ಸಾಮಾನ್ಯವಾಗಿ ಹೆಣ್ಣುಮಕ್ಕಳಿಗೆ ಮದುವೆಯಾದ ನಂತರ ಅವರ ಕೆರಿಯರ್‌ ಮುಗಿದು ಹೋದಂತೆಯೇ ಎನ್ನುವುದು ಎಲ್ಲರ ಮನದ ಮಾತು. ಆದರೆ ಮದುವೆಯಾಗಿ ಮಕ್ಕಳಾದ ನಂತರ ತನ್ನನ್ನು ತಾನು ಪೂರ್ಣವಾಗಿ ಸರಿಯಾದ ಒಂದು ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಉದಾಹರಣೆಗಳು ಸಾಕಷ್ಟಿದ್ದರೂ ಸ್ವಲ್ಪ ಮಟ್ಟಿಗೆ ಅಪರೂಪವೆನ್ನಬಹುದು. ಅಂತಹ ಒಂದು ಅಪರೂಪದ ವ್ಯಕ್ತಿತ್ವ ಸ್ಛೂರ್ತಿ ವಿಶ್ವಾಸ್‌ ಅವರದು. ಇವರ ವ್ಯಕ್ತಿತ್ವ ಮತ್ತೊಬ್ಬರಲ್ಲಿ ಸ್ಛೂರ್ತಿ ತುಂಬುವುದರಲ್ಲಿ ಎರಡು ಮಾತಿಲ್ಲ.

ಬೆಂಗಳೂರಿನ ಹುಡುಗಿ, 23 ವರ್ಷಕ್ಕೆ ಮದುವೆ, ಟ್ರಿಪ್ಪಲ್ ಗ್ರಾಜುಯೆಟ್‌, ಬಿ.ಬಿ.ಎಂ., ಎಂ.ಬಿ.ಎ ಮತ್ತು ಪಿ.ಜಿ.ಪಿ.ಎಂ. ಮದುವೆಯಾದಾಗ ಇನ್ನೂ ಎಂ.ಬಿ.ಎ ಪೂರ್ಣವಾಗಿ ಮುಗಿಸಿಕೊಂಡಿರಲಿಲ್ಲ. ಮದುವೆಯ ನಂತರ ಎಂ.ಬಿ.ಎ. ಮುಗಿಸಿದರು. ಹದಿನಾರರ ಹರೆಯದಲ್ಲಿಯೇ ಉದಯ ಟಿ.ವಿ.ಯಲ್ಲಿ ಚಾಕಲೇಟ್‌ ಎನ್ನುವ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು. ಇದು ಸಾಕಷ್ಟು ಜನಪ್ರಿಯ ಆಗಿತ್ತು.

ನಿರೂಪಕಿಯಾಗಿ ಪಟಪಟನೆ ಮಾತನಾಡುತ್ತಾ ಕಾರ್ಯಕ್ರಮಕ್ಕೆ ಮೆರಗು ನೀಡುತ್ತಿದ್ದ ಈ ಸುಂದರ ಹುಡುಗಿಯ ಚುರುಕನ್ನು ಕಂಡ ನಿರ್ದೇಶಕ ಎಂ.ಡಿ. ಶ್ರೀಧರ್‌, `ಜಾಲಿ ಡೇಸ್‌' ಚಿತ್ರದಲ್ಲಿ ಅವಕಾಶ ನೀಡಿದರು. ಚಲನಚಿತ್ರದಲ್ಲಿ ಅಭಿನಯಿಸಲು ಮೊದಲು ಇವರ ತಂದೆ ತಾಯಿ ನಿರಾಕರಿಸಿದರೂ ನಂತರ ಮಗಳ ಆಸೆಗೆ ಒಪ್ಪಿದರು.

ಇವರ ತಂದೆ ಎಂಜಿನಿಯರ್‌ ತಾಯಿ ಕಮಿರ್ಷಿಯಲ್ ಟ್ಯಾಕ್ಸ್ ಇನ್ ಸ್ಪೆಕ್ಟರ್‌. ಸ್ಛೂರ್ತಿ ಓದಿನಲ್ಲಿ ಬಹಳ ಮುಂದು. ಈಕೆ ಚಲನಚಿತ್ರದಲ್ಲಿ ತಾರೆಯಾಗದಿದ್ದಲ್ಲಿ ಡಾಕ್ಟರ್‌ ಆಗುತ್ತಿದ್ದರಂತೆ. ಪೋಷಕರ ಮುದ್ದಿನ ಮಗಳು. ತಮ್ಮ ನಿರ್ಧಾರಗಳಲ್ಲಿ ಅಚಲವಾಗಿದ್ದರು. ಚಲನಚಿತ್ರದಲ್ಲಿ ಅಭಿನಯಿಸಿದಾಗ ಇನ್ನೂ ಪಿ.ಯು.ಸಿ.ಯಲ್ಲಿದ್ದರು. ಒಂದು ಚಿತ್ರ ಮುಗಿದ ನಂತರ ಸಾಲು ಸಾಲಾಗಿ ಅವಕಾಶಗಳು ಬರಲಾರಂಭಿಸಿದವು.

`ಚೆಲ್ಲಿದರು ಸಂಪಿಗೆಯ,' ದರ್ಶನ್‌ ಜೊತೆ ಮೊದಲ ಚಿತ್ರ. ದರ್ಶನ್‌, ಶಿವರಾಜ್‌ ಕುಮಾರ್‌, ಗಣೇಶ್‌, ಪುನೀತ್‌ ಒಟ್ಟಾರೆ ಎಲ್ಲರಿಗೂ ತಂಗಿಯಾಗಿ ಅಭಿನಯಿಸಿದರು. ನಂತರ ತಮಿಳಿನಲ್ಲಿ ಮುಖ್ಯ ಭೂಮಿಕೆಯಲ್ಲಿ ನಾಯಕಿಯಾಗುವ ಅವಕಾಶ ಒದಗಿಬಂದಿತು. ಮನದಿಲ್ ‌ಮಾಟ್ರಂ, ಆತ್ಮರಾಗಂ, ಪೋಕ್ರಿಮನ್ನನ್‌.... ನಂತರ ತೆಲುಗಿನಲ್ಲಿ ಕೆರಟಮ್, ಪುಥ್ಥಡಿ ಬೊಮ್ಮ..... ಈ ರೀತಿ ಅವಕಾಶಗಳು ಸಾಲು ಸಾಲಾಗಿ ಬರಲಾರಂಭಿಸಿದವು.  ವಿಶ್ವಾಸ್‌ ಅವರ ಪರಿಚಯ ಮೊದಲ ಚಿತ್ರ ಜಾಲಿ ಡೇಸ್‌ನಿಂದಲೇ ಇತ್ತು. ಎಂಟು ವರ್ಷದ ಸ್ನೇಹ ನಂತರ ಅದು ಮದುವೆಯಲ್ಲಿ ಮುಕ್ತಾಯಗೊಂಡಿತು.

``ಟಿ.ವಿ.ಯಲ್ಲಿ ನಿರೂಪಕಿಯಾಗಿದ್ದಾಗಲೇ ನಾಲ್ಕು ಗೆಳತಿಯರ ಜೊತೆಗೆ ಸಾಕಷ್ಟು ದೊಡ್ಡ ಪ್ರಮಾಣದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೆ. ಆ ಸಮಯದಲ್ಲೇ ಬಿ.ಎಂ.ಡಬ್ಲ್ಯು ಲಾಂಚ್‌, ಮಾರುತಿ ಲಾಂಚ್‌, ರಾಮನಗರದ ಊರ ಹಬ್ಬದಂತಹ ದೊಡ್ಡ ಕಾರ್ಯಕ್ರಮಗಳನ್ನು ನಿಯೋಜಿಸುತ್ತಿದ್ದೆ. ಹೀಗಾಗಿ ಎರಡರಿಂದ ಮೂರು ಲಕ್ಷ ಜನ ಸೇರುವ ಈವೆಂಟ್‌ಗಳನ್ನೂ ಆರ್ಗನೈಸ್ ಮಾಡುವ ಅವಕಾಶಗಶು ದೊರಕಿದವು.

``ಮೊದಲು ನಾವು ನಾಲ್ಕು ಗೆಳತಿಯರ ಹೆಸರಿನ ಮೊದಲ ಅಕ್ಷರಗಳನ್ನು ಸೇರಿಸಿ ಪ್ರಾರಂಭವಾದ ಸಂಸ್ಥೆ ನಂತರ ಈವೆಂಟ್‌ ಆರ್ಟ್‌ ಎನ್ನುವ ಹೆಸರನ್ನು ಬದಲಾಯಿಸಿದಾಗ ನಮ್ಮ ಸಂಸ್ಥೆ ಮತ್ತಷ್ಟು ಬೆಳೆಯಿತು. ನಮ್ಮ ಬಳಗ ಬೆಳೆಯಿತು. ಅಂದರೆ 4 ರಿಂದ 24ಕ್ಕೇರಿತು,'' ಎನ್ನುತ್ತಾರೆ ಸ್ಛೂರ್ತಿ ವಿಶ್ವಾಸ್‌.

ಪ್ಯಾಂಟಲೂನ್‌ ಕಂಪನಿಯನ್ನು ಮಾರ್ಕೆಟಿಂಗ್‌ ಮಾಡುವ ದೃಷ್ಟಿಯಿಂದ ಫೇಸ್‌ ಆಫ್‌ ಬ್ಯಾಂಗಲೂರ್‌ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಅದೆಷ್ಟು ಜನಪ್ರಿಯವಾಯಿತೆಂದರೆ ಅದು ಪ್ಯಾಂಟಲೂನ್‌ ಫೇಸ್‌ ಆಫ್‌ ಬ್ಯಾಂಗಲೂರ್‌ ಎಂದೇ ಗುರುತಿಸಲಾಯಿತು. ಪ್ರತಿಭೆ ಇದ್ದವರಿಗೆ ಮಾಡೆಲಿಂಗ್‌, ಚಲನಚಿತ್ರ ಮತ್ತು ಗ್ಲಾಮರ್‌ ಫೀಲ್ಡ್ ಗೆ ಪ್ರವೇಶಿಸಲು ಇದೊಂದು ದಾರಿ. ಈಗ ಇವರು ಫೇಸ್‌ ಆಫ್‌ ಬ್ಯಾಂಗಲೂರ್‌ನ ಎರಡನೇ ಸೀಸನ್‌ನ್ನು ನಿರ್ವಹಿಸಲಿದ್ದಾರೆ. ಮದುವೆಯಾಗಿ, ಮಗು ಹುಟ್ಟಿದ ಮೇಲೆ ಸ್ವಲ್ಪ ದಿನ ಎಲ್ಲ ಸ್ಥಗಿತವಾಗಿದ್ದು, ನಂತರ ಸ್ಛೂರ್ತಿಯವರ ಚಟುವಟಿಕೆಗಳು ಮತ್ತೆ ಅದೇ ವೇಗದಲ್ಲಿ ಮುಂದುರಿಯುತ್ತಿವೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ