ಹೋಟೆಲ್ ಸಿಟಿ ಪ್ಯಾಲೆಸ್ ನ ರೆಸ್ಟಾರೆಂಟ್ ನಿಂದ ಹೊರಬರುತ್ತಿದ್ದಾಗ ಪ್ರಿಯಾಳ ಹೆಜ್ಜೆಯಲ್ಲಿ ಮಂದಗತಿ ಇತ್ತು. ಆದರೆ ಆ ಹೆಜ್ಜೆಯಲ್ಲಿ ಆತ್ಮವಿಶ್ವಾಸದ ಕೊರತೆ ಇರಲಿಲ್ಲ. ಮನಸ್ಸು ಬಿರುಗಾಳಿಗೆ ತಲ್ಲಣಗೊಂಡಿತ್ತು. ಆದರೆ ಅವಳು ತನ್ನ ನಿರ್ಧಾರವನ್ನು ಆ ಬಿರುಗಾಳಿಗೆ ಸಿಲುಕಿ ನಲುಗಲು ಅವಕಾಶ ಕೊಡಲಿಲ್ಲ.
ಅವಳ ಮುಖದಲ್ಲಿ ಉದಾಸತನದ ಒಂದು ಪದರ ಆವರಿಸಿಕೊಂಡಿತ್ತು. ಆದರೆ ಅವಳು ಅದನ್ನು ಮನಸ್ಸಿನೊಳಗೆ ಪ್ರವೇಶಿಸಲು ಅವಕಾಶ ಕೊಡಲಿಲ್ಲ. ಮನೆಗೆ ಬಂದು ಹಾಸಿಗೆ ಮೇಲೆ ಉರುಳಿ, ಅನಿಲ್ ನ ಜೊತೆಗಿನ ತನ್ನ ಸಂಬಂಧಕ್ಕೆ ಅಂತಿಮ ವಿದಾಯ ಹೇಳುವಾಗ ಅವಳ ಕಣ್ಣು ತುಂಬಿ ಬಂದಿದ್ದವು.
ಅವರ ಪ್ರೀತಿ 5 ವರ್ಷಗಳಷ್ಟು ದೀರ್ಘವಾದದ್ದು. ಹೀಗಾಗಿ ಬ್ರೇಕಪ್ ಅಂತೂ ಮನಸ್ಸಿಗೆ ಘಾಸಿ ಮಾಡಿಯೇ ಮಾಡುತ್ತದೆ. ಆದರೆ ಅದಕ್ಕೆ ಬ್ರೇಕಪ್ ಎಂದು ಹೇಳುವುದು ಆ ಸಂಬಂಧಕ್ಕೆ ಅವಮಾನ ಮಾಡಿದಂತೆ. ಬ್ರೇಕಪ್ ಅಂದರೆ ಸಂಬಂಧ ತುಂಡರಿಸಿಕೊಳ್ಳುವುದೇ ಅಲ್ಲವೇ? ಆದರೆ ಆ ಸಂಬಂಧ ಒತ್ತಾಯಪೂರ್ವಕವಾಗಿ ಕಟ್ಟಲ್ಪಟ್ಟಿದ್ದರೆ ಹಾಗೆ ಹೇಳಿದ್ದು ಸರಿ ಎನಿಸುತ್ತಿತ್ತು. ಆದರೆ ಅನಿಲ್ ಜೊತೆಗಿನ ಸಂಬಂಧದಲ್ಲಿ ಒತ್ತಾಯ ಒತ್ತಡಪೂರ್ವಕ ಎಂಬ ಮಾತುಗಳೇ ಅರ್ಥಹೀನ. ಇದಂತೂ ಇಬ್ಬರೂ ತಮ್ಮ ಇಚ್ಛೆಗನುಗುಣವಾಗಿ ಪರಸ್ಪರರ ಕೈ ಹಿಡಿದಿದ್ದರು. ಅದು ಅನುಕೂಲಕರ ಎನಿಸದೇ ಇದ್ದಾಗ ಬಹಳ ಎಚ್ಚರಿಕೆಯಿಂದ ಆ ಬಂಧನದಿಂದ ಹಿಂದೆ ಸರಿಯುವ ನಿರ್ಧಾರವಾಗಿತ್ತು, ಅದೂ ಕೂಡ ಅನಿಲ್ ನ ಭಾವೀ ಜೀವನಕ್ಕೆ ಶುಭ ಹಾರೈಸುತ್ತ.
ಪ್ರಿಯಾ ಹಾಗೂ ಅನಿಲ್ ಕಾಲೇಜಿನ ಮೊದಲ ವರ್ಷದಿಂದಲೇ ಒಳ್ಳೆಯ ಸ್ನೇಹಿತರಾಗಿದ್ದರು. ಕೊನೆಯ ವರ್ಷಕ್ಕೆ ಬರುವ ಹೊತ್ತಿಗೆ ಆ ಸ್ನೇಹ ಪ್ರೀತಿಯ ರೂಪ ಪಡೆದುಕೊಂಡಿತ್ತು. ಆದರೆ ಅದು ಕಥೆ ಕಾದಂಬರಿ ಅಥವಾ ಸಿನಿಮಾಗಳಲ್ಲಿನ ರೀತಿ ಕುರುಡು ಪ್ರೀತಿಯಾಗಿರಲಿಲ್ಲ. ಅದು ಕಾಲಕ್ರಮೇಣ ಪರಿಪಕ್ವ ಹಾಗೂ ತಿಳಿವಳಿಕೆಯ ರೂಪ ಪಡೆದುಕೊಂಡಿತ್ತು. ಅವರ ನಡುವೆ ನಕ್ಷತ್ರಗಳನ್ನು ತಂದುಕೊಡುವ ಆಶ್ವಾಸನೆಯಂತಹ ಮಾತುಗಳು ನಡೆಯುತ್ತಿರಲಿಲ್ಲ. ಅಲ್ಲಿಯೂ ತಮ್ಮ ಕಾಲ ಮೇಲೆ ನಿಂತು ಜೊತೆ ಜೊತೆಗೆ ಮುಂದೆ ಸಾಗುವ ಕನಸು ಕಾಣಲಾಗುತ್ತಿತ್ತು.
ಕಾಲೇಜು ಮುಗಿಯುತ್ತಿದ್ದಂತೆ ಪ್ರಿಯಾ ಹಾಗೂ ಅನಿಲ್ ಇಬ್ಬರೂ ಉದ್ಯೋಗದ ಬೇಟೆಯಲ್ಲಿ ಮಗ್ನರಾದರು. ಎಷ್ಟು ಸಾಧ್ಯವೋ ಅಷ್ಟು ಬೇಗನೇ ಕನಸನ್ನು ನನಸುಗೊಳಿಸುವ ಬಯಕೆ ಅವರದ್ದಾಗಿತ್ತು. ಅಂದಹಾಗೆ ಅನಿಲ್ ಗೆ ತನ್ನದೇ ಆದ ಕೌಟುಂಬಿಕ ವಹಿವಾಟು ಇತ್ತು. ಹಾಗಾಗಿ ಅವನು ತನ್ನನ್ನು ತಾನು ಜಗತ್ತಿನ ಸ್ಪರ್ಧೆಯಲ್ಲಿ ಒಡ್ಡಲು ತಯಾರಾಗಿದ್ದ. ಹೀಗಾಗಿ ಅವನು ಸ್ವತಂತ್ರವಾಗಿ ಏನಾದರೂ ನೌಕರಿ ಮಾಡುವ ಅಪೇಕ್ಷೆ ಇಟ್ಟುಕೊಂಡಿದ್ದ. ಅದು ಅವನಿಗೆ ಕುಟುಂಬದಿಂದ ಬಳುವಳಿ ಬಂದದ್ದಾಗಿರದೆ, ಅದು ತನ್ನ ಪರಿಶ್ರಮದ ಬಲದಿಂದ ದೊರೆತಂತಾಗಿರಬೇಕು.
ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆ ನಡೆಸಲು ಅವನು ಹಾಗೂ ಅವಳು ಇಬ್ಬರೂ ತಮ್ಮ ಹಳ್ಳಿಯಿಂದ ಬೆಂಗಳೂರಿಗೆ ಬಂದರು. ಒಂದೇ ಕೋಚಿಂಗ್ ನಲ್ಲಿ ಸಿದ್ಧತೆ ನಡೆಸುವುದು ಹಾಗೂ ಮನೆಯ ಶಿಸ್ತಿನಿಂದ ದೂರ ಇರುವುದರ ಹೊರತಾಗಿ ಇಬ್ಬರೂ ತಮ್ಮದೇ ಆದ ಪರಿಧಿಯೊಂದನ್ನು ನಿರ್ಮಿಸಿಕೊಂಡಿದ್ದರು. ಏಕಾಂಗಿಯಾಗಿದ್ದಾಗ ಇಬ್ಬರಲ್ಲಿ ಯಾರಾದರೂ ಒಬ್ಬರು ದಾರಿ ತಪ್ಪತೊಡಗಿದಾಗ, ಮತ್ತೊಬ್ಬರು ಅವರನ್ನು ಸರಿದಾರಿಯಲ್ಲಿ ನಡೆಸುತ್ತಿದ್ದರು. ಎಷ್ಟೋ ಜೋಡಿಗಳು ಲಿವ್ ಇನ್ ನಲ್ಲಿ ಇರುವುದನ್ನು ನೋಡಿಯೂ ಕೂಡ ಅವರ ಮನಸ್ಸು ಗುರಿಯಿಂದ ಹಿಂದೆ ಸರಿಯುತ್ತಿರಲಿಲ್ಲ.