``ಅನನ್ಯಾ, ನಿನ್ನ ಅಮ್ಮ ಫೋನ್‌ ಮಾಡಿದ್ದಾಳೆ ನೋಡು!'' ತಮ್ಮ ಮಗಳು ಸಂಗೀತಾಳಿಂದ ಕಾಲ್ ‌ಬಂದಾಗ ಅಜ್ಜಿ ಕನಕಮ್ಮ 10 ವರ್ಷದ ಮೊಮ್ಮಗಳನ್ನು ಕೂಗಿ ಕರೆದರು. ಅವಳು ಬೇರೆ ಕೋಣೆಯಲ್ಲಿ ಟಿವಿ ನೋಡುತ್ತಾ ಕುಳಿತಿದ್ದಳು. ಮೊಮ್ಮಗಳು ಏನೂ ಉತ್ತರಿಸದಿದ್ದಾಗ ತಾವೇ ಎದ್ದು ಅವಳಿದ್ದ ಕೋಣೆಗೆ ಬಂದು ಅದನ್ನೇ ಮತ್ತೆ ಹೇಳಿದರು.

``ಅಯ್ಯೋ ಹೋಗಜ್ಜಿ.... ಎಷ್ಟು ಸಲ ನಿನಗೆ ಹೇಳೋದು? ಅವರ ಹತ್ತಿರ ಮಾತನಾಡುವಂಥದ್ದು ಏನೂ ಇಲ್ಲ ಅಂತ. ನೀನು ನೋಡಿದ್ರೆ ಮತ್ತೆ ಮತ್ತೆ ಬಂದು ಅವರ ಕಾಲ್ ‌ಬಂದಿದೆ ಅಂತಾನೇ ಇರ್ತೀಯಾ!''

ಕನಕಮ್ಮನಿಗೆ ಮೊಮ್ಮಗಳ ಈ ಉತ್ತರ ಗೊತ್ತಿತ್ತು. ಹಾಗಾಗಿಯೇ ಅವರು ತಮ್ಮ ಕೈಲಿದ್ದ ಮೊಬೈಲ್  ಸ್ಪೀಕರ್‌ ಆನ್‌ ಮಾಡಿ ಅನನ್ಯಾಳ ಮಾತು ಮಗಳು ಸಂಗೀತಾಳಿಗೆ ನೇರವಾಗಿ ಕೇಳುವಂತೆ ಮಾಡಿದರು. ಇಲ್ಲದಿದ್ದರೆ ಮಗಳು ತಮ್ಮನ್ನೇ ತಪ್ಪು ತಿಳಿಯುತ್ತಾಳೆಂದೂ, ಮಗಳನ್ನು ತನ್ನ ಬಳಿ ಮಾತನಾಡಲು ಬಿಡಲಿಲ್ಲವೆಂದು ಭಾವಿಸುತ್ತಾಳೆಂದೂ ಅವರಿಗೆ ಗೊತ್ತಿತ್ತು.

ಮಗಳು ಅತ್ತ ಲೈನ್‌ ಕಟ್‌ ಮಾಡಿದ ನಂತರ ಅನನ್ಯಾಳ ಮನಸ್ಸಿನ ಭಾವನೆ ಗ್ರಹಿಸಲು ಕೇಳಿದರು, ``ಮಗು, ಅವಳು ನಿನ್ನ ತಾಯಿ. ನೀನು ಅವಳ ಹತ್ತಿರ  ಮಾತನಾಡಬೇಕು, ಹಾಗೆಲ್ಲ ಕೋಪ ಮಾಡಿಕೊಳ್ಳಬಾರದು.''

ಅವರ ಮಾತು ಪೂರ್ತಿ ಆಗುವ ಮೊದಲೇ ಅನನ್ಯಾ ಸಿಡುಕಿದಳು, ``ಥೂ ಹೋಗಜ್ಜಿ..... ಅವರಿಗೆ ನನ್ನ ಮೇಲೆ ಅಷ್ಟು ಪ್ರೀತಿ ಇದ್ದಿದ್ದರೆ ನನ್ನನ್ನು ಬಿಟ್ಟು ಬೇರೆಯವರ ಜೊತೆ ಹಾಗೆ ಹೊರಟುಹೋಗುತ್ತಿದ್ದರೆ.... ಅದೇ ನನ್ನ ಫ್ರೆಂಡ್‌ ರೇಖಾ ನೋಡು, ಅವಳಮ್ಮ ಸದಾ ಅವಳ ಹತ್ತಿರವೇ ಇರ್ತಾರೆ, ಎಷ್ಟು ಮುದ್ದು ಮಾಡುತ್ತಾರೆ ಗೊತ್ತಾ?

``ನಾನು ಫೇಸ್‌ ಬುಕ್‌ ನಲ್ಲಿ ಅಮ್ಮನ್ನ ಬೇರೆ ಗಂಡಸಿನ ಜೊತೆ ನೋಡಿದಾಗಿನಿಂದ, ನನಗೆ ಅವರನ್ನು ಕಂಡರೆ ಆಗುವುದಿಲ್ಲ! ಅಮೆರಿಕಾದಲ್ಲಿ ಅಮ್ಮ ಅಪ್ಪನ ಜೊತೆ ವಾಸ ಅಂತ ಎಷ್ಟು ಸಂತೋಷಪಟ್ಟಿದ್ದೆ ಗೊತ್ತಾ? ಆದರೆ ಅಮ್ಮ ಅಪ್ಪನ ಜೊತೆ ಜಗಳವಾಡಿಕೊಂಡು ಇಂಡಿಯಾಗೆ ಹೊರಟು ಬಂದಾಗ ಒಂದು ಸಲ ನನ್ನ ಬಗ್ಗೆ ಯೋಚಿಸಲೇ ಇಲ್ಲ..... ನಾನು ಅಪ್ಪನ್ನ ಬಿಟ್ಟು ಇರಲಿಕ್ಕೆ ಸಾಧ್ಯವಾ, ಅದು ನನಗೆ ಇಷ್ಟವಾ ಅಂತ ಕೇಳಲೇ ಇಲ್ಲ.... ಅಪ್ಪ ಕೂಡ ನನ್ನನ್ನು ಒಂದು ಸಲ ತಡೆಯುವ ಪ್ರಯತ್ನ ಮಾಡಲೇ ಇಲ್ಲ....

``ಮತ್ತೆ ಈ ಅಮ್ಮ ಭಾರತಕ್ಕೆ ಬಂದ ಮೇಲೂ ನನ್ನನ್ನು ಬಿಟ್ಟು ದೂರ ಇರಬೇಕು ಅಂತ ಡಿಸೈಡ್‌ ಮಾಡಿದರೆ, ನನ್ನನ್ನು ಮಗಳಾಗಿ ಯಾಕೆ ಹೆರಬೇಕಿತ್ತು? ನಾನು ನನ್ನ ಫ್ರೆಂಡ್ಸ್ ನೆಲ್ಲ ಅವರ ಅಮ್ಮ ಅಪ್ಪನ ಜೊತೆ ನೋಡಿದಾಗ ಎಷ್ಟು ಬೇಜಾರಾಗುತ್ತೆ ಗೊತ್ತಾ? ಮತ್ತೆ ಅವರೆಲ್ಲ ನನ್ನ ಕಡೆ ಎಷ್ಟು ಸಿಂಪತಿ ತೋರಿಸುತ್ತಾರೆ ಗೊತ್ತಾ? ನಾನೇ ಏನೋ ತಪ್ಪು ಮಾಡಿರುವೆ ಅನ್ನೋ ಹಾಗೆ...

``ಈ ದೊಡ್ಡವರೆಲ್ಲ ಯಾಕೆ ಹೀಗೆ ಮಾಡ್ತಾರಜ್ಜಿ? ಈ ಅಮ್ಮ ಫೋನ್‌ ಮಾಡಿದಾಗ ನನಗೆ ಏನು ಹೇಳ್ತಾರೆ ಅಂತ ಚೆನ್ನಾಗಿ ಗೊತ್ತು. ಹೇಗಾದರೂ ಮಾಡಿ ಅಮೆರಿಕಾದಲ್ಲಿರೋ ಅಪ್ಪನ್ನ ನಾನು ಆಗಾಗ ಕಾಂಟ್ಯಾಕ್ಟ್ ಮಾಡುತ್ತಿರಬೇಕು. ಪಾಪ ಅಂತ ಒಂದು ದಿನ ಅಪ್ಪ ನನ್ನನ್ನು ಅಮೆರಿಕಾಗೆ ಕರೆಸಿಕೊಳ್ಳಬೇಕು, ಆಗ ಈ ಅಮ್ಮನಿಗೆ ನನ್ನಿಂದ ಪೂರ್ತಿ ಮುಕ್ತಿ ಸಿಗುತ್ತೆ ಅಂತ. ಆಮೇಲೆ ಎಂದಾದರೊಮ್ಮೆ ನನ್ನನ್ನು ನೋಡು ನೆಪದಲ್ಲಿ ಅಲ್ಲಿಗೆ ಬರೋದು...

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ