ಮಾನಸಾ ಗಂಡನ ಮನೆಗೆ ಹೋದ ಮೊದಲ ದಿನವದು. ಎಲ್ಲೆಡೆಯೂ ಗಜಿಬಿಜಿಯ ವಾತಾವರಣವಿತ್ತು. ಮಾನಸಾಳ ಓರಗಿತ್ತಿ, ನಾದಿನಿ, ಅತ್ತಿಗೆಯವರೆಲ್ಲರ ನಗುವಿನ ಅಲೆಯ ನಡುವೆ ಅವಳ ಗಂಡ ಶೇಖರ್‌ ನ ರೂಮಿಗೆ ಬಂದಾಗ, ಸುಧಾ ಆಂಟಿ ಅವನ ಕಿವಿ ಹಿಂಡುತ್ತಾ, ``ಏನೋ, ನಿನಗೆ ಸ್ವಲ್ಪ ತಾಳ್ಮೆ ಇಲ್ಲವೇ? ಇಡೀ ಜೀವನ ಜೊತೆ ಜೊತೆಗೆ ಇರ್ತೀರಾ, ಈಗ ಸ್ವಲ್ಪ ಕಾಯೋಕೆ ಆಗೋದಿಲ್ವೇನು.....?'' ಎಂದು ರೇಗಿಸಿದರು.

ಎಲ್ಲರೂ ನಗುವಿನ ಅಲೆಯಲ್ಲಿ ತೇಲುತ್ತಿದ್ದರು. ಆದರೆ ಶೇಖರ್‌ ನ ಅಮ್ಮ ಅಂದರೆ ಮಾನಸಾಳ ಅತ್ತೆ ಮಾಧುರಿಯ ಮುಖದಲ್ಲಿ ಮಾತ್ರ ಅದೇನೋ ನಿರ್ಲಿಪ್ತ ಭಾವ ಗೋಚರಿಸುತ್ತಿತ್ತು. ಭಾರಿ ಬೆಲೆಬಾಳುವ ಪೋಷಾಕು ಹಾಗೂ ಆಭರಣಗಳನ್ನು ಧರಿಸಿರುವ ಹೊರತಾಗಿ ಅವರ ಮುಖದಲ್ಲಿ ನಗು ಇಲ್ಲದೆ ಏನೋ ಕಳೆದುಕೊಂಡವರ ಹಾಗೆ ಕಾಣುತ್ತಿದ್ದರು.

ಮಾನಸಾ ಹಾಗೂ ಶೇಖರ್‌ ನ ಮದುವೆಯ ರಿಸೆಪ್ಶನ್‌ ಬಹಳ ಜೋರಾಗಿತ್ತು. ಹೊಂಬಣ್ಣದ ಸೀರೆ ಹಾಗೂ ಅದಕ್ಕೆ ಹೊಂದುವಂತಹ ರವಿಕೆ ಧರಿಸಿದ ಮಾನಸಾ ಬಹಳ ಸುಂದರವಾಗಿ ಕಾಣುತ್ತಿದ್ದಳು. ಶೇಖರ್‌ ಕೂಡ ಅಷ್ಟೇ ಚೆನ್ನಾಗಿ ಕಾಣುತ್ತಿದ್ದ. ನೋಡಿದವರು ಸುಂದರ ಜೋಡಿ ಎಂದು ಹೇಳುತ್ತಿದ್ದರು.

ಮರುದಿನ ಮಧ್ಯಾಹ್ನದ ಹೊತ್ತಿಗೆ ಇಡೀ ಮನೆ ಖಾಲಿಯಾಯಿತು. ಈಗ ಮನೆಯಲ್ಲಿ ಉಳಿದವರೆಂದರೆ ಮಾನಸಾ, ಶೇಖರ್‌, ಅವನ ಅಕ್ಕ ಸುಚಿತ್ರಾ, ತಂದೆ ವಿನೋದ್‌, ತಾಯಿ ಮಾಧುರಿ.

ಮರುದಿನ ಮಾನಸಾ ನೆಂಟರ ಮನೆಯ ಭೇಟಿಗೆ ಹೋಗಬೇಕಿತ್ತು. ಅವಳು ಯಾವ ಸೀರೆ ಉಡಬೇಕೆಂಬ ಗೊಂದಲದಲ್ಲಿದ್ದಳು. ನಾನು ಈ ಬಗ್ಗೆ ಅತ್ತೆಯನ್ನು ಏಕೆ ಕೇಳಬಾರದೆಂದು ಮಾನಸಾ ಯೋಚಿಸಿ, ಕೈಯಲ್ಲಿ ಸೀರೆಗಳನ್ನು ಹಿಡಿದುಕೊಂಡು ಅತ್ತೆಯ ಬಳಿ ಹೋಗಿ, ``ಅತ್ತೆ, ನಾನು ಈ 2 ಸೀರೆಗಳಲ್ಲಿ ಯಾವುದನ್ನು ಉಟ್ಟರೆ ಚೆನ್ನಾಗಿ ಕಾಣಿಸ್ತೀನಿ ಹೇಳ್ತೀರಾ?'' ಎಂದು ಕೇಳಿದಳು.

ಅತ್ತೆ ಮಾಧುರಿ, ``ನಿನಗೆ ಯಾವುದು ಇಷ್ಟವೋ ಅದನ್ನೇ ಉಡು. ಅಂದಹಾಗೆ ಆ ಕಿತ್ತಳೆ ವರ್ಣದ ಸೀರೆ ನಿನಗೆ ಬಹಳ ಚೆನ್ನಾಗಿ ಒಪ್ಪುತ್ತದೆ.''

ಆಗ ಮಾವ ವಿನೋದ್‌ ಗಹಗಹಿಸಿ ನಗುತ್ತಾ, ``ಆ ಪೆದ್ದಿಯ ಮಾತು ಏನು ಕೇಳ್ತೀಯಾ? ಕಣ್ಣಿಗೆ ರಾಚುವ ಈ ಬಣ್ಣ ಚಳಿಗಾಲದಲ್ಲಿ ಸರಿ ಅನಿಸುತ್ತೇ ಹೊರತು ಏಪ್ರಿಲ್ ‌ತಿಂಗಳಲ್ಲಿ ಅಲ್ಲ,''  ಎಂದರು.

ಅತ್ತೆ ಮಾಧುರಿ ಒಮ್ಮೆಲೆ ಮೌನವಾಗಿಬಿಟ್ಟರು. ಆಗ ಮಾವ ಪುನಃ ಮಾತು ಆರಂಭಿಸಿ, ``ಮಾನಸಾ ನೀನು ಸುಚಿತ್ರಾಳನ್ನು ಕೇಳು. ಅವಳೇ ನಿನಗೆ ಯಾವುದು ಸರಿ ಅಂತ ಹೇಳ್ತಾಳೆ,'' ಎಂದರು.

ಮಾನಸಾಳಿಗೆ ತನ್ನ ಅತ್ತೆಯ ಬಗ್ಗೆ ಮಾವನ ಈ ರೀತಿಯ ವರ್ತನೆ ಬಹಳ ವಿಚಿತ್ರವೆನಿಸಿತು. ತನ್ನ ಗಂಡನ ವರ್ತನೆ ಕೂಡ ಹೀಗೆಯೇ ಇದ್ದರೆ ಏನು ಮಾಡುವುದು, ಎಂದು ಅವಳಿಗೆ ಭಯ ಕೂಡ ಆಯಿತು. ಮಗ ಕಲಿಯುವುದು ತಂದೆಯಿಂದಲೇ ಅಲ್ವೇ? ಮರುದಿನದ ಕಾರ್ಯಕ್ರಮಕ್ಕೆ ಹಳದಿ ವರ್ಣದ ಶಿಫಾನ್‌ ಸೀರೆ ಉಟ್ಟಳು. ಅತ್ತೆ ಮಾಧುರಿ ಬೆಳಗಿನ ತಿಂಡಿಗಾಗಿ ಪೂರಿಪಲ್ಯ, ಕೇಸರಿ ಭಾತ್‌ ಮಾಡಿದ್ದರು. ಆಗ ಸುಚಿತ್ರಾ, ``ಅಮ್ಮಾ, ನೀವು ನಮ್ಮನ್ನೆಲ್ಲ ದಪ್ಪ ಮಾಡೋಕೆ ನಿರ್ಧಾರ ಮಾಡಿದಂತೆ ಕಾಣುತ್ತೆ,'' ಎಂದಳು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ