ಕಥೆ -  ವಸುಧಾ ಸುರೇಶ್‌  

ಪ್ರಕೃತಿಯ ಮಡಿಲಿನಲ್ಲಿ, ಪರ್ವತದ ತಪ್ಪಲಿನಲ್ಲಿ ಬಳಸಿ ಹೋಗುವ ಹಾದಿಯಲ್ಲಿ ಸಾಗುತ್ತಾ ಮಾನವನು ಪ್ರಕೃತಿಯ ವರದಾನವನ್ನು ಆನಂದದಿಂದ ಅನುಭವಿಸುತ್ತಾ ಪ್ರಯಾಣಿಸಬಹುದು.

ಆದರೆ ಜೀವನ ಇಂತಹ ಸುಖಮಯ ಪಯಣದಂತಲ್ಲ. ಯಾವುದೋ ತಿರುವಿನಲ್ಲಿ ಭೂತಕಾಲದ ಕಹಿಯೊಂದು ಧುತ್ತೆಂದು ಎದುರಿನಲ್ಲಿ ನಿಲ್ಲುತ್ತದೆ. ಅದು ವ್ಯಕ್ತಿಯನ್ನು ಚಿಂತೆ, ದ್ವಂದ್ವದಲ್ಲಿ ಮುಳುಗಿಸಿ ಹೃದಯದ ವೇಗವನ್ನು ಹೆಚ್ಚಿಸುತ್ತದೆ. ಹಳೆಯ ಕಟು ಘಟನೆಗಳನ್ನು ನೆನೆಪಿಸಿಕೊಡುತ್ತದೆ.

ಶ್ರಾವ್ಯಾ ಸಹ ಇಂದು ಇಂತಹದೇ ಒಂದು ತಿರುವಿನಲ್ಲಿ ನಿಂತಿದ್ದಾಳೆ. ಅಲ್ಲಿ ಯಾರೋ ಅವಳನ್ನು ಗತಿಸಿದ ಘಟನೆಗಳ ಜಾಲಕ್ಕೆ ಎಳೆಯಲು ಪ್ರಯತ್ನಿಸುತ್ತಿದ್ದಾರೆ. ಅವಳ ಈಗಿನ ಸುಖ ಸಂಸಾರವನ್ನು ಒಡೆಯುವುದೇ ಅವರ ಉದ್ದೇಶವಾಗಿದೆ.

ಶ್ರಾವ್ಯಾ ಒಬ್ಬ ಸುಂದರ ನವವಿವಾಹಿತ ತರುಣಿ. ಸಂದೇಶನೊಡನೆ ವಿವಾಹವಾದ ಸಮಯದಲ್ಲಿ ಅವಳು ತನ್ನ ಬಾಳಿನಲ್ಲಿ ನಡೆದ ದುಃಖಕರ ಘಟನೆಗಳನ್ನು ಮನಸ್ಸಿನಿಂದ ಅಳಿಸಿ ಹಾಕಿದ್ದಾಳೆ. 6 ತಿಂಗಳ ಹಿಂದೆ ಅವರ ವಿವಾಹವಾಗಿದ್ದು, ಇಬ್ಬರೂ ಪರಸ್ಪರ ಅರ್ಥ ಮಾಡಿಕೊಳ್ಳುತ್ತಾ, ಗೌರವಿಸುತ್ತಾ ಬಾಳುತ್ತಿದ್ದಾರೆ. ಶ್ರಾವ್ಯಾ ತನ್ನ ಅತ್ತೆ ಮಾವಂದಿರನ್ನು ತನ್ನವರೆಂದು ಭಾವಿಸಿ ಆದರಿಸುತ್ತಿದ್ದಾಳೆ.

ಬಾಳ ಪಯಣದ ಸುಖಮಯ ಹಾದಿಯಲ್ಲಿ ಬಂಡೆಗಲ್ಲೊಂದು ಉರುಳಿ ಬಂದು ನಿಂತಂತೆ, ಒಂದು ಭಾನುವಾರ ಸಾಯಂಕಾಲ  ಆನಂದ್ ಮನೆಗೆ ಬಂದುದನ್ನು ಕಂಡು ಶ್ರಾವ್ಯಾಳ ಹೃದಯದಲ್ಲಿ ಸಂದೇಹದ ಚೇಳು ಕುಟುಕುತ್ತದೆ.

ಶ್ರಾವ್ಯಾಳ ಬಾಲ್ಯ ಸ್ನೇಹಿತನೆಂದು ಪರಿಚಯಿಸಿಕೊಂಡ ಆನಂದನಿಗೆ ಮನೆಯಲ್ಲಿ ಆದರದ ಸ್ವಾಗತ ದೊರೆಯಿತು. ಅವಳ ಅತ್ತೆ ಮಾವಂದಿರು ಅವನನ್ನು ಕುಳ್ಳಿರಿಸಿ, ಯೋಗಕ್ಷೇಮ ವಿಚಾರಿಸಿ, ನಂತರ ಶ್ರಾವ್ಯಾಳಿಗೆ ಕಾಫಿ ತರಲು ಹೇಳಿದರು.

ನಡುಗುವ ಹೃದಯ ಹೊತ್ತು ನಿಂತಿದ್ದ ಶ್ರಾವ್ಯಾ ಕೂಡಲೇ ಅಡುಗೆಮನೆಯತ್ತ ನಡೆದಳು. ಆನಂದ ಹಿಂದೆ ಅವಳ ಸ್ನೇಹಿತನಾಗಿದ್ದುದು ನಿಜವಾದರೂ, ಈಗ ಅವನನ್ನು ದ್ವೇಷಿಸುತ್ತಿದ್ದಳು. ಸಾಧ್ಯವಿದ್ದಿದ್ದರೆ ಅವನು ಮನೆಯೊಳಗೆ ಬರದಂತೆ ತಡೆದಿರುತ್ತಿದ್ದಳು. ಆದರೆ ಸದ್ಯದಲ್ಲಿ ಅವಳೇನೂ ಮಾಡುವಂತಿರಲಿಲ್ಲ. ಕಾಫಿ ಮಾಡಲು ತೊಡಗಿದಾಗ ಅವಳ ಮನಸ್ಸು ಗತಕಾಲಕ್ಕೆ ಓಡಿತು.

ಅವರಿಬ್ಬರ ಪರಿಚಯ ವರ್ಷಗಳಷ್ಟು ಹಳೆಯದು. ಅವರು ಸಹಪಾಠಿಗಳಾಗಿದ್ದರು, ಸ್ನೇಹಿತರಾಗಿದ್ದರು. ಆದರೆ ಈ ಸ್ನೇಹ ಆನಂದನ ಮನಸ್ಸಿನಲ್ಲಿ ಪ್ರೀತಿಯವಾಗಿ ಬದಲಾದದ್ದು ಶ್ರಾವ್ಯಾಳ ಅರಿವಿಗೆ ಬಂದಿರಲಿಲ್ಲ.

ಹಾಗೆ ನೋಡಿದರೆ ಹುಡುಗರ ಸ್ನೇಹ, ವ್ಯವಹಾರ ಮತ್ತು ಭಾವನೆಗಳನ್ನು ವ್ಯಕ್ತಪಡಿಸುವ ರೀತಿಯಲ್ಲಿ ಉಂಟಾಗುವ ಬದಲಾವಣೆಗಳನ್ನು ಹುಡುಗಿಯರು ಕೂಡಲೇ ಕಂಡುಕೊಳ್ಳುತ್ತಾರೆ. ಆದರೆ ಶ್ರಾವ್ಯಾ ಈ ಬಗ್ಗೆ ಯೋಚಿಸಲೂ ಇಲ್ಲ. ಏಕೆಂದರೆ ಅವಳು ಬೇರೊಬ್ಬನ ಜೀವನ ಸಂಗಾತಿಯಾಗಲು ವಚನ ನೀಡಿದ್ದಳು. ಅವನ ಕೈ ಹಿಡಿಯುವ ಕನಸು ಕಾಣುತ್ತಿದ್ದಳು.

ಹರೀಶ್‌ ಮತ್ತು ಶ್ರಾವ್ಯಾ ಕಳೆದ 4 ವರ್ಷಗಳಿಂದ ಪ್ರೀತಿಯ ಬಲೆಯಲ್ಲಿ ಒಂದಾಗಿದ್ದರು. ವಿವಾಹವಾಗಲು ನಿಶ್ಚಯಿಸಿಕೊಂಡಿದ್ದರು. ಬೇರೆ ಬೇರೆ ಜಾತಿಯ ಕಾರಣಕ್ಕಾಗಿ ಮನೆಯವರು ಈ ಮದುವೆಯನ್ನು ವಿರೋಧಿಸಿದ್ದರು. ಮನೆಯವರ ಮನವೊಲಿಸಲು ಇಬ್ಬರೂ ಸಾಕಷ್ಟು ಪ್ರಯಾಸಪಟ್ಟಿದ್ದರು.

ಮಕ್ಕಳ ಹಟಕ್ಕೆ ಮಣಿದು ಹಿರಿಯರು ಒಲ್ಲದ ಮನಸ್ಸಿನಿಂದ ಮದುವೆಗೆ ಸಮ್ಮತಿಸಿದ್ದರು. ಎರಡೂ ಮನೆಗಳಲ್ಲಿನ ಬಿರುಗಾಳಿ  ಶಾಂತವಾಗ ತೊಡಗಿದಾಗ ಬಂದೆರಗಿದ ಅನಿರೀಕ್ಷೀತ ಆಘಾತದಿಂದಾಗಿ ಶ್ರಾವ್ಯಾಳ ಕನಸು ನುಚ್ಚು ನೂರಾಯಿತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ