ಬೇರೆ ದಿನಗಳಿಗೆ ಹೋಲಿಸಿದರೆ ಇಂದು ಅಂಜಲಿ ಬೇಗನೇ ಎದ್ದಿದ್ದಳು. ಇಂದು ಅವಳಿಗೆ ಆಫೀಸಿನ ಮೊದಲ ದಿನವಾಗಿತ್ತು. ಮಾಸ್‌ ಕಮ್ಯುನಿಕೇಶನ್‌ ನಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡ ಬಳಿಕ ಇಂದು ಅವಳು ಮೊದಲ ನೌಕರಿಗೆ ಬಹಳ ಕಷ್ಟಪಡಬೇಕಾಯಿತು. ಅನುಪಮ ದೇಹಸಿರಿಯಲ್ಲಿ ಅವಳು ಯಾರಿಗೂ ಕಡಿಮೆ ಇರಲಿಲ್ಲ.

ಎಲ್ಲರೂ ಅವಳ ಸೌಂದರ್ಯದ ಆರಾಧಕರಾಗಿದ್ದರು. ಅವಳಿಗೆ ತನ್ನ ತೀಕ್ಷ್ಣ ಬುದ್ಧಿಯ ಬಗ್ಗೆಯೂ ಸಂಪೂರ್ಣ ವಿಶ್ವಾಸವಿತ್ತು. ತನ್ನ ಕೆಲಸದಲ್ಲಿ ವೇಗ ಹಾಗೂ ಚಾಣಾಕ್ಷೆ, ಸ್ವಭಾವ ಕೂಡ ಮನಮೋಹಕ. ಎಲ್ಲರೊಂದಿಗೆ ಬೇಗ ಬೆರೆಯುವುದು, ತನಗೆ ಹೇಳಬೇಕಾದ್ದನ್ನು ವಿಶಿಷ್ಟ ರೀತಿಯಲ್ಲಿ ಪ್ರಸ್ತುತಪಡಿಸುವುದು, ಕೇಳುಗರಲ್ಲಿ ತನ್ನ ಮಾತನ್ನು ಒಪ್ಪುವಂತೆ ಮಾಡುವುದು ಅವಳ ವಿಶೇಷತೆಗಳಲ್ಲಿ ಸೇರಿದ್ದವು. ಒಂದು ವಿಷಯದ ಬಗ್ಗೆ ಅವಳಲ್ಲಿ ಅರಿವಿತ್ತು. ಅದೇನೆಂದರೆ `ಫಸ್ಟ್ ಇಂಪ್ರೆಶನ್‌ ಇಸ್‌ ದಿ ಬೆಸ್ಟ್ ಇಂಪ್ರೆಶನ್‌' ಹಾಗಿದ್ದರೆ ರಿಸ್ಕ್ ಏಕೆ ತೆಗೆದುಕೊಳ್ಳಬೇಕು?`ಅನರ್ಘ್ಯ ಅಡ್ವರ್‌ ಟೈಸಿಂಗ್‌ ಏಜೆನ್ಸಿ'ಯ ವಾತಾವರಣ ಅವಳಿಗೆ ಬಹಳ ಹಿಡಿಸಿತು. ಅಲ್ಲಿ ಒತ್ತಡ ಇದೆ ಅಥವಾ ಇಲ್ಲ ಎಂದು ಹೇಳುವುದು ಕಷ್ಟ ಎಂಬಂತಹ ಪರಿಸ್ಥಿತಿ ಇತ್ತು. ಅಲ್ಲಿನ ಟೀಮ್ ಗಳಲ್ಲಿ ಕೆಲಸದ ಬಗ್ಗೆ ಅಷ್ಟಿಷ್ಟು ಮಾತುಗಳು ಜೋರು ಜೋರಾಗಿ ಕೇಳಿಸಿ ಬರುತ್ತಿದ್ದವಾದರೂ, ಮತ್ತೆ ಕೆಲವೇ ಕ್ಷಣಗಳಲ್ಲಿ ಅಲ್ಲಿ, ನಗುವಿನ ಅಲೆ ತೇಲಿ ಬರುತ್ತಿತ್ತು. ಹಿನ್ನೆಲೆಯಲ್ಲಿ ಮಧುರ ಸಂಗೀತ ಕೇಳಿ ಬರುತ್ತಿತ್ತು. ಆಫೀಸಿನ ಗೋಡೆಗಳ ಮೇಲೆ ಏನೇನೊ ಗೀಚಿರುವ ಅಕ್ಷರಗಳು, ಪೋಸ್ಟರ್‌ ಗಳು ಅಂಟಿಸಲ್ಪಟ್ಟಿದ್ದವು.

ಅಂಜಲಿ ಅಲ್ಲಿನ ವಾತಾವರಣ ಕಂಡು ಖುಷಿಗೊಂಡಳು. ಅಲ್ಲಿನ ಮುಕ್ತ ವಾತಾವರಣ ಅವಳಲ್ಲಿ ಇನ್ನಷ್ಟು ಉತ್ಸಾಹ ಮೂಡಿಸಿತು. ತನಗೆ ಏನನ್ನಾದರೂ ಮಾಡುವ ಸ್ವಾತಂತ್ರ್ಯ ಸಿಗಬೇಕೆನ್ನುವುದು ಅವಳ ಅಪೇಕ್ಷೆಯಾಗಿತ್ತು. ಅವಳು ಈವರೆಗೂ ಜೀವನವನ್ನು ತನ್ನದೇ ಆದ ರೀತಿಯಲ್ಲಿ ಜೀವಿಸುತ್ತಾ ಬಂದಿದ್ದಳು. ಮುಂದೆಯೂ ಹೀಗೆಯೇ ಮಾಡುತ್ತಿರಬೇಕು ಎನ್ನುವುದು ಅವಳ ಮನದಿಚ್ಛೆಯಾಗಿತ್ತು.

ಬಾಸ್‌ ರವೀಂದ್ರರ ಕ್ಯಾಬಿನ್‌ ನಲ್ಲಿ ಕಾಲಿಡುತ್ತಾ ಅಂಜಲಿ ಹೇಳಿದಳು, ``ಹಲೋ ರವೀಂದ್ರ, ಐ ಆ್ಯಮ್ ಅಂಜಲಿ, ಯುವರ್‌ ನ್ಯೂ ಎಂಪ್ಲಾಯಿ.''

ಅವಳ ಫಿಗರ್‌ ಹಗಿಂಗ್‌ ಯೆಲ್ಲೋ ಡ್ರೆಸ್‌ ರವೀಂದ್ರರನ್ನು ಕ್ಲೀನ್‌ ಬೋಲ್ಡ್ ಮಾಡಿಬಿಟ್ಟಿತ್ತು.

ಬಳಿಕ ``ವೆಲ್ ‌ಕಮ್,'' ಎಂದು ಹೇಳುತ್ತಾ ರವೀಂದ್ರರ ಬಾಯಿ ಹೇಗೆ ತೆರೆದುಕೊಂಡಿತ್ತೋ, ಹಾಗೆಯೇ ಇತ್ತು.

ಅಂಜಲಿ ಇಂತಹ ಪ್ರತಿಕ್ರಿಯೆಗಳನ್ನು ಮೊದಲೂ ಕಂಡಿದ್ದಳು. ಎದುರಿಗಿನ ವ್ಯಕ್ತಿಯ ಈ ರೀತಿಯ ಮನೋಸ್ಥಿತಿ ಕಂಡು ಅವಳಿಗೆ ಬಹಳ ಖುಷಿಯಾಗುತ್ತಿತ್ತು. ಅವಳಿಗೆ ಅದರಲ್ಲಿ ಒಂದು ಗೆಲುವಿನ ಅನುಭವವಾಗುತ್ತಿತ್ತು. ರವೀಂದ್ರ ಆ ಕಂಪನಿಯ ಬಾಸ್‌. ಆ ವ್ಯಕ್ತಿ ತನ್ನ ಬಗ್ಗೆ ಪ್ರಭಾವಿತನಾದರೆ ಬಾಯಿಗೆ ತಂತಾನೇ ಲಡ್ಡೂ ಬಂದು ಬಿದ್ದಂತೆ ಎಂಬ ಹೊಸ ಗಾದೆ ಮಾತು ಅವಳಿಗೆ ನೆನಪಿಗೆ ಬಂತು.

ರವೀಂದ್ರರಿಗೆ 40ರ ಆಸುಪಾಸು ವಯಸ್ಸು. ಅಷ್ಟಿಷ್ಟು ಬೊಜ್ಜು, ಅರೆಬೆರೆ ನೆರೆತ ಕೂದಲು ಹಾಗೂ ಕಣ್ಣಿನ ಕೆಳಭಾಗದಲ್ಲಿ ಕಪ್ಪು ವರ್ತುಲಗಳು ಆಕರ್ಷಣೆಯ ವ್ಯಾಖ್ಯೆಯಿಂದ ಸ್ವಲ್ಪ ದೂರ ಉಳಿಯುವಂತೆ ಮಾಡಿದ್ದ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ