ವೀಣಾ ಮತ್ತು ನರೇಂದ್ರರ ವಿವಾಹವಾಗಿ 1 ವರ್ಷವಷ್ಟೇ ಕಳೆದಿತ್ತು. ಮನೆಯ ಜವಾಬ್ದಾರಿಗಳಿಗೆ ಹೆಗಲು ಕೊಟ್ಟಿದ್ದ ನರೇಂದ್ರ 45 ವಸಂತಗಳನ್ನು ಕಂಡಿದ್ದ. ವೀಣಾಳಿಗೂ ವಯಸ್ಸು ಮೀರಿದ ಮದುವೆ. ಆಧುನಿಕ ಜೀವನದ ಉನ್ನತ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳುವ ತವಕದಲ್ಲಿ ವರ್ಷಗಳೇ ಉರುಳಿ ಹೋಗಿದ್ದವು. ಮೊದಲು ಅತಿ ಹೆಚ್ಚಿನ ವಿದ್ಯಾಭ್ಯಾಸದ ಕನಸು, ನಂತರ ತಕ್ಕ ನೌಕರಿಯ ನಿರೀಕ್ಷೆ, ಒಳ್ಳೆಯ ಉದ್ಯೋಗ ಹಿಡಿದ ಮೇಲೆ ಪ್ರಮೋಶನ್‌ ಗಾಗಿ ಶ್ರಮ. ಹೀಗಾಗಿ ವೀಣಾಳ ಜೀವನದಲ್ಲಿ ವಿವಾಹವೆಂಬುದು ಕಟ್ಟಕಡೆಯ ಆಯ್ಕೆಯಾಗಿ ಉಳಿದಿತ್ತು.

ಮೊದಲೆಲ್ಲ ವೀಣಾಳ ತಂದೆ ತಾಯಿಯರು ತಮ್ಮ ಮೇಧಾವಿ ಮಗಳ ಮುನ್ನಡೆಯ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಆದರೆ ಕಡೆಕಡೆಗೆ ವಿವಾಹದ ಕುರಿತಾದ ಅವಳ ಧೋರಣೆಯನ್ನು ಕಂಡು ಚಿಂತಾಕ್ರಾಂತರಾದರು. ತನ್ನ ವಿದ್ಯೆ, ಸ್ಥಾನಗಳಿಗೆ ತಕ್ಕವನಾಗಿಲ್ಲದ ವರನ ಪ್ರಸ್ತಾಪ ಬಂದರೆ ವೀಣಾ ಕಣ್ಣೆತ್ತಿಯೂ ನೋಡುತ್ತಿರಲಿಲ್ಲ. ಕಷ್ಟಪಟ್ಟು ಅವಳಿಗೆ ಸರಿಹೊಂದುವ ಹುಡುಗನನ್ನು ಹುಡುಕಿ ತಂದೆತಾಯಿಯರು ಇಬ್ಬರ ಭೇಟಿ ಮಾಡಿಸಿದರೆ ವೀಣಾ ಹುಡುಗನಿಗೆ ವಿಚಿತ್ರವಾದ ಪ್ರಶ್ನೆಯನ್ನು ಮುಂದಿಡುತ್ತಿದ್ದಳು.

``ನಿಮಗೆ ಮಕ್ಕಳನ್ನು ಪಡೆಯುವ ಆಸೆ ಇದೆಯೇ?''

ಭೇಟಿ ಮಾಡಿದ ಯುವಕರೆಲ್ಲರೂ ಮಕ್ಕಳು ಬೇಕೆಂದೇ ಹೇಳುತ್ತಿದ್ದರು. ಸಂಸಾರದ ಸಂತೋಷಕ್ಕೆ ಮಕ್ಕಳು ಅಗತ್ಯವೆಂಬುದು ಅವರೆಲ್ಲರ ನಿಲುವಾಗಿತ್ತು. ವೀಣಾ ಮದುವೆಯನ್ನು ನಿರಾಕರಿಸಲು ಇದೇ ಕಾರಣವಾಗುತ್ತಿತ್ತು. ಬಂದ ಯುವಕರನ್ನೆಲ್ಲ ಸಾರಾಸಗಟಾಗಿ ತಿರಸ್ಕರಿಸುತ್ತಿದ್ದ ವೀಣಾಳಿಗೆ ನರೇಂದ್ರನೊಡನೆ ನಡೆದ ಪ್ರಥಮ ಭೇಟಿಯು ಕೊಂಚ ವಿಭಿನ್ನವಾಗಿ ತೋರಿತು. ಚುರುಕಾಗಿ, ಪ್ರಭಾಶಾಲಿ ವ್ಯಕ್ತಿತ್ವವನ್ನು ಹೊಂದಿದ್ದ ನರೇಂದ್ರನನ್ನು ಕಂಡು ಅವಳು ನಿಜಕ್ಕೂ ಪ್ರಭಾವಿತಳಾಗಿದ್ದಳು. ಆದರೆ ಉನ್ನತ ವಿದ್ಯಾಭ್ಯಾಸ ಮತ್ತು ಉತ್ತಮ ಉದ್ಯೋಗ ಅವಳ ತಲೆ ತಿರುಗಿಸಿತ್ತು. ಅಲ್ಲದೆ, ಮಹಿಳೆಯರ ಹಕ್ಕು, ಅಧಿಕಾರಗಳ ಬಗ್ಗೆ ಅವಳು ಅತಿಯಾಗಿ ಜಾಗೃತಳಾಗಿದ್ದಳು. ಮಹಿಳೆಯರು ದಿಟ್ಟತನದಿಂದ ವರ್ತಿಸಬೇಕೆಂಬುದು ಅವಳ ಅಭಿಪ್ರಾಯವಾಗಿತ್ತು.

ಆದ್ದರಿಂದ ನರೇಂದ್ರನನ್ನು ಕಂಡೊಡನೆ ಪ್ರಶ್ನೆಗಳ ಸುರಿಮಳೆ ಸುರಿಸಿದಳು.

``ನನ್ನ ಬಯೊಡೇಟಾ ನೋಡಿ ನಿಮಗೆ ನನ್ನ ವಿಷಯವೆಲ್ಲ ತಿಳಿದಿರಬಹುದು,'' ವೀಣಾ ನೇರವಾಗಿ ಕೇಳಿದಳು.

``ಹೌದು,'' ಅವಳನ್ನು ಆಪಾದಮಸ್ತಕಾಗಿ ದಿಟ್ಟಿಸುತ್ತಾ ನರೇಂದ್ರ ಹೇಳಿದನು.

ಹುಡುಗಿಯರನ್ನೇ ಕಂಡಿಲ್ಲದವನಂತೆ ಹೀಗೆ ದಿಟ್ಟಿಸುತ್ತಿದ್ದಾನಲ್ಲ ಎಂದು ವೀಣಾ ಮನದಲ್ಲೇ ಸಿಡಿಗುಟ್ಟಿದಳು. ಆದರೆ ಹೊರಗೇನೂ ಮಾತನಾಡದೆ ಸುಮ್ಮನಿದ್ದಳು.

``ನೀವು ನಿಮ್ಮ ಬಗ್ಗೆ ಇನ್ನೇನಾದರೂ ಹೇಳುವುದಿದೆಯೇ?'' ಕಡೆಗೆ ನರೇಂದ್ರನೇ  ಮೌನ ಮುರಿದನು.

``ಹೌದು. ಇದುವರೆಗೆ ನಾನೇಕೆ ವಿವಾಹವಾಗಿಲ್ಲ ಎಂದು ತಿಳಿಯಲು ಬಯಸುವಿರೇನು?''

``ಹೌದು..... ಖಂಡಿತಾ.''

``ಹಾಗಾದರೆ ಕೇಳಿ. ನನಗೆ ಕುಟುಂಬದ ಯಾವ ಜವಾಬ್ದಾರಿಗಳೂ ಇರಲಿಲ್ಲ, ಯಾವುದೇ ಅನಿವಾರ್ಯತೆಯೂ ಇರಲಿಲ್ಲ. ನಾನು ನನ್ನ ಭವಿಷ್ಯವನ್ನು ರೂಪಿಸಿಕೊಳ್ಳುವುದಕ್ಕೆ ಅತ್ಯಂತ ಪರಿಶ್ರಮಪಟ್ಟಿದ್ದೇನೆ.''

``ಅದು ನನಗೆ ಗೊತ್ತು. ನೀವು ನಿಮ್ಮ ತಂದೆತಾಯಿಯರಿಗೆ ಒಬ್ಬಳೇ ಮಗಳು. ನಿಮ್ಮ ತಂದೆ ಹೆಸರಾಂತ ವ್ಯಾಪಾರಿಗಳು.  ಹಾಗಿರುವಾಗ ಕುಟುಂಬದ ಸಮಸ್ಯೆ ಅನ್ನುವ ಪ್ರಶ್ನೆಯೇ ಏಳುವುದಿಲ್ಲ. ಆದರೆ ನಾನು ಅಷ್ಟೊಂದು ಅದೃಷ್ಟವಂತ ಅಲ್ಲ. ನನ್ನ ತಂದೆಯ ಅನಾರೋಗ್ಯದಿಂದಾಗಿ ತಮ್ಮ ತಂಗಿಯರ ಪಾಲನೆ ಪೋಷಣೆ, ವಿದ್ಯಾಭ್ಯಾಸ, ವಿವಾಹ ಇವುಗಳೆಲ್ಲದರ ಜವಾಬ್ದಾರಿಯಿಂದ ನನ್ನ ಬಗ್ಗೆ ಯೋಚಿಸುವುದಕ್ಕೆ ನನಗೆ ಸಮಯವೇ ಸಿಗಲಿಲ್ಲ.''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ