ಶೇಖರ್‌ ಹಾಗೂ ಸುಧಾ ಇವರ ಮದುವೆ ವಾರ್ಷಿಕೋತ್ಸವ ಇತ್ತು. ಒಂದು ಒಳ್ಳೆಯ ವಿಷಯವೆಂದರೆ, ಆ ದಿನ ಶನಿವಾರ. ಎಲ್ಲರೂ ನೆಮ್ಮದಿಯಿಂದ ಸೆಲೆಬ್ರೇಶನ್‌ ಮಾಡುವ ಮೂಡ್‌ ನಲ್ಲಿದ್ದರು. ಪಾರ್ಟಿ ತಡವಾಗಿ ಮುಗಿದರೂ ಮರುದಿನದ ಕೆಲಸಕ್ಕೆ ಯಾವುದೇ ತೊಂದರೆ ಆಗುವ ಸಾಧ್ಯತೆ ಇರಲಿಲ್ಲ. ಅದೇ ಭಾನುವಾರ ರಾತ್ರಿ ತಡವಾಗಿ ಬಿಟ್ರೆ ಎಲ್ಲವೂ ಎಡವಟ್ಟಾಗಿ ಬಿಡುತ್ತಿತ್ತಲ್ಲ. ಅವರಿಗೆ ಮಂಡೆ ಬ್ಲೂಸ್‌ ನ ಭಯ ಇತ್ತು. ಅನಂತ್‌ ಹಾಗೂ ಪ್ರಿಯಾ ಪಾರ್ಟಿಯ ಎಲ್ಲ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಿದ್ದರು. ಅಂಜಲಿ ಹಾಗೂ ಸುಧೀರ್‌ ಜೊತೆಗೂ ಮಾತುಕತೆ ನಡೆಸಲಾಗಿತ್ತು. ಅವರು ಬೆಳಗ್ಗೆ ಬಂದು ಸೇರುವುದಾಗಿ ಹೇಳಿದ್ದರು.

ಅವರು ಹಾಕಿಕೊಂಡ ಪ್ರೋಗ್ರಾಮ್ ಹೇಗಿತ್ತೆಂದರೆ, ಎಲ್ಲರೂ ಸೇರಿ ಮಧ್ಯಾಹ್ನದ ಊಟವನ್ನು ಮನೆಯಲ್ಲಿಯೇ ಮುಗಿಸುವುದು ಹಾಗೂ ರಾತ್ರಿಯ ಊಟಕ್ಕೆಂದು ಹೊರಗೆ ಹೋಗಿ ಮಾಡುವುದಾಗಿತ್ತು. ಈ ರೀತಿಯಲ್ಲಿ ಎಲ್ಲರೂ ಸೇರಿ ಜೊತೆ ಜೊತೆಯಲ್ಲಿ ಕಾಲ ಕಳೆಯುವವರಿದ್ದರು.

ಶೇಖರ್‌ ಹಾಗೂ ಸುಧಾ ತಮ್ಮ ಮಕ್ಕಳ ಜೊತೆ ಕಾಲ ಕಳೆಯಲು ಉತ್ಸುಕರಾಗಿದ್ದರು. ಅನಂತ್‌ ತನ್ನ ಪತ್ನಿ ಪ್ರಿಯಾ ಹಾಗೂ ಮಗಳು ಸ್ನೇಹಾಳೊಂದಿಗೆ ವಾಸಿಸುತ್ತಿದ್ದ. ಮಗಳು ಅಂಜಲಿ ನಾಗರಭಾವಿಯಲ್ಲಿ ತನ್ನ ಗಂಡ ಸುಧೀರ್‌ ಹಾಗೂ ಮಗ ಅರುಣ್ ಜೊತೆಗೆ ವಾಸಿಸುತ್ತಿದ್ದಳು. ಬೆಂಗಳೂರಿನಲ್ಲಿಯೇ ಇದ್ದರೂ ಮೇಲಿಂದ ಮೇಲೆ ಭೇಟಿ ಮಾಡುವುದು ಕೂಡ ಆಗುತ್ತಿರಲಿಲ್ಲ. ಮಗ ಸೊಸೆ, ಮಗಳು ಅಳಿಯ ಎಲ್ಲರೂ ಉದ್ಯೋಗಿಗಳಾಗಿದ್ದರು.

ಎಲ್ಲರ ಅನ್ಯೋನ್ಯತೆ ಬಹಳ ಚೆನ್ನಾಗಿತ್ತು. ಎಲ್ಲರೂ ಜೊತೆಗೆ ಸೇರಿದರೆ ಅದು ಒಂದು ರೀತಿಯ ಮಹಾಮಿಲನದಂತೆ, ಹಬ್ಬದಂತೆ ಭಾಸವಾಗುತ್ತಿತ್ತು. ಒಬ್ಬರು ಮತ್ತೊಬ್ಬರ ಕಾಲೆಳೆಯುವ ಪ್ರಯತ್ನ ಮಾಡುತ್ತಿದ್ದರಾದರೂ, ಆ ಬಗ್ಗೆ ಯಾರೊಬ್ಬರೂ ಕೆಟ್ಟದ್ದೆಂಬಂತೆ ಭಾವಿಸುತ್ತಿರಲಿಲ್ಲ. ಮಕ್ಕಳ ಜೊತೆ ಶೇಖರ್‌ ಹಾಗೂ ಸುಧಾ ಖುಷಿಪಡುತ್ತಿದ್ದರು.

12 ಗಂಟೆಗೆ ಅಂಜಲಿ, ಸುಧೀರ್‌, ಅರುಣ್‌ ನ ಜೊತೆಗೆ ಬಂದರು. ಎಲ್ಲರೂ ಬರುತ್ತಲೇ ಅಪ್ಪ ಅಮ್ಮನನ್ನು ಪ್ರೀತಿಯಿಂದ ತಬ್ಬಿಕೊಂಡರು. ಅಂಜಲಿ ತನ್ನೊಂದಿಗೆ ಬಹಳಷ್ಟು ತಿಂಡಿ, ಗಿಫ್ಟ್ ಗಳನ್ನು ತೆಗೆದುಕೊಂಡು ಬಂದಿದ್ದಳು. ಸ್ನೇಹಾ, ಅರುಣ್‌ ಇಬ್ಬರೂ ಮಕ್ಕಳು ಆಟದಲ್ಲಿ ತಲ್ಲೀನರಾದರು.

ಹೊರಗಿನಿಂದ ಊಟಕ್ಕೆ ಆರ್ಡರ್‌ ಮಾಡಲಾಗಿತ್ತು. ಸೊಸೆ ಪ್ರಿಯಾ ತನ್ನ ಅತ್ತೆ ಮಾವನ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಖೀರು ಹಾಗೂ ಮೊಸರುವಡೆ ತಯಾರಿಸಿದ್ದಳು. ಅವನ್ನು ಎಲ್ಲರೂ ಹೊಗಳುತ್ತಲೇ ಹೊಟ್ಟೆಗಿಳಿಸಿದರು.

ಊಟ ಮಾಡುತ್ತಲೇ ಅಳಿಯ ಸುಧೀರ್‌ ಅತ್ಯಂತ ಗೌರವಯುತವಾಗಿ ಹೇಳಿದ, ``ಮಾವ, ನಿಮ್ಮ ವೈವಾಹಿಕ ಜೀವನ ನಮಗೊಂದು ಆದರ್ಶವಾಗಿದೆ. ನಿಮ್ಮನ್ನು ನಾವು ಎಂದೂ ವಾದ ವಿವಾದ ಮಾಡಿದ್ದನ್ನು ಕಂಡಿಲ್ಲ. ನಿಮ್ಮಿಬ್ಬರ ಅನ್ಯೋನ್ಯತೆ ಅಷ್ಟು ಗಟ್ಟಿಯಾಗಿದೆ. ನನ್ನ ಅಪ್ಪ ಅಮ್ಮ ಬಹಳ ಜಗಳ ಆಡುತ್ತಿರುತ್ತಾರೆ. ಅವರು ನಿಮ್ಮಿಂದ ಬಹಳಷ್ಟು ಕಲಿಯಬೇಕು.''

ಬಳಿಕ ಸುಧೀರ್‌ ಅಂಜಲಿಯನ್ನು ಛೇಡಿಸುತ್ತಾ ಹೇಳಿದ, ``ಇವಳಿಗೂ ಒಂದಿಷ್ಟು ಹೇಳಿ ಕೊಟ್ಟಿದ್ದರೆ ಸರಿ ಇರುತ್ತಿತ್ತು. ಇವಳು ನನ್ನ ಜೊತೆಗೆ ಬಹಳ ಜಗಳ ಮಾಡುತ್ತಾಳೆ. ಮೊದ ಮೊದಲು ಇವಳೊಂದಿಗೆ ಹೇಗೆ ಏಗೋದು ಅನಿಸುತ್ತಿತ್ತು.''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ