``ನೀನು ಖಂಡಿತಾ ನಂಬುವುದಿಲ್ಲ. ಆದರೆ ಕೆಲವು ದಿನಗಳಿಂದ ನಾನು ನಿನ್ನನ್ನು ಮಿಸ್‌ ಮಾಡಿಕೊಳ್ಳುತ್ತಾ, ನಿನ್ನನ್ನೇ ಬಹಳ ನೆನಪಿಸಿಕೊಳ್ಳುತ್ತಿದ್ದೆ,'' ವಿಕ್ರಂ ಹೇಳಿದ.

``ಹೌದೇ.....?'' ಮುಗ್ಧಳಂತೆ ಕೇಳಿದಳು ಚಿತ್ರಾ.

``ನೀನು..... ಹೀಗೆ..... ಇದ್ದಕ್ಕಿದ್ದಂತೆ ಎಲ್ಲಿಂದ ಬಂದಿರುವೆ?''

``ಯಾವುದೋ ಕೆಲಸಕ್ಕಾಗಿ ಬೆಂಗಳೂರಿಗೆ ಬಂದಿದ್ದೆ. ಹಾಗೇ ಇಲ್ಲಿ ನನಗೆ ಬೇಕಾದವರನ್ನು ಭೇಟಿ ಆಗಬೇಕಾಗಿತ್ತು. ಆದರೆ ಆ ಕೆಲಸ ಆಗಲಿಲ್ಲ ಬಿಡು. ಮತ್ತೆ ಬೆಂಗಳೂರಿನಷ್ಟು ದೂರ ಬಂದಿರುವಾಗ ನಿನ್ನನ್ನು ಮೀಟ್‌ ಮಾಡಿಕೊಂಡೇ ಹೋಗೋಣ ಎನಿಸಿತು. ನಿನ್ನ ಆಫೀಸಿಗೆ ಬಂದು ಯಾವುದೋ ಜಮಾನಾ ಆಯ್ತು. ಹೇಗೆ ನಡೀತಿದೆ ಎಲ್ಲಾ.....?''

``ಆಫೀಸ್‌ ಸಿಬ್ಬಂದಿ ನಿನ್ನ ಬಹಳ ಮಿಸ್‌ ಮಾಡಿಕೊಳ್ಳುತ್ತಿರುತ್ತಾರೆ,'' ಎಂದ ವಿಕ್ರಂ. ದೊಡ್ಡ ಜೋಕ್‌ ಹೇಳಿದವನಂತೆ ಜೋರಾಗಿ ನಕ್ಕ. ಅವನು ಬಹಳ ಉತ್ಸಾಹಿ ಹಾಗೂ ಪ್ರೊಫೆಶನಲ್ ವ್ಯಕ್ತಿ ಆಗಿರುವುದರ ಜೊತೆ ಬಲು ಯಶಸ್ವೀ ಬಿಸ್‌ ನೆಸ್‌ ಮ್ಯಾನ್ ಆಗಿದ್ದ.

``ಓಹೋ ವಿಕ್ರಂ, ಇನ್ನೂ ನೀನು ನಿನ್ನ ಆ ಹಳೆ ಫ್ಲರ್ಟಿಂಗ್‌ ನೇಚರ್‌ ಬಿಟ್ಟಿಲ್ಲ ಬಿಡು,'' ಚಿತ್ರಾ ನಗುತ್ತಾ ಹೇಳಿದಳು.

``ಓ.... ಕಮಾನ್‌ ಯಾರ್‌..... ನಿಮ್ಮಂಥ ಬ್ಯೂಟಿಫುಲ್ ಹುಡುಗಿಯರ ಕಷ್ಟವೇ ಇದು! ಯಾರಾದರೂ ಸಹಜವಾಗಿ ಆತ್ಮೀಯತೆ ವ್ಯಕ್ತಪಡಿಸಿದರೂ ಅದನ್ನು ಫ್ಲರ್ಟಿಂಗ್‌ ಅಂತಾನೇ ತಗೋತೀರಿ.''

``ನಿಜ ಹೇಳ್ತಿದ್ದೀಯ ವಿಕ್ರಂ....... ಬ್ಯೂಟಿ ಆಗಿರುವ ಹಿಂದಿನ ಕಷ್ಟ ನಿನಗೇನು ಗೊತ್ತು.....''

``ಓಹ್‌.... ಈಗ ನೀನು ದಯವಿಟ್ಟು ನಿನ್ನ ಆ ಗ್ರೇಟ್‌ ಫಿಲಾಸಫಿ ಶುರು ಮಾಡಬೇಡ,'' ವಿಕ್ರಂ ಹೃದಯ ಮುಟ್ಟಿಕೊಳ್ಳುತ್ತಾ ನಾಟಕೀಯವಾಗಿ ಹೇಳಿದ.

``ಸಾಕು ಸಾಕು ನಿನ್ನ ಡ್ರಾಮಾ ಎಲ್ಲಾ.... ನೀನಂತೂ ನಯಾಪೈಸಾನೂ ಬದಲಾಗಿಲ್ಲ ಬಿಡು!'' ಎಂದು ಕಿಲಕಿಲ ನಕ್ಕಳು ಚಿತ್ರಾ.

``ಕಾಲಕ್ಕೆ ತಕ್ಕ ಹಾಗೆ ಬದಲಾಗುವ ನಿನ್ನಂಥ ಊಸರವಳ್ಳಿ ಅಲ್ಲ ಬಿಡು ನಾನು,'' ಎಂದ ವಿಕ್ರಂ.

``ಅರೆ.... ಇಷ್ಟು ವರ್ಷ ಆದ ಮೇಲೆ ಹೈದರಾಬಾದ್‌ ನಿಂದ ನಿನ್ನನ್ನು ನೋಡಲೆಂದು ಇಷ್ಟು ದೂರದ ಬೆಂಗಳೂರಿಗೆ ಬಂದಿದ್ದೇನೆ.... ಏನಾದರೂ ಊಟಗೀಟ ಕೊಡಿಸ್ತೀಯಾ ಅಥವಾ ಮಾತಿನಲ್ಲೇ ಹೊಟ್ಟೆ ತುಂಬಿಸಿ ಕಳುಹಿಸ್ತೀಯಾ?'' ಬೇಕೆಂದೇ ಅವನ ಮಾತನ್ನು ನಿರ್ಲಕ್ಷಿಸುತ್ತಾ ಮಾತಿನ ಗಮನ ಬೇರೆಡೆ ಹರಿಯುವಂತೆ ಮಾಡಿದಳು.

``ಓಹ್‌.... ಐ ಆ್ಯಮ್ ಸಾರಿ, ನಿನ್ನನ್ನು ನೋಡಿ ಆತಿಥ್ಯ ನಡೆಸುವುದನ್ನೂ ಮರೆತುಬಿಟ್ಟೆ. ಮೊದಲು ಒಂದು ಕಪ್‌ ಸ್ಟ್ರಾಂಗ್‌ ಬಿಸಿ ಕಾಫಿ ಆಗಲಿ, ಏನಂತೀಯಾ?''

``ಎಲ್ಲಿ ನಿನ್ನ ಆಫೀಸಿನ ಆ ಹಳೆಯ ಭಟ್ಟ..... ಗುಂಡಪ್ಪ, ಇನ್ನೂ ಇದ್ದಾನಾ? ಒಂದೊಂದು ಸಲ ಆ ಮಾರಾಯ ಕಹಿ ಕಷಾಯ ಕುಡಿಸಿಬಿಡ್ತಿದ್ದ.''

``ಹ್ಞಾಂ..... ಹ್ಞಾಂ..... ಈಗಲೂ ಅವನೇ ಇದ್ದಾನೆ. ಇರಲಿ, ನಿನಗಾಗಿ ನಾನೇ ಬ್ರೂ ಕಾಫಿ ರೆಡಿ ಮಾಡ್ತೀನಿ ಇರು. ಹಾಲಂತೂ ಒಳ್ಳೆ ಗಟ್ಟೀದೇ ಇದೆ.''

``ಏ.... ಸಾಕು ಸುಮ್ನಿರಪ್ಪಾ.... ನಿನ್ನ ಸ್ಟಾಫ್‌ ಏನು ಅಂದುಕೊಳ್ಳಬೇಕು? ತಮ್ಮ ಬಾಸ್‌ ಕೈಲೇ ಕಾಫಿ ಮಾಡಿಸಿದಳು ಅಂದುಕೊಳ್ಳುವುದಿಲ್ಲವೇ? ಇಲ್ಲೇ ಕೂರು ಮಾರಾಯ.''

``ಛೇ....ಛೇ..... ಅಂಥ ದೊಡ್ಡ ವಿಷಯವೇನಲ್ಲ ಬಿಡು. ಇದೋ 5 ನಿಮಿಷದಲ್ಲಿ ಕಾಫಿ ಆಯ್ತು ಅಂದುಕೋ. ಆಫೀಸ್‌ ಕಿಚನ್‌ ನಲ್ಲಿ ನಾನೇ ಸಿದ್ಧಪಡಿಸುವೆ. ಅವನೇ ತಂದು ಸರ್ವ್ ಮಾಡ್ತಾನಷ್ಟೆ,'' ಎಂದು ವಿಕ್ರಂ ಹೊರಟೇಬಿಟ್ಟ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ