ಜೀವವಿಮೆ ಎಂತಹ ಒಂದು ವ್ಯವಸ್ಥೆಯೆಂದರೆ, ಅದರ ಮೂಲಕ ವ್ಯಕ್ತಿ ತನ್ನ ಮರಣಾನಂತರ ಕುಟುಂಬಕ್ಕೆ ಆರ್ಥಿಕ ಸುರಕ್ಷತೆ ದೊರಕಿಸಿಕೊಡುತ್ತಾರೆ. ಬಹಳಷ್ಟು ಜನ ವಿಮೆಯ ಏಜೆಂಟ್‌ ಹೇಳಿದ ಹಾಗೆ ತೆರಿಗೆ ಉಳಿಸಲು ಅಥವಾ ಹೂಡಿಕೆಯ ರೂಪದಲ್ಲಿ ವಿಮೆ ಮಾಡಿಸುತ್ತಾರೆ. ವಿಮೆಯು ವ್ಯಕ್ತಿಯೊಬ್ಬನ ಭವಿಷ್ಯದ ಆರ್ಥಿಕ ವ್ಯವಸ್ಥೆಯಾಗಿದೆ. ಅದಕ್ಕಾಗಿ ವಿಮೆ ಪಾಲಿಸಿ ಖರೀದಿಸುವಾಗ ಪರಿಪೂರ್ಣ ಎಚ್ಚರ ವಹಿಸಬೇಕು.

ಎಲ್ಲಕ್ಕೂ ಮುಂಚೆ ನೀವು ವಿಮೆ ಮಾಡಿಸಲು ಏಕೆ ಯೋಚಿಸುತ್ತಿದ್ದೀರಿ ಎನ್ನುವುದನ್ನು ನಿರ್ಧರಿಸಿ. ವಿಮೆಯು ಮುಖ್ಯವಾಗಿ ವಿಮೆ ಮಾಡಿಸಲ್ಪಟ್ಟ ವ್ಯಕ್ತಿಯ ನಿಧನಾನಂತರ ಅವನನ್ನು ಆಶ್ರಯಿಸಿದವರಿಗೆ ಆರ್ಥಿಕ ಸುರಕ್ಷತೆ ದೊರಕಿಸಿಕೊಡುತ್ತದೆ. ಈ ಉದ್ದೇಶಕ್ಕಾಗಿ ವಿಮೆ ಪಾಲಿಸಿ ತೆಗೆದುಕೊಳ್ಳುವುದಿದ್ದರೆ, ಎಲ್ಲಕ್ಕೂ ಅತ್ಯುತ್ತಮ ಆಜೀವ ವಿಮೆ ಮಾಡಿಸಿದ ವ್ಯಕ್ತಿ ಒಂದು ಅವಧಿಯ ತನಕ ಪ್ರೀಮಿಯಂ ಜಮೆ ಮಾಡುವುದಾಗಿರುತ್ತದೆ. ಆ ಮೊತ್ತ ಅತ್ಯಂತ ಕಡಿಮೆ ಇರುತ್ತದೆ. ಅದಕ್ಕೆ ಬದಲಿಗೆ ದೊಡ್ಡ ಮೊತ್ತದ ಸುರಕ್ಷೆ ದೊರೆಯುತ್ತದೆ.

ಸೂಕ್ತ ವಿಮಾ ಕಂಪನಿಯ ಆಯ್ಕೆ

ವ್ಯಕ್ತಿಯೊಬ್ಬನ ಭವಿಷ್ಯದ ಯೋಜನೆ ರೂಪಿಸುತ್ತಿರುವ ಸಂದರ್ಭದಲ್ಲಿ ಕುಟುಂಬದ ಸುರಕ್ಷತೆಗಾಗಿ ಈ ರೀತಿಯ ವಿಮೆಯನ್ನು ಅಗತ್ಯವಾಗಿ ತೆಗೆದುಕೊಳ್ಳಬೇಕು. ವಿಮೆಯ ಪ್ರೀಮಿಯಂ ರೂಪದಲ್ಲಿ ಪಾವತಿ ಮಾಡಿದ ಮೊತ್ತಕ್ಕೆ ಆದಾಯಕರ ಅಧಿನಿಯಮದ 80 `ಸಿ' ಅನ್ವಯ 1.50 ಲಕ್ಷ ರೂ. ಮೊತ್ತದ ತನಕ ರಿಯಾಯಿತಿ ದೊರೆಯುತ್ತದೆ. ಸಾಮಾನ್ಯವಾಗಿ ಜನರು ತೆರಿಗೆ ಉಳಿಸುವ ನಿಟ್ಟಿನಲ್ಲಿ ಏಜೆಂಟ್‌ ಹೇಳಿದಂತೆ ವಿಮೆ ಮಾಡಿಸುತ್ತಾರೆ. ಒಂದುವೇಳೆ ತೆರಿಗೆ ಉಳಿಸಿದಷ್ಟೇ ವಿಮೆ ತೆಗೆದುಕೊಳ್ಳುವುದಿದ್ದರೆ ಅದು ಒಳ್ಳೆಯ ಉಪಾಯವಲ್ಲ. ಏಕೆಂದರೆ ಈ ಅನುಬಂಧದನ್ವಯ ವಿಮಾ ಹೊರತಾಗಿ ಬೇರೆ ಕೆಲವು ಪರ್ಯಾಯಗಳಿವೆ. ಅದರಿಂದ ತೆರಿಗೆ ರಿಯಾಯಿತಿ ದೊರೆಯುವುದಲ್ಲದೆ, ನೀವು ಜಮೆ ಮಾಡಿದ ಮೊತ್ತಕ್ಕೆ ಒಳ್ಳೆಯ ರಿಟರ್ನ್ಸ್ ಕೂಡ ದೊರೆಯುತ್ತದೆ.

ಕುಟುಂಬದ ಅಗತ್ಯ ಹಾಗೂ ಭವಿಷ್ಯತ್ತಿನ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ವಿಮೆಯ ಕವರ್‌ ಮಾಡಲಾಗುತ್ತದೆ. ಅದೆಷ್ಟೋ ವಿಮೆ ಯೋಜನೆಗಳು ಹೇಗಿರುತ್ತವೆಯೆಂದರೆ, ಒಂದು ನಿಶ್ಚಿತ ಅವಧಿಯ ಬಳಿಕ ಕಾಲಕಾಲಕ್ಕೆ ಮೊತ್ತ ಸಿಗುತ್ತಿರುತ್ತವೆ. ನಡುನಡುವೆ ಮೊತ್ತ ಕೈಗೆ ಬರುವುದರಿಂದ ಕೊನೆಯಲ್ಲಿ ಸಿಗುವ ಮೊತ್ತ ಬಹಳ ಕಡಿಮೆಯಾಗಿರುತ್ತದೆ. ಅದು ಸುರಕ್ಷತೆಯ ದೃಷ್ಟಿಯಿಂದ ಅಷ್ಟು ಸರಿಯಾದುದಲ್ಲ. ಇಂತಹ ಪಾಲಿಸಿಗಳ ಪ್ರೀಮಿಯಂ ಕೂಡ ಸ್ವಲ್ಪ ಹೆಚ್ಚಿಗೆ ಇರುತ್ತದೆ.

ವಿಮೆ ಮಾಡಿಸುವಾಗ ಸೂಕ್ತ ವಿಮಾ ಕಂಪನಿಯ ಆಯ್ಕೆ ಕೂಡ ಮಹತ್ವದ್ದಾಗಿರುತ್ತದೆ. ಮೊದಲು ಭಾರತ್‌ ಜೀವ ವಿಮಾ ನಿಗಮ ಮಾತ್ರ ವಿಮೆ ಮಾಡಿಸುತ್ತಿತ್ತು. ಆದರೆ ಈಗ ಬಹಳಷ್ಟು ಖಾಸಗಿ ವಿಮೆ ಕಂಪನಿಗಳು ಬಂದಿವೆ. ಅದರಲ್ಲಿ ವಿದೇಶಿ ವಿಮಾ ಕಂಪನಿಗಳು ಕೂಡ ಸೇರಿವೆ. ಹೀಗಾಗಿ ವಿಮೆ ಮಾಡಿಸುವಾಗ ವಿಮಾ ಕಂಪನಿಯ ವಿಶ್ವಾಸಾರ್ಹತೆಯ ಬಗ್ಗೆ ಗಮನಹರಿಸಬೇಕು. ವಿಮೆ ಎನ್ನುವುದು ದೀರ್ಘಾವಧಿಯದ್ದು. ಹೀಗಾಗಿ ಕಂಪನಿ ಆಯ್ಕೆ ಮಾಡುವಾಗ ಇವತ್ತಿನಿಂದ 25-30 ವರ್ಷಗಳ ಬಳಿಕ ಅಥವಾ ಅದಕ್ಕೂ ನಂತರ ನಮ್ಮ ಹಣ ವಾಪಸ್‌ ಸಿಗಬಹುದೇ ಎಂಬುದನ್ನು ಪರಿಶೀಲಿಸಿ ನೋಡಬೇಕು. ಕಂಪನಿಯ ಭವಿಷ್ಯ ಉಜ್ವಲವಾಗಿರಬೇಕು, ಅದು ಸಕಾಲಕ್ಕೆ ಮರುಪಾವತಿ ಮಾಡುವಂತಿರಬೇಕು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ