ಇಂದು ಶಿಕ್ಷಣವೆನ್ನುವುದು ಹಿಂದಿನಂತಿಲ್ಲ. ಪ್ರತಿಯೊಬ್ಬ ವಿದ್ಯಾರ್ಥಿಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಪ್ರತಿಭೆ ಸಾಬೀತುಪಡಿಸುವಂತಹ ಅನಿವಾರ್ಯತೆಯಿದೆ. ಈ ನಿಟ್ಟಿನಲ್ಲಿ ಪ್ರಾಥಮಿಕ ಹಂತದಿಂದಲೇ ವಿದ್ಯಾರ್ಥಿಗಳಿಗೆ ವಿಶ್ವಮಟ್ಟದಲ್ಲಿ ಸಾಧನೆ ಮಾಡಲು ಸಹಕಾರಿಯಾಗುವಂತೆ ಅವರನ್ನು ರೂಪಿಸಬೇಕಾಗಿದೆ.
ಇಂದಿನ ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಅಂತಹ ಗುರುತರವಾದ ಜವಾಬ್ದಾರಿ ಇದೆ. ಪ್ರಸ್ತುತ ವೇಗದ ಬದುಕಿನ ಅನುಸಾರ ಅಲ್ಪಾವಧಿಯಲ್ಲಿ ಅತಿ ಹೆಚ್ಚು ಕೆಲಸವನ್ನು ನಿಭಾಯಿಸುವ ಚಾಕಚಕ್ಯತೆ ಎಂತಹ ಪರಿಸ್ಥಿತಿಯಲ್ಲೂ ಇಡೀ ಜಗತ್ತನ್ನು ಎದುರಿಸುವ ಧೈರ್ಯ, ಚಾತುರ್ಯ, ಕ್ಲಿಷ್ಟಕರ ಸಮಯದಲ್ಲಿ ಸಂಯಮ ಮೀರದ ನಡತೆ, ಅಂಗೈಯಲ್ಲಿ ಜಗತ್ತನ್ನು ನೋಡುವ ಧಾವಂತ, ಕಂಡ ಕನಸನ್ನು ನನಸಾಗಿಸಲು ಬೇಕಾಗುವ ತರಬೇತಿ, ವೃತ್ತಿಪರತೆಯನ್ನು ಹೆಚ್ಚು ಮಾಡುವ ತಂತ್ರ..... ಹೀಗೆ ಎಲ್ಲವನ್ನೂ ವಿದ್ಯಾರ್ಥಿಗಳಿಗೆ ಧಾರೆಯೆರೆಯುವ, ತೀವ್ರ ಕಾಳಜಿ ಹಾಗೂ ಭದ್ರತೆಯನ್ನು ಕಾಪಾಡುವ ಕೆಲವೇ ಶಾಲೆಗಳಲ್ಲಿ ಟ್ರಯೋ ವರ್ಲ್ಡ್ ಅಕಾಡೆಮಿ ಕೂಡ ಒಂದು. ಬೆಂಗಳೂರಿನ ಸಹಕಾರ ನಗರದಲ್ಲಿ ಸ್ಥಾಪನೆಗೊಂಡಿರುವ ಟ್ರಯೋ ವಸತಿ ಶಾಲೆ, ಅಂತಾರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಆಧುನಿಕ ಶಿಕ್ಷಣ ವ್ಯವಸ್ಥೆಗೆ ಅನುಗುಣವಾಗಿ ನವೀನ ಕೌಶಲ್ಯ ನಿರ್ಮಾಣಕ್ಕಾಗಿ ಅನೇಕ ಕೋರ್ಸ್‌ಗಳನ್ನು ನೀಡಲಾಗುತ್ತದೆ. ಟ್ರಯೋ ವರ್ಲ್ಡ್ ಅಕಾಡೆಮಿ, ಗುಣಮಟ್ಟ ಹಾಗೂ ಜನಪ್ರಿಯತೆಯಲ್ಲಿ ಬೆಂಗಳೂರಿಗೆ 3ನೇ ಸ್ಥಾನದಲ್ಲಿದ್ದು, ಕರ್ನಾಟಕ ರಾಜ್ಯದಲ್ಲಿ 5ನೇ ಸ್ಥಾನ, ರಾಷ್ಟ್ರಮಟ್ಟದಲ್ಲಿ 9ನೇ ಸ್ಥಾನ ಗಳಿಸಿರುವುದು ಈ ಶಾಲೆಯ ಹೆಗ್ಗಳಿಕೆಯಾಗಿದೆ. ವಿಶ್ವದರ್ಜೆಯ ಕಲಿಕೆಯ ವಿಧಾನದ ನಿಯೋಜನೆ, ಓದಿನ ಅರಿವು, ಜ್ಞಾನದ ವಿಸ್ತಾರ, ಶೈಕ್ಷಣಿಕ ಮೌಲ್ಯಗಳ ಪ್ರತಿಪಾದನೆಯಂತಹ ಹಲವಾರು ಧ್ಯೇಯ, ಗುರಿಗಳೊಂದಿಗೆ ಸ್ಥಾಪನಿಗೊಂಡಿರುವ ಟ್ರಯೋ ವರ್ಲ್ಡ್ ಅಕಾಡೆಮಿ ದೇಶದಲ್ಲೇ ಅತ್ಯುತ್ತಮ ವಸತಿ ಶಾಲೆಗಳಲ್ಲೊಂದು ಎನಿಸಿಕೊಂಡಿದೆ. ಅಲ್ಲದೆ, ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುಲಭ ಸಾಧನೆಗೆ ಅನುಕೂಲವಾಗುವಂತೆ ಸ್ಕೂಲ್‌ನಿಂದ ಮಾನ್ಯತೆ ಪಡೆದುಕೊಂಡು ಅಂತಾರಾಷ್ಟ್ರೀಯ ಬ್ಯಾಕ್ ಲೋರಿಯೆಟ್ ಡಿಪ್ಲೋಮಾ ಕೋರ್ಸ್‌ನ್ನು ಕೂಡ ನೀಡುತ್ತಿದೆ. ಪ್ರತಿ ವಿದ್ಯಾರ್ಥಿಯ ಮೈಂಡ್ ರೀಡ್ ಮಾಡುವುದರಿಂದ ಮೊದಲುಗೊಂಡು ಅವರಲ್ಲಿ ಅಡಗಿರುವ ವಿಶೇಷ ಪ್ರತಿಭೆಯನ್ನು ಹೊರಗೆಡಹುವಲ್ಲಿ ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ಓದಿನ ಜೊತೆ ಜೊತೆಗೆ ಸಾಹಿತ್ಯ, ಸಂಗೀತ, ನಾಟಕ ಮುಂತಾದ ಲಲಿತಕಲೆಗಳಲ್ಲೂ ವಿದ್ಯಾರ್ಥಿಗಳು ತೊಡಗಿಕೊಳ್ಳುವಂತೆ ಪ್ರೇರೇಪಿಸಲಾಗುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಕ್ರೀಡಾ ಮನೋಭಾವನೆಯನ್ನು ತುಂಬಿಸಿ ಕ್ರೀಡಾ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆಗೈಯಲು ಪ್ರೋತ್ಸಾಹ ನೀಡುವ ಶಾಲೆ ಪರಸ್ಪರ ಗೌರವ, ಐಕ್ಯತೆಯ ಮೌಲ್ಯ, ಸೌಹಾರ್ದತೆಯ ಪ್ರತೀಕವನ್ನು ಪ್ರತಿಪಾದಿಸುತ್ತಾ ಇಡೀ ವಿಶ್ವವೇ ತಮ್ಮತ್ತ ನೋಡುವಂತೆ ಮಾಡುವ ವಿದ್ಯಾರ್ಥಿಗಳನ್ನು ಹುಟ್ಟುಹಾಕುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ.
ವಿಶ್ವ ದರ್ಜೆಯ ಬೋಧನೆಯೊಂದಿಗೆ, ಬದುಕಿನ ಮಾನವೀಯ ಮೌಲ್ಯವನ್ನು ಬೋಧಿಸುವ ವಿಶೇಷ ಶಾಲೆ ಎನಿಸಿಕೊಂಡಿದೆ. ಅನುಭವಿ, ನುರಿತ, ಅತ್ಯುತ್ತಮ ಬೋಧಕ ಸಿಬ್ಬಂದಿಯನ್ನು ಹೊಂದಿರುವ ಈ ಶಾಲೆ ಒತ್ತಡರಹಿತ ವಾತಾವರಣ, ವಿಶಾಲವಾದ ಸುಸಜ್ಜಿತ ಕ್ಯಾಂಪಸ್, ಸುತ್ತಲೂ ಹರಡಿಕೊಂಡಿರುವ ಹಸಿರು ಅಂಗಳ, ಶಿಸ್ತುಬದ್ಧ ನಡೆ..... ಹೀಗೆ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಈ ವಸತಿ ಶಾಲೆ ಉಳಿದವುಗಳಿಗಿಂತ ತುಸು ಭಿನ್ನ.





