ಸಿಹಿ ...! ಮಗುಗೆ ಹೊಟ್ಟೆ ತುಂಬಾ ಹಾಲು ಕುಡಿಸೋದನ್ನು ನಾನು ಹೇಳ್ಬೇಕಾ....? "ಬೆಳಿಗ್ಗೆ ಒಂದು ಟೈಮ್ ಅಷ್ಟೇ ಎದೆ ಹಾಲು ಕುಡಿಸೋದು ಅದು ನಿನ್ ಕೈಲಿ ಆಗಲ್ವಾ? " ಎಂದು ಕೋಪ ಮಾಡುತ್ತಿದ್ದ ಶಾರದಮ್ಮನವರಿಗೆ ಮಗಳು ಸಿಹಿ ಕೊಟ್ಟ ಉತ್ತರ. ಅಮ್ಮ, ನನ್ನ ಬ್ಯೂಟಿ ಎಲ್ಲ ಹಾಳಾಗ್ತಾ ಇದೆ ನೀನು ನೋಡುದ್ರೆ ಹಾಲು ಕುಡಿಸು ಅಂತಾ ನನ್ನ ಹಿಂದೆ ಇರ್ತೀಯ ಆಫೀಸ್ ಹೋಗೋ ಟೈಮ್ ಅಲ್ಲಿ ಸರಿ ಕ್ಯಾಬ್ ಬಂತು ನಾನು ಹೊರಡ್ತೀನಿ. ಬಾಟಲ್ ಹಾಲು ಕುಡಿಸು ಬೈ ಬೈ ಎಂದು ಹೇಳಿ ಹೊರಟೆ ಬಿಟ್ಟಳು.
ಶಾರದಮ್ಮನವರಿಗೆ ಮಗಳ ವರ್ತನೆಯಿಂದ ಬೇಸರವಾಯಿತು. ಇವಳು ಮಾಡ್ತಾ ಇರೋದು ಏಕೋ ಸರಿ ಕಾಣ್ತಾ ಇಲ್ಲ ಮಗು ನೋಡೋಕೆ ಟೈಮ್ ಇಲ್ಲ, ಲಿಪ್ಸ್ಟಿಕ್ ಮೇಕಪ್ ಮಾಡಿಕೊಳ್ಳೋಕೆ ಇವಳಿಗೆ ಬೇಕಾದಷ್ಟು ಟೈಮ್ ಇದೆ.
"ಮಗು ಒಂದೇ ಸಮನೆ ಜೋರಾಗಿ ಅಳುತ್ತಿತ್ತು...."
ಶಾರದಮ್ಮ ಓಡಿ ಬಂದವರೇ ಮಗುವನ್ನು ಎಷ್ಟೇ ಸಂತೈಸಿದರು ಅಳು ನಿಲ್ಲಿಸುತ್ತಿಲ್ಲ. ಮಗಳಿಗೆ ಫೋನ್ ಮಾಡಿದರೆ ಮಗಳು ಬ್ಯುಸಿ ಅಳಿಯ ದ್ರುವ ದೂರದ ದೇಶದಲ್ಲಿ, ಇನ್ಯಾರು ಎಂಬ ಪ್ರೆಶ್ನೆಗೆ ಉತ್ತರ ಯೋಚಿಸುವಷ್ಟು ಸಮಯವಿಲ್ಲದೆ ತಾವೇ ಸೀದಾ ಆಸ್ಪತ್ರೆಗೆ ಹೋದರು...
ಮಗುವಿಗೆ ತಪಾಸಣೆ ಮಾಡಿ ವೈದ್ಯರು ಹೊಟ್ಟೆ ನೋವು ಇದೆ ಎಂದೂ ಒಂದು ಟಾನಿಕ್ ಬರೆದುಕೊಟ್ಟರು. ಟಾನಿಕ್ ಕೊಡಿಸಿದ ಮೇಲೆ ಮಗುವಿನ ಅಳು ಕಡಿಮೆ ಆಗಿ ನಿದ್ರೆಗೆ ಜಾರಿತು.
ಸಿಹಿ ಫೋನ್ ಮಾಡಿದರೂ ಶಾರದಮ್ಮ ಅವರು ಕೋಪದಿಂದ ಫೋನ್ ರಿಸೀವ್ ಮಾಡ್ಲಿಲ್ಲ. ಸಿಹಿ ಮನೆಕೆಲಸದವಳಿಗೆ ಫೋನ್ ಮಾಡಲು, ಮಗುವಿಗೆ ಹೊಟ್ಟೆ ನೋವಿತ್ತು ಎಂದೂ ತಿಳಿಯಿತು, ಮಗು ಇವಾಗ ಸಮಾಧಾನವಾಗಿದೆ ಎಂದು ತಿಳಿದು ಸುಮ್ಮನಾದಳು.
ರಾತ್ರಿ 8 ಇನ್ನು ಸಿಹಿ ಬಂದಿಲ್ಲ. ಶಾರದಮ್ಮನವರಿಗೆ ಇವತ್ತು ಕೋಪ ಜಾಸ್ತಿ ಆಗಿದೆ ಅವರಿಗೂ ಮಗು ಹುಟ್ಟಿದಾಗಿನಿಂದ ಮಗಳ ವರ್ತನೆ ಸ್ವಲ್ಪವು ಹಿಡಿಸುತ್ತಿಲ್ಲ, ಯಾವಾಗ್ಲೂ ಕೆರಿಯರ್, ಕೆಲಸ, ಪಾರ್ಟಿ, ಅಲಂಕಾರ ಅದು ಇದು ಅಂತಾನೆ ಇರ್ತಾಳೆ? ಮಗು ಬಗ್ಗೆ ಕಾಳಜಿನೇ ಇಲ್ಲ. ನಾನು ಈ ಮಗುವಿಗೆ ಅಜ್ಜಿ ಆಗಬಹುದು ತಾಯಿ ಪ್ರೀತಿ ತೋರಿಸಲು ಸಾಧ್ಯವೇ? ಇವತ್ತು ಸರಿಯಾಗಿ ಪಾಠ ಕಲಿಸುತ್ತೇನೆ ಎಂದೂ ಮಗಳು ಬರುವ ದಾರಿಯನ್ನೇ ಕಾಯುತ್ತ ಕುಳಿತರು.
ಸಿಹಿ ಬಂದವಳೇ ತುಂಬಾ ಕೆಲಸ ಇತ್ತು ಎಂದೂ ಬೇಗ ಮಲಗಿಯೇ ಬಿಟ್ಟಳು. ಇವಳು ಬರುವಷ್ಟರಲ್ಲೇ ಮಗುವನ್ನು ಶಾರದಮ್ಮನವರು ಮಲಗಿಸಿ ಬಿಟ್ಟಿದ್ದರು. ರಾತ್ರಿಪೂರ್ತಿ ಶಾರದಮ್ಮನವರೇ ಮಗುವನ್ನು ನೋಡಿಕೊಳ್ಳುತ್ತಿದ್ದರು.
ಶಾರದಮ್ಮ ಬೆಳಗ್ಗೆ ಎದ್ದು ಮಗುವನ್ನು ಮಗಳ ಕೈಗೆ ಕೊಟ್ಟು ಸಿಹಿ ನಾನು ನನ್ನ ಅಣ್ಣನ ಮನೆಗೆ ಹೋಗ್ತಾ ಇದೀನಿ ಸ್ವಲ್ಪ ದಿವಸ ಅಲ್ಲೇ ಇರ್ತೀನಿ? ಮರುಮಾತನಾಡದೆ ಲಗೇಜ್ ಎಲ್ಲಾ ಕಾರಿನಲ್ಲಿ ಇಡುವಂತೆ ಕೆಲಸದವರಿಗೆ ಆಜ್ಞೆ ಮಾಡಿದರು.
ಸಿಹಿ ಹೇಳುವ ಮಾತು ಕೇಳುವ ಪರಿಸ್ಥಿತಿಯಲ್ಲಿರಲಿಲ್ಲ ಅಮ್ಮ ಎಂದೂ ಸುಮ್ಮನೆ ಆದಳು ಸಿಹಿ