``ಹಾಯ್‌ ಶೀಲಾ, ನನ್ನ ಜ್ಞಾಪಕ ಇದೆಯಾ?'' ಶೀಲಾಳನ್ನು ದೂರದಿಂದ ನೋಡಿದ ಶಶಾಂಕ್‌ ಹತ್ತಿರ ಬಂದು ಕೇಳಿದ.

``ಶಶಾಂಕ್‌, ನಿನ್ನ ಜ್ಞಾಪಕ ಇಲ್ಲಾಂದ್ರೆ ಇನ್ಯಾರು ಜ್ಞಾಪಕ ಇರ್ತಾರೆ?''

ಶೀಲಾಳ ಸ್ವರದಲ್ಲಿನ ವ್ಯಂಗ್ಯ ಶಶಾಂಕ್‌ಗೆ ತಿಳಿಯಿತು. ಆದರೂ ಹೇಳಿದ, ``ಇಷ್ಟು ವರ್ಷಗಳ ಬಳಿಕ ನಿನ್ನನ್ನು ಭೇಟಿಯಾಗಿದ್ದು ಖುಷಿಯಾಯಿತು. ಹೇಗಿದೆ ಲೈಫ್? ನೀನಂತೂ ಎಂದೂ ನಿನ್ನ ಬಗ್ಗೆ ಹೇಳಿಕೊಂಡಿಲ್ಲ. ಇಷ್ಟು ದಿನ ಎಲ್ಲಿದ್ದೆ?''

``ಹೇಳಿಕೊಳ್ಳೋಕೇ ಏನೂ ಇರಲಿಲ್ಲ. 7-8 ವರ್ಷ ಆಸ್ಟ್ರೇಲಿಯಾದಲ್ಲಿ ಇದ್ದು ಕಳೆದ ವರ್ಷ ಇಲ್ಲಿಗೆ ಬಂದ್ವಿ.''

``ನಿನ್ನ ಬಗ್ಗೆ ನಿನ್ನ ಮನೆಯವರ ಬಗ್ಗೆ ಹೇಳು. ನಮ್ಮ ಬ್ಯಾಂಕ್‌ನ ಎಲ್ಲಾ ಫ್ರೆಂಡ್ಸ್ ನೆಟ್‌ನಲ್ಲಿ ತಮ್ಮ ಬಗ್ಗೆ ಹಂಚಿಕೊಳ್ತಾರೆ. ನೀನು ಎಲ್ಲೋ ಕಳೆದುಹೋಗಿದ್ದೆ. ನಮ್ಮ ನೆನಪೂ ಬರಲಿಲ್ಲ,'' ಶಶಾಂಕ್‌ ನಗುತ್ತಾ ಹೇಳಿದ.

``ಶಶಾಂಕ್‌, ಕಾಲೇಜ್‌ ಲೈಫ್‌ನ ಮರೆಯೋಕಾಗುತ್ತಾ? ಅದು ಎಲ್ಲರ ಜೀವನದಲ್ಲಿ ಅತ್ಯಂತ ಸುಂದರ ಅನುಭವ ತರುತ್ತೆ. ನೀನು ಹೇಗಿದ್ದೀಯಾ ಹೇಳು. ಇಷ್ಟು ದಿನ ಏನು ಸಾಧಿಸಿದೆ? ಏನನ್ನು ಕಳೆದುಕೊಂಡೆ?''

``ಹ್ಞೂಂ.... 2 ಮದುವೆ, 1 ವಿಚ್ಛೇದನ. ಒಳ್ಳೆಯ ನೌಕರಿ ಇದೆ. ಇದಕ್ಕಿಂತ ಹೆಚ್ಚು ಹೇಳೋಕೆ ಏನೂ ಇಲ್ಲ,'' ಶಶಾಂಕ್‌ಉದಾಸನಾಗಿ ಹೇಳಿದ.

``ಬದುಕು ನಿನ್ನ ಜೊತೆ ಸರಿಯಾಗಿ ವರ್ತಿಸಲಿಲ್ಲ ಅನ್ನಿಸುತ್ತೆ. ಅಪೇಕ್ಷೆಗಳು ಪೂರೈಸಲಿಲ್ಲ ಅಂದ್ರೆ ಇಂಥ ನಿರಾಶೆಯ ಮಾತುಗಳೇ ಬರುತ್ತವೆ.''

``ಹೌದು ಮತ್ತು ಇಲ್ಲ. ನನ್ನ ಜೀವನದಲ್ಲಿ ನಡೆದಿರೋ ಘಟನೆಗೆ ಎಲ್ಲೋ ಒಂದು ಕಡೆ ನಾನೂ ದೋಷಿ. ಹೌದೋ ಅಲ್ವೋ?'' ಶಶಾಂಕ್‌ ಶೀಲಾಳಿಂದ ತನ್ನ ಪ್ರಶ್ನೆಗೆ ಉತ್ತರ ಬಯಸಿದ್ದ. ಆದರೆ ಶೀಲಾ ಉತ್ತರಿಸುವ ಮೂಡ್‌ನಲ್ಲಿರಲಿಲ್ಲ. ಹೀಗಾಗಿ ಅವಳು ಬೇರೆ  ಮಿತ್ರರ ಬಳಿ ಸಾಗಿದಳು.

ಹಳೆಯ ವಿದ್ಯಾರ್ಥಿಗಳು 10 ವರ್ಷಗಳ ನಂತರ ಮತ್ತೆ ಭೇಟಿಯಾಗುತ್ತಿದ್ದರು. ಶೀಲಾಗೆ ಅನೇಕ ಪರಿಚಿತ ಮುಖಗಳು ಕಣ್ಣಿಗೆ ಬೀಳುತ್ತಿದ್ದವು. ಆಯೋಜಕರು ಮೊದಲು ಸಾಂಸ್ಕೃತಿಕ ಕಾರ್ಯಕ್ರಮ ನಂತರ ಡಿನ್ನರ್‌ ಏರ್ಪಡಿಸಿದ್ದರು.

ಎಲ್ಲರೂ ತನ್ನ ತಮ್ಮ ಜಾಗಗಳಲ್ಲಿ ಕೂರಬೇಕೆಂದು ಆಯೋಜಕರು ಹೇಳಿದಾಗ ಶೀಲಾ ತನ್ನ ಗೆಳತಿಯರೊಂದಿಗೆ ತನಗೆ ಮೀಸಲಾಗಿದ್ದ ಜಾಗದಲ್ಲಿ ಕುಳಿತುಕೊಂಡಳು. ಆಗಲೇ ಆ ದೊಡ್ಡ ಹಾಲ್‌ನ ಮುಖ್ಯದ್ವಾರದಿಂದ ನಳಿನಿಯ ಪ್ರವೇಶವಾಯಿತು. ಸುಮಾರು 10 ವರ್ಷಗಳ ನಂತರ ನಳಿನಿಯನ್ನು ಕಂಡು ನಿನ್ನೆ ತಾನೇ ಮಾತಾಡಿದಂತೆ ಶೀಲಾಗೆ ಅನ್ನಿಸಿತು. ವಯಸ್ಸಿನೊಂದಿಗೆ ಮುಖ ಕೊಂಚ ಊದಿಕೊಂಡಿದ್ದು ಬಿಟ್ಟರೆ ನಳಿನಿ ಇನ್ನೇನೂ ಬದಲಾಗಿರಲಿಲ್ಲ.

ಸೀಕ್ವೆನ್ಸ್ ಗಳೊಂದಿಗೆ ಜರಿ ವರ್ಕ್‌ ಮಾಡಿದ್ದ ಗೋಲ್ಡನ್‌ ಕಲರ್‌ ಸೀರೆಯನ್ನು ಹೊಕ್ಕುಳ ಕೆಳಗೆ ಉಟ್ಟು, ಚೆನ್ನಾಗಿ ಅಲಂಕರಿಸಿಕೊಂಡಿದ್ದ ನಳಿನಿ ಫಿಲ್ಮ್ ಸ್ಟಾರ್‌ನಂತೆ ಕಂಗೊಳಿಸುತ್ತಿದ್ದಳು. ಶೀಲಾ ಇಷ್ಟಪಟ್ಟರೂ ಕುರ್ಚಿಯಿಂದ ಏಳಲಿಲ್ಲ. ಹಿಂದೆ ನಳಿನಿಯೊಂದಿಗೆ ಶೀಲಾಳ ಒಡನಾಟ ಹೇಗಿತ್ತೆಂದರೆ ಅವರಿಬ್ಬರನ್ನೂ ಗೆಳತಿಯರು ದೇಹವೆರಡು ಪ್ರಾಣ ಒಂದು ಎನ್ನುತ್ತಿದ್ದರು. ಈಗ 10 ವರ್ಷದ ಗ್ಯಾಪ್‌ ಜೊತೆಗೆ ಮಾನಸಿಕ ದೂರ ಸೇರಿ ಶೀಲಾ ಏಳದೆ ಕುಳಿತಿದ್ದಳು.

ನಳಿನಿ ತನ್ನ ಇತರ ಮಿತ್ರರೊಂದಿಗೆ ಮಾತನಾಡುತ್ತಾ ಹಳೆಯ ನೆನಪುಗಳನ್ನು ತಾಜಾ ಮಾಡಿಕೊಳ್ಳುತ್ತಾ ಒಬ್ಬರ ಕೈ ಕುಲುಕುತ್ತಿದ್ದಳು, ಇನ್ನೊಬ್ಬರನ್ನು ಆಲಂಗಿಸುತ್ತಿದ್ದಳು, ಯಾರಿಗಾದರೂ ಮುತ್ತಿಕ್ಕಿ ಕೃತಾರ್ಥರನ್ನಾಗಿಸುತ್ತಿದ್ದಳು. ಶೀಲಾಳ ಕುತೂಹಲ ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿತ್ತು. ನಳಿನಿಯ ಸ್ಲೀವ್ ಲೆ‌ಸ್‌, ಬ್ಯಾಕ್‌ಲೆಸ್‌ ಬ್ಲೌಸ್‌ ಮತ್ತು ಹೊಳೆಯುವ ಶೃಂಗಾರವನ್ನು ಗಮನವಿಟ್ಟು ನೋಡಿ ಗಾಢ ಆಲೋಚನೆಯಲ್ಲಿ ಮುಳುಗಿದಳು. ಶೀಲಾ ಶೂನ್ಯದಲ್ಲಿ ದೃಷ್ಟಿಯಿಟ್ಟು 12 ವರ್ಷಗಳ ಹಿಂದಿನ ಕಾಲೇಜು ಜೀವನದ ದಿನಗಳಲ್ಲಿ ಮುಳುಗಿಹೋದಳು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ