ಕಥೆ - ನಿರ್ಮಲಾ ಚಂದ್ರ 

ಕೆಲಸಕ್ಕೆಂದು ಮನೆ ತೊರೆದ ಹೆಂಡತಿ ಮಂದಿರಾ ಯಾರದೋ ಸ್ಕೂಟರ್‌ನಲ್ಲಿ ಕುಳಿತು ಪ್ರಯಾಣಿಸುತ್ತಿರುವುದನ್ನು ಕಂಡ ಅವನಿಗೆ ಅಚ್ಚರಿಯಾಗಿತ್ತು. ಅವನು ಆ ಸ್ಕೂಟರ್‌ನ್ನು ಫಾಲೋ ಮಾಡಿಕೊಂಡು ಹೋಗಬೇಕು ಎಂದುಕೊಂಡರೂ ಅದೇಕೋ ಬೇಡವೆನ್ನಿಸಿತು. ಮತ್ತೆ ಅವನು ತನ್ನ ದಾರಿ ಹಿಡಿದ.

ಅವನಿಗೆ ಹಿಂದಿನ ನೆನಪು ಕಾಡಿತು. ಅಂದು ಅವಳು ತಾನು ಸಹ ಕೆಲಸಕ್ಕೆ ಸೇರಿಕೊಳ್ಳುತ್ತೇನೆ. ನನಗೆ ಕಾಲೇಜು ದಿನಗಳಿಂದಲೂ ಟೀಚಿಂಗ್‌ನಲ್ಲಿ ಆಸಕ್ತಿ ಇದ್ದೇ ಇತ್ತು. ಇದೀಗ ಮಕ್ಕಳೂ ದೊಡ್ಡವರಾಗಿದ್ದಾರೆ. ನಾನು ಮನೆಯಲ್ಲಿ ಕುಳಿತು ಏನು ಮಾಡಲಿ? ಎಂದು ಕೇಳಿದಳು. ಅದಕ್ಕೆ ಅವನು ಮೌನವಾಗಿ ಸಮ್ಮತಿಸಿದ್ದ.

ಇಂದು ಸಂಜೆ ಮನೆಗೆ ಬಂದಾಗ ಅವನಿಗೆ ಮಂದಿರಾ ಮೊಗದಲ್ಲಿ ಹೊಸ ಕಾಂತಿ ಜೊತೆಗೆ ಮಂದಹಾಸ ಕಾಣಿಸಿತು. ಜೊತೆಗೆ ಧ್ವನಿಯಲ್ಲಿ ಎಂದೂ ಇಲ್ಲದ ಮಾಧುರ್ಯ ಕಂಡಂತಾಯಿತು. ಅವನಿಗೆ ತಾನು ಕಂಡ ಆ ದೃಶ್ಯವೇ ಕಣ್ಮುಂದೆ ಬಂದಿತು. ಅವನು ತುಸು ತಡೆದು ಕೇಳಿದ, ``ನಿನ್ನ ಕೆಲಸ ಹೇಗೆ ನಡೆಯುತ್ತಿದೆ?''

``ಓಹೋ! ಚೆನ್ನಾಗಿದೆ ಶ್ರೀ..... ಎಲ್ಲ ಕೆಲಸಗಳಲ್ಲಿಯೂ ತುಸುವಾದರೂ ಕಿರಿಕಿರಿ ಇದ್ದೇ ಇರುತ್ತದಲ್ಲ. ಹಾಗೇ ಈ ಕೆಲಸದಲ್ಲಿಯೂ ಇದೆ. ಆದರೆ ನಾನದನ್ನೆಲ್ಲ ಸಂಭಾಳಿಸಿಕೊಂಡು ಹೋಗಬಲ್ಲೆ.''

``ನಾನೀಗ ಒಳ್ಳೆಯ ಸಂಪಾದನೆ ಮಾಡುವ ಕೆಲಸದಲ್ಲಿದ್ದೇನೆ. ನನ್ನ ಸಂಬಳವೇ ಸಂಸಾರ ನಡೆಸಲು ಸಾಕಾಗುವಷ್ಟಿದೆ ಇಂತಹದರಲಿ ನೀನು ಕೆಲಸಕ್ಕೆ ಹೋಗುವುದೇನೂ ಅಗತ್ಯವಿಲ್ಲ ಎನ್ನುವುದು ನನ್ನ ಭಾವನೆ.''

``ಶ್ರೀಕಾಂತ್‌, ನಿನಗೂ ತಿಳಿದಿದೆಯಲ್ಲ ನಾನು ಕೆಲಸಕ್ಕೆ ಹೋಗುತ್ತಿರುವುದು ನನ್ನ ಸಮಯನ್ನು ವ್ಯರ್ಥ ಮಾಡಬಾರದು ಎನ್ನುವ ಕಾರಣಕ್ಕೆ ಹೊರತು ಸಂಪಾದನೆಗಾಗಿ ಅಲ್ಲ. ನಾನು ಮೊದಲಿನಿಂದಲೂ ಆಸಕ್ತಿ ಬೆಳೆಸಿಕೊಂಡ ಕ್ಷೇತ್ರ ಅದು ಶಿಕ್ಷಣ ಕ್ಷೇತ್ರ. ಮಕ್ಕಳಿಗೆ ಪಾಠ ಹೇಳಿಕೊಡುವುದರಲ್ಲಿ ನನಗೆ ಏನೋ ಒಂದು ಬಗೆಯ ಶಾಂತಿ ಲಭಿಸುತ್ತದೆ.''

ಶ್ರೀಕಾಂತ್‌ ಮತ್ತೇನೂ ಮಾತನಾಡಲಿಲ್ಲ. ಈ ವಿಷಯದ ಚರ್ಚೆ ಅನಗತ್ಯ ಎನಿಸಿತು. ಅವನು ಮೌನ ವಹಿಸಿದ. ಆದರೆ ತಾನು ಕಂಡಿದ್ದು ಸುಳ್ಳೊ? ಸತ್ಯವೋ? ಈ ಪ್ರಶ್ನೆ ಮಾತ್ರ ಅವನಲ್ಲಿ ಸದಾ ಕಾಡುತ್ತಿತ್ತು.

ತುಸು ಸಮಯ ಕಳೆದು ಕೇಳಿದ, ``ನೀನಿಂದು ಕಾಲೇಜು ಮುಗಿಸಿಕೊಂಡು ಇನ್ನೆಲ್ಲಾದರೂ ಹೋಗಿದ್ದೆಯಾ?''

``ಇಲ್ಲ....'' ಎಂದು ಉತ್ತರಿಸಿದಳು.

ಇದಾಗಿ ಕೆಲವು ದಿನಗಳು ಕಳೆದವು. ಅದೊಂದು ದಿನ ಶ್ರೀಕಾಂತ್‌ ತನ್ನ ಕೆಲಸ ತೀರಿಸಿಕೊಂಡು ಗೆಳೆಯರೊಡನೆ  ಕಾಫಿ ಕುಡಿಯಲಿಕ್ಕಾಗಿ ಕಾಫಿ ಶಾಪ್‌ಗೆ  ಬಂದಿದ್ದ. ಅದೇ ವೇಳೆಯಲ್ಲಿ ಬ್ಲೂ ಜೀನ್ಸ್ ಮತ್ತು ಅದೇ ಬಣ್ಣದ ಟೀ ಶರ್ಟ್‌ ಧರಿಸಿದ್ದ ಯುವಕನೊಡನೆ ಮಂದಿರಾ ನಗುತ್ತಾ, ಹರಟುತ್ತಾ ಕಾಫಿ ಕುಡಿಯುತ್ತಿದ್ದುದು ಕಂಡಿತು. ಆ ಯುವಕನ ಮುಖವನ್ನೂ ಸಹ ನೋಡಲು ಹೇಸಿಕೊಂಡ ಶ್ರೀಕಾಂತ್‌ ಕಾಫಿ ಶಾಪ್‌ನಿಂದ ಹೊರಬಂದವನಿಗೆ ಅದೇ ಸ್ಕೂಟರ್‌ ಕಂಡಿತು. ಆ ಸ್ಕೂಟರ್‌ನ ರಿಜಿಸ್ಟರ್‌ ಸಂಖ್ಯೆಯನ್ನು ಬರೆದುಕೊಂಡು ಅಲ್ಲಿಂದ ನೇರವಾಗಿ ಮನೆಯತ್ತ ಮುಖ ಮಾಡಿದ. ಅಂದು ಅವನು ಎರಡರಲ್ಲಿ ಒಂದು ತೀರ್ಮಾನ ಮಾಡಲೇಬೇಕೆಂದು ನಿರ್ಧರಿಸಿದ್ದನು. ಮಂದಿರಾ ಏಕೆ ಹೀಗಾದಳು ಎನ್ನುವುದು ಅವನಿಗೆ ತಿಳಿಯದಾಯಿತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ