ಗಣಿತ ಎಂದರೆ, ಕಬ್ಬಿಣದ ಕಡಲೆ ಎಂದೇ ಭಾವಿಸಿ ಭಯಪಡುತ್ತಿದ್ದ ಜಾನಕಿ, ಸದಾ ಶಾಲೆ ತಪ್ಪಿಸುತ್ತಿದ್ದಳು. ಅವಳ ಭಯ ನಿವಾರಣೆಗೊಂಡು ಗಣಿತದಲ್ಲಿ ಆಸಕ್ತಿ ಬಂದದ್ದು ಹೇಗೆ......?

ಐದು ಗಂಟೆಗೆ ಶಾಲೆ ಬಿಟ್ಟಾಗಲೇ ದಟ್ಟವಾದ ಮೋಡ ಕವಿದಿತ್ತು. ಪುಸ್ತಕದ ಬ್ಯಾಗ್‌ ನ್ನು ಹೆಗಲಿಗೆ ತೂಗು ಹಾಕಿಕೊಂಡು, ಕೈಯಲ್ಲಿ ಊಟದ ಬಾಕ್ಸ್ ಹಿಡಿದುಕೊಂಡು, ಉದ್ದನೆಯ ಲಂಗವನ್ನು ಮೇಲಕ್ಕೆ ಸಿಕ್ಕಿಸಿಕೊಂಡು ಮನೆಯ ದಾರಿ ಹಿಡಿದರು ಸುಮಾ, ಸುಧಾ ಮತ್ತು ಜಾನಕಿ. ಸುರಿಯುತ್ತಿರುವ ಮಳೆ, ಹರಿಯುತ್ತಿರುವ ನೀರು, ಸುಂಯ್ಯನೆ ಬೀಸುವ ಗಾಳಿ.... ಕಾಲಿನಿಂದ ನೀರನ್ನು ಚಿಮ್ಮುತ್ತಾ ನಡೆಯುತ್ತಿದ್ದ ಅವರಿಗೆ ಮನೆ ಸೇರುವುದೇ ಮುಖ್ಯ ಗುರಿಯಾಗಿತ್ತು.

ಮಟ್ಟಿ ಮನೆ ಮಲೆನಾಡ ಒಂದು ಸಣ್ಣ ಹಳ್ಳಿ. ಸುತ್ತಲೂ ಬೆಟ್ಟಗುಡ್ಡಗಳಿಂದ ಕೂಡಿದ ರಸ್ತೆ, ವಿದ್ಯುತ್‌ ದೀಪಗಳಿಲ್ಲದ ಕುಗ್ರಾಮ ಎಂದರೆ ತಪ್ಪಾಗಲಾರದು. ಒಂದು ಕಿ.ಮೀ. ದೂರದ ಪ್ರಾಥಮಿಕ ಶಾಲೆಯಲ್ಲಿ ನಾಲ್ಕನೇ ತರಗತಿ ಮುಗಿಸಿದ ಸುಮಾ, ಸುಧಾ, ಜಾನಕಿಯರು ಐದನೇ ತರಗತಿಗೆ ಕಾಂಚನಗಿರಿಗೆ ಹೋಗಬೇಕಾಗಿತ್ತು. ಒಂದೇ ವಾರಿಗೆಯವರಾದ ಇವರು ಚಿಕ್ಕಂದಿನಿಂದಲೂ ಒಟ್ಟಿಗೆ ಶಾಲೆಗೆ ಹೋಗುತ್ತಿದ್ದರು, ಒಟ್ಟಾಗಿ ಆಟವಾಡುತ್ತಿದ್ದರು.

ಪ್ರತಿ ವರ್ಷ ನಡೆಯುವ ಕೆಂಚಮ್ಮನ ಜಾತ್ರೆಗೂ, ಪಾರ್ವತಮ್ಮನ ಬೆಟ್ಟದ ಜಾತ್ರೆಗೂ ಒಟ್ಟಾಗಿಯೇ ಹೋಗಿ ಬರುತ್ತಿದ್ದರು. ಬೆಟ್ಟ ಹತ್ತಿ, ಕಾಡು ದಾಟಿ ಕಾಫಿ ತೋಟದ ನಡುವೆ ಸಾಗಿ ಶಾಲೆ ಸೇರಲು ಅವರಿಗೆ ಒಂದೂವರೆ ಗಂಟೆ ಸಮಯ ಬೇಕಾಗುತ್ತಿತ್ತು. ಕಲ್ಲು ಮುಳ್ಳುಗಳಿಂದ ಕೂಡಿದ ಹಾದಿ ಮಳೆಗಾಲದಲ್ಲಿ ಅಕ್ಕಪಕ್ಕದ ಗಿಡಗಳು ಬೆಳೆದು ದಾರಿಗೆ ಅಡ್ಡವಾಗಿ ಇರುತ್ತಿದ್ದವು.

ಸಂಜೆ ಮಳೆ ಧೋ ಎಂದು ಸುರಿಯಲಾರಂಭಿಸಿತು. ಆಕಾಶದ ತುಂಬೆಲ್ಲ ಕಪ್ಪು ಮೋಡ. ವಾತಾವರಣವೆಲ್ಲ ಕತ್ತಲೋ ಕತ್ತಲು. ಹಿಡಿದಿದ್ದ ಮರದ ದೊಡ್ಡ ಕೊಡೆಯ ಮೇಲೆ ಬಿದ್ದ ನೀರಿನ ಹನಿಗಳು ಟಪ್‌ ಟಪ್‌ ಟಪ್‌ ಎಂದು ಸದ್ದು ಮಾಡುತ್ತಿದ್ದವು. ಗಾಳಿ ಮಳೆಯ ಅಬ್ಬರಕ್ಕೆ ಒಬ್ಬರ ಮಾತು ಮತ್ತೊಬ್ಬರಿಗೆ ಕೇಳಿಸುತ್ತಿರಲಿಲ್ಲ. ಕಾಫಿ ತೋಟದ ಮರಗಳಲ್ಲಿ ಕುಳಿತು ಜೀರ್‌ ಜೀರ್‌ ಸದ್ದು ಮಾಡುವ ಕಣ್ಣಿಗೆ ಕಾಣದ ಹುಳುಗಳು. ಅವು ಹೇಗಿರಬಹುದೆಂದು ಹುಡುಕಿ, ಅವು ಕಾಣದೆ ಎಷ್ಟೋ ಬಾರಿ ನಿರಾಶರಾಗಿದ್ದರು.

ಅಷ್ಟರಲ್ಲಿ ಕಾಫಿ ತೋಟದ ಕೆಲಸ ಮುಗಿಸಿದ ಕೂಲಿಯಾಳುಗಳು ಹಲಸಿನ ಹಣ್ಣನ್ನು ಕತ್ತರಿಸಿ ತಿನ್ನುತ್ತಿದ್ದರು. ಪಾಪ ಮಕ್ಕಳಿಗೂ ಕೊಡಿ ಎಂದು ಯಾರೋ ಹೇಳಿದರು. ಇವರಿಗೂ ಹಣ್ಣುಗಳನ್ನು  ಕೊಟ್ಟರು. ಮಧ್ಯಾಹ್ನ ತಿಂದ ತಿಂಡಿ ಯಾವಾಗಲೋ ಕರಗಿ ಹೋಗಿದ್ದರಿಂದ ಅವರು ಕೊಟ್ಟ ಹಲಸಿನ ಹಣ್ಣನ್ನು ತಿಂದ ಕೂಡಲೇ ದೇಹದಲ್ಲಿ ಹೊಸ ಶಕ್ತಿ ಬಂದಂತಾಗಿ, ಗೆಳತಿಯರು ಮನೆಯ ಕಡೆಗೆ ಬಿರಬಿರನೆ ಹೆಜ್ದೆ ಹಾಕಿದರು. ತಾವು ನೆನೆದರೂ ಪುಸ್ತಕದ ಬ್ಯಾಗು ನೆನೆಯಬಾರದೆಂದು ಜೋಪಾನವಾಗಿ ಬ್ಯಾಗನ್ನು ಹಿಡಿದು ಸಾಗಿದರು.

``ಇವತ್ತು ಶ್ರಾವಣ ಶನಿವಾರ. ನಮ್ಮೇನಲಿ ಶ್ಯಾವಿಗೆ, ಕೋಳಿ ಸಾರು ಮಾಡು ಎಂದು ತಾತ ಅವ್ವನ ಬಳಿ ಹೇಳ್ತಾ ಇದ್ರು,'' ಎಂದಳು ಜಾನಕಿ.

``ನಮ್ಮನೇಲು ಇವತ್ತು ಶ್ರಾವಣ,'' ಎಂದಳು ಸುಧಾ. ಹೀಗೆ ಮಾತನಾಡುತ್ತ ಮುಂದೆ ಸಾಗಿದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ