ಚಾರುಲತಾ ಬಾಲುವಿನತ್ತ ನೋಡಿ ಒಮ್ಮೆ ಮೆಲುವಾಗಿ ನಕ್ಕಳು. ಅವನು ತನ್ನನ್ನು ಕರೆದೊಯ್ಯಲು ಬಂದುದು ಸ್ವಲ್ಪ ತಡವಾದರೂ ಅದರಿಂದ ತನಗೇನೂ ಬೇಸರವಿಲ್ಲವೆಂಬುದು ಅವಳ ನೋಟದಿಂದೀ ತಿಳಿಯುತ್ತಿತ್ತು.
``ನಾನು ನಿನ್ನನ್ನು ನಿನ್ನ ಗೆಳತಿಯ ಮನೆಗೆ ಬಿಡುತ್ತೇನೆ. ನಮ್ಮ ತಂದೆಗೆ ಅನಾರೋಗ್ಯದ ಕಾರಣ ಅವರನ್ನು ವೈದ್ಯರ ಬಳಿ ಕರೆದೊಯ್ಯಬೇಕು,'' ಬಾಲು ನುಡಿದಾಗ ಅವಳು ನಗಲಿಲ್ಲ.
ಬಾಲು ಕಾರಿನ ಡಿಕ್ಕಿಯಿಂದ ತಾನು ತಂದಿದ್ದ ಪರ್ಸನ್ನು ತೆಗೆದು ಅವಳಿಗೆ ನೀಡಿದ. ಚಾರುಲತಾ ದೂರ ಹೋಗಬೇಕಿದ್ದರಿಂದ ತುಸು ಬೇಗನೆ ರೈಲ್ವೆ ನಿಲ್ದಾಣಕ್ಕೆ ಬಂದರೂ ಅವಳ ರೈಲು ಆಗಲೇ ಹೊರಟುಹೋಗಿತ್ತು. ಅಷ್ಟರಲ್ಲಿ ಬಾಲು ಅಲ್ಲಿಗೆ ಬಂದವನೇ, ``ನನ್ನನ್ನು ಕ್ಷಮಿಸು. ಯಾವುದಾದರೂ ರೈಲು ಆ ಕಡೆ ಹೋಗಲಿದೆಯೆ ಎಂದು ಕೇಳಿ ಬರುತ್ತೇನೆ,'' ಎಂದವನನ್ನು ತಡೆಯುವಷ್ಟರಲ್ಲಿ ಅವನು ಅಷ್ಟು ದೂರ ಹೋಗಿಯಾಗಿತ್ತು. ಮತ್ತೆ ಹಿಂದಿರುಗಿದವನ ಮುಖದಲ್ಲಿ ನಗು, ``ಇನ್ನೊಂದು ರೈಲು ಸಂಜೆ ಆರರ ಆಸುಪಾಸಿನಲ್ಲಿ ಬರಲಿದೆಯಂತೆ,'' ಎಂದ.
``ಇನ್ನೊಂದು ರೈಲಿದೆಯಾ?'' ಚಾರುಲತಾಳ ಗೆಳತಿ ಕೇಳಿದಳು.
``ಹೌದು, ಅದು ಬರುವುದಕ್ಕೆ ಇನ್ನೂ ಸಾಕಷ್ಟು ಸಮಯವಿದೆ. ಅಷ್ಟರಲ್ಲಿ ನಾವು ಕಾಫಿಗೆ ಹೋಗೋಣ,'' ಎಂದ ಬಾಲು.
ಚಾರುಲತಾ ದೂರದ ಶಿಮ್ಲಾಗೆ ತೆರಳಬೇಕಿತ್ತು. ಅಲ್ಲಿಗೆ ಸೇರಲು ಇನ್ನೂ ಎರಡು ದಿನಗಳು ಹಿಡಿಯುತ್ತದಾದ್ದರಿಂದ ಅವಳಿಗೆ ಈ ಎರಡು ಗಂಟೆಗಳ ವಿಳಂಬ ಅಷ್ಟೊಂದು ಮಹತ್ವದ್ದೆನಿಸಲಿಲ್ಲ. ಆದರೆ ಬಾಲುವಿನಲ್ಲಿ ಚಾರುಲತಾ ತನ್ನಿಂದ ದೂರವಾಗುತ್ತಾಳಲ್ಲ ಎಂಬ ನೋವು ಮನೆ ಮಾಡಿತ್ತು.
``ನಿನಗೇನಾದರೂ ಅಗತ್ಯವಿದ್ದರೆ ನನಗೆ ಕರೆ ಮಾಡು.''
``ಧನ್ಯವಾದ. ನನಗೆ ಪಾವನಿ ಇರುಳಲ್ಲ.....?''
``ಅದು ಸರಿಯೇ ಆದರೂ......''
ಮತ್ತೆ ಅವಳೇನೂ ಪ್ರತಿಕ್ರಿಯಿಸಲಿಲ್ಲ. ನೇರವಾಗಿ ಅವನ ಎರಡೂ ಕೈಗಳನ್ನು ಹಿಡಿದಳು. ಬಾಲು ಚಾರುಲತಾಳ ಪತಿಯ ಆಪ್ತ ಸ್ನೇಹಿತನಾಗಿದ್ದ. ಚಾರುಲತಾಳ ವಿವಾಹಕ್ಕೂ ಮುನ್ನವೇ ಇವರಿಬ್ಬರ ಸ್ನೇಹ ಬೆಳೆದಿತ್ತು. ಪತಿ ಅನಾರೋಗ್ಯಕ್ಕೆ ಈಡಾದಾಗಲೂ ಬಾಲು ಬಂದಿದ್ದ. ಪತಿ ತೀರಿಹೋದಾಗಲಂತೂ ಚಾರುಲತಾಗೆ ಸಾಕಷ್ಟು ಧೈರ್ಯ ತುಂಬಿ ಬದುಕುವ ಉತ್ಸಾಹ ಮೂಡಿಸಿದ್ದ.
``ನೀನು ಒಪ್ಪಿಕೊಂಡಿದ್ದಲ್ಲಿ..... ನಾನು ನಿನ್ನನ್ನು ಮದುವೆಯಾಗಬೇಕೆಂದಿದ್ದೆ....''
``ಬಾಲು....! ನಾನು.....''
``ಹೌದು, ಇಷ್ಟು ದಿನ ನನಗಿದನ್ನು ಹೇಳಲು ಧೈರ್ಯವಿರಲಿಲ್ಲ. ಈಗ ನೀನು ದೂರ ಹೋಗುತ್ತಿರುವೆ. ಹಾಗಾಗಿ....''
``ಆದರೆ ನಾನೆಂದೂ ನಿನ್ನನ್ನು ಆ ದೃಷ್ಟಿಯಿಂದ ನೋಡಿರಲಿಲ್ಲ.''
``ನೀನು ಇದನ್ನು ತಕ್ಷಣದಲ್ಲಿ ಒಪ್ಪಿಕೊಳ್ಳುತ್ತೀ ಎಂದುಕೊಂಡಿಲ್ಲ.....''
ರೈಲಿನಲ್ಲಿ ಕುಳಿತಾಗ ಚಾರುಲತಾಗೆ ಯೋಚಿಸಲು ಸಾಕಷ್ಟು ಸಮಯವಿತ್ತು. `ಬಾಲು ತನ್ನನ್ನು ಇಷ್ಟಪಟ್ಟಿದ್ದಾನೆನಿಸುತ್ತದೆ. ನಾನು ಪಾವನಿಯೊಡನೆ ಇದ್ದರೆ ಬಾಲುವಿನಿಂದ ದೂರವೇ ಉಳಿಯಬೇಕಾಗುತ್ತದೆ. ಆದರೆ ನನ್ನ ಮೇಲೆ ಅವನಿಗೆ ನಿಜವಾಗಿಯೂ ಪ್ರೀತಿ ಇದೆಯಾ? ಅಥವಾ ಕೇವಲ ಕರುಣೆಯಾ? ಸ್ನೇಹಿತನೂ, ಹಿತೈಷಿಯೂ ಆಗಿ ನನಗೆ ಅವನೆಷ್ಟರಮಟ್ಟಿಗೆ ಮುಖ್ಯ?' ಯೋಚಿಸುತ್ತಾ ಅವಳಿಗೆ ತಾನು ಬಾಲುವನ್ನು `ಮಿಸ್' ಮಾಡಿಕೊಳ್ಳುತ್ತಿದ್ದೇನೆ ಎನಿಸಿತು. `ನಾನು ಪಾವನಿಯೊಡನೆ ಇರಲು ಇಷ್ಟು ಅವಸರದಲ್ಲಿ ನಿರ್ಧಾರ ತೆಗೆದುಕೊಂಡದ್ದು ತಪ್ಪಾ?' ಮತ್ತೆ ಮತ್ತೆ ಯೋಚಿಸಿದಳು.
ಕೆಲವು ಸಮಯದ ನಂತರ ತಾನೊಂದು ನಿರ್ಧಾರಕ್ಕೆ ಬಂದವಳಂತೆ ತಲೆ ಆಡಿಸಿದ ಚಾರುಲತಾ ಹಿಂದಿರುಗುವ ಬಗೆಗೆ ಯೋಚಿಸುತ್ತಾ, `ಇದರಿಂದ ಪಾವನಿಗೆ ಬೇಸರವಾಗಬಹುದು. ಆದರೆ ನಾನಿಲ್ಲದಿದ್ದರೆ ಬಾಲು ನನಗೆ ಸಿಗಲಾರ. ಹಿಂದೆ ಪತಿಯೊಡನೆ ಇಲ್ಲಿಗೆ ಬಂದಿದ್ದಾಗ ಅದೆಷ್ಟು ಸಂತೋಷವಾಗಿದ್ದೆ... ' ಅವಳು ಹಿಂದಿನ ನೆನಪನ್ನು ಕೆದಕಿದಳು. ಮತ್ತೆ ವಾಸ್ತವಕ್ಕೆ ಬಂದಾಗ ರೈಲು ನಿಲ್ದಾಣವೆಂದರಲ್ಲಿ ನಿಂತಿತು. ಅವಳೊಮ್ಮೆ ಕಿಟಕಿಯಿಂದ ಹೊರಗೆ ನೋಡಿ, ವಾಚ್‌ನತ್ತ ದೃಷ್ಟಿ ಹರಿಸಿದವಳಿಗೆ ಅಂದುಕೊಂಡದ್ದಕ್ಕಿಂತಲೂ ಬೇಗನೇ ರೈಲು ನಿಲ್ದಾಣವನ್ನು ತಲಪಿರುವುದು ಅರಿವಾಯಿತು. ಇನ್ನು ತಾನು ಇಳಿಯಲಿದ್ದ ಸ್ಟೇಷನ್‌ಹತ್ತಿರದಲ್ಲಿಯೇ ಇದೆ ಎಂದು ಕುಳಿತಲ್ಲಿಂದ ಎದ್ದು ತನ್ನ ಲಗೇಜ್‌ನ್ನು ಜೋಡಿಸಿಕೊಳ್ಳತೊಡಗಿದಳು.