ಆಕಾಂಕ್ಷಾ ನವ ವಧುವಾಗಿದ್ದಳು. ಬಹಳ ನಾಚಿಕೊಳ್ಳುತ್ತಾ ಮೊದಲ ರಾತ್ರಿಯ ಕುರಿತು ಏನೇನೋ ಕಲ್ಪನೆಯಲ್ಲಿ ಕ್ಷಣಗಳನ್ನು ಎಣಿಸುತ್ತಾ ಪತಿ ಅನಿಕೇತನಿಗಾಗಿ ಕಾಯುತ್ತಿದ್ದಳು. ಸ್ವಲ್ಪ ಹೊತ್ತಿಗೆ ಬಾಗಿಲು ತೆರೆಯಿತು. ಅವಳ ಹೃದಯದ ಬಡಿತ ಹೆಚ್ಚಿತು.

ಆದರೆ...... ಅವಳು ನೆನೆಸಿದಂತೆ ರೋಮಾಂಚಕ ಘಟನೆಗಳೇನೂ ಅಲ್ಲಿ ನಡೆಯಲಿಲ್ಲ. ಭಾರಿ ಎನಿಸುವ ರಿಸೆಪ್ಶನ್‌ ಸೂಟ್‌ ಕಳಚಿ, ನೈಟ್‌ ಡ್ರೆಸ್‌ ಧರಿಸಿ ಮಂಚದ ಒಂದು ತುದಿಯಲ್ಲಿ ನಿಂತವನೆ, ಭಾರಿ ರೇಷ್ಮೆಯಲ್ಲಿ ಹೆಚ್ಚಿನ ಒಡವೆಗಳಿಂದ ಹಾಗೇ ಕಾಯುತ್ತಿದ್ದ ಅವಳಿಗೆ ಹೇಳಿದ, ``ನೀನೂ ಈ ಸೀರೆ ಬದಲಿಸಿ ಬೇರೆ ಡ್ರೆಸ್‌ ಧರಿಸಿ ಹಾಯಾಗಿ ಮಲಗಿಬಿಡು. ನಾಳೆ ಬೆಳಗ್ಗೆಯೇ ನಾವು ಬೆಂಗಳೂರಿಗೆ ಹೊರಡಬೇಕು. ನಾಡಿದ್ದು ನಾನು ಆಫೀಸಿಗೆ ಹಾಜರಾಗಲೇಬೇಕು,'' ಎಂದು ಹೇಳಿ ಹಾಯಾಗಿ ಮಲಗಿಬಿಟ್ಟ.

ಒಂದು ಕ್ಷಣ ಅವಾಕ್ಕಾದ ಅವಳು ಗಂಡನ ಕಡೆ ಒಮ್ಮೆ ನೋಡಿ, ದೀಪ ಆರಿಸಿ, ಆ ಕೋಣೆಯ ಮೂಲೆಗೆ ಹೋಗಿ ಹೊಸ ನೈಟಿ ಧರಿಸಿ ಬಂದು ಮಲಗಿದಳು.

ಹೀಗೆ ಅವರ ಮೊದಲ ರಾತ್ರಿ ಅತಿ ನೀರಸವಾಗಿ ಕಳೆಯಿತು. ಇಡೀ ಕೋಣೆಯ ಅಲಂಕಾರ ಅರ್ಥಹೀನವಾಗಿ ಕಂಡಿತು. ಮಂಚದ ಮೇಲಿನ ಹೊಸ ಹಾಸಿಗೆ, ಅದರ ಮೇಲೆ ಚೆಲ್ಲಿದ್ದ ಹೂಗಳು ಇವರಿಬ್ಬರನ್ನೂ ಕಂಡು ವ್ಯಂಗ್ಯವಾಗಿ ನಕ್ಕವು.

ಮಾರನೇ ದಿನ ಎಚ್ಚರಗೊಂಡು ನೋಡುತ್ತಾಳೆ, ಅವನಾಗಲೇ ಸ್ನಾನ ಮುಗಿಸಿ ಬಂದು ಬೆಂಗಳೂರಿಗೆ ಹೊರಡಲು ಸೂಟ್‌ಕೇಸ್‌ಗೆ ಬಟ್ಟೆ ಪ್ಯಾಕ್‌ ಮಾಡುತ್ತಿದ್ದ. ಅವಳು ಬೇಗ ಎದ್ದು, ಸ್ನಾನ ಮುಗಿಸಿ ಬಂದು ತಾನೂ ತಯಾರಾಗತೊಡಗಿದಳು.

ಛತ್ರದಿಂದ ನೇರವಾಗಿ ಅತ್ತೆ ಮನೆಗೆ ಬಂದು ಗೃಹಪ್ರವೇಶದ ಶಾಸ್ತ್ರ ಮುಗಿಸಿ, ಹೊಸ ಸೊಸೆ ಎಲ್ಲರಿಗೂ ಹಾಲು ಹಂಚಿದಳು. ಅಲ್ಲಿಂದ ಅವಳ ತವರುಮನೆಗೆ ಬಂದು, ಬೇಕಾದ ಸಾಮಗ್ರಿ ತೆಗೆದುಕೊಂಡು ತವರಿನಿಂದ ವಿಧಿವತ್ತಾಗಿ ಬೀಳ್ಕೊಂಡು ಗಂಡನೊಡನೆ ತನ್ನ ಹೊಸ ಮನೆಗೆ ಹೊರಟಳು.

ದಾರಿಯಲ್ಲೇ ಊಟ ಮುಗಿಸಿ ಬಂದಿದ್ದರು. ಈ ಹೊಸ ಮನೆಯಲ್ಲಿ ಇವರನ್ನು ವಿಶೇಷವಾಗಿ ಆರತಿ ಬೆಳಗಿ ಕರೆದುಕೊಳ್ಳುವವರು ಯಾರೂ ಇರಲಿಲ್ಲ. ತಾವಾಗಿಯೇ ಒಳಗೆ ಬಂದು, ವಿಶ್ರಾಂತಿಗಾಗಿ ಮಲಗಿಬಿಟ್ಟರು. ಅಂದು ಸಂಜೆ ಒಂದು ಮುಖ್ಯ ಕ್ಲೈಂಟ್ ಮೀಟಿಂಗ್‌ ಇದೆ ಎಂದು, ಹಿಂದಿನ ದಿನ ತಾನೇ ಮದುವೆ ಧಾರೆ ಮುಗಿಸಿ ಸಂಜೆ ಆರತಕ್ಷತೆಗೆ ಕುಳಿತಿದ್ದ ಪತಿರಾಯ, ಅವಳನ್ನು ಒಬ್ಬಳನ್ನೇ ಬಿಟ್ಟು ಹೊರಟೇ ಹೋದ.

ಆಕಾಂಕ್ಷಾ ಇಡೀ ಮನೆಯನ್ನು ಸುತ್ತಿ ಬಂದಳು. 2 ಕೋಣೆಗಳ ಫ್ಲಾಟ್‌, ಬಾಲ್ಕನಿಯಿಂದ ಚಂದವಾಗಿತ್ತು. ಅನಿಕೇತನಿಗೆ ಆಫೀಸ್‌ವತಿಯಿಂದ ಅಲಾಟ್‌ ಆಗಿತ್ತು. ಅವನು ಒಂದು ಖಾಸಗಿ ಏರ್‌ಲೈನ್ಸ್ ಕಂಪನಿಯಲ್ಲಿ ಹಿರಿಯ ಹುದ್ದೆಯಲ್ಲಿದ್ದ. ಅವಳೂ ಸಹ ಒಂದು ಚಿಕ್ಕ ಖಾಸಗಿ ಏರ್‌ಲೈನ್ಸ್ ಕಂಪನಿಯಲ್ಲೇ ಗಗನಸಖಿ ಆಗಿದ್ದಳು.

ಇವರಿಬ್ಬರ ತಾಯಿ ತಂದೆ ಮೊದಲಿನಿಂದ ಮೈಸೂರಿನವರೇ ಆಗಿ ವ್ಯಾಪಾರ ನಡೆಸುತ್ತಾ, ಮನೆಮಠ ಹೊಂದಿದ್ದರು. ಡಿಗ್ರಿ ಓದುವಾಗಲೇ ಅವನು ಬೆಂಗಳೂರಿಗೆ ಶಿಫ್ಟ್ ಆಗಿ, ಮುಂದೆ ಅಲ್ಲೇ ಒಳ್ಳೆಯ ಕೆಲಸಕ್ಕೆ ಸೇರಿದ್ದ. ಅವಳಿಗೆ ಮೈಸೂರಿನಲ್ಲಿ ಅಂಥ ಉತ್ತಮ ಕೆಲಸ ಸಿಗದ ಕಾರಣ, ಬೆಂಗಳೂರಿಗೆ ಬಂದಿದ್ದಳು. ತನ್ನ ಚಿಕ್ಕಮ್ಮನ ಮನೆಯಲ್ಲಿ ಇದ್ದುಕೊಂಡು ಕೆಲಸಕ್ಕೆ ಹೋಗುತ್ತಿದ್ದಳು. ಒಬ್ಬನೇ ಮಗನನ್ನು ಹೊಂದಿದ್ದ ಅವರಿಗೆ ಇವಳೇ ಅಚ್ಚುಮೆಚ್ಚಿನ ಮಗಳು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ