ಮಾನುಷಿ ಛಿಲ್ಲರ್ಮಿಸ್ವರ್ಲ್ಡ್

ನವೆಬಂರ್‌ 18, 2017ರಂದು ಚೀನಾದ ಸನಾಯಾ ನಗರದಲ್ಲಿ ಆಯೋಜಿಸಲಾಗಿದ್ದ ಸೌಂದರ್ಯ ಸ್ಪರ್ಧೆಯಲ್ಲಿ `ಮಿಸ್‌ ವರ್ಲ್ಡ್ 2017' ಕಿರೀಟ ಧರಿಸುವ ಅದ್ಭುತ ಅವಕಾಶ ದೊರೆತಾಗ ಹರಿಯಾಣಾದ ಮಾನುಷಿ ಛಿಲ್ಲರ್‌ ಖುಷಿಗೆ ಮೇರೆಯೇ ಇರಲಿಲ್ಲ. ತನಗೆ ಅಂತಹದೊಂದು ಭಾರಿ ಪುರಸ್ಕಾರದ ಗರಿ ಸಿಗುತ್ತದೆ ಎಂದು ಮಾನುಷಿ ಕನಸು ಮನಸ್ಸಿನಲ್ಲೂ ಎಣಿಸಿರಲಿಲ್ಲ. ಪ್ರಿಯಾಂಕಾ ಚೋಪ್ರಾ ಬಳಿಕ ಈ ಪುರಸ್ಕಾರಕ್ಕೆ ಪಾತ್ರಳಾದ ಎರಡನೇ ಭಾರತೀಯ ಯುವತಿ ಈಕೆ. ಈ ಸ್ಪರ್ಧೆಯಲ್ಲಿ 118 ದೇಶಗಳ ಸುಂದರಿಯರು ಪಾಲ್ಗೊಂಡಿದ್ದರು. ಮಾನುಷಿಯ ಉತ್ಕೃಷ್ಟ ಪರ್ಫಾರ್ಮೆನ್ಸ್ ಗಮನಿಸಿ ಆಕೆಗೆ `ಬ್ಯೂಟಿ ವಿತ್‌ ಪರ್ಪಸ್‌' ಪುರಸ್ಕಾರ ಕೂಡ ದೊರೆಯಿತು. ಭಾರತಕ್ಕೆ ಈ ಪ್ರಶಸ್ತಿಯ ಮೆರುಗು ತಂದುಕೊಟ್ಟ ಆರನೇ ಸುಂದರಿ ಈಕೆ.

ಹರಿಯಾಣಾದ ರೋಹ್ಟಕ್‌ನಲ್ಲಿ ಜನಿಸಿ, ದೆಹಲಿಯಲ್ಲಿ ಬೆಳೆದು ದೊಡ್ಡವಳಾದ ಮಾನುಷಿ, ವೈದ್ಯಕೀಯ ವಿದ್ಯಾರ್ಥಿನಿ. ಈ ಕುರಿತಂತೆ ಮಾನುಷಿ ಹೇಳುವುದು ಹೀಗೆ, ``ನಾನು ಡಾಕ್ಟರ್‌ ಕುಟುಂಬದಿಂದ ಬಂದವಳು. ನನ್ನ ತಂದೆ, ತಾಯಿ ದೆಹಲಿಯಲ್ಲಿ ವಾಸಿಸುತ್ತಾರೆ. ನಾನು ಹರಿಯಾಣಾದಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವೆ. ಬಾಲ್ಯದಿಂದಲೇ  ನನಗೆ `ಮಿಸ್‌ ಇಂಡಿಯಾ' ಆಗಬೇಕು, ಡಾಕ್ಟರ್‌ ಆಗಬೇಕು ಎಂಬ ಆಕಾಂಕ್ಷೆ ಇತ್ತು. ಅಪ್ಪ ಅಮ್ಮನ ಪ್ರೊಫೆಷನ್‌ನ್ನು ನಾನು ಬಾಲ್ಯದಿಂದಲೇ ನೋಡುತ್ತ ಬಂದಿದ್ದೇನೆ. ಆದರೆ ಇದೆಲ್ಲ ವಾಸ್ತವದಲ್ಲಿ ಸಾಧ್ಯವಾಗುತ್ತದೊ ಇಲ್ಲವೋ ಎಂದು ಗೊತ್ತಿರಲಿಲ್ಲ.

``ಟೀವಿ.ಯಲ್ಲಿ ನಾನು `ಮಿಸ್‌ ಇಂಡಿಯಾ'ದ ಶೋ ನೋಡುತ್ತಿದ್ದಾಗ, ನಾನು ಗ್ಲಾಮರ್‌ ಜೊತೆಗೆ ಅವರ ಅಂತರಾಳದ ಸೌಂದರ್ಯವನ್ನೂ ನೋಡಲು ಇಚ್ಛಿಸುತ್ತಿದ್ದೆ. `ಮಿಸ್‌ ಇಂಡಿಯಾ' ಕಿರೀಟ ನನಗೆ ದೊರೆತಾಗ ನನಗೆ ನಂಬಲು ಆಗಿರಲಿಲ್ಲ. ಅದರಿಂದ ನನ್ನ ಹುಮ್ಮಸ್ಸು ಹೆಚ್ಚಿತು. ಆಗ ನನಗೆ ನಾನೂ ಈ ಕ್ಷೇತ್ರದಲ್ಲಿ ಏನನ್ನಾದರೂ ಸಾಧಿಸಬಹುದು ಎಂದು ಅನಿಸಲಾರಂಭಿಸಿತು.

``ನನಗೆ ಸದಾ ಹೊಸದನ್ನು ಮಾಡುವುದು ಸವಾಲುಗಳನ್ನು ಎದುರಿಸುವುದು ಇಷ್ಟವಾಗುತ್ತದೆ. ಹಾಗಾಗಿ ನಾನು ಓದುವುದರ ಜೊತೆಗೆ ಕೂಚ್ಚಿಪುಡಿ ನೃತ್ಯ ಕಲಿತೆ.''

ದಾರಿ ಸುಗಮವಲ್ಲ....

ಇಲ್ಲಿಯವರೆಗೆ  ತಲುಪಲು ಮಾನುಷಿಗೆ ಸಾಕಷ್ಟು ಸಂಘರ್ಷ ಮಾಡಬೇಕಾಗಿ ಬಂತು. ಈ ಸ್ಪರ್ಧೆಯ ಸಿದ್ಧತೆಗಾಗಿ ಸಾಕಷ್ಟು ಸಮಯ ಕೊಡಬೇಕಾಗಿ ಬರುತ್ತಿತ್ತು. ಈ ಕುರಿತು ಮಾನುಷಿ ಹೀಗೆ ಹೇಳುತ್ತಾರೆ, ``ಮೆಡಿಕಲ್‌ನ ಜೊತೆ ಜೊತೆಗೆ ಇದರ ಸಿದ್ಧತೆ ಕಷ್ಟಕರವಾಗಿತ್ತು. ಆದರೆ ನಾನು ಸಮಯನ್ನು ಸರಿಯಾಗಿ ಹೊಂದಿಸಿಕೊಂಡೆ. ಹೀಗಾಗಿ ಎಲ್ಲ ಸಾಧ್ಯವಾಯಿತು. ವಾಸ್ತವದಲ್ಲಿ `ಮಿಸ್‌ ಇಂಡಿಯಾ' ಒಂದು `ಪರ್ಸನಾಲಿಟಿ ಕಾಂಟೆಸ್ಟ್' ಆಗಿದೆ. ಅದರಲ್ಲಿ ಸೌಂದರ್ಯಕ್ಕಿಂತ ಹೆಚ್ಚಾಗಿ ಇತರೆ ಸಂಗತಿಗಳ ಬಗ್ಗೆ ಗಮನ ಕೊಡಬೇಕಾಗುತ್ತದೆ. ಸಾಮಾನ್ಯ ಜ್ಞಾನವನ್ನು ಮತ್ತಷ್ಟು ಅಪ್‌ಡೇಟ್‌ ಮಾಡಿಕೊಳ್ಳುವುದು ಹಾಗೂ ಫಿಟ್‌ನೆಸ್‌ನ್ನು ಹೆಚ್ಚಿಸಿಕೊಳ್ಳಬೇಕಾಗುತ್ತದೆ.

``ಇದರ ಹೊರತಾಗಿ ಮಾತುಕತೆಯ ರೀತಿ ನೀತಿ, ಎಲ್ಲರೊಂದಿಗೆ ಬೆರೆಯುವುದು ನಮ್ಮ ಮಾತುಗಳನ್ನು ಷೇರ್‌ ಮಾಡಿಕೊಳ್ಳುವುದು ಇವೆಲ್ಲವನ್ನೂ ಇಂಪ್ರೂವ್ ಮಾಡಿಕೊಳ್ಳಬೇಕಾಗುತ್ತದೆ. ಈ ಸ್ಪರ್ಧೆಯ ಸಿದ್ಧತೆಯ ಸಂದರ್ಭದಲ್ಲಿ ನಾನು ಅನೇಕ ಜನರನ್ನು ಭೇಟಿ ಮಾಡಿದೆ. ಅವರಿಂದ ನಾನು ಬಹಳಷ್ಟು ಕಲಿತುಕೊಳ್ಳಲು ಸಾಧ್ಯವಾಯಿತು.''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ