ಮಸಣ ಕಾಯುತ್ತಿದ್ದ ಪತಿಯ ಅಕಾಲಿಕ ಮರಣದಿಂದ ಒಬ್ಬಂಟಿಯಾದ ಮಾಣಿಕ್ಯಾ, ಮುಂದೆ ತನ್ನ ಜೀವನ ನಡೆಸಲು ಪತಿಯ ಕಾಯಕವನ್ನೇ ಮುಂದುವರಿಸಿದಳು. ಕರ್ತವ್ಯನಿಷ್ಠ ಹೆಣ್ಣಿನ ಮಾನವೀಯತೆ ಎಲ್ಲವನ್ನೂ ಮೀರಿದ್ದು......!

``ಮಾಣಿಕ್ಯಾ..... ಏ ಮಾಣಿಕ್ಯಾ.... ಕೂಸೂ ಶಾನೇ ಅಳ್ತಾ ಇದೆ, ಒಸಿ ಬಂದು ಒಯ್ತೀಯಾ....?'' ಅತ್ತೆಯಿಂದ ಬಂದ ಕೂಗಿಗೆ ಪ್ರತಿಯಾಗಿ, ``ಬಂದೇ ಕಣ್ವಾ ಬಂದೇ....?'' ಎನ್ನುತ್ತಾ ತನ್ನಷ್ಟೇ ಎತ್ತರ ಇರುವ ಕೋಲಿನಿಂದ ಉರಿಯುತ್ತಿದ್ದ ಹೆಣದ ಆಜೂಬಾಜು ಬೀಳುತ್ತಿದ್ದ ಕಟ್ಟಿಗೆಗಳನ್ನು ಸರಿ ಮಾಡುತ್ತಾ ಉತ್ತರಿಸಿದಳು ಮಾಣಿಕ್ಯಾ.

ಈಗ ಎರಡು ವರ್ಷಗಳ ಹಿಂದಷ್ಟೇ  ಈ ಮಾಣಿಕ್ಯಾ ವೀರಪ್ಪನ ಕೈ ಹಿಡಿದಿದ್ದಳು. ವೀರಪ್ಪನದು ವಂಶ ಪಾರಂಪರಿಕವಾಗಿ ಬಂದಿತ್ತು ಈ ಹೆಣ ಸುಡುವ ವೃತ್ತಿ. ವಾಸ ಮಸಣದ ಕಾಂಪೌಂಡ್‌ ಮೂಲೆಯೊಂದರಲ್ಲಿ ಟಿನ್‌ ಶೀಟುಗಳಿಂದ ಜೋಡಿಸಿದ ಪುಟ್ಟ ಮನೆ. ಕಳೆದ ಐದು ತಿಂಗಳ ಕೆಳಗೆ ವಿಪರೀತ ಜ್ವರದ ಬಾಧೆಗೆ ಬಲಿಯಾದ ವೀರಪ್ಪ, ತನ್ನ ಒಂದು ವರ್ಷದ ಮಗು ಮತ್ತು ತಾಯಿಯ ಜವಾಬ್ದಾರಿಯನ್ನು ಮಾಣಿಕ್ಯಾಳ ಹೆಗಲಿಗೆ ಹಾಕಿ ಶಿವನ ಪಾದ ಸೇರಿದ್ದ.

ಸಂಸಾರದ ನೊಗ ಹೊತ್ತ ಮೂವತ್ತರ ಹರೆಯದ ಮಾಣಿಕ್ಯಾ ತುಂಬಾ ಗಟ್ಟಿಗಿತ್ತಿ. ಅಸಾಧಾರಣ ಧೈರ್ಯವಂತೆ, ದಿನದ ಯಾವ ಘಳಿಗೆಯಲ್ಲಾದರೂ ಸರಿ, ದಹನಕ್ಕೆ ಯಾ ದಫನ್‌ ಗೆ ಹೆಣ ಬಂದರೂ ಬೇಸರಿಸದೇ ಅಚ್ಚುಕಟ್ಟಾಗಿ ತನ್ನ ಕರ್ತವ್ಯವನ್ನು ತೃಪ್ತಿಯಿಂದ ನಿರ್ವಹಿಸುತ್ತಿದ್ದಳು. ದಹನ/ದಫನ್‌ ಕೆಲಸ ಮುಗಿದ ನಂತರ ಯಾವತ್ತಿಗೂ ಅದಕ್ಕೆ ಸಂಬಂಧಪಟ್ಟವರ ಎದುರು ಕೈಯೊಡ್ಡಿ ಕಾಸು ಕೇಳಿದವಳಲ್ಲ, ಹಾಗೇನಾದರೂ ಒಂದು ಪಕ್ಷ ಅವರಾಗಿಯೇ ಕೊಟ್ಟರೆ ಅದೆಷ್ಟಿದೆ ಎಂದು ನೋಡದೇ, `ಶಿವಾ,' ಎನ್ನುತ್ತಾ ಅದನ್ನು ಪಡೆದು ಕೈ ಮುಗಿಯುತ್ತಿದ್ದಳು.

ಸರ್ಕಾರ ಒಂದು ಹೆಣಕ್ಕೆ ಇಂತಿಷ್ಟು ಎಂದು ಹಣ ನಿಗದಿಪಡಿಸಿತ್ತು. ಹೀಗಾಗಿ ಬರುವ ಆದಾಯದಲ್ಲಿ ತೃಪ್ತಿಯಿಂದ ಜೀವನ ಸಾಗಿಸುತ್ತಿದ್ದಳು. ಪತಿಯ ಮರಣದ ನಂತರ ತನ್ನ ಕೆಲಸದ ಸಹಾಯಕ್ಕೆ ಇವರವೊಂದು ಸಂಬಂಧಿಗಳ ಪೈಕಿ ಒಬ್ಬ ವಯಸ್ಸಾದ ವ್ಯಕ್ತಿಯನ್ನು ಗೊತ್ತುಪಡಿಸಿಕೊಂಡಿದ್ದಳು.

ಹುಟ್ಟಿ ಬಂದ ಮೇಲೆ ಸಾವು, ಯಾರಿಗೆ ಯಾವಾಗ, ಎಷ್ಟೆಷ್ಟು ಜನಕ್ಕೆ ಬರುತ್ತದೆ ಎಂಬುದು ಯಕ್ಷಪ್ರಶ್ನೆ ಅಲ್ಲವೇ? ಹೀಗಾಗಿ ಕೆಲವೊಂದು ದಿನ ಒಂದರ್ಧ ಗಂಟೆ ಕೂಡ ಬಿಡುವಿಲ್ಲದೇ ಮಾಣಿಕ್ಯಾಳಿಗೆ ದುಡಿಯಬೇಕಾಗಿ ಬರುತ್ತಿತ್ತು. ಅಂತೆಯೇ ತೀರಾ ಅಪರೂಪಕ್ಕೆ ಎನ್ನುವಂತೆ ಒಂದೊಂದು ದಿನ ಪೂರ್ತಿ ಬಿಡುವು ಸಿಕ್ಕಿದ್ದೂ ಉಂಟು. ಅಂತಹ ದಿನಗಳಲ್ಲಿ ಅವಳು ಮಸಣದ ಸ್ವಚ್ಛತೆ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದಳು.

ಹೀಗೆ ಒಂದು ದಿನ ಸೂರ್ಯೋದಯದಿಂದ ಆರಂಭವಾದ ಮಾಣಿಕ್ಯಾಳ ಕಾಯಕ, ರಾತ್ರಿಯ ಹನ್ನೆರಡಾದರೂ ಸಾಗುತ್ತಲೇ ಇತ್ತು. ಒಂದಿನಿತೂ ಬಿಡುವಿಲ್ಲದ ಕೆಲಸದಿಂದ ಅವಳ ದೇಹ, ಮನಸ್ಸು ಸಹಜವಾಗಿ ವಿಶ್ರಾಂತಿ ಬಯಸತೊಡಗಿತ್ತು. ಆ ದಿನ ಕೊನೆಯಲ್ಲಿ ಬಂದವರ ಕಾರ್ಯ ಪೂರೈಸಿ, ಅವರನ್ನು ಬೀಳ್ಕೊಟ್ಟು, `ಉಸ್ಸಪ್ಪಾ' ಎಂದು ದೀರ್ಘ ಉಸಿರು ಬಿಡುತ್ತಾ ಮನೆಗೆ ಬಂದು, ಹಸಿದ ಹೊಟ್ಟೆ ತಣಿಸಿ, ಚಾಪೆ ಮೇಲೆ ಮಲಗಿ, ದಿಂಬಿಗೆ ತಲೆಕೊಟ್ಟು ಇನ್ನೇನು ನಿದ್ರೆಗೆ ಜಾರಬೇಕು ಎನ್ನುವಷ್ಟರಲ್ಲಿ ರಾತ್ರಿಯ ನೀರವತೆ ಸೀಳಿ ಯಾರೋ ಬಿಕ್ಕಿ ಬಿಕ್ಕಿ ಅಳುತ್ತಿರುವ ಶಬ್ದ ಕೇಳಿಸಿಕೊಂಡು ಪುನಃ ಎದ್ದು ಮೂಲೆಯಲ್ಲಿದ್ದ ಕೋಲು, ಟಾರ್ಚ್‌ ನೊಂದಿಗೆ ಆಚೆಗೆ ಬಂದಳು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ