ಕಥೆ ಡಾ. ವಿನುತಾ ರಾವ್

ಬೇರೆಯವರಿಂದ ಪ್ರೀತಿ ಹಾಗೂ ಗೌರವಾದರ ಗಳಿಸಲು ಅಜ್ಜಿ ರೂಪಾಳಿಗೆ ಯಾವ ತಾರಕಮಂತ್ರ ಹೇಳಿಕೊಟ್ಟರು? ಅದರಿಂದ ಅವಳು ತಾನು ಬಯಸಿದ್ದನ್ನು ಪಡೆದದ್ದು ಹೇಗೆ.......?

ಸವಿತಾ ಒಂದು ಪತ್ರಿಕೆ ಹಿಡಿದು ಹೊರಗಿನ ಹಾಲ್ ‌ಗೆ ಬಂದು ಸೋಫಾದಲ್ಲಿ ಕುಳಿತರು. ಆಕೆಗೆ ವಾರಪತ್ರಿಕೆ, ಮಾಸಪತ್ರಿಕೆ ಹೀಗೆ ಏನೋ ಒಂದಿಷ್ಟು ಕನ್ನಡ ಸಾಹಿತ್ಯದ ನಂಟು ಅಗತ್ಯ ಬೇಕಿತ್ತು. ರಮಾ ಬಂದು ಅಲ್ಲಿದ್ದ ಟೀಪಾಯಿ ಮೇಲೆ ಟೀ ಇರಿಸಿ ಹೋದಳು. ರಮಾಗೆ ಸೆಪರೇಟ್‌ ಆಗಿ ಏನೂ ಹೇಳುವುದೇ ಬೇಡ, ಎಲ್ಲವನ್ನೂ ತಾನೇ ನೋಡಿ ಮಾಡಿ ಅರ್ಥ ಮಾಡಿಕೊಳ್ಳುವಳು. ಅವಳು ಮನಗೆಲಸಕ್ಕೆಂದು ಬಂದ ಹೊಸದರಲ್ಲಿ 2 ದಿನ ಹೀಗ್ಹೀಗೆ ನಿಭಾಯಿಸು ಅಂತ ಹೇಳಿದ್ದಷ್ಟೆ, ಬೆರಳು ತೋರಿದರೆ ಹಸ್ತ ನುಂಗುವ ಸ್ವಭಾವದ ರಮಾ ಚುರುಕಾಗಿ ಎಲ್ಲವನ್ನೂ ತಾನೇ ಮಾಡತೊಡಗಿದಳು.

``ಪಾಪೂಗೆ ಇವತ್ತು ಏನು ಮಾಡಿ ಕೊಡ್ಲಿ ಅಮ್ಮಾ.....?'' ರಮಾ ಕೇಳಿದಳು.

``ಬೆಳಗ್ಗೆ ಅವಳು ಮಾಮೂಲಿ ಬಿಸಿ ಊಟ ಮಾಡಿಕೊಂಡೇ ಹೋಗ್ತಾಳೆ, ಸಂಜೆ ಅವಳು ಬರುನ ಹೊತ್ತಿಗೆ ಅನಲಕ್ಕಿ ಅಥವಾ ಶ್ಯಾವಿಗೆ ಉಪ್ಪಿಟ್ಟು ಏನೋ ಒಂದು ಮಾಡಿಡು,'' ಎಂದರು ಸವಿತಾ.

ರಮಾ ಸಹ ತನ್ನ ಕಪ್‌ ಹಿಡಿದುಕೊಂಡು ಬಂದು ಅವರೆದುರು, ವರಾಂಡಾದ ಮೂಲೆಗೆ ಒರಗಿ ಕುಳಿತಳು. ಇಬ್ಬರ ಕಪ್ ತೆಗೆದುಕೊಂಡು ತೊಳೆಯಲು ಹಾಕಿ, ತನ್ನ ಅಡುಗೆ ಕೆಲಸ ಮುಂದುವರಿಸಿದಳು.

ಸವಿತಾರ ಮಗ ಸೊಸೆ ಇಬ್ಬರೂ ಬೆಂಗಳೂರಿನ ಪ್ರಖ್ಯಾತ ನರ್ಸಿಂಗ್‌ ಹೋಮ್ ನಲ್ಲಿ ವೈದ್ಯರಾಗಿದ್ದರು. ಇವರ ಮಗ ಡಾ. ಸಂತೋಷ್‌ ಆರ್ಥೊಪೆಡಿಕ್‌ ಸರ್ಜನ್‌ ಆದರೆ, ಸೊಸೆ ಡಾ. ಆರತಿ ಗೈನಕಾಲಜಿಸ್ಟ್ ಆಗಿ ಹೆಸರು ಗಳಿಸಿದ್ದಳು. ಇವರದೇ ನರ್ಸಿಂಗ್ ಹೋಂ, ಹೀಗಾಗಿ ಇವರಿಬ್ಬರಿಗೂ ಬಹಳ ಹೆಚ್ಚಿನ ಜವಾಬ್ದಾರಿಗಳಿದ್ದವು. ಒಮ್ಮೆ ಮಗ, ಒಮ್ಮೆ ಸೊಸೆ ಅಥವಾ ಒಮ್ಮೊಮ್ಮೆ ಇಬ್ಬರೂ ಮನೆಗೆ ಬರದೆ ರಾತ್ರಿ ಅಲ್ಲಿಯೇ ಉಳಿಯುವಂತಾಗುತ್ತಿತ್ತು.

ಆಸ್ಪತ್ರೆಯಲ್ಲಿ ರೋಗಿಗಳು ಸದಾ ಗಿಜಿಗುಟ್ಟುತ್ತಿದ್ದರು. ಹೀಗಾಗಿ ಈ ವೈದ್ಯ ದಂಪತಿಗಳು ಮನೆ ಸೇರುವುದಿರಲಿ, ಹೊತ್ತಿಗೆ ಊಟ ಕಾಣುವುದೂ ದುಸ್ತರಾಗುತ್ತಿತ್ತು. ಹೀಗಾಗಿ ಅವರ ಮಗಳು ರೂಪಾಳಿಗೆ 5 ತುಂಬಿದ ಮೇಲೂ, ಎರಡನೇ ಮಗು ಆಗಮಿಸುವ ಸೂಚನೆ ಕಾಣದಿದ್ದಾಗ, ಸೂಕ್ಷ್ಮ ಅರಿತ ಸವಿತಾ ಒಬ್ಬಳೇ ಮೊಮ್ಮಗಳು ರೂಪಾಳನ್ನೇ ಸರ್ವಸ್ವ ಎಂದು ಅರಿತು, ಅವಳ ಪೂರ್ತಿ ಜವಾಬ್ದಾರಿ ತಾವೇ ವಹಿಸಿಕೊಂಡರು. ತಾಯಿ ತಂದೆಯರ ಬಳಿ ಮಕ್ಕಳಿಗೆ ಕೊಡಲು ಸಮಯಲೇ ಇಲ್ಲದಾಗ 1 ಮಗು ಆದ ಮೇಲೆ ಸುಮ್ಮನಿರುವುದೇ ಸರಿ, ಇಬ್ಬರು ಮೂವರು ಮಕ್ಕಳಾದರೆ ಮುಂದೆ ಅವರನ್ನು ನೋಡಿಕೊಳ್ಳುವವರಾರು? ಮಗನ ಮದುವೆಗೆ ಮೊದಲೇ ಇವರು ಪತಿಯನ್ನು ಕಳೆದುಕೊಂಡಿದ್ದರು. ಸದಾ ಆಸ್ಪತ್ರೆಯಲ್ಲಿ ಬಿಝಿಯಾಗಿರುತ್ತಿದ್ದ ಮಗ, ಸೊಸೆಗಿಂತ ಅವರು ಪುಟ್ಟ ಮೊಮ್ಮಗಳನ್ನು ಹಚ್ಚಿಕೊಂಡಿದ್ದೇ ಜಾಸ್ತಿ.

ಅಸಲಿಗೆ ರೂಪಾ ಹುಟ್ಟಿದ ನಂತರ ಇವರ ಒಂಟಿತನ ಸಂಪೂರ್ಣ ದೂರವಾಗಿತ್ತು. 3 ತಿಂಗಳ ಮಗುವನ್ನು ಅತ್ತೆಗೊಪ್ಪಿಸಿ, ಸೊಸೆ ತನ್ನ ಕರ್ತವ್ಯದ ಕರೆಗಾಗಿ ಹೊರಟು ನಿಂತಳು. ಅದೂ ಕೊರೋನಾ ಕಾಲ. ಹೀಗಾಗಿ ಆಸ್ಪತ್ರೆಯ ವರ್ಕ್‌ ಲೋಡ್‌ ಡಬ್ಬಲ್ ಆಗಿತ್ತು. ಮನೆಗೆಲಸಕ್ಕೆಂದು ಹಿಂದೆ ಸಾವಿತ್ರಮ್ಮ ಇದ್ದರು. ಅಡುಗೆ ಮುಗಿಸಿ, ಇವರ ಮನೆಯಲ್ಲೇ ಉಳಿದು ಸುತ್ತು ಕೆಲಸ ನೋಡಿಕೊಳ್ಳುತ್ತಿದ್ದರು. ಅವರು ಮಗಳ ಮದುವೆ ಗೊತ್ತಾದಾಗ, 3 ತಿಂಗಳು ಬರಲಾಗದು ಎಂದು ಊರಿಗೆ ಹೊರಟು ನಿಂತರು. ಆಗಿನಿಂದ ರಮಾ ಇವರ ಬಲಗೈ ಭಂಟಳಾಗಿ ಆ ಮನೆಯ ಜವಾಬ್ದಾರಿ ಹೊತ್ತಿದ್ದಳು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ