ಕಥೆ -ಪ್ರತಿಭಾ ಪ್ರಕಾಶ್‌ 

ಅರುಣ್‌ ಬೆಂಗಳೂರು ನಿವಾಸಿ. ಖ್ಯಾತ ಖಾಸಗಿ ಐ.ಟಿ. ಉದ್ಯೋಗಿ. ಆಫೀಸ್‌ ಕೆಲಸದ ನಿಮಿತ್ತ ಲಂಡನ್‌ಗೆ ಹೋಗಬೇಕಾಯ್ತು. ಅಲ್ಲಿನ ವಿಶ್ವವಿಖ್ಯಾತ ಮೇಡಂ ಟುಸಾಡ್‌ ಮ್ಯೂಸಿಯಂ ನೋಡಲು ಹೋಗಿದ್ದ. ಅಲ್ಲಿ ವಿಶ್ವದೆಲ್ಲೆಡೆಯ ಖ್ಯಾತಿವೆತ್ತ ಸೆಲೆಬ್ರೆಟಿಗಳ ಮೇಣದ ಮೂರ್ತಿಗಳನ್ನು ತಯಾರಿಸಿಟ್ಟಿದ್ದಾರೆ. ನಮ್ಮ ದೇಶದ ಮಹಾತ್ಮ ಗಾಂಧೀಜಿ, ಅಮಿತಾಭ್, ಐಶ್ವರ್ಯಾ ರೈ ಮುಂತಾದವರ ಮೂರ್ತಿಗಳಿವೆ. ಅರುಣ್‌ ಗಾಂಧೀಜಿಯರ ಮೂರ್ತಿಗೆ ಕೈ ಮುಗಿದ. ನಂತರ ಅಮಿತಾಭ್‌, ಐಶ್ವರ್ಯಾ ಮೂರ್ತಿಗಳತ್ತ ನಡೆದ. ಅವನು ಆ ಮೂರ್ತಿಗಳ ನಡುವೆ ನಿಂತು ಸೆಲ್ಛಿ ಕ್ಲಿಕ್ಕಿಸಿಕೊಂಡ.

ಅರುಣ್‌ ಗಮನಿಸಿದಂತೆ ಒಬ್ಬ ಸುಂದರ ಹುಡುಗಿ ಸಹ ಅವನ ಹಾಗೆಯೇ ನೋಡಿಕೊಂಡು ಬರುತ್ತಿದ್ದಳು. ಆಕೆ ಭಾರತೀಯ ಮೂಲದವಳಲ್ಲವಾದರೂ ಏಷ್ಯಾ ಖಂಡದವಳಂತೆಯೇ ಇದ್ದಳು. ಅರುಣ್‌ ತುಸು ಧೈರ್ಯವಹಿಸಿ ಆಕೆಯನ್ನು ಆಂಗ್ಲದಲ್ಲಿ ಪ್ರಶ್ನಿಸಿದ, ``ನಾನು ಸೆಲ್ಛಿ ಎಕ್ಸ್ ಪರ್ಟ್‌ ಅಲ್ಲ. ದಯವಿಟ್ಟು ಈ 2 ಮೂರ್ತಿಗಳ ನಡುವೆ ನನ್ನ ಫೋಟೋ ತೆಗೆದುಕೊಡ್ತೀರಾ....ಪ್ಲೀಸ್‌....'' ``ಖಂಡಿತಾ....''

``ನೀವು ಭಾರತದವರಲ್ಲ ಅನ್ಸುತ್ತೆ.....''

``ಹಾಗಾದ ಮಾತ್ರಕ್ಕೆ ಫೋಟೋ ಕ್ಲಿಕ್ಕಿಸಬಾರದೇನು? ನಾನು ದುಬೈ ಮೂಲದವಳು. ನನ್ನ ಹೆಸರು ಜುಬೇದಾ,'' ಎಂದಳು.

``ನಾನು ಅರುಣ್‌.... ಬೆಂಗಳೂರಿನವನು,'' ಎನ್ನುತ್ತಾ ತನ್ನ ಮೊಬೈಲ್‌ನಿಂದ ಫೋಟೋ ತೆಗೆಯುವಂತೆ ಅವಳಿಗೆ ನೀಡಿದ.

ಅವಳು ಅರುಣನ ಫೋಟೋ ತೆಗೆದ ನಂತರ ತನ್ನದನ್ನೂ ತೆಗೆಯುವಂತೆ ಅರುಣನಿಗೆ ಹೇಳಿದಳು. ಐಶ್ವರ್ಯಾ, ಅಮಿತಾಭ್ ಮಧ್ಯೆ ಅವಳು ನಿಂತಿರುವಂತೆ ಅರುಣ್‌ ಫೋಟೋ ಕ್ಲಿಕ್ಕಿಸಿ ನೀಡಿದ.

ಆಗ ಜುಬೇದಾ ಹೇಳಿದಳು, ``ವಾಟ್‌ ಎ ಸರ್‌ಪ್ರೈಸ್‌! ನಾನು ಕೂಡ ಬೆಂಗಳೂರಿನಲ್ಲೇ ಹುಟ್ಟಿದ್ದು. ಆ ದಿನಗಳಲ್ಲಿ ದುಬೈನಲ್ಲಿ ಅಂಥ ಉತ್ತಮ ಆಸ್ಪತ್ರೆ ಇರಲಿಲ್ಲ. ಹೀಗಾಗಿ ನನ್ನ ಡ್ಯಾಡಿ ಮಮ್ಮಿಗೆ ಬೆಂಗಳೂರಿನಲ್ಲೇ ಹೆರಿಗೆ ಆಗಲಿ ಎಂದು ಬಯಸಿದರು. ಒಂದು ಕಾಲದಲ್ಲಿ ನಮ್ಮಮ್ಮ, ನಂತರ ನಾನೂ ಅಲ್ಲೇ ಕಲಿತವರು ಅಷ್ಟು ಮಾತ್ರವಲ್ಲ, ಬಾಲ್ಯದಲ್ಲಿ ನಾನೊಮ್ಮೆ ಬಹಳ ಹುಷಾರು ತಪ್ಪಿದಾಗ ನಾವು ಹುಟ್ಟಿದ ಆಸ್ಪತ್ರೆಯಲ್ಲೇ 2 ವಾರ ಅಡ್ಮಿಟ್‌ ಆಗಿದ್ದೆ.....''

``ವಾಟ್‌ ಎ ಪ್ಲೆಸೆಂಟ್‌ ಸರ್‌ಪ್ರೈಸ್‌!'' ಅರುಣ್‌ ಉದ್ಗರಿಸಿದ.

ಅದಾದ ಮೇಲೆ ಇಬ್ಬರಲ್ಲೂ ತುಸು ಸ್ನೇಹ ಸಹಜವಾಗಿ ಬೆಳೆಯಿತು. ಅಮೇಲೆ ಇಬ್ಬರೂ ಮರ್ಲಿನ್‌ ಮನ್ರೋ ಮೂರ್ತಿ ಬಳಿ ಹೋದರು. ಅರುಣ್‌ ಮತ್ತೆ ಮರ್ಲಿನ್‌ ಜೊತೆ ಫೋಟೋ ತೆಗೆಯುಂತೆ ಹೇಳಿದ.

``ಆದರೆ ಈಕೆ ಇಂಡಿಯನ್‌ ಅಲ್ಲವಲ್ಲ.... ಮತ್ತೇಕೆ ಇವಳ ಜೊತೆ ನಿನಗೆ ಫೋಟೋ?''

ಅದಕ್ಕೆ ಅವರಿಬ್ಬರೂ ಜೋರಾಗಿ ನಕ್ಕರು.

``ಇರು, ನಾವಿಬ್ಬರೂ ಇವಳ ಜೊತೆ ಒಳ್ಳೆ ಸೆಲ್ಛಿ ತೆಗೆದುಕೊಳ್ಳೋಣ,'' ಎಂದು ಅರುಣ್‌ ಪಕ್ಕ ನಿಂತು, ನೀಟಾಗಿ ಸೆಲ್ಛಿ ತೆಗೆದುಕೊಂಡು ಆ ಫೋಟೋವನ್ನು ಅವನಿಗೆ ಫಾರ್ವರ್ಡ್ ಮಾಡಿದಳು.

ಆ ಮ್ಯೂಸಿಯಂನಿಂದ ಹೊರಬರುತ್ತಾ ಅರುಣ್‌ ಕೇಳಿದ, ``ಮುಂದೆ.... ಏನು ಮಾಡೋಣ?''

``ನಡಿ, ಲಂಡನ್‌ ವೀಲ್ ಮೇಲೆ ಕುಳಿತು ಇಡೀ ಲಂಡನ್‌ ಸಿಟಿ ನೋಡೋಣ,'' ಎಂದವಳ ಮಾತಿಗೆ ಒಪ್ಪಿ ಅರುಣ್‌ ಅವಳ ಜೊತೆ ಮುನ್ನಡೆದ. ಅಸಲಿಗೆ ಆ ಲಂಡನ್‌ ವೀಲ್‌ ಎಂಬುದು ಥೇಮ್ಸ್ ನದಿಯ ಮೇಲೆ ಕಟ್ಟಲಾಗಿದ್ದ ಬೃಹದಾಕಾರದ ಜೈಂಟ್‌ ವೀಲ್‌ ಆಗಿತ್ತು. ಇಡೀ ನಗರದ ಸೌಂದರ್ಯವನ್ನು ಅದರಿಂದ ನೋಡಬಹುದಿತ್ತು. ಅದೆಷ್ಟು ದೈತ್ಯಾಕಾರ ಹಾಗೂ ಎಷ್ಟು ಮೆಲ್ಲಗೆ ತಿರುಗುತ್ತದೆಂದರೆ, ಅದು ತಿರುಗುತ್ತಿದೆ ಎಂದೇ ಅನಿಸುತ್ತಿರಲಿಲ್ಲ. ಕೆಳಗೆ ಥೇಮ್ಸ್ ನದಿ ಮೇಲೆ ನೂರಾರು ಕ್ರೂಸ್‌ ಚಲಿಸುತ್ತಿರುತ್ತವೆ. ನಂತರ ಇವರಿಬ್ಬರೂ ಟಿಕೆಟ್‌ ಕೊಂಡು ವೀಲ್‌ ಮೇಲೆ ಕುಳಿತು, ಇಡೀ ಲಂಡನ್‌ ಸಿಟಿಯ ವಿಹಂಗಮ ನೋಟ ವೀಕ್ಷಿಸಿದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ