``ನ್ಯಾಯಪೀಠದಲ್ಲಿ ನನ್ನದೊಂದು ಪ್ರಾರ್ಥನೆ. ನನ್ನ ಕಕ್ಷಿದಾರರಿಗೆ ಆದಷ್ಟು ಶೀಘ್ರ ನ್ಯಾಯ ದೊರೆತಲ್ಲಿ ಅವರು ತಮ್ಮ ಹೊಸ ಬದುಕನ್ನು ಆರಂಭಿಸಬಹುದು...!''

ಮಾಲಾಳ ವಕೀಲರು ತಮ್ಮ ವಕಾಲತ್ತನ್ನು ಮಂಡಿಸುತ್ತಾ ಜಡ್ಜ್ ಸಾಹೇಬರಲ್ಲಿ ವಿನಂತಿಸಿಕೊಂಡರು. ವಿಷಯದ ಗಂಭೀರತೆಯನ್ನು ಅರಿತ ಜಡ್ಜ್ ಸಾಹೇಬರು ಮುಂದಿನ ದಿನಾಂಕ ನೀಡಿದರು. ವಿಚ್ಛೇದನ ಪ್ರಕರಣದಲ್ಲಿ ದಿಢೀರ್‌ ನಿರ್ಧಾರ ತೆಗೆದುಕೊಳ್ಳಲು ಬರುವುದಿಲ್ಲ. ಗಂಡ ಹೆಂಡಿರು ಮತ್ತೆ ಒಂದಾಗಿ ಬದುಕು ಸಾಗಿಸಲಿ ಎನ್ನುವ ಆಶಯವನ್ನು ನ್ಯಾಯಾಲಯ ಬಯಸುತ್ತಾದ್ದರಿಂದ ಎಂದಿನಂತೆ ಇಂದು ಕೂಡ ನ್ಯಾಯಾಲಯದಲ್ಲಿ ಯಾವುದೇ ನಿರ್ಧಾರವಾಗಲಿಲ್ಲ. ಎರಡೂ ಕಡೆಯ ವಕೀಲರು, ತಂತಮ್ಮ ಕೋರಿಕೆಯನ್ನು ನಿವೇದಿಸಿಕೊಂಡರೂ ಕೂಡ, ಜಡ್ಜ್ ಸಾಹೇಬರು ಮಾತ್ರ ಎಂದಿನಂತೆ ಮುಂದಿನ ದಿನಾಂಕವನ್ನು ನೀಡುವ ಕೆಲಸವನ್ನಷ್ಟೇ ಮಾಡಿ ಕೈ ತೊಳೆದುಕೊಂಡರು.

ವಲ್ಲಭ್ ಹಾಗೂ ಮಾಲಾ ಇಬ್ಬರೂ ಒಲ್ಲದ ಮನಸ್ಸಿನಿಂದಲೇ ನಿರಾಶೆ ಹಾಗೂ ಖಿನ್ನತೆಯ ಭಾವ ಹೊತ್ತು ನ್ಯಾಯಾಲಯದಿಂದ ಹೊರಬಂದ ಅವರಿಗೆ ಸ್ನೇಹಾ ಹಾಗೂ ಭಾನುರ ಆವೇಶಭರಿತ ನೋಟವನ್ನು ಎದುರಿಸುವುದು ತುಸು ಕಷ್ಟವಾಗಿತ್ತು. ಅವರಲ್ಲಿ ಮಡುಗಟ್ಟಿದ ಆಕ್ರೋಶ, ಅಸಹ್ಯ ಭಾವನೆ ಹಾಗೂ ಕ್ರೋಧದೊಂದಿಗೆ ಒಬ್ಬರನ್ನೊಬ್ಬರು ಮೋಸ ಮಾಡಲು ಹೊರಟಿರುವ ಈ ಪರಿಸ್ಥಿತಿಯನ್ನು ಕಳೆದ 5 ವರ್ಷಗಳಿಂದಲೂ ನೋಡುತ್ತಲೇ ಬಂದಿದ್ದರು. ಈಗೀಗಂತೂ ಅದು ರೂಢಿಯಾಗಿಬಿಟ್ಟಿದೆ. ವಲ್ಲಭ್ ಈ ಎಲ್ಲ ವಿದ್ಯಮಾನಗಳಿಂದ ಸಾಕಷ್ಟು ಕುಗ್ಗಿಹೋಗಿದ್ದ. ಅಸಹನೆ ಹಾಗೂ ಅಪರಾಧಿ ಭಾವನೆ ಅವನ ಮುಖದಲ್ಲಿ ಎದ್ದು ಕಾಣುತ್ತಿತ್ತು. ಕೋರ್ಟು ಕಛೇರಿಯ ಈ ಜಂಜಾಟದ ನಡುವೆ ಜೀವನ, ಹೈರಾಣಾಗಿತ್ತು. ಮಾಲಾಳ ಪರಿಸ್ಥಿತಿಯೂ ಕೂಡ ಅಷ್ಟೇನೂ ಭಿನ್ನವಾಗಿರಲಿಲ್ಲ. ಕಳೆದ 5 ವರ್ಷಗಳಿಂದ ಅನುಭವಿಸಿದ ಮಾನಸಿಕ ಯಾತನೆ ಅಷ್ಟಿಷ್ಟಲ್ಲ. ಪ್ರತಿ ಕ್ಷಣ ಹೋರಾಟದ ಹಾದಿಯಾಗಿತ್ತು. ಗೆಳತಿಯರ ಅಕ್ಕಪಕ್ಕದವರ ನಿಂದನೆಯ ನುಡಿ, ಅಸಹಾಯಕ ಸ್ಥಿತಿಯಲ್ಲಿ ಒಂಟಿ ಹೋರಾಟ, ಜೊತೆಗೆ ಸ್ವತಃ ಮಕ್ಕಳು ಕೂಡ ತನ್ನಿಂದ ದೂರಾದ ಪರಿ ಎಲ್ಲ ಅವಳನ್ನು ನಿರ್ಭಾಕಳನ್ನಾಗಿಸಿತ್ತು. ಅಷ್ಟಕ್ಕೂ ಅವಳು ತೆಗೆದುಕೊಂಡ ಈ ನಿರ್ಧಾರದಿಂದ ಸಿಕ್ಕಿದ್ದಾದರೂ ಏನು...?

``ಬಾ... ಮನೆವರೆಗೂ `ಡ್ರಾಪ್‌' ಕೊಡ್ತೀನಿ,'' ವಲ್ಲಭ ಮಾಲಾಳಿಗೆ ಹೇಳುತ್ತಿದ್ದಂತೆ, ಮಾಲಾ ಗದ್ಗದಿತ ಕಂಠದಿಂದ ``ಪರವಾಗಿಲ್ಲ... ನಾನೇ ಹೋಗ್ತೀನಿ. ನಿಮಗೆ ಈಗಾಗಲೇ ಲೇಟಾಗಿದೆ,'' ಎಂದಳು.

``ಕೂತ್ಕೋ,'' ಎನ್ನುತ್ತಾ ವಲ್ಲಭ ಕಾರಿನ ಬಾಗಿಲು ತೆರೆದು ಅವಳನ್ನು ಆಹ್ವಾನಿಸಿದ. ತಕ್ಷಣ ಕಾರು ಹತ್ತಿ ಕುಳಿತ ಮಾಲಾಳನ್ನು ಅವಳು ಪೇಯಿಂಗ್‌ ಗೆಸ್ಟ್ ಆಗಿ ಉಳಿದಿದ್ದ ಕಡೆ ಡ್ರಾಪ್‌ ಮಾಡಿ ಆಫೀಸಿನತ್ತ ಕಾರು ತಿರುಗಿಸಿದ. ಒಡನೆಯೇ ಕೈಗಡಿಯಾರ ನೋಡಿಕೊಂಡ ಗಂಟೆ ಎರಡಾಗಿತ್ತು. ಊಟದ ಟೈಮ್ ಮೀರಿ ಹೋಗಿತ್ತು. ಇಂದು ಕೂಡ ಅರ್ಧ ದಿನ ರಜೆ ತಗೋಬೇಕು. ಈ ಕೇಸಿನ ಓಡಾಟದ ತೀವ್ರತೆಯಿಂದಾಗಿ ಅರ್ಧ ಅಥವಾ ಒಂದು ದಿನದ ರಜೆ ಹಾಕುವುದು ಈಗ ಅನಿವಾರ್ಯವಾಗಿದೆ. ಸರ್ಕಾರಿ ಕಛೇರಿಗಳಂತೆ ಖಾಸಗಿ ಸಂಸ್ಥೆಯಲ್ಲಿ ಬೇಕೆಂದಾಗೆಲ್ಲಾ ರಜೆ ಪಡೆಯುವುದು ಸಾಧ್ಯವಿರಲಿಲ್ಲ. ಮಣ ಭಾರ ಕೆಲಸದ ಒತ್ತಡ ಹೇರುವ ಈ ಸಂಸ್ಥೆಗಳಲ್ಲಿ ಸಮಯಕ್ಕೆ ಬೆಲೆಯೇ ಇಲ್ಲ. ಇದೇ ಕಾರಣನ್ನು ಮುಂದಿಟ್ಟುಕೊಂಡು ಮಾಲಾ ಕೂಡ ಕೆಲಸ ಬಿಟ್ಟಿದ್ದಳು. ಕೋರ್ಟಿಗೆ ಸುತ್ತಾಡಿ ಸುತ್ತಾಡಿ ಬೇಸತ್ತ ಮಾಲಾಳಿಗೆ ವಕೀಲರ ಫೀಸು ಭರಿಸುವಲ್ಲಿ ಸಾಕುಸಾಕಾಗಿತ್ತು. ಈ ನಡುವೆ ಹಣಕಾಸಿನ ಮುಗ್ಗಟ್ಟಿಗೆ ಸಿಲುಕಿದ ಅವಳ ಪರಿಸ್ಥಿತಿ ತುಂಬಾ ಶೋಚನೀಯವಾಗಿತ್ತು. ಈ ವಿಚಾರದಲ್ಲಂತೂ ಮಾಲಾ ಹಾಗೂ ವಲ್ಲಭ ಒಬ್ಬರಿಗೊಬ್ಬರು ತುಂಬಾ ಸಹಕರಿಸುತ್ತಿದ್ದರು. ಹಾಗೇ ಕಳೆದ 5 ವರ್ಷಗಳಿಂದಲೂ ಪರಸ್ಪರರ ನಡುವಿನ ಪ್ರೀತಿ ಗೌರವದಲ್ಲಿ ಸ್ವಲ್ಪ ಕುಂದುಂಟಾಗಿಲ್ಲ. ಆದರೂ ಇಬ್ಬರಿಗೂ ಇಂತಹ ನಿರ್ಧಾರ ತೆಗೆದುಕೊಂಡು ತಪ್ಪು ಮಾಡಿದ್ವಿ ಅಂತ ಅನಿಸುತ್ತಿತ್ತು. ಬೇರೆ ಬೇರೆಯಾಗಿ ವಾಸಿಸುತ್ತಿದ್ದರೂ ಬೇರೆಯಾಗಿದ್ದೀವಿ ಅಂತ ಅನಿಸುತ್ತಾ ಇರಲಿಲ್ಲ. ಮನೆಯವರು, ಸ್ನೇಹಿತರು, ಬಂಧುಗಳು ಎಲ್ಲರ ದೃಷ್ಟಿಯಲ್ಲೂ ತಪ್ಪಿತಸ್ಥರಾದ ನಮಗೆ ಒಂದೊಮ್ಮೆ ನ್ಯಾಯಾಲಯದಿಂದ ಒಟ್ಟಿಗೆ ಬದುಕುವ ಹಕ್ಕು ದೊರೆತುಬಿಟ್ಟರೆ....  ನಮ್ಮಷ್ಟು ಸುಖಿಗಳು ಬೇರೊಬ್ಬರಿರಲಾರರು ಎನ್ನುವ ಕನಸು ಇವರದಾಗಿತ್ತು. ದಿನವಿಡೀ ಆಫೀಸ್‌ ಚಿಂತೆಯಲ್ಲೇ ಒದ್ದಾಡುತ್ತಿದ್ದ ವಲ್ಲಭ್ ಗೆ ಕೆಲಸದತ್ತ ಮನಸ್ಸನ್ನು ಕೇಂದ್ರೀಕರಿಸಲು ಸಾಧ್ಯವಾಗಲಿಲ್ಲ. ಮುಖದ ಮೇಲೆ ಕೈ ಒತ್ತಿ ಹಿಡಿದು ಒತ್ತಡವನ್ನು ಕಮ್ಮಿಯಾಗಿಸಿಕೊಂಡ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ