ಕಥೆ - ವಸಂತಾ ವಿನೋದ್‌ 

ಮದುವೆಯಾದ ಮೇಲೆ ಮೊದಲ ಸಲ ಮಾಯಾ ಮಾಧವನ ಜೊತೆ ಅವನ ಮನೆಗೆ ಬಂದಾಗ ಎಷ್ಟೋ ವಿಷಯಗಳು ಅವಳನ್ನು ನಿರೀಕ್ಷಿಸುತ್ತಿದ್ದವು

ಮಾಯಾ ಬೆಚ್ಚಿದಳು. ಹೃದಯ ಬಡಿತ ಅರೆಕ್ಷಣ ನಿಂತಂತಾಯಿತು. ತಾನು ನೋಡುತ್ತಿರುವುದು ಸತ್ಯವೇ? ಇದು ಸುಳ್ಳಾಗಿದ್ದರೆ ಸತ್ಯವೇನು? ಮದುವೆಯಾದ ಮೇಲೆ ಮಾಯಾ ಮೊದಲ ಸಲ ಗಂಡನ ಮನೆಗೆ ಬಂದಿದ್ದಳು. ಮಾಧವನ ರಜಾ ಮುಗಿಯುತ್ತ ಬಂದಂತೆ ಅವನು ಮಾಯಾಳನ್ನು ಮನೆಯವರ ಇಚ್ಛೆಗೆ ವಿರುದ್ಧವಾಗಿ ಕರೆತಂದಿದ್ದ. ಮಾಯಾಗೂ ಅದೇ ಇಷ್ಟವಿತ್ತು. ಯಾವ ನವವಿವಾಹಿತೆ ತಾನೆ ತನ್ನ ಗಂಡನಿಂದ ದೂರ ಇರಲು ಇಷ್ಟ ಪಡುತ್ತಾಳೆ? ಮಾಯಾ ಅಂದುಕೊಂಡಿದ್ದಕ್ಕಿಂತ ಮನೆ ಕೊಳಕಾಗಿತ್ತು. ಯಾವ ವಸ್ತುವೂ ತನ್ನ ಜಾಗದಲ್ಲಿರಲಿಲ್ಲ. ಮಾಧವ ಇಲ್ಲದಿದ್ದಾಗ ಯಾರೋ ಕಳ್ಳ ಬಂದು ಸಾಮಾನುಗಳನ್ನೆಲ್ಲಾ ಚೆಲ್ಲಾಪಿಲ್ಲಿಯಾಗಿ ಮಾಡಿದ್ದಂತೆ ಕಾಣಿಸುತ್ತಿತ್ತು. ಅವಳಿಗೆ ನಗು ಬಂತು.

``ಇಲ್ಲ, ಇಲ್ಲ. ಯಾವ ಕಳ್ಳನೂ ಬಂದಿಲ್ಲ. ಎಲ್ಲಾ ಸಾಮಾನು ಹಾಗೇ ಇವೆ. ಹೊರಡುವ ಮೊದಲು ಎಲ್ಲಾ ಸರಿಯಾಗಿಡಲು ಸಮಯವೇ ಸಿಗಲಿಲ್ಲ,'' ಎಂದ ಮಾಧವ.

``ನೀವು ಇಷ್ಟು ಕೊಳಕು ಅಂತ ನನಗೆ ಗೊತ್ತಿರಲಿಲ್ಲ.'' ಮಾಯಾ ನಕ್ಕಳು

``ಸರಿಯಾಗಿಡಲು ತಿಂಗಳುಗಳೇ ಬೇಕಾಗುತ್ತೆ.''

``ಪರವಾಗಿಲ್ಲ, `ಕೆಲಸವಿಲ್ಲದ ಮೆದುಳು ಸೈತಾನನ ಮನೆ ಅಂತ,' ಹೇಳ್ತಾರಲ್ಲ. ಇಡೀ ದಿನ ಕೆಲಸ ಇದ್ದರೆ ಮೆದುಳು ಒಳ್ಳೆಯದನ್ನೇ ಯೋಚಿಸುತ್ತೆ.''

``ನನಗೆ ಕೆಲಸದಲ್ಲಿ ವ್ಯಸ್ತಳಾಗುವುದು ಬರುತ್ತೆ. ಇವತ್ತು ರಾತ್ರಿ ಊಟ ಹೊರಗೆ ಮಾಡೋದು ತಾನೇ?'' ಎಂದಳು ಮಾಯಾ.

``ಹೌದು ಮತ್ತೆ. ಆದರೆ ದಿನಾಲೂ ಅಲ್ಲ.''

ರಜೆ ಮುಗಿದಿತ್ತು. ಸಾಮಾನು ತರಿಸಿ ಬೆಳಗಿನ ತಿಂಡಿ ಮಾಡಿ ಮಾಧವನಿಗೆ ಕೊಟ್ಟು ನಂತರ ಮಸಾಲೆ ರೊಟ್ಟಿ ಮಾಡಿ ಮಧ್ಯಾಹ್ನದ ಊಟಕ್ಕೆಂದು ಡಬ್ಬಿಯಲ್ಲಿ ಹಾಕಿಟ್ಟಳು.

ಸ್ನಾನ ಮಾಡಿ ಮಾಯಾ ಬಟ್ಟೆಯ ಬೀರು ತೆರೆದಳು. ಬೀರು ಅಲ್ಲ ಅದು. ಬಟ್ಟೆಯ ಉಗ್ರಾಣವಾಗಿತ್ತು. ಅವಳ ಬಾಯಿ ಸೊಟ್ಟಗಾದರೂ ಮನದಲ್ಲೇನೋ ಖುಷಿಯೂ ಇತ್ತು. ಸಿನಿಮಾಗಳಲ್ಲಿ ನೋಡಿದ್ದು ಈಗ ವಾಸ್ತವ ರೂಪದಲ್ಲಿ ಎದುರಾಗಿದೆ. ಬಟ್ಟೆಗಳನ್ನು ಓರಣವಾಗಿ ಜೋಡಿಸಿದಳು. ಕೆಲವನ್ನು ಮೇಲಿನ ಹ್ಯಾಂಗರ್‌ಗಳಿಗೆ ಹಾಕಿದಳು. ಕೆಳಗೆ ಎರಡು ಖಾನೆಗಳಿದ್ದವು. ಒಂದರಲ್ಲಿ ಕೆಲವು ಕಾಗದಗಳು, ಚೀಟಿಗಳು, ರಸೀದಿಗಳು, ಮುರಿದ ಪೆನ್ನುಗಳು, ಗುಂಡಿಗಳು ಇತ್ಯಾದಿ ಇದ್ದವು.

ಪ್ರತಿಯೊಬ್ಬ ಹೆಂಗಸು ಮೊದಲ ಸಲ ಅತ್ತೆ ಮನೆಗೆ ಬಂದಾಗ ತನ್ನ ಪತಿಯ ಗುಟ್ಟುಗಳೇನಾದರೂ ಇವೆಯೇ ಎಂದು ತಿಳಿಯಬಯಸುತ್ತಾಳೆ. ಮದುವೆಯಾಗುವವರೆಗೆ ಎಲ್ಲರೂ ಮುಖವಾಡ ಹಾಕಿಕೊಂಡಿರುತ್ತಾರೆ. ಮದುವೆಯಾದ ಮೇಲೆ ಪತಿಯ ನಿಜವಾದ ವ್ಯಕ್ತಿತ್ವ ಗೊತ್ತಾಗುತ್ತದೆ. ಪತಿಯ ಬಗ್ಗೆ ಎಲ್ಲಾ ವಿಷಯ ತಿಳಿದುಕೊಳ್ಳಲು ಪತ್ನಿಗೆ ಕುತೂಹಲ ಇರುತ್ತದೆ. ಇದನ್ನು ಪತ್ತೆದಾರಿಕೆ ಎನ್ನಬಹುದಾದರೂ ಇದು ನ್ಯಾಯವಾಗಿದೆ.

ಖಾನೆಯಲ್ಲಿ ಕಾರ್ಡುಗಳು ತುಂಬಿದ್ದವು. ಒಂದು ಕಾರ್ಡನ್ನು ತೆಗೆದುಕೊಂಡು ಮೂಸಿದಳು. ಅದರಿಂದ ಸುಗಂಧ ಬರುತ್ತಿತ್ತು. ಎರಡನೇದು, ಮೂರನೇಯದನ್ನು ಮೂಸಿದಾಗಲೂ ಸುವಾಸನೆ ಬಂತು. ಆಳವಾಗಿ ಉಸಿರೆಳೆದುಕೊಂಡಳು. ಒಂದು ಕಾರ್ಡನ್ನು ಓದಿದಳು. ಅವಳಿಗೆ ಬೆಚ್ಚುವಂತಾಯಿತು. ಹೃದಯಬಡಿತ ನಿಂತ ಹಾಗಾಯಿತು.

ಪ್ರಿಯ ಮಾಯಾ, ಎಷ್ಟು ದಿನದಿಂದ ನಿನ್ನ ಪತ್ರವನ್ನು ನಿರೀಕ್ಷಿಸುತ್ತಿದ್ದೇನೆ. ಫೋನ್‌ ಮಾಡಿದೆ. ನೀನು ಮನೆಯಲ್ಲಿರಲಿಲ್ಲ. ನನ್ನನ್ನು ಇನ್ನೂ ಸತಾಯಿಸಬೇಡ. ನೀನಿಲ್ಲದೆ ಜೀವನ ಅಪೂರ್ಣವೆನ್ನಿಸುತ್ತದೆ. ಏನು ಕಾರಣ ಇದ್ದರೂ ಸರಿ ಹೇಳು. ನಾನು ಹೋರಾಡಲೂ ಸಿದ್ಧನಾಗಿದ್ದೇನೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ