ಸಾಮಾನ್ಯವಾಗಿ ಮಹಿಳೆಯನ್ನು ಗುರುತಿಸುವುದು, ಅವಳ ತಂದೆಯ ಹೆಸರಿನಿಂದ, ಗಂಡನ ಹೆಸರಿನಿಂದ, ನಂತರ ಮಕ್ಕಳ ಸಾಧನೆಯಿಂದ, ಆದರೆ ತನ್ನ ಅಂತರಾಳದಲ್ಲಿ ಅವಳು ಸದಾ ತನ್ನತನವನ್ನು ಬಿಂಬಿಸಿಕೊಳ್ಳಲು ಇಷ್ಟಪಡುತ್ತಾಳೆ, ತನ್ನ ವೈಯಕ್ತಿಕ ಸಾಧನೆಯನ್ನು ಬಯಸುತ್ತಾಳೆ. ಅಂತಹ ಒಬ್ಬ ಮಹಿಳೆಯೇ ಬೆಂಗಳೂರಿನ ಸುನೀತಾ!

ಬೆಳೆಯುವ ಪೈರು ಮೊಳಕೆಯಲ್ಲೇ ಎನ್ನುವಂತೆ ಈಕೆಯಲ್ಲಿ ಮೊದಲಿನಿಂದಲೂ ಉದ್ಯಮಿಯಾಗುವ ಎಲ್ಲಾ ಲಕ್ಷಣಗಳೂ ಕಾಣುತ್ತಿದ್ದವು. ಚಿಕ್ಕಂದಿನಿಂದಲೂ ಷೇರು ವ್ಯಾಪಾರದಲ್ಲಿ ಆಸಕ್ತಿ ಇತ್ತು, ತಂದೆಯ ಸಹಕಾರದಿಂದ ಸ್ವಲ್ಪ ಮಟ್ಟಿಗೆ ಅದನ್ನು ನಡೆಸುತ್ತಲೂ ಇದ್ದರು. ಆದರೆ ಹೆಣ್ಣುಮಕ್ಕಳಿಗೆ ಮದುವೆ ಆಯಿತೆಂದರೆ ಅವರ ಜೀವನದ ದಿಕ್ಕೇ ಬದಲಾಗಿಬಿಡುತ್ತದೆ. ಮದುವೆಯಾದ ವರ್ಷಕ್ಕೆ ಮಗು ಕೈಗೆ ಬಂತು. ಆಗ ಇವರಿಗೆ ತಮ್ಮ ಮಗುವನ್ನು ಬೆಳೆಸುವ ಹಂತದಲ್ಲಿ ಮರಿಯಾ ಮಾಂಟೆಸರಿ ಅವರ ಪುಸ್ತಕ `ಅಬ್ಸಾರ್ಬೆಂಟ್‌ ಮೈಂಡ್‌' ಸಿಕ್ಕಿತು. ಅದನ್ನು ಓದುವಾಗ ನಾನು ಮಾಂಟೆಸರಿ ಕೋರ್ಸ್‌ ಮಾಡಿದರೆ ನನ್ನ ಮಗನನ್ನು ಬೆಳೆಸಲು ಅನುಕೂಲ ಎನ್ನುವ ಭಾವ ಬಂದಿತು.

ಮನಸ್ಸಿನಲ್ಲಿ ಬಂದುದನ್ನು ಮಾಡುವ ಹಠ ಸುನೀತಾ ಅವರದು. ಕೋರ್ಸ್‌ಗೆ ಸೇರಿಕೊಂಡರು. ಅಲ್ಲಿ ಅವರು ಜೀವನವನ್ನು ನೋಡುವ ದೃಷ್ಟಿಯೇ ಬದಲಾಯಿತಂತೆ. ಅದು ನನ್ನ ಜೀವನದ ಮುಖ್ಯ ತಿರುವು ಎನ್ನಬಹುದು ಎನ್ನುತ್ತಾರೆ.

`ನನ್ನ ಮಗನನ್ನೂ ನೋಡಿಕೊಂಡು, ನನ್ನ ಅತ್ತೆಮನೆಯಲ್ಲಿ ಒಟ್ಟು ಕುಟುಂಬವಾದುದರಿಂದ ಅಲ್ಲಿಯೂ ಮನೆಯಲ್ಲಿ ಸೌಹಾರ್ದತೆಯನ್ನು ಕಾಪಾಡುವ ದೃಷ್ಟಿಯಿಂದ ನಾನು ಮನೆಯ ಕೆಲಸಗಳಿಗೂ ಗಮನ ನೀಡಬೇಕಾಗುತ್ತಿತ್ತು. ನನ್ನ ದಿನಚರಿ ಮುಂಜಾನೆ ನಾಲ್ಕೂವರೆಗೇ ಆರಂಭವಾಗುತ್ತಿತ್ತು. ಬಹಳ ಶ್ರಮದಾಯಕ ದಿನಗಳವು. ನನ್ನ ಕೋರ್ಸ್‌ ಬಗ್ಗೆ ನನಗೆಷ್ಟು  ಇಷ್ಟವಿತ್ತೆಂದರೆ ಯಾವುದೂ ಕಷ್ಟ ಎನಿಸಲೇ ಇಲ್ಲ. ಅದನ್ನು ಮುಗಿಸುವುದಷ್ಟೇ ನನ್ನ ಗುರಿಯಾಗಿತ್ತು,' ಎನ್ನುತ್ತಾರೆ. ಕೋರ್ಸ್‌ ಮುಗಿಸಿ ನಂತರ ಬಹಳ ಕಷ್ಟಪಟ್ಟು ಹೇಗೋ ಹಣ ಹೊಂದಿಸಿ ಬಹಳ ಉತ್ಸಾಹದಿಂದಲೇ ಶಿಶುಧಾಮ ಶಾಲೆಯನ್ನು ಪ್ರಾರಂಭಿಸಿದರು. ಆದರೆ ಕುಟುಂಬದ ಒತ್ತಡಗಳ ಕಾರಣ ಇಷ್ಟವಿಲ್ಲದಿದ್ದರೂ ಅದನ್ನು ಮುಚ್ಚಬೇಕಾಯಿತು. ಸುನೀತಾ ಅವರು ಹಾಕಿದ ಹಣ ವ್ಯರ್ಥವಾಯಿತು. ಈ ರೀತಿ ಹೆಜ್ಜೆ ಹೆಜ್ಜೆಗೂ ಅಡಚಣೆಗಳು ಅವರಿಗೆ ಕಾದು ನಿಂತಿರುತ್ತಿದ್ದವು. ನಂತರ ಮಾಂಟೆಸರಿ ಎಲಿಮೆಂಟರಿ ತರಬೇತಿ ಪಡೆದು ಮತ್ತೊಂದು  ಶಾಲೆಯಲ್ಲಿ ಉದ್ಯೋಗ ಮಾಡಿದರು. ಅಲ್ಲಿ ಸ್ವಲ್ಪ ಮಟ್ಟಿಗೆ ಅವರ ವಿಚಾರಗಳಿಗೆ ಗೌರವ ದೊರಕಿತು.

ಬೇರೆ ಶಾಲೆಗಳಿಂದ ಉದ್ಯೋಗದ ಕರೆ ಬಂದರೂ ತಮ್ಮದೇ ಆದ ಶಾಲೆಯೊಂದನ್ನು ಮಾಡುವ ಕನಸು ಅವರದಾಗಿತ್ತು. ಕುಟುಂಬದ ಒತ್ತಡ, ಮಗನ ಜವಾಬ್ದಾರಿ, ಜೊತೆಯಲ್ಲಿ ತಾಯಿಯ ಅನಾರೋಗ್ಯ, ಮಗಳಾಗಿ ಅವರ ಋಣ ತೀರಿಸುವ ಭಾರ ಇವರದಾಗಿತ್ತು. ಹೀಗೆಯೇ ಆರು ವರ್ಷ ಕಳೆಯಿತು, ನಂತರ ಕುಟುಂಬದವರ ಸಹಭಾಗಿತ್ವದಲ್ಲಿ ಶಾಲೆಯೊಂದನ್ನು ಪ್ರಾರಂಭ ಮಾಡಿದರು. `ಶಾಲೆಯ ಕೆಲಸದ ಜೊತೆಗೆ ತಾಯಿಯ ಅನಾರೋಗ್ಯ ಗಮನಿಸಬೇಕಿತ್ತು. ಅವರಿಗೆ ನಡೆಯಲೂ ಆಗುತ್ತಿರಲಿಲ್ಲ. ಅವರನ್ನು ಮಗುವಿನಂತೆ ನೋಡಿಕೊಂಡೆ. ಆದರೆ ಅವರು ನನಗೆ ಮಾಡಿದ್ದನ್ನು ಮರೆಯಲುಂಟೆ? ನಾನು ಇಷ್ಟು ವಿದ್ಯಾವಂತಳಾಗಲು ಅವರೇ ಮುಖ್ಯ ಕಾರಣ. ನಮ್ಮ ತಾಯಿ ಯಾವಾಗಲೂ ಹೇಳುತ್ತಿದ್ದರು, ನಿನ್ನ ಹಣ, ಆಸ್ತಿಯನ್ನು ಯಾರಾರೂ ನಿನಗೆ ಮೋಸ ಮಾಡಿ ತೆಗೆದುಕೊಳ್ಳಬಹುದು. ಆದರೆ ನಿನ್ನ ವಿದ್ಯೆಯನ್ನು ಯಾರೂ ಕದಿಯಲಾರರು. ಅವರು ಚಿಕ್ಕಂದಿನಲ್ಲಿ ಹೇಳಿದ ಮಾತೇ ನನಗೆ ಈಗಲೂ ಪ್ರೇರಣೆಯಾಗಿದೆ,' ಎನ್ನುವ ಸುನೀತಾ ಯಾವುದೇ ಮಗನಿಗೆ ಕಡಿಮೆ ಇಲ್ಲದಂತೆ ತಾಯಿಯನ್ನು ನೋಡಿಕೊಂಡರು. ಹೆಣ್ಣುಮಕ್ಕಳನ್ನು ಬೇಡವೆನ್ನುವವರು ನಿಜಕ್ಕೂ ದಡ್ಡರಷ್ಟೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ