಗಳಿವೆ. ನೀರಿನಲ್ಲಿ ಬಹಳ ಎತ್ತರದಿಂದ ಜಾರುವ ಬ್ರೋಕನ್‌ ರೇಸರ್ಸ್‌ಗಳಿವೆ. ವೋರ್ಟೆಕ್ಸ್ ನ ಎತ್ತರ 18.5 ಮೀಟರ್‌ ಇದೆ ಹಾಗೂ ಸ್ಲೈಡ್‌ 134 ಮೀಟರ್‌ ಆಗಿದೆ. ಅದರಿಂದ ಜಾರುವ ವೇಗ ಪ್ರತಿ ನಿಮಿಷಕ್ಕೆ 600 ಮೀಟರ್‌ ಆಗುತ್ತದೆ. ನಿಮ್ಮ ತೂಕ ಸ್ವಲ್ಪ ಜಾಸ್ತಿ ಇದ್ದರೂ ಏನೂ ಸಮಸ್ಯೆ ಇಲ್ಲ. 136 ಕಿಲೋ ತೂಕ ಇರುವ ಪ್ರವಾಸಿಗರಿಗೂ ಇಲ್ಲಿ ಅನುಮತಿ ಇದೆ. ಬ್ರೋಕನ್‌ ರೇಸರ್ಸ್‌ 13 ಮೀಟರ್‌ ಆಗಿದ್ದು ಸ್ಲೈಡ್‌ 91 ಮೀಟರ್‌ ಇದೆ.

ವಾಟರ್‌ ಪಾರ್ಕ್‌ನಲ್ಲಿ ರಾಯನ್‌ ಫ್ಲಶ್‌ ಇದ್ದು, ಇದರಿಂದ ಸುತ್ತುಹಾಕುವ ನೀರಿನ ಹೊಸ ಥ್ರಿಲ್ ಉತ್ಪನ್ನವಾಗುತ್ತದೆ. ಫ್ರೀ ಫಾಲ್‌ ನೇರವಾಗಿ ನೀರಿನೊಂದಿಗೆ ಧೈರ್ಯವನ್ನು ಒಗ್ಗೂಡಿಸಿ 55 ಕಿ.ಮೀ. ವೇಗದಲ್ಲಿ ಒಂದು ದೊಡ್ಡ ಪಾಂಡ್‌ನಲ್ಲಿ ಹೋಗಿ ಕುಕ್ಕುತ್ತದೆ.

ಒಂದು ವೇಳೆ ಮಕ್ಕಳಿಗೆ ಈ ವಾಟರ್‌ ಗೇಮ್ ಗಳು ಹೆದರಿಕೆ ಹುಟ್ಟಿಸಿದರೆ ಅವರನ್ನು ಕಿಂಗ್‌ಡಮ್ ಝೋನ್‌, ವೆಟ್‌ ಅಂಡ್‌ ವೈಲ್ಡ್, ಫೌಂಟೆನ್‌ ಸ್ಪ್ಯಾಶ್‌ ಪ್ಲೇ ಮುಂತಾದವು ಇವೆ. ವಿಶ್ರಾಂತಿ ಮಾಡಲು ಟೆಂಟ್‌ನಂಥವು ಲಭ್ಯವಿವೆ. ಇಲ್ಲಿ 50ಕ್ಕೂ ಹೆಚ್ಚು ರೆಸ್ಟೋರೆಂಟ್‌ಗಳು ಕೂಡ ಇವೆ.

ಶಾಪಿಂಗ್‌ನ ಹವ್ಯಾಸವಿದ್ದರೆ ಅಗ್ಗದ ಹಲವು ಸಾಮಗ್ರಿಗಳು ಲಭಿಸುತ್ತವೆ. ಚಿಯರ್ಸ್‌ ಕನ್ವಿನಿಯೆನ್ಸ್ ಸೆಂಟರ್‌ಗಳು 24 ಗಂಟೆ ತೆರೆದಿರುತ್ತದೆ. ಗ್ಯಾಜೆಟ್‌ ಮಿಕ್ಸ್ ನಿಂದ ಹೊಸ ಹೊಸ ಎಲೆಕ್ಟ್ರಾನಿಕ್‌ ವಸ್ತುಗಳನ್ನು ಖರೀದಿಸಬಹುದು. ಸಿಂಗಲ್ ಟೇ‌ಲ್‌ನಿಂದ ಲೋಕಲ್ ಸಿಮ್ ಕಾರ್ಡ್‌ ಕೂಡ ಖರೀದಿಸಬಹುದು.

ಡೌನ್‌ಟೌನ್‌ ಈಸ್ಟ್ ಹಿಂದೊಮ್ಮೆ ಸಿಂಗಪುರ್‌ ನಿವಾಸಿಗಳಿಗಾಗಿ ಸ್ಥಾಪಿಸಿದ್ದ ಶಾಪಿಂಗ್‌ ಹಾಗೂ ಮನರಂಜನಾ ಕೇಂದ್ರ ಆಗಿರಬಹುದು. ಆದರೆ ಅದು ಈಗ ಸಿಂಗಪುರದ ಒಂದು ಮುಖ್ಯ ಕ್ಷೇತ್ರವಾಗಿದ್ದು, ಅಲ್ಲಿ ವಿದೇಶಿಗರು ಸಾಕಷ್ಟು ಖುಷಿಯ ಅನುಭವ ಪಡೆದುಕೊಳ್ಳುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ