ಶಾಲಾ ಕಾಲೇಜುಗಳಲ್ಲಿ ಎಲ್ಲಾ ಗಂಡು ಮಕ್ಕಳಂತೆ ಆಟ ಪಾಠಗಳಲ್ಲಿ ಅತ್ಯುತ್ತಮ ಹೆಸರು ಗಳಿಸಿದ್ದ ತಿಲಕ್ ಅಂತರಂಗದಲ್ಲಿ ವಿಚಿತ್ರವಾದ ಒಂದು ಬಯಕೆ ತಾನಾಗಿ ಬೆಳೆಯತೊಡಗಿತು. ಇದು ಅವನ ವೈಯಕ್ತಿಕ ಜೀವನಕ್ಕೆ ಮುಳ್ಳಾಯಿತು. ಮುಂದೆ ಅವನು ಸಮಸ್ಯೆಯಿಂದ ಹೊರಬಂದದ್ದು ಹೇಗೆ.....?

ಶಾಲೆಯಲ್ಲಿ ವ್ಯಾಲಿಡಿಕ್ಟ್ರಿ ಫಂಕ್ಷನ್‌ ಭರಾಟೆ! ಹತ್ತನೇ ತರಗತಿ ಮಕ್ಕಳೇ ಅಲ್ಲಿ ಸೆಂಟರ್‌ ಆಫ್‌ ಅಟ್ರಾಕ್ಷನ್‌. ಶಾಲೆಯಲ್ಲಿ ಕಡೆಯ ಸ್ಟೇಜ್‌ ಪರ್ಫಾರ್ಮೆನ್ಸ್ ಎಂದು ಮಕ್ಕಳು ಅತೀ ಉತ್ಸಾಹದಿಂದ ಇರುತ್ತಾರೆ. ತಿಲಕ್‌ ಕೂಡ ಅದರಲ್ಲಿ ಒಬ್ಬ. ಡ್ಯಾನ್ಸ್ ಮಾಡಬೇಕು ಅಂದಾಗ ಅವನಿಗೊಂದು ದುಪಟ್ಟಾ ಬೇಕಿರುತ್ತದೆ. ತರಗತಿಯ ಹುಡುಗಿಯೊಬ್ಬಳ ದುಪಟ್ಟಾ ತೆಗೆದುಕೊಂಡು, `ಓ... ನಾರಿ ನಿನಗ್ಯಾರೆ ಜಗದಲ್ಲಿ ಸಾಟಿ.....' ಎನ್ನುವ ಹಾಡಿಗೆ ನೃತ್ಯ ಮಾಡುತ್ತಾನೆ.

ದುಪಟ್ಟಾ ಹಾಕಿಕೊಂಡ ಕ್ಷಣದಿಂದ ಅವನ ಮನಸ್ಸಿನಲ್ಲಿ ಏನೋ ಅಸ್ಪಷ್ಟ ತಲ್ಲಣಗಳು ಪ್ರಾರಂಭವಾಗ ತೊಡಗುತ್ತವೆ. ಅಸ್ಪಷ್ಟ ಭಾವನೆಗಳು, ನಾನ್‌ ಪ್ರಾಕ್ಟಿಕಲ್ ಆಸೆಗಳು ಅವನನ್ನು ಹಿಂಸಿಸತೊಡಗುತ್ತವೆ. ಅವುಗಳನ್ನು ಹಿಂದಿಕ್ಕಿ ನಾನು ಓದುವುದರಲ್ಲಿಯೇ ಹೆಚ್ಚು ಉತ್ಸಾಹ ತೋರಿಸಬೇಕು ಎಂದು ತನ್ನ ಮನದಲ್ಲಿ ಆಗುತ್ತಿರುವ ಭಾವನೆಗಳಿಗೆ ಇಂಬುಗೊಡದೆ ಅವುಗಳನ್ನು ಹತ್ತಿಕ್ಕಲು ಪ್ರಾರಂಭಿಸುತ್ತಾನೆ. ಆದರೂ ಎಲ್ಲರ ನಡುವಿದ್ದರೆ ನಾನು ಹೇಗೆ ಕಾಣಬಹುದು? ನಾನು ಹೇಗೆ ನಡೀಬಹುದು? ವಿಚಿತ್ರ ಅನ್ನಿಸುತ್ತೇನೋ ನೋಡೋರಿಗೆ ಎಂದು ತನ್ನಷ್ಟಕ್ಕೆ ತಾನಿರಲು ಪ್ರಾರಂಭಿಸುತ್ತಾನೆ. ಅವ್ಯಕ್ತ ಭಾವನೆ ತನಗೆ ಅಸಹನೀಯ ಅನ್ನುವ ಆಸೆ ಅವುಗಳಿಂದ ಹೈರಾಣಾಗುತ್ತಾನೆ.

ಹತ್ತನೆ ತರಗತಿಯಲ್ಲಿ ಒಳ್ಳೆ ಅಂಕ ತೆಗೆದುಕೊಂಡು ಪಿಯುಸಿಗೂ ಸೇರಿಕೊಳ್ಳುತ್ತಾನೆ. ಎರಡನೆ ಪಿಯುಸಿ ಕಡೆಯಲ್ಲಿ ಮತ್ತದೆ ಎಥ್ನಿಕ್ ಡೇ ಸಂಭ್ರಮ. ಹುಡುಗಿಯರೆಲ್ಲ ಒಬ್ಬರನ್ನೊಬ್ಬರು ಮೀರುವಂತೆ ಗ್ರಾಂಡ್‌ ಎಥ್ನಿಕ್‌ ವೇರ್‌ ನಲ್ಲಿ ಮಿರಮಿರನೆ ಮಿಂಚುತ್ತಿರುತ್ತಾರೆ. ಅವರನ್ನು ನೋಡಿ ಅವನ ಒಳಮನಸ್ಸು ಅವರನ್ನು ಮತ್ತೆ ಮತ್ತೆ ಮಾತನಾಡಿಸುವಂತೆ ಪ್ರೇರೇಪಿಸುತ್ತಿತ್ತು. ಅವರ ಬಳಿ ಹೋಗಿ, ``ಹಲೋ... ಯೂ ಆರ್‌ ಲುಕಿಂಗ್‌ ವೆರಿ ಗಾರ್ಜಿಯಸ್‌. ನೈಸ್‌ ಡ್ರೆಸ್‌ ಹ್ಞಾಂ...'' ಎನ್ನುತ್ತಾನೆ.

ಅದನ್ನು ಕೇಳಿದ ಹುಡುಗಿಗೆ ವಿಚಿತ್ರ ಎನಿಸುತ್ತದೆ. ಎಂದಿಗೂ ಹೀಗೆ ಮಾತನಾಡದೆ ಇದ್ದವನು ಈ ರೀತಿ ಮಾತನಾಡುತ್ತಿದ್ದಾನಲ್ಲ ಎನ್ನುವ ಗೊಂದಲ ಆ ಹುಡುಗಿಗೆ. ಇತರರಿಗೂ ಅವನು ತರಗತಿಯಲ್ಲಿ ಇರುತ್ತಿದ್ದುದಕ್ಕೂ ಆ ದಿನ ಅವನು ನೋಡುತ್ತಿದ್ದುದಕ್ಕೂ ವಿಭಿನ್ನ ಅನ್ನಿಸುತ್ತಿರುತ್ತದೆ. ತಿಲಕ್‌ ಹಾಗೆ ಮಾತನಾಡುತ್ತಾ ಪೂರ್ವಿಕಾ ಬಳಿ ಹೋಗಿ, ``ವೆರಿ ಬ್ಯೂಟಿಫುಲ್ ಯಂಗ್‌ ಲೇಡಿ,'' ಎನ್ನುತ್ತಾನೆ.

ಆ ಹುಡುಗಿಗೆ ವಿಚಿತ್ರ ಎನಿಸಿದರೂ ಕಡೆ ಫಂಕ್ಷನ್‌ ತಾನೇ ಮಾತನಾಡೋಣ ಎಂದೆನಿಸಿ, ``ಥ್ಯಾಂಕ್ಯೂ,'' ಎನ್ನುತ್ತಾಳೆ.

ಅವನು ಚೆನ್ನಾಗಿ ಓದುತ್ತಿದ್ದ ಕಾರಣದಿಂದ ಪರೀಕ್ಷೆಯ ಕಡೆ ತಯಾರಿಯಲ್ಲಿ ಏನಾದರೂ ಸಹಾಯ, ಏನಾದರೂ ಎಕ್ಸ್ ಟ್ರಾ ಮೆಟೀರಿಯಲ್ ಇದ್ದರೆ ತಗೋಬಹುದು ಎನ್ನುವ ಕಾರಣಕ್ಕೆ ನಂಬರನ್ನೂ ಕೊಡುತ್ತಾಳೆ.

ಕಾರ್ಯಕ್ರಮ ಮುಗಿಸಿ ಮನೆಗೆ ಹೋದ ನಂತರ ತಿಲಕ್‌ ಗೆ ಕಾಲೇಜಿನಲ್ಲಿ ನೋಡಿದ ಹೆಣ್ಣುಮಕ್ಕಳ ಉಡುಪನ್ನು ತಾನೂ ತೊಟ್ಟರೆ ಹೇಗಿರಬಹುದು ಎಂಬ ಕುತೂಹಲ ಬೆಂಬಿಡದೆ ಕಾಡುತ್ತದೆ. ಆ ಡ್ರೆಸ್‌ ಗಳನ್ನು ಈಗಿಂದೀಗಲೇ ಹಾಕಿಕೊಳ್ಳಬೇಕು ಎನ್ನುವಷ್ಟರ ಮಟ್ಟಿಗೆ ಆಗುತ್ತದೆ. ಆದರೆ ಸಮಾಜ ಏನನ್ನುತ್ತದೆ ಎನ್ನುವ ಬಗ್ಗೆ ಭಯ ಶಂಕೆಯೂ ಮನಸ್ಸಿನ ತುಂಬಾ ಆವರಿಸಿರುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ