`ಅಮ್ಮನ ಮನೆಯಿಂದ ಅತ್ತೆಯ ಮನೆಗೋಗಿ ಮುತ್ತಂತೆ ಬಾಳು ನನ್ನ ತಂಗಿ,' ಎಂಬ ಹಾಡು ಹಿನ್ನೆಲೆಯಲ್ಲಿ ಕೇಳಿ ಬರುತ್ತಿತ್ತು. ಆ ಜನಪದ ಹಾಡಿಗೆ ಸಮೀಪದಲ್ಲಿಯೇ ಕೆಲವರು ಹೆಜ್ಜೆ ಹಾಕುತ್ತಿದ್ದರೆ, ಇತ್ತ ಪ್ರತೀಕ್ಷಾಳ ಹೃದಯದಲ್ಲಿ ಏನೋ ಒಂಥರದ ನೋವಿನ ಅನುಭವವಾಗುತ್ತಿತ್ತು. ಅಮ್ಮಅಪ್ಪ ಹಾಗೂ ಅಣ್ಣನ ಕಣ್ಣೀರು ಧಾರಾಕಾರವಾಗಿ ಹರಿಯುತ್ತಿತ್ತು.

ಕೆಲವು ದಿನಗಳ ಹಿಂದಷ್ಟೇ ಪ್ರತೀಕ್ಷಾ ಅಣ್ಣನೆದುರು ಒಂದು ಸವಾಲು ಹಾಕಿದ್ದಳು. ಗಂಡನ ಮನೆಗೆ ಹೋಗುವಾಗ ಅತ್ತು ಕಣ್ಣೀರು ಸುರಿಸುವಷ್ಟು ದುರ್ಬಲಳಲ್ಲ ನಾನು. ಅಂದಹಾಗೆ ನಾನು ಅಳಬೇಕಾದ ಅವಶ್ಯಕತೆಯಾದರೂ ಏನಿದೆ? ನನಗಿಷ್ಟವಾದನ ಜೊತೆಗೇ ಅಮ್ಮ ಅಪ್ಪ ಮದುವೆಯಾಗಲು ಅವಕಾಶ ಕೊಟ್ಟಿದ್ದಾರೆ. ಅದೂ ಕೂಡ ಅಂತರ್ಜಾತೀಯ ಮದುವೆ. ಅವಳು ತನ್ನ ಅಣ್ಣನನ್ನು ಈ ಕುರಿತಂತೆ ಸಾಕಷ್ಟು ಛೇಡಿಸಿದ್ದಳು. ಆದರೆ ಇವತ್ತು ಎಲ್ಲರ ಕಣ್ಣುಗಳಲ್ಲಿ ಕಣ್ಣೀರು ಕಂಡು ಅವಳಿಗೂ ದುಃಖ ಒತ್ತಿ ಬಂದಿತ್ತು. ಅವಳೂ ಬಿಕ್ಕಿ ಬಿಕ್ಕಿ ಅಳುತ್ತಾ ಅಮ್ಮನನ್ನು ಬಾಚಿ ತಬ್ಬಿಕೊಂಡಿದ್ದಳು.

ಅಣ್ಣ ಅಲ್ಲಿಗೆ ಬಂದು ತನ್ನ ಮುಂದೆ ಹಾಕಿದ್ದ ಸವಾಲನ್ನು ನೆನಪಿಸುತ್ತಾ, ಅವಳನ್ನು ನಗಿಸಿದ್ದ. ಇಲ್ಲದಿದ್ದರೆ ಅವಳ ಕಾಲುಗಳಿಗೆ ಅತ್ತೆ ಮನೆಯ ಕಡೆ ಹೊರಟಿದ್ದ ಕಾರಿನತ್ತ ಹೋಗುತ್ತಲೇ ಇರಲಿಲ್ಲ. ಅವಳು ಎಲ್ಲರನ್ನೂ ಅಳಲು ಬಿಟ್ಟು ತಾನು ಕಾರಿನಲ್ಲಿ ಹೋಗಿ ಕುಳಿತಳು.

ಅತ್ತೆಮನೆಯಲ್ಲಿ ಅತ್ತೆ ಮಾವ ಕೂಡ ಅವಳ ಸ್ವಾಗತಕ್ಕೆ ಭವ್ಯ ವ್ಯವಸ್ಥೆ ಮಾಡಿದ್ದರು. ಈ ರೀತಿಯ ಭಾವಪೂರ್ಣ ಸ್ವಾಗತವನ್ನು ಅವಳು ಊಹೆ ಕೂಡ ಮಾಡಿರಲಿಲ್ಲ. ಎಲ್ಲ ಔಪಚಾರಿಕತೆಗಳನ್ನು ಮುಗಿಸಿ ನಾದಿನಿ ಅವಳನ್ನು ರೂಮಿಗೆ ಬಿಟ್ಟುಹೋದಳು. ಅಷ್ಟೊಂದು ದಣಿದಿದ್ದಾಗ್ಯೂ ಅವಳು ಮಂಚದ ಮೇಲೆ ಕುಳಿತು ಪ್ರೇಮಿಯಿಂದ ಪತಿಯಾದ ಅಭಿಷೇಕ್‌ ಗಾಗಿ ನಿರೀಕ್ಷಿಸುತ್ತಿದ್ದಳು. ಆಗ ನಗುತ್ತಲೇ ಅಭಿಷೇಕ್‌ ಒಳಗೆ ಪ್ರವೇಶಿಸಿ, ``ಓಹೋ.... ಅಂತೂ ನೀನು ನನ್ನ ಮನದೊಡತಿಯಾದೆ. ನಾವಿಬ್ಬರೂ ಗಂಡ ಹೆಂಡತಿ ಆಗ್ತೀವೋ, ಇಲ್ಲವೋ ಎನ್ನುವ ನಂಬಿಕೆಯೇ ಇರಲಿಲ್ಲ. ನೀನು ನಿಜವಾಗಿಯೂ ನನ್ನ ಪ್ರತೀ... ತಾನೇ,'' ಎಂದು ಹೇಳುತ್ತಾ ಅವಳನ್ನು ಎತ್ತಿಕೊಂಡು ಗರಗರ ತಿರುಗಿಸಿದ.

ಮರುದಿನವೇ ಅಭಿಯ ತಾಯಿ ತಂದೆ ಅವರಿಬ್ಬರ ಕೈಗೆ ಸಿಂಗಾಪೂರ್‌ ಏರ್‌ ಟಿಕೆಟ್‌ ನ ಕವರ್‌ ಕೊಡುತ್ತಾ, ``ಇಬ್ಬರೂ, ನಿಮ್ಮ ಹನಿಮೂನ್‌ ಪ್ರವಾಸಕ್ಕೆ ಸಿದ್ಧತೆ ಮಾಡಿಕೊಳ್ಳಿ,'' ಎಂದರು.ಅಂದಹಾಗೆ ಇಬ್ಬರಿಗೂ ಹನಿಮೂನ್‌ ಪ್ರವಾಸದ ಬಗ್ಗೆ ಗೊತ್ತೇ ಇರಲಿಲ್ಲ. ಅವರು ಆಶ್ಚರ್ಯಚಕಿತರಾಗಿ ಅಮ್ಮ ಅಪ್ಪನ ಕಡೆ ನೋಡತೊಡಗಿದರು. ಪ್ರತೀಕ್ಷಾಳಿಗಂತೂ ಆಕಾಶದಲ್ಲಿ ತೇಲುತ್ತಿರುವಂತೆ ಭಾಸವಾಯಿತು. ಈವರೆಗೆ ಅವಳು ಕನಸಿನಲ್ಲಷ್ಟೇ ಸಿಂಗಾಪೂರ ಪ್ರವಾಸದ ಅನುಭವ ಪಡೆದಿದ್ದಳು. ಆದರೆ ಅದೀಗ ನಿಜವಾಗುತ್ತಿರುವುದು ಬಹಳ ಖುಷಿಯನ್ನು ಉಂಟು ಮಾಡಿತ್ತು. ಕಳೆದ ವರ್ಷವಷ್ಟೇ ಅವಳ ಆಪ್ತ ಗೆಳತಿ ಮೇಘಾ ಸಿಂಗಾಪೂರ್‌ ನಲ್ಲಿ ತನ್ನ ಹನಿಮೂನ್‌ ಟೂರ್‌ ಮುಗಿಸಿಕೊಂಡು ಬಂದಿದ್ದಳು. ತನಗೂ ಇಂತಹ ಅವಕಾಶ ಬಂದರೆ ಎಷ್ಟು ಚೆನ್ನಾಗಿರುತ್ತೆ ಎಂದು ಅವಳು ಯೋಚಿಸಿದ್ದಳಷ್ಟೇ. ಆದರೆ ಅದು ಈಗ ಅದೂ ಇಷ್ಟು ಬೇಗ ನಿಜ ಆಗಬಹುದು ಎಂದು ಅವಳು ಕನಸು ಮನಸ್ಸಿನಲ್ಲೂ ಎಣಿಸಿರಲಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ