ಬೆಳಗ್ಗೆ ಏಳುತ್ತಿದ್ದಂತೆ ಅನೂಪ್‌ ತಾನಿಂದು ಆಫೀಸಿಗೆ ಹೋಗುವುದಿಲ್ಲವೆಂದು ತೀರ್ಮಾನಿಸಿಬಿಟ್ಟ. ಇಡೀ ದಿನ ವಿಶ್ರಾಂತಿ ಪಡೆಯಬೇಕು. ಇಲ್ಲವೇ ಯಾವುದಾದರೂ ಒಳ್ಳೆಯ ಪುಸ್ತಕ ಓದಬೇಕು. ಅದರಿಂದ ಅಷ್ಟಿಷ್ಟು ಒತ್ತಡ ಕಡಿಮೆಯಾಗುತ್ತದೆ. ಆ ಬಗ್ಗೆ ಯೋಚಿಸಿ ಅವನು ಎಲ್ಲಕ್ಕೂ ಮೊದಲು ತನ್ನ ಸೀನಿಯರ್‌ ಹಾಗೂ ಸಹೋದ್ಯೋಗಿಗಳಿಗೆ ಮೆಸೇಜ್‌ ಕಳಿಸಿದ. ಬಳಿಕ ಮನಸ್ಸಿಲ್ಲದ ಮನಸ್ಸಿನಿಂದ ಚಹಾ ತಯಾರಿಸತೊಡಗಿದ. ಅನೂಪ್‌ ಗೆ ಅಡುಗೆಮನೆಗೆ ಹೋಗುವುದು ಇಷ್ಟವಿರಲಿಲ್ಲ. ಕೋಮಲಾ ಅವನ ಜೊತೆಗೆ ಇರುವ ತನಕ ಅಡುಗೆಮನೆಗೆ ಹೋಗಿರಲಿಲ್ಲ. ಆದರೆ ಅವಳು ಹೊರಟು ಹೋದ ಬಳಿಕ ಅವನಿಗೆ ಅಡುಗೆಮನೆಗೆ ಹೋಗದೇ ವಿಧಿಯೇ ಇರಲಿಲ್ಲ.

ಕಳೆದ 5 ತಿಂಗಳಿನಿಂದ ಅವನು ಮಧ್ಯಾಹ್ನದ ಊಟವನ್ನು ಕ್ಯಾಂಟೀನ್ ನಲ್ಲಿ ಹಾಗೂ ರಾತ್ರಿ ಊಟವನ್ನು ಮನೆ ಸಮೀಪದ ಹೋಟೆಲ್ ‌ನಲ್ಲಿ ಮಾಡುತ್ತಿದ್ದ, ಆದರೆ ಚಹಾ ಹಾಗೂ ಸಣ್ಣಪುಟ್ಟ ತಿಂಡಿಗಳಿಗಾಗಿ ಅಡುಗೆಮನೆಗೆ ಹೋಗಲೇಬೇಕಾದ ಅನಿವಾರ್ಯತೆ ಇತ್ತು.

ಅನೂಪ್‌ ಚಿಕ್ಕವನಿದ್ದಾಗೀ ಅವನ ತಾಯಿ ತಂದೆ ರಸ್ತೆ ಅಪಘಾತದಲ್ಲಿ ಅಸುನೀಗಿದ್ದರು. ಆಗಿನಿಂದ ಅವನ ಚಿಕ್ಕಮ್ಮ ಅವನನ್ನು ಪೋಷಿಸಿ ದೊಡ್ಡವನನ್ನಾಗಿ ಮಾಡಿದ್ದರು. ಅವರು ಅವನನ್ನು ಅದೆಷ್ಟು ಪ್ರೀತಿಸುತ್ತಿದ್ದರೆಂದರೆ, ಅವನಿಗೆ ಯಾವುದೇ ಕೆಲಸ ಮಾಡಲು ಕೂಡ ಹೇಳುತ್ತಿರಲಿಲ್ಲ. ಕಾಲೇಜು ವಿದ್ಯಾಭ್ಯಾಸವನ್ನು ಅವನು ಹಾಸ್ಟೆಲ್ ‌ನಲ್ಲಿ ಇದ್ದುಕೊಂಡು ಪೂರೈಸಿದ. ಹೀಗಾಗಿ ಅವನಿಗೆ ಯಾವುದೇ ಮನೆಗೆಲಸ ಮಾಡುವ ಅವಕಾಶ ಸಿಗಲಿಲ್ಲ.

ಅವನೂ ಕೂಡ ಅದರ ಬಗ್ಗೆ ಆಸಕ್ತಿ ತೋರಿಸಲಿಲ್ಲ. ನೌಕರಿ ಮಾಡಲು, ಆರಂಭಿಸಿದ ಕೆಲವೇ ದಿನಗಳ ಬಳಿಕ ಕೋಮಲಾ ಅವನ ಜೀವನದಲ್ಲಿ ಬಂದಳು. ಆ ಬಳಿಕ ಅವನ ಜೀವನಕ್ಕೆ ರೆಕ್ಕೆ ಪುಕ್ಕ ಬಂದಿತೆನ್ನಬಹುದು.

ಅವನು ಇದೇ ಯೋಚನೆಯಲ್ಲಿ ಮುಳುಗಿರುವಾಗಲೇ ಅವನ ಫೋನ್‌ ರಿಂಗಾಯಿತು. ಫೋನ್‌ ಆಫೀಸಿನಿಂದ ಬಂದಿತ್ತು. ಅವನು ಫೋನ್‌ ಕೈಗೆತ್ತಿಕೊಂಡು ಮಾತನಾಡಲು ಆರಂಭಿಸಿದ. ಅದು ಸ್ವಲ್ಪ ದೀರ್ಘ ಸಂಭಾಷಣೆ. ಅವನು ಫೋನ್‌ ಸಂಭಾಷಣೆ ಮುಗಿಸಿ ವಾಪಸ್‌ ಬರುವ ಹೊತ್ತಿಗೆ ಚಹಾ ಅರ್ಧದಷ್ಟು ಉಕ್ಕಿ ಹೊರಚೆಲ್ಲಿತ್ತು. ಅವನಿಗೆ ಬಹಳ ಸಿಟ್ಟುಬಂತು. ಚಹಾ ಕುಡಿಯಬೇಕೆಂಬ ಮೂಡ್‌ ಹೊರಟೇಹೋಯಿತು. ಆಗ ಅವನಿಗೆ ನೆನಪಿಗೆ ಬಂತು, ಕೋಮಲಾ ಏನಾದರೂ ಇದ್ದಿದ್ದರೆ ಇಷ್ಟೊತ್ತಿಗೆ ತನಗೆ ಎರಡು ಸಲ ಚಹಾ ಕೊಟ್ಟಿರುತ್ತಿದ್ದಳು ಅಂತ.

ಕೋಮಲಾಳ ನೆನಪು ಬರುತ್ತಿದ್ದಂತೆ ಅವನ ಮನಸ್ಸು ಕೋಪಕ್ಕೆ ತುತ್ತಾಯಿತು. ಅವನು ಮನಸ್ಸಿಲ್ಲದ ಮನಸ್ಸಿನಿಂದ ಟಿ.ವಿ ಆನ್ ಮಾಡಿದ. ತನ್ನಿಷ್ಟದ ಚಾನೆಲ್ ‌ಗಳ ಹುಡುಕಾಟದಲ್ಲಿ ವೇಗವಾಗಿ ಚಾನೆಲ್ ‌ಬದಲಿಸತೊಡಗಿದ. ಅವನು ಹಿಂದೆ ಹೀಗೆಲ್ಲ ಮಾಡುತ್ತಿದ್ದಾಗ ಕೋಮಲಾ ಅವನನ್ನು ಗದರಿಸುತ್ತಿದ್ದಳು.

``ಇದೇನು ಮಾಡ್ತಾ ಇದ್ದೀರಾ, ನೀವೂ ನೋಡುವುದಿಲ್ಲ, ನೋಡುವವರಿಗೂ ನೋಡಲು ಬಿಡುವುದಿಲ್ಲ. ನಿಮಗೆ ಕೋಪ ಬಂದಿದೆ ಎನ್ನುವುದು ನನಗೆ ಗೊತ್ತು. ಆದರೆ ನೀವು ಆ ಕೋಪವನ್ನು ಟಿ.ವಿ ಮೇಲೆ ಏಕೆ ತೋರಿಸ್ತಾ ಇದೀರಾ? ಟಿ.ವಿ ಏನಾದರೂ ಕೆಟ್ಟು ಹೋದರೆ ಖರ್ಚಿನ ಹೊರೆ ನಮಗೇ ಅಲ್ವೇ? ಕೊಡಿ ಇಲ್ಲಿ ನನಗೆ ರಿಮೋಟ್‌,'' ಎನ್ನುತ್ತಾ ಅವಳು ಅವನ ಕೈಯಿಂದ ರಿಮೋಟ್‌ ತನ್ನ ಕೈಗೆ ತೆಗೆದುಕೊಳ್ಳುತ್ತಿದ್ದಳು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ