ಕರೂರ್ ಕಾಲ್ತುಳಿತ ದುರಂತದ ಬಗ್ಗೆ ನಟ ವಿಜಯ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ದುರಂತ ನಡೆದ ಮೂರು ದಿನದ ಬಗ್ಗೆ ನಟ ವಿಜಯ ಮೌನ ಮುರಿದಿದ್ದು, ಘಟನೆಯಿಂದ ನನಗೆ ತುಂಬಾ ನೋವಾಗಿದೆ. ಸದ್ಯದಲ್ಲೇ ಎಲ್ಲ ಸತ್ಯ ಹೊರ ಬರಲಿದೆ. ಶೀಘ್ರದಲ್ಲೇ ಗಾಯಾಳುಗಳನ್ನು ಭೇಟಿ ಮಾಡುತ್ತೇನೆ ಎಂದಿದ್ದಾರೆ.
ಶನಿವಾರ ತಮಿಳುನಾಡಿನ ಕರೂರ್ ಜಿಲ್ಲೆಯಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದ ಬಗ್ಗೆ ನಟ ಹಾಗೂ ಟಿವಿಕೆ ಪಕ್ಷದ ನಾಯಕ ವಿಜಯ್ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಈ ಸಮಯದಲ್ಲಿ ರಾಜಕೀಯ ಮಾಡೋದು ಸರಿಯಲ್ಲ, ನನ್ನ ಮೇಲೆ ಕೋಪವಿದ್ದರೆ, ನೇರವಾಗಿ ತೀರಿಸಿಕೊಳ್ಳಿ. ಶೀಘ್ರದಲ್ಲೇ ಎಲ್ಲ ಸತ್ಯ ಹೊರಗೆ ಬರುತ್ತೆ. ಘಟನೆಯಿಂದ ನನಗೆ ಬಹಳ ನೋವಾಗಿದೆ. ಶೀಘ್ರ ಗಾಯಾಳುಗಳನ್ನ ಭೇಟಿಯಾಗಿ ಸಾಂತ್ವನ ಹೇಳುತ್ತೇನೆ . ಯಾವುದೇ ತಪ್ಪು ಮಾಡದಿದ್ದರೂ, ನಮ್ಮ ಮೇಲೆ ಎಫ್‌ಐಆರ್ ದಾಖಲಾಗಿದೆ ಎಂದು ನಟ ವಿಜಯ ಹೇಳಿದ್ದಾರೆ.
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ