ಫಾತಿಮಾಳ ಒಬ್ಬಳೇ ಮಗಳು ರಜಿಯಾಳಿಗೆ ಎಂಜಿನಿಯರ್‌ರನ ಸಂಬಂಧ ಕುದುರಿ ಬಂದಾಗ, ಆ ಮನೆಯಲ್ಲಿ ಸಂತಸದ ಅಲೆ ಹರಿದಾಡಿತು. ಫಾತಿಮಾ ಕೂಡಲೇ ಮಗಳಿಗೆ ವರನ ಫೋಟೋ, ಬಯೋಡೇಟಾ ತೋರಿಸಿ ಅವಳ ಅಭಿಪ್ರಾಯ ಕೇಳಿದಳು. ಸದಾ ಚಿಮ್ಮುವ ಚಿಲುಮೆಯಾಗಿದ್ದ, ಚೈತನ್ಯದ ಸೆಲೆಯಾಗಿದ್ದ ರಜಿಯಾ ತನ್ನ ಮದುವೆಯ ಮಾತು ಕೇಳಿ ಬಿಲ್‌ಕುಲ್‌ಮೌನವಾಗಿಬಿಟ್ಟಳು. ಮೇಜಿನ ಮೇಲೆ ಎಲ್ಲಿಟ್ಟ ಫೋಟೋ ಹಾಗೆಯೇ 2 ದಿನಗಳಾದರೂ ಉಳಿದುಹೋಯಿತು. ಎಲ್ಲಾ ಸಾಮಾನ್ಯ ಹುಡುಗಿಯರಂತೆ ರಜಿಯಾ ಇದರಲ್ಲಿ ಯಾವ ಆಸಕ್ತಿಯನ್ನೂ ತೋರಿಸಲು ಹೋಗಲಿಲ್ಲ. ಇದರಿಂದ ಫಾತಿಮಾಳ ಚಿಂತೆ ಹೆಚ್ಚಿತು. ಕಂಪ್ಯೂಟರ್‌ ಸೈನ್ಸ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಮಗಳನ್ನು ಫಾತಿಮಾ ತಾಯಿಗಿಂತ ಹೆಚ್ಚಾಗಿ ಗೆಳತಿಯಂತೆಯೇ ಕಾಣುತ್ತಿದ್ದಳು.

ಅವಳು ಸಹಜ ನಾಚಿಕೆಯಿಂದ ಈ ಕುರಿತು ತನ್ನ ಬಳಿ ಏನೂ ಹೇಳುತ್ತಿಲ್ಲವೋ ಎಂದು ಫಾತಿಮಾ ಅಂದುಕೊಂಡಳು. ಆದರೆ ಹಾಗಾಗುವ ಪ್ರಮೇಯವೇ ಇರಲಿಲ್ಲ. ತನ್ನ ಜೀವನದ ಪ್ರತಿ ಆಗುಹೋಗುಗಳನ್ನೂ ರಜಿಯಾ ತಾಯಿಯ ಬಳಿ ಚರ್ಚಿಸುತ್ತಿದ್ದಳು. ಅವಳು ಜೀವನದಲ್ಲಿ ಎಷ್ಟು ಪ್ರಾಕ್ಟಿಕಲ್ ಅಂದರೆ, ಪ್ರತಿಯೊಂದು ಹೆಜ್ಜೆಯನ್ನೂ ಅಳೆದೂ ತೂಗಿಯೇ ಮುಂದೆ ಇಡುತ್ತಿದ್ದಳು. ಮಧ್ಯಮ ವರ್ಗದ ಬವಣೆಗಳು ಕಟು ವಾಸ್ತವದ ಅರಿವು ಮೂಡಿಸಿ ಅವಳನ್ನು ಹತಾಶಳನ್ನಾಗಿ ಮಾಡಿತ್ತು, ಆದರೆ ಮನೋಬಲದಲ್ಲಿ ಅವಳು ಅಷ್ಟೇ ಗಟ್ಟಿಗಳೆನಿಸಿದ್ದಳು, ಯಾವುದಕ್ಕೂ ಸೋಲುತ್ತಿರಲಿಲ್ಲ.

``ರಜಿಯಾ, ಈ ಹುಡುಗನ ಸಂಬಂಧವಾಗಿ ನೀನು ಏನು ಯೋಚಿಸಿದೆಯಮ್ಮ?'' ಡೈನಿಂಗ್‌ ಟೇಬಲ್ ಬಳಿ ರಾತ್ರಿಯ ಊಟ ಬಡಿಸುತ್ತಾ ಫಾತಿಮಾ ಕೇಳಿದಳು. ರಜಿಯಾ ಏನೂ ಉತ್ತರಿಸದೆ ಮೌನದ ಮೊರೆಹೊಕ್ಕಳು.

``ಹುಡುಗ ಒಳ್ಳೆ ಸ್ಮಾರ್ಟ್‌ ಆಗಿದ್ದಾನೆ, ಒಳ್ಳೆಯ ನೌಕರಿ, ಕೈತುಂಬಾ ಸಂಬಳ.... ಬೆಂಗಳೂರಿನಲ್ಲಿ ಅವರಿಗೆ ಸ್ವಂತ ಮನೆ ಇದೆ. ಮತ್ತೆ ಇನ್ನೂ ಯಾಕಮ್ಮ ಯೋಚನೆ.....''

ಫಾತಿಮಾಳ ಧ್ವನಿಯಲ್ಲಿದ್ದ ತೀಕ್ಷ್ಣತೆ ರಜಿಯಾಳನ್ನು ಎಚ್ಚರಿಸಿತು. ಕೊನೆಗೂ ಅವಳು ತಡವರಿಸುತ್ತಾ ಹೇಳಿದಳು, ``ಅಮ್ಮಿ.... ಹುಡುಗನ ಪರ್ಸನಾಲಿಟಿ, ಅವನ ಸ್ಟೇಟಸ್‌, ಸಂಬಳ.... ಇಷ್ಟನ್ನೇ ನೋಡಿ ಅವನನ್ನು ಚಿನ್ನದಂಥ ವರ ಎಂದು ನಿರ್ಧರಿಸಿಬಿಡುವುದೇ? ಯಾರು ನಮಗೆ ಸಂಪೂರ್ಣ ಅಪರಿಚಿತರೋ, ಯಾರೊಡನೆ ನಾವು ಒಮ್ಮೆಯೂ ಮಾತುಕತೆ ಆಡಿಲ್ಲವೋ, ಯಾರ ಇಷ್ಟಾನಿಷ್ಟಗಳ ಪರಿಚಯ ಸ್ವಲ್ಪವೂ ಇಲ್ಲವೋ.... ಅವರನ್ನು ಒಮ್ಮೆಲೇ ಸಂಗಾತಿಯನ್ನಾಗಿ ಹೇಗೆ ಆರಿಸುವುದು? ಅಷ್ಟು ಬೇಗ ನಿರ್ಧರಿಸಲು ಸಾಧ್ಯವೇ?''

``ಆದರೆ.... ಅನಾದಿ ಕಾಲದಿಂದಲೂ ನಮ್ಮ ದೇಶದಲ್ಲಿ ಎಲ್ಲಾ ಧರ್ಮಗಳಲ್ಲಿಯೂ ಹೀಗೆ ನಡೆದುಕೊಂಡು ಬರುತ್ತಿದೆಯಲ್ಲಮ್ಮ.... ಅದರಲ್ಲಿ ತಪ್ಪೇನು?'' ಫಾತಿಮಾ ಮಗಳಿಗೆ ತಿಳಿಹೇಳಲು ಯತ್ನಿಸಿದಳು.

``ಅಮ್ಮಿ, ಕಲಿತವಳಾದರೂ ನೀನು ತಾತಾ ಹೇಳಿದ ವರನನ್ನು ಆರಿಸಿಕೊಂಡು ಇಷ್ಟು ದಿನ ಚಾಚೂ ತಪ್ಪದೆ ಸಂಪ್ರದಾಯ ಪಾಲಿಸಿಕೊಂಡು ಬಂದಿರುವೆ. ಎಂದಾದರೂ ಒಂದು ದಿನ ಅಪ್ಪನ ಜೊತೆ ಸುಖವಾಗಿ ಇದ್ದದ್ದು ಉಂಟೆ?''

ಪರಿಸ್ಥಿತಿಯ ಕಟುಸತ್ಯ ಬಾಣದಂತೆ ಫಾತಿಮಾಳ ಎದೆಗೆ ಇರಿಯಿತು. ಹೆತ್ತ ಮಗಳೇ ತಾಯಿಯ ಬದುಕಿನ ಜೀವನದ ಕರಿ ಪುಟಗಳನ್ನು ಒಂದೊಂದಾಗಿ ತೆರೆದಿಡಲು ಪ್ರಯತ್ನಿಸುತ್ತಿದ್ದಳು. ಫಾತಿಮಾಳಿಗೆ ತಕ್ಷಣ ಉತ್ತರಿಸಲಾಗಲಿಲ್ಲ. ಅವಳು ಪಟಪಟ ಕಣ್ಣುಗಳನ್ನು ಬಡಿಯುತ್ತಾ ಕಳೆದು ಹೋದ ತನ್ನ ಜೀವನದ ಬಗ್ಗೆ ನೆನೆಯ ತೊಡಗಿದಳು. 25 ವರ್ಷಗಳ ಹಿಂದೆ, ತಂದೆ ತೋರಿದ ವರನನ್ನು ಕಣ್ಣೆತ್ತಿ ನೋಡುವ ಸಾಹಸ ಮಾಡದೆ ಮದುವೆಗೆ ಒಪ್ಪಿದಳು. ಅದರಿಂದ ಜೀವನವಿಡೀ ಕಷ್ಟ ಎದುರಿಸುತ್ತಾ, ತನ್ನ ಆಸೆ, ಬಯಕೆ, ಕನಸುಗಳನ್ನು ಕೊಂದುಕೊಳ್ಳುತ್ತಾ ದಿನ ಕಳೆಯುತ್ತಿದ್ದಳು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ