ಕ್ಯಾಥರಿನ್‌ ತಡ ರಾತ್ರಿ ತನ್ನ ಕಾರನ್ನು ಡ್ರೈವ್ ವೇನಲ್ಲಿ ಪಾರ್ಕ್‌ ಮಾಡಿ, ಓಲಾಡುತ್ತಾ ಬ್ಯಾಕ್‌ ಯಾರ್ಡ್‌ ಡೋರ್‌ ತೆರೆಯಲು ಪ್ರಯತ್ನ ಮಾಡತೊಡಗಿದಳು. ಅವಳು ಮದ್ಯದ ಅಮಲಿನಲ್ಲಿದ್ದಳು. ಹೀಗಾಗಿ ಅವಳಿಗೆ ಕೀಯನ್ನು ಹೋಲ್ ‌ನಲ್ಲಿ ಸರಿಯಾಗಿ ತೂರಿಸಲೂ ಆಗುತ್ತಿರಲಿಲ್ಲ. ಹೊರಗೆ ಧ್ವನಿ ಕೇಳಿ ಶ್ಯಾಮ್ ಒಳಗಿನಿಂದ ಬಾಗಿಲು ತೆರೆದ. ಕ್ಯಾಥರಿನ್‌ ತನ್ನ ಬ್ಯಾಗ್‌ ನ್ನು ಒಂದೆಡೆ ಎಸೆದು ಲಿವಿಂಗ್‌ ರೂಮ್ ನ ಸೋಫಾದ ಮೇಲೆ ಧೊಪ್ಪೆಂದು ಬಿದ್ದಳು.

ಅವಳನ್ನು ಉದ್ದೇಶಿಸಿ ಸ್ಯಾಮ್, ``ಕ್ಯಾಥ್‌, ನೀನು ಕೇವಲ ನನ್ನ ವೈಫ್‌ ಅಷ್ಟೇ ಅಲ್ಲ, ಒಬ್ಬ ಮಗಳ ತಾಯಿ ಕೂಡ. ನಾನು ನಿನ್ನ ರಂಪಾಟಗಳನ್ನು ಇಷ್ಟವಿಲ್ಲದಿದ್ದರೂ ಸಹಿಸಿಕೊಳ್ತೀನಿ. ಆದರೆ ಪಾಪ ಲಲಿತಾಳ ಬಗ್ಗೆ ಯೋಚಿಸು, ಅವಳಿಗೆ ಈಗ 3 ವರ್ಷ ಅಷ್ಟೆ. ನಿನ್ನ ಅವಶ್ಯಕತೆ ಅವಳಿಗೆ ತುಂಬಾ ಇದೆ,'' ಎಂದು ಹೇಳಿದ.

``ವಾಟ್‌ ಸ್ಯಾಮ್, ನೀನೂ ಕೂಡ ಎಷ್ಟು ಹಳೆಕಾಲದ ಮಾತು ಹೇಳ್ತಿರುವೆ. ಲಲಿತಾಳನ್ನು ನಾವು ಬೇಬಿ ಕೇರ್‌ ಗೆ ಕಳಿಸಿ ಕೊಡ್ತಿದ್ದೇವೆ. ಅವಳಿಗೇ ಏನೂ ಸಮಸ್ಯೆ ಇರದಿರುವಾಗ ನಿನಗೇನು ಸಮಸ್ಯೆ ಇದೆ? ಈಗ ನನ್ನ ಮೂಡ್‌ ಹಾಳು ಮಾಡಬೇಡ. ಹೊರಡು ಈಗ ಮಲಗು,'' ಎಂದಳು.

ಬೆಡ್‌ ಮೇಲೆ ಲಲಿತಾಳನ್ನು ನೋಡಿ ಕ್ಯಾಥರಿನ್‌ ಗೆ ಪಿತ್ತ ನೆತ್ತಿಗೇರಿದಂತಾಯಿತು. ಅವಳು ಜೋರಾಗಿ ಚೀರುತ್ತಾ, ``ನಾನು ಇವಳಿಗಾಗಿ ಕಳೆದ 10 ದಿನಗಳಿಂದ ಬೇರೆ ರೂಮಿನಲ್ಲಿ ಮಲಗುವ ವ್ಯವಸ್ಥೆ ಮಾಡಿರುವೆ. ಇಂದು ಇವಳು ಮತ್ತೇಕೆ ಇಲ್ಲಿ ಬಂದಿದ್ದಾಳೆ? ಅವಳನ್ನು ಅವಳ ರೂಮಿಗೆ ಕಳಿಸು,'' ಎಂದಳು.

``ಅತ್ತು ಅತ್ತು ಬಹಳ ಕಷ್ಟಪಟ್ಟು ಈಗಷ್ಟೇ ಮಲಗಿದ್ದಾಳೆ. ಅವಳ ನಿದ್ದೆ ಹಾಳು ಮಾಡಬೇಡ. ಇವತ್ತಿನಿಂದ ಮಗು ಇಲ್ಲಿಯೇ ಮಲಗಲಿ,'' ಎಂದ.

ಕ್ಯಾಥರಿನ್‌ ಅವಳನ್ನು ಬಲವಂತದಿಂದ ತನ್ನ ಬಾಹುಗಳಲ್ಲಿ ಎತ್ತಿಕೊಂಡು ಬೇರೆ ರೂಮಿಗೆ ಕರೆದೊಯ್ಯತೊಡಗಿದಳು. ಆಗ ಸ್ಯಾಮ್ ಕೋಪದಿಂದ ಅವಳ ಕೈಯಿಂದ ಲಲಿತಾಳನ್ನು ಕಿತ್ತುಕೊಂಡು ಬೆಡ್‌ ಮೇಲೆ ಮಲಗಿಸಿದ.

ಕ್ಯಾಥರಿನ್‌ ಕೂಡ ಕೋಪದಿಂದ ಚೀರುತ್ತಲೇ, ``ಹೌ ಡೇರ್‌ ಯೂ ಅಸಾಲ್ಟ್ ಮೀ!'' ಎಂದಳು.

``ನಾನು ನಿನಗೆಲ್ಲಿ ಅಸಾಲ್ಟ್ ಮಾಡಿದೆ? ನಿನ್ನ ಕೈಯಿಂದ ಮಗಳನ್ನು ಕಿತ್ತುಕೊಂಡು ಬೆಡ್‌ ಮೇಲೆ ಮಲಗಿಸಿದೆ ಅಷ್ಟೆ,'' ಸ್ಯಾಮ್ ಹೇಳಿದ.

``ಇಟ್ಸ್ ಆಲ್ ದಿ ಸೇಮ್. ನೀನು ಒತ್ತಾಯಪೂರ್ವಕವಾಗಿ ನನ್ನಿಂದ ಕಿತ್ತುಕೊಂಡೆ. ನೀವಿಬ್ಬರೂ ಈ ರೂಮಿನಿಂದ ಹೊರ ನಡೆಯಿರಿ,'' ಎಂದಳು.

ಇಬ್ಬರ ಜೋರು ಜೋರು ಧ್ವನಿಯಿಂದ ಲಲಿತಾ ಹೆದರಿ ಎದ್ದು ಕುಳಿತಳು. ಸ್ಯಾಮ್ ಅವಳನ್ನು ತನ್ನ ತೋಳಿನ ಮೇಲೆ ಮಲಗಿಸಿಕೊಂಡು ಲಲಿತಾಳ ರೂಮಿಗೆ ಹೋಗಿ ಇಬ್ಬರೂ ಅಲ್ಲೇ ಮಲಗಿಕೊಂಡರು.

ಸ್ಯಾಮ್ ಭಾರತೀಯ ಮೂಲದ ಎಂಜಿನಿಯರ್‌. ಕೆಲವು ವರ್ಷಗಳ ಮುಂಚೆ ಅಮೆರಿಕಾದ ಕ್ಯಾಲಿಫೋರ್ನಿಯಾಗೆ ಬಂದಿದ್ದ ಹಾಗೂ ಅವನಿಗೆ ಗ್ರೀನ್‌ ಕಾರ್ಡ್‌ ದೊರಕಿತ್ತು. ಅವನ ತಾಯಿ ತಂದೆ ಭಾರತದಲ್ಲಿಯೇ ವಾಸವಾಗಿದ್ದರು. ಮುಂದಿನ 1-2 ವರ್ಷಗಳಲ್ಲಿ ಅವನಿಗೆ ಅಮೆರಿಕಾದ ನಾಗರಿಕತ್ವ ದೊರಕುವ ಸಾಧ್ಯತೆ ಇತ್ತು. 5 ವರ್ಷಗಳ ಹಿಂದಷ್ಟೇ ಅವನು ಅಮೆರಿಕನ್‌ ಹುಡುಗಿ ಕ್ಯಾಥರಿನ್ ಳನ್ನು ಮದುವೆಯಾಗಿದ್ದ. ಅಂದಹಾಗೆ ಅವಳು ವಯಸ್ಸಿನಲ್ಲಿ ಅವನಿಗಿಂತ ದೊಡ್ಡವಳಾಗಿದ್ದಳು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ