ಪ್ರತಿಯೊಂದು ಕೆಲಸಕ್ಕೂ ಅದರದೇ ಆದ ವೈಶಿಷ್ಟ್ಯತೆ ಇರುತ್ತದೆ. ಕೆಲಸದಲ್ಲಿ ಅಂತಹ ಚಿಕ್ಕ ಪುಟ್ಟ ಭೇದವಿದ್ದರೂ ಅವುಗಳಿಗೆ ಅದರದೇ ಆದ ಒಂದು ಗುಣಮಟ್ಟವಿರುತ್ತದೆ......!

ದೊಡ್ಡ ಕಥೆ, ಕಾದಂಬರಿ ಬರೆಯುವುದು ಸುಲಭವಾಗಿರಬಹುದು. ಸಣ್ಣ ಸಣ್ಣ ಕಥೆ ಬರೆಯುವುದು ತುಂಬಾ ಕಷ್ಟಕರ. ಹಾಗೆಯೇ ದೊಡ್ಡ ದೊಡ್ಡ ವ್ಯಾಪಾರ, ಉದ್ಯೋಗ ಮಾಡುವುದು ಸುಲಭ. ಆದರೆ ಚಿಕ್ಕ ಪುಟ್ಟ ಉದ್ಯೋಗ ಮಾಡುವುದು ಒಂದು ರೀತಿಯ ಕಷ್ಟವೇ ಎನ್ನಬಹುದು.

ಏಕೆಂದರೆ ಉದಾಹರಣೆಗೆ ತರಕಾರಿ, ಹಣ್ಣು, ಚಿಕ್ಕಪುಟ್ಟ ಪ್ಲಾಸ್ಟಿಕ್‌ ಇದೇ ರೀತಿ ಸಾಮಾನುಗಳನ್ನು ಮಾರಾಟ ಮಾಡಬೇಕಾದರೆ ಅವರು ಅವುಗಳನ್ನು ದಿನ ಬೆಳಗಾದರೆ ದೊಡ್ಡ ಮಾರ್ಕೆಟ್‌ ನಿಂದ ತರಬೇಕು. ತಂದ ನಂತರ ಅವುಗಳನ್ನು ನೀರಿನಿಂದ ಸ್ವಚ್ಛ ಮಾಡಬೇಕು. ಗಿರಾಕಿಗಳಿಗೆ ಚೆನ್ನಾಗಿ ಕಾಣುವಂತೆ ನೀಟಾಗಿ ಜೋಡಿಸಿ ಇಡಬೇಕು. ಕೆಡದಂತೆ ನೀರು ಚಿಮುಕಿಸುತ್ತಾ ಇರಬೇಕು.

ದೊಡ್ಡ ದೊಡ್ಡ ಉದ್ಯೋಗ ಮಾಡುವರಿಗೂ ಅವರದೇ ಆದ ನಿಯಮಗಳು, ಜಾಣ್ಮೆ ಎಲ್ಲ ಇರಬೇಕಾಗುತ್ತದೆ.

ಪ್ರತಿಯೊಂದು ಸೀಜನ್‌ ಗೆ ತಕ್ಕ ಹಾಗೆ ಸಾಮಾನು ತಂದು ಮಾರಬೇಕಾಗುತ್ತದೆ. ಇದು ಎಲ್ಲಾ ವರ್ಗಕ್ಕೂ ಅನ್ವಯವಾಗುತ್ತದೆ. ಆದರೂ ಹಬ್ಬಗಳು ಬಂದರೆ ಆಯಾ ಹಬ್ಬಕ್ಕೆ ತಕ್ಕ ಹಾಗೆ ಸಾಮಾನು ತರಬೇಕು. ದೀಪಾವಳಿಗೆ ಹಣತೆ, ರಂಗೋಲಿ, ತುಳಸಿ ಮದುವೆ ಬಂದರೆ ಬಳೆ, ನೆಲ್ಲಿಕಾಯಿ, ಹುಣಸೆಕಾಯಿ, ಗಣಪತಿ ಹಬ್ಬ ಬಂದರೆ ಅಲಂಕಾರಿಕ ಸಾಮಾನು, ಲೈಟಿನ ಸರ. ಹೀಗೆ ಹೋಳಿ ಹುಣ್ಣಿಮೆಗೆ ಬಣ್ಣ ಬಣ್ಣದ ಪೌಡರ್‌, ನೀರಿನ ಪಿಚಕಾರಿ. ಹೀಗೆ ಒಂದಲ್ಲ, ಎರಡಲ್ಲ, ಹಲವಾರು ಬದಲಾವಣೆ ಮಾಡುತ್ತಾ, ಜೀವನೋಪಾಯವನ್ನು ಕಂಡುಕೊಳ್ಳುತ್ತಾರೆ.

ಶ್ರೀಮಂತರಾಗಲಿ, ಬಡವರಾಗಲಿ, ದೊಡ್ಡ ದೊಡ್ಡ ವ್ಯಾಪಾರಿಯೇ ಆಗಲಿ, ಸಣ್ಣ ವ್ಯಾಪಾರಿಯೇ ಆಗಲಿ, ಶ್ರದ್ಧೆಯಿಂದ ಕೆಲಸ ಮಾಡುವುದೊಂದೇ ಶ್ರೇಯಸ್ಕರ. ಎಲ್ಲದಕ್ಕೂ ಒಂದು ನಿಯಮ ಅನುಸರಿಸಿಕೊಂಡು ಹೋಗಬೇಕಾಗುತ್ತದೆ.

ಇದು ನಿತ್ಯ ಸತ್ಯ, ದುಡ್ಡಿದ್ದವರು ಬದುಕುತ್ತಾರೆ. ಇಲ್ಲದವರೂ ಹೇಗೋ ಬದುಕು ನಡೆಸುತ್ತಾರೆ. ಇದು ಜಗದ ನಿಯಮ. ಎಲ್ಲರೂ ಅನ್ನವನ್ನು ತಿನ್ನುತ್ತಾರೆಯೇ ಹೊರತು ಚಿನ್ನವನ್ನಲ್ಲ.

ಬೀದಿ ಬದಿಯಲ್ಲಿ ವ್ಯಾಪಾರ ಮಾಡುವವರಿಗೂ ಎಷ್ಟೊಂದು ಕಷ್ಟ. ಮಳೆ ಬಂದರೆ ಎಲ್ಲಾ ಸಾಮಾನು ತೆಗೆದು ಕಟ್ಟಬೇಕು. ದಿನ ರಾತ್ರಿಯಾದ ಕೂಡಲೇ ಉಳಿದ ಎಲ್ಲಾ ಸಾಮಾನುಗಳನ್ನು ಕಟ್ಟಿ ಬೇರೆಯವರ ಮನೆ ಅಥವಾ ಖಾಲಿ ಗೋಡೌನ್‌ ಗಳಲ್ಲಿ ಇಟ್ಟು ತಮ್ಮ ಮನೆಗೆ ಹೋಗಬೇಕಾಗುತ್ತದೆ. ಅದಕ್ಕೆ ಮತ್ತೇ ಬಾಡಿಗೆ ರೂಪದಲ್ಲಿ ಹಣ ಕಟ್ಟಬೇಕಾಗುತ್ತದೆ. ದಿನ ಕಾರ್ಪೋರೇಶನ್‌ ನವರಿಗೆ ದಿನದ ಟ್ಯಾಕ್ಸ್ ರೂಪದಲ್ಲಿ ಹಣ ಕೊಡಬೇಕಾಗುತ್ತದೆ.

ಒಟ್ಟಿನಲ್ಲಿ ಎಲ್ಲಾ ದುಸ್ತರ.... ಇದುವೇ ಜೀವನ ಇದೇ ಜೀವನ!

- ಎಸ್‌. ಶೋಭಾ 

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ