ರಕ್ಷಾಬಂಧನ ಹಬ್ಬದ ಹಿಂದಿನ ದಿನವೇ ಮಯಾಂಕನಿಗೆ ಮೊದಲ ಸಂಬಳ ಸಿಕ್ಕಿತ್ತು. ಅವನು ಅಮ್ಮ ಅಪ್ಪಂದಿರಿಗೆ ಉಡುಗೊರೆ ಕೊಳ್ಳುವಾಗ, ತನ್ನ ರಾಖಿ ಸಿಸ್ಟರ್‌ ಸ್ಮಿತಾಳಿಗೆ ಸಹ ಒಂದು ಪುಟ್ಟ ಸುಂದರ ಕೈ ಗಡಿಯಾರ ಕೊಂಡುಕೊಂಡ.

``ಏನಿದು ಮಯಾಂಕ್‌, ಮೊದಲ ಸಂಬಳ ಪೂರ್ತಿ ಈ ದುಬಾರಿ ರಿಸ್ಟ್ ವಾಚಿಗೇ ಸುರಿದ ಹಾಗಿದೆ..... ಅಮ್ಮ ಅಪ್ಪನಿಗೆ ಏನಾದರೂ ತಗೊಂಡ್ಯಾ ಇಲ್ವಾ?'' ಸ್ಮಿತಾ ಅವನ ಉಡುಗೊರೆಯಿಂದ ಬಹಳ ಹಿಗ್ಗುತ್ತಾ, ಹೆಮ್ಮೆಯಿಂದ ತಕ್ಷಣ ತನ್ನ ಕೈಗೆ ಕಟ್ಟಿಕೊಳ್ಳುತ್ತಾ ಹೇಳಿದಳು.

``ಎಲ್ಲರಿಗೂ ತಗೊಂಡಿದ್ದೀನಿ ಬಿಡಕ್ಕಾ.... ಆದರೆ ಇನ್ನೂ ಅವರಿಗೆ ಕೊಟ್ಟಿಲ್ಲ. ಇದೆಲ್ಲ ಶಾಪಿಂಗ್‌ ಮುಗಿಸಿ, ಫ್ರೆಂಡ್ಸ್ ಗೆ ಪಾರ್ಟಿ ಕೊಡಿಸಿದ ಮೇಲೆ ರಾತ್ರಿ ಮನೆಗೆ ಹೋಗುವಷ್ಟರಲ್ಲಿ ಬಹಳ ತಡವಾಗಿತ್ತು. ಅಷ್ಟು ಹೊತ್ತಿಗೆ ಎಲ್ಲರೂ ಮಲಗಿಬಿಟ್ಟಿದ್ದರು.

``ಬೆಳಗ್ಗೆ ಏಳುವಷ್ಟರಲ್ಲಿ ತಡ ಆಗಿತ್ತು. ಅಮ್ಮನೇ ಬಂದು ಎಬ್ಬಿಸಿದ್ದು. 8 ಗಂಟೆ ಆಗಿಹೋಯ್ತು, ಸ್ಮಿತಾ ಬಂದಿದ್ದಾಳೆ ನೋಡು ಅಂತ ಬೇಗ ಎಬ್ಬಿಸಿದರು. ರಾಖಿಗಾಗಿ ಬೇಗ ಬಂದು ಹೋಗಿದ್ದೀಯಾ ಅಂತ ಅರ್ಥವಾಯಿತು. ಅದಕ್ಕೆ ಬೇಗ ಬೇಗ ಸ್ನಾನ ಮುಗಿಸಿ ಇಲ್ಲಿಗೇ ಓಡಿಬಂದೆ. ಇದಾದ ಮೇಲೆ ನೀನು ಭಾವನ ಜೊತೆ ನಿನ್ನ ನಾದಿನಿ ಮನೆಗೆ ಹೋಗಬೇಕಲ್ಲ.... ಅದಕ್ಕೆ ಎಲ್ಲಾ ಗಡಿಬಿಡಿ ಆಯ್ತು.''

``ಸರಿ ಬೇಗ ಹೊರಡು. ನಿನ್ನ ತಂದೆ ಸಹ ರಾಖಿಗಾಗಿ ಹೊರಗೆ ಹೊರಡುತ್ತಾರೆ ಅನ್ಸುತ್ತೆ.''

``ಅಪ್ಪಾಜಿ ರಾಖಿ ಕಟ್ಟಿಸಿಕೊಳ್ಳುವುದಕ್ಕಾಗಿ ಎಂದೂ ಎಲ್ಲೂ ಹೊರಗೆ ಹೋದದ್ದೇ ಇಲ್ಲ.''

``ಮತ್ತೆ ಅವರ ಕೈಗೆ ರಾಖಿ ಹೇಗೆ ಬಂದಿರುತ್ತದೆ? ಅದೂ ತಾನಾಗಿ ಬಂದು ಕಟ್ಟಿಸಿಕೊಳ್ಳೊಲ್ಲ ಬಿಡು. ಪ್ರತಿ ವರ್ಷ ನೋಡಿದ್ದೇವೆ, ಅವರ ಕೈ ರಾಖಿ ಇಲ್ಲದೆ ಖಾಲಿ ಇರುವುದೇ ಇಲ್ಲ. ಅವರ ಕೈನ ರಾಖಿ ನೋಡಿ ನೀನೂ ರಾಖಿ ಕಟ್ಟಿಸಿಕೊಳ್ಳಲೇಬೇಕು ಅಂತ ಹಠಹಿಡಿದೆ. ಆಗ ನಾವು ನಿಮ್ಮ ಪಕ್ಕದ ಮನೆಯಲ್ಲೇ ಇದ್ದೆ. ಹೀಗಾಗಿ ನಿಮ್ಮ ತಾಯಿ ತಂದೆ ನಮ್ಮ ಸ್ಮಿತಾ ಕೈಲಿ ನಿನಗೆ ರಾಖಿ ಕಟ್ಟಿಸಿ, ಆರತಿ ಬೆಳಗಿಸಿದರು. ಅಂದಿನಿಂದ ನೀನು ಒಂದಲ್ಲ ಒಂದು ಗಿಫ್ಟ್ ಕೊಡುತ್ತಿದ್ದೀಯಾ,'' ಎಂದು ಸ್ಮಿತಾಳ ತಾಯಿ ರೇವತಿ ಹೇಳಿದರು.

``ಇದರಲ್ಲಿ ತಪ್ಪೇನಿದೆ ಆಂಟಿ? ಆಗಿನಿಂದ ನನಗೆ ಇಂಥ ಒಳ್ಳೆ ಅಕ್ಕಾ ಸಿಕ್ಕಿದ್ದಾಳೆ. ಸರಿಯಕ್ಕಾ, ಈಗಾಗಲೇ ನಿನಗೆ ತಡ ಆಗಿರಬಹುದು. ನೀವಿಬ್ಬರೂ ಹೊರಡಿ, ನಾನು ಇನ್ನೊಮ್ಮೆ ಸಿಗ್ತೀನಿ. ಮುಂದಿನ ಸಲ ನನ್ನ ಮೊದಲ ಸಂಬಳದಲ್ಲಿ ಏನೆಲ್ಲ ತೆಗೆದುಕೊಂಡಿದ್ದೆ ಅಂತ ನೋಡ್ತೀಯಂತೆ,'' ಎಂದು ಬಾಯಿ ಸಿಹಿ ಮಾಡಿಕೊಂಡು ಹೊರಟ.

ಮಯಾಂಕ್‌ ಹೊರಟಾಗ, ಈಗ ಅವರ ಎದುರಿನ ಅಪಾರ್ಟ್‌ ಮೆಂಟ್‌ ಗೆ ಶಿಫ್ಟ್ ಆಗಿದ್ದ ರೇವತಿಯವರು, ಮಗಳೊಡನೆ ಹೊರಗೆ ಬಂದು ನೋಡಿದರು. ಆಗ ಅನಂತ್‌ ರಾವ್ ತಮ್ಮ ಮನೆಯ ಅಂಗಳದಲ್ಲಿ ರಾಖಿ ಸಮೇತ ಕಾಣಿಸಿಕೊಂಡರು.

``ನೋಡಿದ್ಯಾ ಮಯಾಂಕ್‌, ನಿಮ್ಮ ತಂದೆ ಕೂಡ ರಾಖಿ ಕಟ್ಟಿಸಿಕೊಂಡಿದ್ದಾರೆ,'' ಎಂದರು ರೇವತಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ