ಕಥೆ -  ಆರ್‌. ಸುಲಕ್ಷಣಾ 

ಶ್ಯಾಮರಾಯರು ತಮ್ಮ ದಿವಂಗತ ಪತ್ನಿಯ ಬ್ಲೌಸ್‌ಗಳಿಂದ ಕೂಡಿದ ಸೂಟ್‌ಕೇಸ್‌ ತೆರೆದು ನೋಡಿದಾಗ ಅದಕ್ಕೆ ಸಂಬಂಧಿಸಿದ ಸಂಗತಿಗಳು ಮತ್ತೆ ನೆನಪಾದವು. ಆದರೆ ಅವರು ಆ ಸೂಟ್‌ಕೇಸ್‌ ತೆಗೆದುಕೊಂಡು ಗುಡಿಸಲುಗಳ ಕಡೆಗೆ ಹೋಗುವಂತಾಗಲು ಅಂಥಾದ್ದೇನು ನಡೆಯಿತು ?

ಶ್ಯಾಮರಾಯರು ಪತ್ನಿಯ ಸಾವಿನ ನಂತರ ಮಗಳೊಂದಿಗೆ ಅಮೆರಿಕಾಗೆ ಹೋಗಿದ್ದರು. 65 ವರ್ಷದ ಪತ್ನಿ ವಿಮಲಾ ಕ್ಯಾನ್ಸರ್‌ನಿಂದಾಗಿ ಅವರನ್ನು ಅಗಲಿ ಹೋದಾಗ ರಾಯರ ಬದುಕಿನ ನೌಕೆ ಅಲ್ಲೋಲಕಲ್ಲೋಲವಾಗಿತ್ತು. ಈ ವಯಸ್ಸಿನಲ್ಲೇ ಪರಸ್ಪರರ ಅಗತ್ಯ ಹೆಚ್ಚಾಗಿರುತ್ತದೆ. ಇದೇ ಸಂದರ್ಭದಲ್ಲಿ ಅವರ ಪತ್ನಿ ಗಂಡನ ಕೈ ಬಿಡಿಸಿಕೊಂಡು ಬಾರದ ಲೋಕಕ್ಕೆ ಹೋಗಿದ್ದರು.

ತಂದೆಯ ಮಾನಸಿಕ ಸ್ಥಿತಿ ಕಂಡು ಅಮೆರಿಕಾದಲ್ಲಿದ್ದ ಇಬ್ಬರು ಗಂಡುಮಕ್ಕಳು ಅವರನ್ನು ಏಕಾಂಗಿಯಾಗಿ ಬಿಡುವುದು ಸರಿಯಲ್ಲ ಎಂದು ತಿಳಿದು ಬಲವಂತವಾಗಿ ತಮ್ಮೊಂದಿಗೆ ಕರೆದೊಯ್ದರು. ಅಮೆರಿಕಾದಲ್ಲಿ ಇಬ್ಬರು ಮಕ್ಕಳೂ ಬೇರೆ ಬೇರೆ ಊರುಗಳಲ್ಲಿದ್ದರು. ದೊಡ್ಡ ಮಗ ಸುಧೀರನ ಹೆಂಡತಿ ಭಾರತೀಯಳಾಗಿದ್ದಳು. ಅವರಿಗೊಬ್ಬ ಚಿಕ್ಕ ವಯಸ್ಸಿನ ಮಗನಿದ್ದ. ಕೆಲವು ದಿನಗಳು ಅವರ ಮನೆಯಲ್ಲಿ ಮಗುವಿನ ಆಟಪಾಠಗಳನ್ನು ನೋಡುವುದು ಅವರಿಗೆ ಪ್ರಿಯವಾಗಿತ್ತು. ಆದರೆ ಚಿಕ್ಕ ಮಗ ರಘುವಿನ ಮನೆಯಲ್ಲಿ 1 ವಾರಕ್ಕಿಂತ ಹೆಚ್ಚು ಕಾಲ ಇರಲಾಗಲಿಲ್ಲ. ಅವನ ಅಮೆರಿಕನ್‌ ಹೆಂಡತಿಯೊಂದಿಗೆ ಸರಿಯಾಗಿ ಮಾತನಾಡಲೂ ಆಗಲಿಲ್ಲ. ಇಡೀ ದಿನ ಮನೆಯಲ್ಲಿ ಒಂಟಿಯಾಗಿರಬೇಕಿತ್ತು. ಹೀಗಾಗಿ ಎರಡೇ ತಿಂಗಳಲ್ಲಿ ಅವರು ತಮ್ಮ ನಿರ್ಜನವಾದ ಮನೆಗೆ ವಾಪಸ್‌ ಬಂದಿದ್ದರು.

ಈಗ ಮನೆಯ ಒಂದೊಂದು ವಸ್ತು ಮಿಮಲಾರ ನೆನಪನ್ನು ತರುತ್ತಿತ್ತು. ಅವರು ಹೊರಗೆ ಕ್ಲಬ್‌ಗೆ ಹೋಗುತ್ತಿದ್ದರು. ಸ್ನೇಹಿತರೊಂದಿಗೆ ಹರಟುತ್ತಾ ಹಗಲು ಕಳೆದು ರಾತ್ರಿ ಮನೆಗೆ ಬಂದಾಗ ಮನೆಯೇ ಪರಕೀಯವೆನಿಸುತ್ತಿತ್ತು. ಈಗ ಒಬ್ಬರಿಗೆ ಅಷ್ಟು ದೊಡ್ಡ ಮನೆ ಅಗತ್ಯವಿರಲಿಲ್ಲ. ಹೀಗಾಗಿ 4 ಕೋಣೆಗಳ ಆ ಮನೆಯನ್ನು ಮಾರಿ 2 ಕೋಣೆಗಳ ಫ್ಲ್ಯಾಟ್‌ಗೆ ಹೋಗೋಣ ಎಂದುಕೊಂಡರು. ಇಷ್ಟು ದೊಡ್ಡ ಮನೆಯಲ್ಲಿ ನೆರೆಹೊರೆಯವರ ಶಬ್ದ ಕೇಳಿಸುವುದಿಲ್ಲ. ನಾಲ್ಕೂ ಕಡೆಯ ಗೋಡೆಗಳು ಒಂದು ಅಂತರವನ್ನು ಸೃಷ್ಟಿಸಿದ್ದವು. ಫ್ಲ್ಯಾಟ್‌ ಸಿಸ್ಟಂನಲ್ಲಿ ಎಲ್ಲ ಮನೆಗಳ ಗೋಡೆಗಳು ಮತ್ತು ಬಾಗಿಲುಗಳು ಹೇಗೆ ಸೇರಿಕೊಂಡಿರುತ್ತದೆ ಎಂದರೆ ಪಕ್ಕದ ಮನೆಯ ಗದ್ದಲವನ್ನು ಕೇಳಬಹುದು.

ಇಷ್ಟು ದೊಡ್ಡ ಮನೆಯಲ್ಲಿರುವುದು ಅಪಾಯವೆಂದು ಎಲ್ಲ ಮಿತ್ರರೂ ಸಲಹೆ ಕೊಟ್ಟರು. ದಿನ ಒಂದಿಲ್ಲೊಂದು ಮನೆಯಲ್ಲಿ ವೃದ್ಧ ಅಥವಾ ವೃದ್ಧೆಯನ್ನು ಕೊಂದು ಕಳ್ಳರು ಮನೆಯನ್ನು ದರೋಡೆ ಮಾಡಿದರೆನ್ನುವ ಸುದ್ದಿ ಬರುತ್ತಲೇ ಇರುತ್ತದೆ. ಆದ್ದರಿಂದ ಮನೆಯನ್ನು ಮಾರಿ ಚಿಕ್ಕ ಫ್ಲ್ಯಾಟ್‌ ಖರೀದಿಸಲು ಮನಸ್ಸು ಮಾಡಿ ಅವರು ನಿಧಾನವಾಗಿ ಮನೆಯಲ್ಲಿದ್ದ ಅನಗತ್ಯ ವಸ್ತುಗಳನ್ನು ಮಾರತೊಡಗಿದರು. ಹಳೆಯ ದೊಡ್ಡ ದೊಡ್ಡ ಫರ್ನೀಚರ್‌ಗಳನ್ನು ಕಡಿಮೆ ಬೆಲೆಗೆ ಮಾರಿದರು. ಹಳೆಯ ತಾಮ್ರ ಹಾಗೂ ಹಿತ್ತಾಳೆಯ ದೊಡ್ಡ ಪಾತ್ರೆಗಳನ್ನು ಅನಾಥಾಶ್ರಮಕ್ಕೆ ಕೊಟ್ಟುಬಿಟ್ಟರು. ಧೋಬಿ, ಆಳು, ಕೆಲಸದವಳು ಮತ್ತು ಡ್ರೈವರ್‌ಗೆ ಏನೇನು ಬೇಕಿತ್ತೋ ಕೊಟ್ಟುಬಿಟ್ಟರು. ಕೊನೆಯಲ್ಲಿ ಹೆಂಡತಿಯ ಬೀರು ಉಳಿಯಿತು. ಅವರು ಬೀರು ತೆರೆದಾಗ ಅದರಲ್ಲಿದ್ದ ಬಟ್ಟೆಗಳ ರಾಶಿ ನೋಡಿ ಗಾಬರಿಯಾದರು. ವಿಮಲಾಳ ಬಳಿ ಅಷ್ಟೊಂದು ಸೀರೆಗಳು, ಬ್ಲೌಸ್‌ಗಳು ಇದ್ದರೂ ಹೊಸ ಬಟ್ಟೆಗಳನ್ನು ಖರೀದಿಸುತ್ತಿದ್ದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ