ಹೊಸ ಚಿಗುರುಗಳನ್ನು ಕಂಡಾಗೆಲ್ಲ ಅವುಗಳಂತೆ ಆಗುವ ಇಚ್ಛೆಯನ್ನು ನನಗೆ ತಡೆದುಕೊಳ್ಳಲಾಗುತ್ತಿರಲಿಲ್ಲ. ಚಿಕ್ಕ ಗಿಡಗಳಿಂದ ಹಿಡಿದು ದೊಡ್ಡ ದೊಡ್ಡ ಮರಗಳ ಕೊಂಬೆಗಳ ತುದಿಯವರೆಗೆ ಕೆಂಪು ಗುಲಾಬಿ ಹಾಗೂ ಹೊಳೆಯುವ ಚಿಗುರುಗಳನ್ನು ಕಂಡಾಗ ಅವನ್ನೊಮ್ಮೆ ಮುಟ್ಟಲು ಆಸೆಯಾಗುತ್ತಿತ್ತು. ಆದರೆ ಕೀರ್ತನಾಗೆ ನನ್ನ ಮಾತುಗಳು ಇಷ್ಟವಾಗುತ್ತಿರಲಿಲ್ಲ. ಅವಳು ರೇಗುತ್ತಿದ್ದಳು, ``ನೀನೆಂಥ ಸೈನ್ಸ್ ಸ್ಟೂಡೆಂಟ್‌? ಚಿಗುರುಗಳು ತಮ್ಮತನದ ಇಲ್ಲವೇ ಪ್ರೀತಿಯ ಸೂಚಕವಲ್ಲ, ಬದುಕಿನ ಸೂಚಕವಾಗಿದೆ. ಮರಗಿಡಗಳಲ್ಲಿ ಚಿಗುರೊಡೆಯುವವರೆಗೆ ಅವು ಜೀವಂತಾಗಿವೆ ಎಂದರ್ಥ. ಮರಗಿಡಗಳ ಬದುಕು ಮುಗಿದಾಗ ಅವುಗಳಲ್ಲಿ ಚಿಗುರು ತಳೆಯುವುದಿಲ್ಲ. ಚಿಗುರುವುದು ನಿಂತಾಗ ಅವು ಸತ್ತಂತೆ. ಇದನ್ನೂ ಹೇಳಿಕೊಡಬೇಕೇನೇ ನಿನಗೆ?''

ಮುಂದೆ ನಾನು ಇದೆಲ್ಲವನ್ನೂ ಮರೆತುಬಿಡುತ್ತಿದ್ದೆ ಅಥವಾ ಮನದ, ಮೂಲೆಯೆಲ್ಲಿಯೋ ಅದುಮಿಡುತ್ತಿದ್ದೆ. ಆದರೆ ಕೆಲವು ವರ್ಷಗಳ ನಂತರ ಕೀರ್ತನಾ ಮೇಲ್ ಕಳಿಸಿದಾಗ ಇದೆಲ್ಲಾ ಮತ್ತೆ ನೆನಪಾಗಿತ್ತು. ಅವಳು ಕ್ಯಾಲಿಫೋರ್ನಿಯಾದಿಂದ ಹಿಂತಿರುಗಿದ್ದಳು. ಅವಳ ರಿಸರ್ಚ್‌ ಪೂರ್ತಿಯಾಗಿತ್ತು. ಅವಳನ್ನು ಭೇಟಿಯಾಗದೆ ಕೆಲವು ವರ್ಷಗಳು ಕಳಿದಿದ್ದವು.

ನಾನು ಚಿಕ್ಕಂದಿನಿಂದಲೂ ಏನಾದರೂ ಸಾಧಿಸಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದ್ದೆ. ಏನಾದರೂ ಹೊಸತು, ಎಲ್ಲರಿಗಿಂತ ಭಿನ್ನವಾದುದು, ಯಾವಾಗಲೂ ಎಲ್ಲರಿಗಿಂತ ಮುಂದೆ ಇರಬೇಕೆಂಬ ಮಹತ್ವಾಕಾಂಕ್ಷೆ. ಅದೇ ಗುಣಗಳನ್ನು ಚಿಗುರುಗಳಲ್ಲೂ ಕಾಣುತ್ತಿದ್ದೆ. ಅವುಗಳಂತೆ ಆಗಬೇಕೆಂಬ ಪ್ರೇರಣೆ ಮನದಲ್ಲಿರುತ್ತಿತ್ತು.

``ಒಳ್ಳೆಯ ಸಂಬಂಧ ಬಂದಿದೆ. ಇದನ್ನು ಕಳೆದುಕೊಂಡರೆ ಇಂಥ ಸಂಬಂಧ ಮತ್ತೆ ಸಿಗಲ್ಲ.''

ಅಪ್ಪನ ಈ ಮಾತು ಏನಾದರೂ ಸಾಧಿಸಬೇಕೆನ್ನುವ ನನ್ನ ಮಹತ್ವಾಕಾಂಕ್ಷೆಗೆ ಮೊದಲ ಪೆಟ್ಟು ಕೊಟ್ಟಿತ್ತು. ಆದರೆ ಅಪ್ಪನ ವ್ಯಾಪಾರದಲ್ಲಾದ ನಷ್ಟ ಮನೆಯ ಆರ್ಥಿಕ ಪರಿಸ್ಥಿತಿಯ ಹೊಯ್ದಾಟಗಳು ನನ್ನ ಮಹತ್ವಾಕಾಂಕ್ಷೆಗಾಗಿ ಹಟ ಮಾಡಲು ಅನುಮತಿ ಕೊಡಲಿಲ್ಲ.

ಪಿಯುಸಿ ನಂತರ ಮದುವೆ ಮಾಡಿಕೊಂಡು ತವರುಮನೆಯಿಂದ ಅತ್ತೆಮನೆಗೆ ತಲುಪಿದೆ. ಮೆಡಿಕಲ್ ಎಂಟ್ರೆನ್ಸ್ ಟೆಸ್ಟ್ ಗೆ ಹೋಗುವ ಇಚ್ಛೆಯನ್ನು ಮನದಲ್ಲೇ ಹುದುಗಿಸಿ ನಾನು ಕುಮಾರಿಯಿಂದ ಶ್ರೀಮತಿಯಾಗಿ ಬದಲಾದೆ.

ನನ್ನ ಗಂಡ ರಜತ್‌ ಒಂದು ಬ್ಯಾಂಕ್‌ನಲ್ಲಿ ಕ್ಲರ್ಕ್‌ ಆಗಿದ್ದರು. ನಾನು ಡಾಕ್ಟರ್‌ ಆಗಲು ಇಚ್ಛಿಸುತ್ತೇನೆ ಎಂದು ಅವರಿಗೆ ಹೇಳಿದಾಗ ಅವರಿಗೆ ಆಶ್ಚರ್ಯವಾಗಿತ್ತು. ನಾನು ಆವಕಾಶವನ್ನು ಮುಟ್ಟುವ ಬಗ್ಗೆ ಮಾತಾಡುತ್ತಿದ್ದೇನೆ ಎಂದುಕೊಂಡಿದ್ದರು. ಬೇಡವೆಂದು ಹೇಳುತ್ತಾ ಕೊನೆಗೂ ಒಪ್ಪಿಕೊಂಡರು.

``ಆಯ್ತು. ಟ್ರೈ ಮಾಡು. ನಾನು ನಿನಗೆ ಬಿ.ಎಡ್‌ ಓದಿಸೋಣ ಎಂದುಕೊಂಡಿದ್ದೆ. ಡಾಕ್ಟರ್‌ ಆಗಬೇಕೆನ್ನುವ ಸಾಮರ್ಥ್ಯ ನಿನ್ನಲ್ಲಿ ಇದ್ದರೆ ಓ.ಕೆ. ಈಗ ಡಾಕ್ಟರ್‌ಗಳ ಸಂಪಾದನೆಯೂ ಜೋರಾಗಿದೆ,'' ಎಂದರು.

ನನ್ನ ಆಕಾಂಕ್ಷೆಯನ್ನು ಪೂರೈಸಿಕೊಳ್ಳುವ ಅವಕಾಶ ಸಿಕ್ಕಾಗ ನಾನು ರೋಮಾಂಚಿತಳಾಗಿದ್ದೆ. ಒಂದು ವರ್ಷದ ಸಂಪೂರ್ಣ ಸಿದ್ಧತೆ ಪರೀಕ್ಷೆಯಲ್ಲಿ ಯಶಸ್ಸು ಕೊಟ್ಟಿತು. ನಾನು ಮೆಡಿಕಲ್ ಎಂಟ್ರೆನ್ಸ್ ಎಗ್ಸಾಮ್ ನಲ್ಲಿ ಉತ್ತೀರ್ಣಳಾಗಿ ಮೆಡಿಕಲ್ ಕಾಲೇಜಿನಲ್ಲಿ ಸೀಟ್ ಗಳಿಸಿದ ದಿನ ನನ್ನ ಜೀವನದ ಅತ್ಯಂತ ಸಂತಸದ ದಿನವಾಗಿತ್ತು. ನಾನು ಪರಿಸ್ಥಿತಿಗಳ ಜೊತೆ ಹೊಂದಿಕೊಳ್ಳದೆ ಜಯವನ್ನು ಸಾಧಿಸಿದ್ದು ನನಗೆ ಖುಷಿಯಾಗಿತ್ತು.

ನಾನು ಮೆಡಿಕಲ್ ಸ್ಟೂಡೆಂಟ್‌ ಮತ್ತು ಗೃಹಿಣಿ ಎರಡೂ ಪಾತ್ರಗಳನ್ನು ಚೆನ್ನಾಗಿ ನಿಭಾಯಿಸಿದೆ. ಅಭಿರುಚಿ, ಸಮರ್ಪಣೆ ಮತ್ತು ಸಫಲತೆಯಿಂದ ಎಲ್ಲ ಕೆಲಸಗಳನ್ನೂ ಮಾಡುತ್ತಿದ್ದೆ. ನಮ್ಮ ಕಾಲೇಜು ಹಾಗೂ ಮನೆಯಲ್ಲಿ ಯಾರಿಗೂ ದೂರಲು ಅವಕಾಶ ಕೊಡಲಿಲ್ಲ. ಆದರೆ ನನ್ನ ಪ್ರಯತ್ನದಲ್ಲಿ ನನಗೆಷ್ಟು ತೊಂದರೆಯಾಯಿತೆಂದು ನನಗೊಬ್ಬಳಿಗೆ ಮಾತ್ರ ಗೊತ್ತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ