ರಷ್ಯನ್‌ಜೆಕ್ ಡ್ಯಾನ್ಸರ್‌ಗಳ ಜೋಡಿಯ ಬ್ಯಾಲೆ ಮುದ್ರೆ : ಆಹಾ..... ಈ ನಾಟ್ಯವಾಡುತ್ತಾ ಬಾ ಪ್ರಿಯೆ ನನ್ನ ಬಾಹುಗಳಲ್ಲಿ ಒಂದಾಗು.... ಹೀಗೆ ಆಹ್ವಾನಿಸುತ್ತಿದ್ದಾನೆ ಯೂರೋಪಿನ ನೃತ್ಯಪಟು. ಕ್ಷಣ ಮಾತ್ರದಲ್ಲಿ ಗಾಳಿಯಲ್ಲಿ ಗಿರ್ರನೆ ತಿರುಗುವ ಈ ರಷ್ಯನ್‌ಬ್ಯಾಲೆಯ ನೃತ್ಯದ ಪ್ರತಿಯೊಂದರಲ್ಲೂ ಒಂದೊಂದು ಸ್ವಾರಸ್ಯಕರ ಜಾನಪದ ಕಥೆ ಅಡಗಿರುವುದೇ ಅದರ ವೈಶಿಷ್ಟ್ಯ.
ಕರ್ತವ್ಯದ ಮುಂದೆ ವಯಸ್ಸೇನು ಮಹಾ? : ಏರ್‌ಹೋಸ್ಟೆಸ್ ಅಂದ ತಕ್ಷಣ ಒಬ್ಬ ಸ್ಮಾರ್ಟ್, ಯಂಗ್, ಎಫಿಶಿಯಂಟ್ ತರುಣಿಯ ಚಿತ್ರ ಮನದಲ್ಲಿ ಮೂಡುತ್ತದೆ. ಆದರೆ ಅಮೆರಿಕನ್ ಏರ್‌ಲೈನ್ಸ್ 81 ವರ್ಷದ ಒಬ್ಬ ವಯೋವೃದ್ಧೆಯನ್ನು ವೃತ್ತಿಯಲ್ಲಿ ಉಳಿಸಿಕೊಂಡು, ಅಂತೂ ಕಳೆದ ಕ್ರಿಸ್‌ಮಸ್‌ನಲ್ಲಿ ರಿಟೈರ್‌ಮೆಂಟ್ ನೀಡಿತು. ಈ ಅಜ್ಜಿ ಮೋಹಕ ಮುಗುಳ್ನಗೆ, ರಜೆ ರಹಿತ ರೆಗ್ಯುಲರ್ ಅಟೆಂಡೆನ್ಸ್, ಕರ್ತವ್ಯಗಳಿಂದ ಜನಪ್ರಿಯತೆ ಗಳಿಸಿ 60ಕ್ಕೂ ಹೆಚ್ಚು ವರ್ಷ ಸೇವೆ ಸಲ್ಲಿಸಿದೆಯಂತೆ!
ಭಿತ್ತಿ ಚಿತ್ರಕಲೆ ಸಾಮಾನ್ಯವಲ್ಲ : ಹಿಂದೆಲ್ಲ ನಮ್ಮ ದೇಶದಲ್ಲಿ ಎಲ್ಲೆಲ್ಲೂ ಗೋಡೆಗಳ ಮೇಲೆ ರಾಜಕೀಯ ಪಕ್ಷಗಳ ಘೋಷಣೆ, ಚಿಹ್ನೆಗಳಿರುತ್ತಿದ್ದವು. ಇದೀಗ ತುಸು ಕಡಿಮೆ ಆಗಿದೆ ಅನ್ನಬಹುದು. ಆದರೆ ಜನತೆಗೆ ಸಂದೇಶ ತಲುಪಿಸುಲ್ಲಿ ಈ ಭಿತ್ತಿ ಚಿತ್ರಕಲೆ ನಿಜಕ್ಕೂ ತುಂಬಾ ಪರಿಣಾಮಕಾರಿ. ಸ್ಪೇನ್ ದೇಶದ ಕೆಟೆಲಾನ್ ನಗರದಲ್ಲಿ ಚುನಾವಣೆ ಸಂದರ್ಭದಲ್ಲಿ ವಿಭಿನ್ನ ವಿಚಾರಧಾರೆಯ ಪಕ್ಷಗಳನ್ನು ಮಾಯಾವತಿ ಭಾಜಪ ಪಕ್ಷಗಳಿಗೆ ಗಂಟು ಹಾಕಿದಂತೆ ಮಾಡಿದಾಗ, ಗೋಡೆಗಳ ಮೇಲೆ ಸಲಿಂಗ ಪ್ರೇಮದ ಕಾರ್ಟೂನ್ ಮೂಡಿಬರಬೇಕೇ....? ಸಾಮಾನ್ಯ ಜನತೆಗಂತೂ ರಸ್ತೆಯಲ್ಲಿ ಸಾಗುವಾಗ ಇಂಥ ಭಿತ್ತಿ ಚಿತ್ರಕಲೆ ಬಿಟ್ಟಿ ಮನರಂಜನೆ ಒದಗಿಸುತ್ತದೆ. ಮನೆಗಳಲ್ಲಿ ದಂಪತಿಗಳ ಜಗಳವಾದಾಗ, ಪತ್ನಿ ಏನಾದರೂ ಪತಿಯ ಕಾರ್ಟೂನ್‌ನ್ನು ಹೀಗೆ ಬೀದಿ ಬದಿ ಹಾಕಿಸಿದಳೋ... ಮಿಕ್ಕಿದ್ದು ನಿಮ್ಮ ಊಹೆಗೆ!
ಪ್ರಶಂಸನೀಯ ಕಾರ್ಯಕ್ರಮ : ಹೆಣ್ಣುಮಕ್ಕಳ ಬದುಕಲ್ಲಿ ವಿವಾಹ ನಿಜಕ್ಕೂ ಮಹತ್ತರ ಘಟ್ಟ. ದೊಡ್ಡ ಖರ್ಚಿನ ಬಾಬತ್ತು ಇದ್ದುದಾದ್ದರಿಂದ ಎಷ್ಟೋ ಬಡ ಹೆಣ್ಣುಮಕ್ಕಳಿಗೆ ಕಂಕಣ ಭಾಗ್ಯ ಕೈಗೂಡುವುದಿಲ್ಲ. ಇದಕ್ಕೆ ಸರಳ ಪರಿಹಾರ? ಸಾಮೂಹಿಕ ವಿವಾಹ! ಇತ್ತೀಚೆಗೆ ಸೂರತ್‌ನಲ್ಲಿ ಮಹೇಶ್ ಭಾಯಿ ಸಾನಿ ಸುಮಾರು ಇಂಥ 251 ಹಿಂದೂ-ಮುಸ್ಲಿಂ ಜೋಡಿಗಳಿಗೆ ಸಾಮೂಹಿಕ ವಿವಾಹ ಏರ್ಪಡಿಸಿದ್ದರು, ಅದೂ ತಮ್ಮ ಸ್ವಂತ ಖರ್ಚಿನಲ್ಲಿ. ಹೆಚ್ಚಿನ ಹಣದ ಸದುಪಯೋಗವೆಂದರೆ ಇದು, ದೇವರ ಹೆಸರಿನಲ್ಲಿ ಇದನ್ನು ಹುಂಡಿಗಳಿಗೆ ಸುರಿಯುವುದಲ್ಲ.
ಇದು ಟ್ಯಾಟೂ ಝಮಾನಾ : ಹಿಂದೆ ಹಲವು ವರ್ಷಗಳವರೆಗೆ ಕೇವಲ ನಾವಿಕರು, ಅಪರಾಧಿಗಳು, ವೇಶ್ಯೆಯರ ಗುರುತಾಗಿ ಉಳಿದಿದ್ದ ಪರ್ಮನೆಂಟ್ ಟ್ಯಾಟೂ, ಇದೀಗ ಸಭ್ಯ, ಪ್ರಸಿದ್ಧ ನಾಗರಿಕರಲ್ಲೂ ಜನಪ್ರಿಯವಾಗುತ್ತಿದೆ. ಯುವತಿಯರಲ್ಲೂ ಇದು ಕಾಮನ್ ಆಗಿದೆ. ಇದನ್ನು ನೋಡಿ ನೋಡಿ ಅವರ ಮಕ್ಕಳಿಗೂ ಇದು ಬಳಕೆಯಾಗಿದೆ. ಶಾಂಘೈನಲ್ಲಿ ಈ ಚೀನೀ ಯುವತಿ ತನ್ನ ಕಾಲುಗಳ ಮೇಲೆ ಹೀಗೆ ಟ್ಯಾಟೂ ಹಾಕಿಸಿಕೊಂಡು ಮೊಬೈಲ್‌ನಲ್ಲಿ ವಿಡಿಯೋ ನೋಡುತ್ತಿದ್ದಾಳೆ. ಈಗ ಟ್ಯಾಟೂ ಎಲ್ಲೆಲ್ಲೂ ಜನಪ್ರಿಯ.
ಪರದೆಯ ಹಿಂದೆ ಅಡಗಿರುವುದೇನು? : ಕಾರ್ಟೂನ್, ವಿಡಿಯೋ ಗೇಮ್ಸ್, ಸಿನಿಮಾಗಳಲ್ಲಿನ ಪಾತ್ರಗಳ ಡ್ರೆಸ್ ಅನುಸರಿಸಿ ಅಂಥದೇ ಪೋಷಾಕನ್ನು ಧರಿಸಿ ಬೀದಿಯಲ್ಲಿ ಓಡಾಡುವುದು ಮಾಮೂಲಿ ವಿಷಯ. ಕ್ಲಾಸ್ ಪ್ಲೇಯರ್ಸ್ ವಿಶ್ವದ ಎಲ್ಲಾ ಪ್ರದರ್ಶನಗಳಲ್ಲೂ ಭಾಗವಹಿಸಿ ವೈವಿಧ್ಯಮಯ ಫ್ಯಾನ್ಸಿ ಡ್ರೆಸ್ ಧರಿಸುತ್ತಾರೆ. ಇತ್ತೀಚೆಗೆ ಪ್ಯಾರಿಸ್‌ನ ಗಲ್ಲಿಗಳಲ್ಲಿ ನಡೆದ ಇಂಥ ಕಾರ್ಯಕ್ರಮದಲ್ಲಿ ಕಂಡುಬಂದ ದೃಶ್ಯವಿದು. ಈ ಪರದೆಯ ಮುಖವಾಡಕ್ಕೆ ಹೆದರಬೇಕಿಲ್ಲ, ಅದರ ಹಿಂದೆ ಸೌಮ್ಯ ಪಾತ್ರವಿರುತ್ತದೆ.