ನೀಳ್ಗಥೆ - ಅಹಲ್ಯಾ  ಮಧುಸೂದನ್ 

ಎಂದಿನಂತೆ ಶಾಲೆಯಿಂದ ಮನೆಗೆ ಹಿಂದಿರುಗಿದ ರೋಹಿತ್‌ ಆಟೋದಿಂದ ಇಳಿಯದೆಯೇ ಜೋರಾಗಿ ಕಿರುಚಿದ, ``ಅಮ್ಮಾ...... ಅಮ್ಮಾ... ರಾಜಣ್ಣನಿಗೆ ಬೇಗ ಹಣ ಕೊಡು ಬಾ!'' ತಕ್ಷಣ ಆಟೋದವನ ಕಡೆ ತಿರುಗಿ, ``ರಾಜಣ್ಣ.... ಒಂದು ನಿಮಿಷ ಇರು.... ಅಮ್ಮನ ಹತ್ತಿರ ಈಗಲೇ ದುಡ್ಡು ತರ್ತೀನಿ,'' ಎಂದು ಒಂದೇ ನೆಗೆತದಲ್ಲಿ ಮನೆಯ ಒಳಗೋಡಿದ.

``ಇರ್ಲಿ ಬಿಡಪ್ಪ.... ನಾಳೆ ತಗೊಂತೀನಿ, ಇನ್ನೊಂದು ಕಡೆ ಅರ್ಜೆಂಟ್‌ ಪಿಕಪ್‌ ಇದೆ,'' ಎನ್ನುತ್ತಾ ರಾಜಣ್ಣ  ಬೇಗ ಆಟೋ ಸ್ಟಾರ್ಟ್‌ ಮಾಡಿ ಹೊರಟೇಬಿಟ್ಟ.

`ಇದೇಕೆ ನಾನು ಕೂಗಿದ್ದು ಅಮ್ಮನಿಗೆ ಕೇಳಿಸಲೇ ಇಲ್ಲ...?' ಎಂದುಕೊಳ್ಳುತ್ತಾ ಮನೆಯೊಳಗೆ ನುಗ್ಗಿದವನೇ ಎಡಗಾಲಿನ ಶೂ ಸೋಫಾ ಕೆಳಗೆ, ಬಲಗಾಲಿನ ಶೂ ಟೀಪಾಯಿ ಕೆಳಗೆ ದೂಡಿದವನೇ, ಬ್ಯಾಗನ್ನು ಮೇಜಿನ ಮೇಲೆಸೆದು, ``ಅಮ್ಮಾ....'' ಎನ್ನುತ್ತಾ ಆಕೆಯ ಕೋಣೆಗೆ ಓಡಿದ. ಮನೆಯಲ್ಲಿ ಎಲ್ಲಿ ಹುಡುಕಿದರೂ ಅಮ್ಮನ ಸುಳಿವೇ ಇಲ್ಲ! `ಈ ಅಮ್ಮ ಎಲ್ಲಿಗೆ ಹೋದಳು?' ಎಂದು ಯೋಚಿಸುತ್ತಾ ನೀರು ಕುಡಿಯಲೆಂದು ಅಡುಗೆಮನೆಯ ಫ್ರಿಜ್‌ ಬಳಿ ಚಿಂತಾಕ್ರಾಂತನಾಗಿ ನಿಂತ.

ಅದನ್ನು ಕಂಡು ಮನೆಯ ಆಳು ರಾಮು, ``ರೋಹಿತ್‌ ಪುಟ್ಟ.... ಅಮ್ಮನ್ನ ಹುಡುಕ್ತಿದ್ದೀಯಾ? ಅವರು ಇದ್ದಕ್ಕಿದ್ದಂತೆ ಮೈಸೂರಿಗೆ ಹೊರಡಬೇಕಾಯ್ತು.... ಮಧ್ಯಾಹ್ನ ಹೊರಟರು,'' ಎಂದ.

``ಅದನ್ನು ಮೊದಲೇ ಹೇಳಬಾರದಾ ರಾಮಣ್ಣ....? ಆಗಿನಿಂದ ನಾನು ಅಮ್ಮನ್ನ ಹುಡುಕುತ್ತಾ ಇದ್ದೀನಿ,'' ರೋಹಿತ್‌ ಕೋಪದಲ್ಲಿ ಹೇಳಿದ.

``ಅಗತ್ಯ ಬಿದ್ದರೆ ನಿನಗೆ ವಿಷಯ ತಿಳಿಸಬೇಕು ಅಂತ ಅಪ್ಪಾಜಿ ಫೋನ್‌ ಮಾಡಿದ್ರು.... ಬೇಕಾದ್ರೆ ನೀನು ಒಂದು ಸಲ ಅಪ್ಪಾಜಿಗೆ ಫೋನ್‌ ಮಾಡಿಬಿಡು.''

ಅಪ್ಪಾಜಿ ಹೆಸರು ಬಂದಿದ್ದರಿಂದ ರೋಹಿತ್‌ ಇದ್ದಕ್ಕಿದ್ದಂತೆ ಸುಮ್ಮನಾದ. ಅವನ ಕ್ಷಣಿಕ ಕೋಪ ಮಾಯಾವಾಯಿತು. ಯಾಕೋ ಮನಸ್ಸಿಗೆ ಪಿಚ್ಚೆನಿಸಿತು. ಮನೆಯಲ್ಲಿ ಉಸಿರು ಕಟ್ಟಿದಂತಾಗಲು ಅವನು ಹೊರಗೆ ಬಂದು ಲಾನ್‌ನಲ್ಲಿ ಕುಳಿತ.

`ಸಾಮಾನ್ಯವಾಗಿ ಅಮ್ಮ ನನ್ನ ಯಾವ ಮಾತಿಗೂ ಕೋಪ ಮಾಡಿಕೊಳ್ಳುವವಳಲ್ಲ. ಹಾಗಿರುವಾಗ ಇವತ್ತು ಅಮ್ಮನಿಗೆ ಇದ್ದಕ್ಕಿದ್ದಂತೆ ಹೊರಡಲು ಅಂಥ ಅವಸರ ಏನಿತ್ತು ಅಥವಾ ನನ್ನ ಮೇಲೆ ಕೋಪವೇ? ಇದನ್ನು ಯಾರ ಬಳಿ ಕೇಳುವುದು? ಏನೆಂದು ಕೇಳುವುದು? ಅಪ್ಪಾಜಿ ಬಳಿ ಅಂತೂ ಮಾತನಾಡುವ ಹಾಗೆ ಇಲ್ಲ...' ತನ್ನಲ್ಲೇ ಯೋಚಿಸುತ್ತಿದ್ದ ಆ ಪುಟ್ಟ ಪೋರನಿಗೆ ಅಪ್ಪಾಜಿ ಎಂದರೆ ಮಹಾ ಭಯ.

ಅಮೂಲ್ಯ ಉಡುಗೊರೆ

ಎದುರು ಮನೆಯ ಡಾಕ್ಟರ್‌ ಆಂಟಿ ಯಾವುದಕ್ಕಾಗಿಯೋ ಹೊರಗೆ ಬಂದರು, ಇವನನ್ನು ಕಂಡವರೇ ಇವರ ಮನೆಯತ್ತ ಧಾವಿಸಿ ಬಂದರು. ಇವನ ತಲೆಗೂದಲಲ್ಲಿ ಬೆರಳಾಡಿಸುತ್ತಾ, ``ರೋಹಿ, ಅಮ್ಮ ನಿನಗೆ ಹೇಳದೆ ಹೊರಟುಬಿಟ್ಟರು ಅಂತ ಬೇಜಾರು ಮಾಡಿಕೊಂಡ್ಯಾ? ಹೋಗಲಿ ಬಿಡಪ್ಪ, ಬಹಳ ಅವಸರದಲ್ಲಿದ್ದರು. ಬಾ ನಮ್ಮ ಮನೆಗೆ ಹೋಗೋಣ. ಒಂದಷ್ಟು ಹೊಸ ವಿಡಿಯೋ ಗೇಮ್ಸ್ ಬಂದಿವೆ ನೋಡ್ತೀಯಂತೆ.... ಮತ್ತೆ ಏನಾದ್ರೂ ಹೋಂವರ್ಕ್‌ ಬಾಕಿ ಇದ್ಯಾ, ಅದನ್ನೂ ಕಂಪ್ಲೀಟ್‌ ಮಾಡೋಣ. ಮತ್ತೆ ಇವತ್ತು ನಿನ್ನ ಇಷ್ಟದ ವೆಜ್‌ ಪಲಾವ್ ಮಾಡಿಸಿದ್ದೀನಿ. ಡ್ರೈ ಜಾಮೂನ್‌ ಜೊತೆ ತಿಂತೀಯಾ? ಬಾ ಹೋಗೋಣ....'' ಎಂದು ಅಕ್ಕರೆಯಿಂದ ಹೇಳಿದರು. ರೋಹಿತನಿಗೆ ಅಮ್ಮನ ಮೇಲೆ ಎಲ್ಲಿಲ್ಲದ ಕೋಪ ಬಂತು. ಎದುರುಮನೆ ಆಂಟಿ ಬಂದು ತನಗೆ ಅಮ್ಮನ ವಿಷಯ ಹೇಳುವುದೇ? ಛೇ...ಛೇ..!

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ