ಮಳೆ ಸುರಿದು ನಿಂತಿತ್ತು, 3 ದಿನಗಳ ನಂತರ ಇಂದು ಆಕಾಶ ಸ್ವಚ್ಛವಾಗಿ ಕಾಣುತ್ತಿತ್ತು. ಕಿಟಕಿಯಿಂದ ಹೊರಗೆ ಇಣುಕುತ್ತಿದ್ದ ಕವಿತಾಳ ದೃಷ್ಟಿ ಇಂದು ಪುಸ್ತಕದ ಮೇಲಿರಲಿಲ್ಲ. ಈಗ ಆಕಾಶದಲ್ಲಿ ಕಪ್ಪು ಮೋಡಗಳು ಕಾಣುತ್ತಿರಲಿಲ್ಲ. ಆದರೆ ಕವಿತಾಳ ಮನದಲ್ಲಿ ವಿಚಾರಗಳ ದಟ್ಟ ಮೋಡಗಳು ಸುತ್ತುತ್ತಿದ್ದವು. ಇಂದು ಅವಳಿಗೆ ಓದಲು ಮನಸ್ಸಿರಲಿಲ್ಲ. ಅವಳು ಎಂ.ಬಿ.ಬಿ.ಎಸ್‌.ನ ಕೊನೆಯ ವರ್ಷದಲ್ಲಿದ್ದಳು.

ಅವಳು ಮೊದಲಿನಿಂದಲೂ ಬುದ್ಧಿವಂತ ವಿದ್ಯಾರ್ಥಿನಿಯಾಗಿದ್ದಳು. ಅವಳಿಗೆ ಪರೀಕ್ಷೆಯ ಬಗ್ಗೆ ಯಾವುದೇ ಆತಂಕ ಅಥವಾ ಒತ್ತಡ ಇರಲಿಲ್ಲ. ಆದರೂ ಅವಳ ಮನಸ್ಸು ಒತ್ತಡದಿಂದ ತುಂಬಿತ್ತು. ಅದಕ್ಕೆ ಬಲವಾದ ಕಾರಣಗಳಿದ್ದವು.

ಇದ್ದಕ್ಕಿದ್ದಂತೆ ಕವಿತಾಳ ಗಮನ ಅಡುಗೆಮನೆಯತ್ತ ಹೋಯಿತು. ಅಮ್ಮ ಅಪ್ಪನ ಫೇವರಿಟ್‌ ಪೂರಿ ಸಾಗು ಮಾಡುತ್ತಿದ್ದರು. ಕವಿತಾಗೆ ಕೋಪ ಬಂತು. ಅಮ್ಮ ಇನ್ನೂ ಅಪ್ಪನ ಇಷ್ಟಾನಿಷ್ಟಗಳನ್ನು ಗಮನಿಸುವುದೇಕೆ? ಅದರ ಅಗತ್ಯವೇನು? ಆದರೆ ಅಮ್ಮ ಅದನ್ನೆಲ್ಲಾ ಅರ್ಥ ಮಾಡಿಕೊಳ್ಳುವುದಿಲ್ಲ.

ಶತಮಾನಗಳಿಂದ ಮಹಿಳೆಯ ಮನದಲ್ಲಿ ಬಿತ್ತಿದ ಬೀಜ ಅಷ್ಟು ಬೇಗ ಹಾಳಾಗುವುದಿಲ್ಲ. ಸೇವಾನಿರತೆ, ಸಹನಶೀಲೆ, ತ್ಯಾಗಶೀಲೆ, ಸ್ನೇಹಶೀಲೆ ಇವೆಲ್ಲ ಗುಣವಿಶೇಷಣಗಳನ್ನು ಶತಮಾನಗಳಿಂದ ತಲೆಗೆ ತುಂಬಿಕೊಂಡಿರುವ ಮಹಿಳೆಯರು ಮೌನವಾಗಿ ಸಾಗುತ್ತಿರುತ್ತಾರೆ. ಇವೇ ವಿಶೇಷಣಗಳ ಮೂಲಕ ಪುರುಷ ಅವರನ್ನು ಎಷ್ಟು ಶೋಷಿಸುತ್ತಿದ್ದಾನೆಂದು ಬಡಪಾಯಿ ಮಹಿಳೆಯರಿಗೇನು ಗೊತ್ತು?

ಕವಿತಾಳ ಮನದಲ್ಲಿ ಅಮ್ಮನಿಗಾಗಿ ಕರುಣೆ ಉಕ್ಕಿ ಬರುತ್ತಿತ್ತು. ಇಲ್ಲ, ಅಮ್ಮನ ಶೋಷಣೆಯಾಗಲು ಬಿಡುವುದಿಲ್ಲ. ಸರಳತೆಯ  ಮೂರ್ತಿಯಾದ ಅವಳ ತಾಯಿ ಜೀವನದಲ್ಲಿ ಒಮ್ಮೆ ಮಾತ್ರ ಬಂಡಾಯವೆದ್ದಿದ್ದರು. ಆ ಬಂಡಾಯದಿಂದಲೇ ತಾನು ಈ ಜಗತ್ತಿಗೆ ಬಂದಿದ್ದು. ಆತ್ತೆ ಹಾಗೂ ಗಂಡನ ಎದುರಿಗೆ ಒಮ್ಮೆ ಮಾತ್ರ ಬಾಯಿ ತೆರೆದಿದ್ದರು. ಆ ಸಮಯದಲ್ಲಿ ಆಕೆಗೆ ಅಷ್ಟು ಧೈರ್ಯ ಹೇಗೆ ಬಂದಿರಬಹುದು? ಇದುವರೆಗೆ ಕವಿತಾಗೆ ಅರ್ಥವಾಗಿರಲಿಲ್ಲ. ಮಾತೃತ್ವದ ತಾಕತ್ತೇ ಅದು. ಮಗಳು ಹುಟ್ಟಿದ ನಂತರ ಅಪ್ಪನಿಗೆ ಹೆಚ್ಚಿನ ಆರ್ಥಿಕ ಲಾಭ ಉಂಟಾಗಿತ್ತು. ಬಹುಶಃ ಈ ಕಾರಣದಿಂದಲೇ ಅಪ್ಪ ಮಗಳನ್ನು ಲಕ್ಷ್ಮೀ ಎಂದು ಭಾವಿಸುತ್ತಿದ್ದರು.

ಹಾಗೆ ನೋಡಿದರೆ ಅವರಿಗೆ ಮಗ ಬೇಕಾಗಿತ್ತು. ಮಗಳು ಹುಟ್ಟಿದ ನಂತರ ಅಪ್ಪನಿಗೆ ವೃತ್ತಿಯಲ್ಲಿ ಉನ್ನತಿಯಾಗುತ್ತಾ ಹೋಯಿತು. ಹೀಗಾಗಿ ಕವಿತಾ ಅಪ್ಪನ ಮುದ್ದಿನ ಮಗಳಾದಳು. ಮೆಡಿಕಲ್ ಕಾಲೇಜ್‌ ಸೇರಿದ ಮೇಲಂತೂ ಅಪ್ಪ ಸ್ವರ್ಗವೇ ಧರೆಗಿಳಿದಂತೆ ಕುಣಿದಿದ್ದರು. ಅವರು ಒಂದು ದೊಡ್ಡ ಪಾರ್ಟಿ ಇಟ್ಟುಕೊಂಡಿದ್ದು ಎಲ್ಲರೊಂದಿಗೆ, ``ನನಗಂತೂ ಮೊದಲಿನಿಂದಲೂ ಮಗಳೇ ಬೇಕೆನಿಸಿತ್ತು. ಹೆಣ್ಣು ಮಕ್ಕಳು ಮನೆಯಲ್ಲಿ ಬೆಳದಿಂಗಳಂತೆ ಇರುತ್ತಾರೆ. ಕವಿತಾ ನಮ್ಮ ಮನೆಯ ನಂದಾದೀಪ,'' ಎನ್ನುತ್ತಿದ್ದರು.

ಇನ್ನೂ ಏನೇನೋ ಹೇಳುತ್ತಿದ್ದರು. ಹತ್ತಿರದಲ್ಲಿ ಇದ್ದ ಅವರ ಹೆಂಡತಿ ಮಾತಾಡದೇ ಕೇಳುತ್ತಿದ್ದರು ಹಾಗೂ ಮನದಲ್ಲೇ ಮುಗುಳ್ನಗುತ್ತಿದ್ದರು. ಯಾರಾದರೂ ಅರ್ಥ ಮಾಡಿಕೊಳ್ಳಲಿ ಬಿಡಲಿ, ಆ ಮುಗುಳ್ನಗೆಯನ್ನು ಕವಿತಾ ಅರ್ಥ ಮಾಡಿಕೊಂಡಿದ್ದಳು. ಒಂದುವೇಳೆ ಕವಿತಾ ಹುಟ್ಟಿದ ನಂತರ ಏನಾದರೂ ನಷ್ಟವಾಗಿದ್ದರೆ ಅವಳನ್ನೇ ಗುರಿಯಾಗಿಸುತ್ತಿದ್ದರು.

ಆದರೆ ಈ ಮಾತುಗಳಲ್ಲದೆ ಅವಳಪ್ಪ ಇನ್ನೊಂದು ಆಟ ಆಡುತ್ತಿದ್ದರು. ಆದರ ನೇರ ಪ್ರಭಾವ ಅವಳ ತಾಯಿಯ ಜೀವನದ ಮೇಲೆ ಆಗುತ್ತಿತ್ತು. ಕವಿತಾ ಬಹಳ ಹೊತ್ತು ತನ್ನ ಆಲೋಚನೆಗಳಲ್ಲೇ ಮುಳುಗಿದ್ದಳು. ಅವಳು ಪದೇ ಪದೇ ಅಮ್ಮನನ್ನು ನೋಡುತ್ತಿದ್ದಳು ಹಾಗೂ ಈ ರೀತಿ ಯೋಚಿಸುತ್ತಿದ್ದಳು, `ಅಮ್ಮನ ಮನಸ್ಸಿನಲ್ಲಿ ಲಕ್ಷಾಂತರ ಗೊಂದಲಗಳಿವೆ. ಆದರೂ ಅವರೆಂದೂ ಬಾಯಿ ಬಿಡುವುದಿಲ್ಲ. ಅಮ್ಮನ ಬಗ್ಗೆ ನನಗೆ ಚೆನ್ನಾಗಿ ಗೊತ್ತು.'

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ