ಕಥೆ -ಶಿಲ್ಪಾ

ತನಗೆ ಗಂಡು ಮಗು ಹುಟ್ಟಲಿಲ್ಲವೆಂಬ ಕೊರಗಿನಲ್ಲಿ ಶ್ರೀಧರ ಒಳಗೇ ಕುಗ್ಗಿ ಹೋಗುತ್ತಿದ್ದ. ಇಬ್ಬರೂ ಹೆಣ್ಣುಮಕ್ಕಳು, ಅದರಲ್ಲೂ ಒಬ್ಬಳು ಅಂಗವಿಕಲೆ. ಮುಂದೆ ಅವನಲ್ಲಿ ಆತ್ಮವಿಶ್ವಾಸ ಹೆಚ್ಚುವಂತೆ ಅವನ ಮಗಳು ನಡೆದುಕೊಂಡದ್ದಾದರೂ ಹೇಗೆ…..?

``ಏನಾಯ್ತು ನಿಮಗೆ? ಒಳ್ಳೆ ಬಾಲ ಸುಟ್ಟ ಬೆಕ್ಕಿನ ಹಾಗೆ ಅಷ್ಟು ಹೊತ್ತಿನಿಂದ ಓಡಾಡುತ್ತಿದ್ದೀರಿ, ಮಲಗಬಾರದಾ?'' ಹಾಲ್‌ನಲ್ಲೇ  ಅತ್ತಿಂದಿತ್ತ ಕಾಲೆಳೆಯುತ್ತಾ ಓಡಾಡುತ್ತಿದ್ದ ಗಂಡನನ್ನು ಕೇಳಿದಳು ಮಾಲಿನಿ.

``ವನಿತಾ ಇನ್ನೂ ಮನೆಗೆ ಬಂದಿಲ್ವಾ...''

``ಬರ್ತಾಳೆ. ಇವತ್ತೇನು ಹೊಸದೇ?''

``ಬಾಗಿಲು ತೆಗೀಬೇಕು.''

``ದಿನಾ ನಾನೇ ಅಲ್ವೇ ತೆಗೆಯೋದು... ತೆಗೀತೀನಿ. ನೀವು ಹೋಗಿ ಮಲಗಿ.''

``ನಾನು ತೆಗೆದರೆ ಏನಾಗುತ್ತೆ? ಇವತ್ತು ನಾನೇ ತೆಗೀತೀನಿ. ನೀನೇ ಹೋಗಿ ಮಲಗು,'' ಪುಟ್ಟ ಮಕ್ಕಳು ಹಠ ಮಾಡುವಂತೆ ಮಾತಾಡಿದ ಗಂಡನನ್ನೇ ಅಚ್ಚರಿಯಿಂದ ನೋಡಿದ ಮಾಲಿನಿ, ``ಸರಿ, ತೆಗೀರಿ, ನನಗೇನಂತೆ,'' ಎನ್ನುತ್ತಾ ಒಳನಡೆದಳು.

ಹುಸಿ ಕೋಪ ಬೀರಿ ಒಳ ನಡೆದ ಹೆಂಡತಿಯನ್ನೇ ನೋಡುತ್ತಿದ್ದ ಶ್ರೀಧರ ಪುನಃ ಓಡಾಡಲಾರದೆ ಕುಳಿತ. ಈಗ ಅವನ ಮನಸ್ಸು ಮಗಳ ಕಡೆಗೆ ಓಡಿತು. ಮಗಳು ಬೇಗ ಮನೆಗೆ ಬಂದು ಎಷ್ಟು ದಿನಗಳಾಗಿರಬಹುದು? ದಿನ.... ತಿಂಗಳು.... ವರ್ಷ..... ಉಹ್ಞೂಂ ಸರಿಯಾಗಿ ನೆನಪಿಲ್ಲ. ಆದರೂ ತಾನು ನಿಶ್ಚಿಂತೆಯಿಂದ ಇದ್ದೆ. ಹೌದು. ಇಂದು ಸಂಜೆಯವರೆಗೆ, ಆ ಮುರಳೀಧರ ಎಲ್ಲರೆದುರಿಗೆ  ಸಿಕ್ಕು ಆ ಮಾತನ್ನು ಹೇಳುವವರೆಗೆ.

ಶ್ರೀಧರನ ಮನದಲ್ಲಿ ಸಂಜೆಯ ಘಟನೆ ಸುಳಿಯಿತು. ಬೇಸರವೆಂದು ಹತ್ತಿರದ ಪಾರ್ಕ್‌ವರೆಗೆ ನಡೆದು ಅಲ್ಲಿಯ ಕಟ್ಟೆಯ ಮೇಲೆ ಕುಳಿತಿದ್ದ ಅವನನ್ನು ಮುರಳೀಧರ ಎಲ್ಲರೆದುರಿಗೆ ಕೆದಕಿದ್ದ, ``ಅಂತೂ ನಿನ್ನ ಕೈಲಿ ಆಗದ ಕೆಲಸ ನಿನ್ನ ಮಗಳು ಮಾಡಿದ್ದಾಳೆ.''

``ಏನಪ್ಪ ಅದು?'' ಅವನು ಯಾವ ವಿಷಯದ ಬಗ್ಗೆ ಹೇಳುತ್ತಿದ್ದಾನೆ ಎಂಬುದು ತಿಳಿಯದೆ ಗಲಿಬಿಲಿಕೊಂಡ ಶ್ರೀಧರ.

``ಅದೇ, ನಿನ್ನ ಮಗಳಿಗೆ ಗಂಡು ಹುಡುಕುವ ಕೆಲಸ.''

ಇತರರು ತನ್ನ ಅಸಮರ್ಥತೆಯನ್ನು ಎತ್ತಿ ತೋರಿಸುತ್ತಿರುವಂತೆ, ಮುಸುಮುಸು ನಗುತ್ತಿರುವಂತೆ ಭಾಸವಾಯಿತು ಅವನಿಗೆ.

``ನೀನು ಏನು ಹೇಳುತ್ತಿದ್ದೀಯೋ ನನಗಂತೂ ಅರ್ಥ ಆಗ್ತಿಲ್ಲ. ಬಿಡಿಸಿ ಹೇಳಬಾರದೇ?'' ಶ್ರೀಧರ ತನ್ನ ಅಸಹಾಯಕತೆಯನ್ನು ಪ್ರದರ್ಶಿಸಿದ.

``ನಿಜವಾಗಲೂ! ಯಾಕೆ, ನಿನ್ನ ಮಗಳು ದಿನಾ ರಾತ್ರಿ ಲೇಟಾಗಿ ಬರೋದು ನಿನಗೆ ಗೊತ್ತಿಲ್ವೇ?''

``ಗೊತ್ತು, ಅದು.... ಅವಳು....''

``ಅದೇ, ಅವಳು ಯಾರ ಜೊತೆ ಬರ್ತಾಳೇನ್ನೋದು?''

``ಯಾರ ಜೊತೆ?''

``ಒಬ್ಬ ಯುವಕ ದಿನಾ ರಾತ್ರಿ ಅವಳನ್ನು ಮನೆವರೆಗೆ ಬಿಡೋದು... ನಿಜವಾಗಲೂ ನಿಂಗೊತ್ತಿಲ್ವಾ?'' ಮತ್ತೆ ಅನುಮಾನದ ಧ್ವನಿ.

``ಇಲ್ಲ... ಗೊತ್ತಿಲ್ಲ.''

``ಸರಿ ಬಿಡು. ಹಾಗಾದರೆ ನೀನು ನಿಜವಾಗಲೂ ಮನೇಲಿ ಆಟಕ್ಕುಂಟು, ಲೆಕ್ಕಕ್ಕಿಲ್ಲದವನ ಹಾಗೆ.''

ಆಗ ಮಾತ್ರ ಎಲ್ಲರೂ ಸ್ವಲ್ಪ ಜೋರಾಗಿಯೇ ನಕ್ಕರು.

`ಥತ್‌, ನನ್ನ ಈ ಪರಿಸ್ಥಿತಿಗೆ ಅವಳೇ ಕಾರಣ,' ಅವನು ಜೋರಾಗಿ ಕೈ ಬೀಸಿದಾಗ ಅದು ಪಕ್ಕದ ಗೋಡೆಗೆ ಬಡಿದು ನೋವಾದಾಗ ವಾಸ್ತವಕ್ಕೆ ಬಂದ. ಆ ಮುರಳೀಧರ ಇವತ್ತು ಎಲ್ಲರೆದುರಿಗೆ ನನ್ನ ಮಾನ ಕಳೆದ, ಅಸಲು ನಾನು ಅಲ್ಲಿಗೆ ಹೋಗಲೇಬಾರದಾಗಿತ್ತು. ಎಲ್ಲಾ ತನ್ನಿಚ್ಛೆಯಂತೆಯೇ ನಡೆದಿದ್ದರೆ ಆ ದಿನ ತಾನು ಅಲ್ಲಿಗೆ ಹೋಗುವ ಪ್ರಮೇಯವೇ ಬರುತ್ತಿರಲಿಲ್ಲ. ಹಾಳಾದ್ದು, ಎಲ್ಲಾ ನನ್ನ ಹಣೆಬರಹ. ಶ್ರೀಧರನ ಮನದಲ್ಲಿ ಅವನ ಗತ ಸುಳಿಯಿತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ