ಕಥೆ - ಶ್ರೀವಿಜಯಾ

ಜೀವನದಲ್ಲಿ ಬಹಳ ನೊಂದುಹೋಗಿದ್ದ ಮುನಿಯಮ್ಮ, ಗಂಡ ಬಿಟ್ಟುಹೋದ ನಂತರ ಬದುಕು ಬೇಡವೆಂದು ನಿರ್ಧರಿಸಿದ್ದಳು. ಆದರೆ ಮಗನ ಆಗಮನ ಅವಳ ಬಾಳಲ್ಲಿ ಹೊಸ ಆಶಾಕಿರಣವಾಗಿತ್ತು. ಆದರೆ ವೃದ್ಧಾಪ್ಯದಲ್ಲಿ ಅದೇ ಮಗ ಅವಳನ್ನು ಹೊರದೂಡಿದಾಗ ಮುಂದೆ ಅವಳ ಗತಿ ಏನಾಯಿತು....?

ನಗರದ ಕಲಾಭವನದಲ್ಲಿ ಪುರಸಭೆಯರು ದೊಡ್ಡ ಕಾರ್ಯಕ್ರಮ ಏರ್ಪಡಿಸಿದ್ದರು. ಜನರಿಂದ ಕಿಕ್ಕಿರಿದ ಸಭಾಂಗಣ, ವೇದಿಕೆ ಮೇಲೆ ಗಣ್ಯರ ಸಾಲು. ಅದು ನೂತನವಾಗಿ ಜಿಲ್ಲೆಗೆ ಬಂದಿದ್ದ ಜಿಲ್ಲಾಧಿಕಾರಿಗಳಿಗೆ ಸ್ವಾಗತ ಅಭಿನಂದನಾ ಕಾರ್ಯಕ್ರಮವಾಗಿತ್ತು. ಗಣ್ಯರೆಲ್ಲಾ ಜಿಲ್ಲಾಧಿಕಾರಿಗಳನ್ನು ಪರಿಚಯಿಸಿ, ಅವರ ಕಾರ್ಯವೈಖರಿಯ ಗುಣಗಾನ ಮಾಡುತ್ತಿದ್ದರು. ಗಣ್ಯರ ಮಾತುಗಳೆಲ್ಲಾ ಮುಗಿದ ಮೇಲೆ ಜಿಲ್ಲಾಧಿಕಾರಿಗಳು ಭಾಷಣ ಮಾಡಲು ಎದ್ದುನಿಂತರು. ಸಾದಾ ಬಣ್ಣ, ದೃಢ ಶರೀರ ಮುಖದಲ್ಲಿ ಸರಸ್ವತಿ ಕಳೆ, ಮುಖದಲ್ಲಿ ಮಂದಹಾಸ ಎಲ್ಲರನ್ನು ಸೆಳೆಯುವ ಕಣ್ಣುಗಳು. ಆತನ ಮಾತಿನ ಮೋಡಿಗೆ ಎಲ್ಲರೂ ತಲೆದೂಗಿ ಚಪ್ಪಾಳೆ ಹೊಡೆಯುತ್ತಿದ್ದರು. ಕೊನೆಯಲ್ಲಿ ತಮ್ಮನ್ನು ಪರಿಚಯಿಸಿಕೊಳ್ಳುವಾಗ, ``ಬಡತನದಲ್ಲಿ ಹುಟ್ಟಿ ಬೆಳೆದನು ನಾನು. ನಾನು ಐ.ಎ.ಎಸ್‌ಮಾಡಿ ಜಿಲ್ಲಾಧಿಕಾರಿಯಾಗಿ ನಿಮ್ಮ ಮುಂದೆ ನಿಂತಿರುವುದಕ್ಕೆ ಕಾರಣ ನನ್ನ ತಾಯಿ! ನನ್ನ ಬದುಕು ರೂಪಿಸಿದ ಆ ದೇವತೆ ಇದೇ ಪುರಸಭೆಯಲ್ಲಿ ಸಣ್ಣ ಕೆಲಸದಲ್ಲಿದ್ದು ಬೀದಿ ಬೀದಿ ಕಸಗುಡಿಸಿ, ಮಿಕ್ಕ ಸಮಯದಲ್ಲಿ ಹೂ ಕಟ್ಟಿ, ಕಂಡವರ ಮನೆಯಲ್ಲಿ ಕಸ ಮುಸುರೆ ತೊಳೆದು ಹಣ ಸಂಪಾದಿಸಿ ಕಷ್ಟಪಟ್ಟು ನನ್ನನ್ನು ಓದಿಸಿದರು.

``ನನ್ನ ತಾಯಿಯನ್ನು ನಿಮಗೆಲ್ಲಾ ಪರಿಚಯಿಸಲು ನನಗೆ ಹೆಮ್ಮೆಯಾಗುತ್ತದೆ,'' ಎನ್ನುತ್ತಾ ಅವರು, `ಅಮ್ಮಾ, ವೇದಿಕೆ ಮೇಲೆ ಬಾ.....' ಎಂದು ಕರೆದಾಗ ಕುಳಿತಿದ್ದ ಅವರ ತಾಯಿ ಸಂಕೋಚದಿಂದಲೇ ವೇದಿಕೆಗೆ ಬಂದರು.

``ಏಳೇಳು ಜನ್ಮಕ್ಕೆ ಈಕೆಯೇ ನನ್ನ ಜನ್ಮದಾತೆಯಾಗಬೇಕು,'' ಎಂದು ತನ್ನ ಕೊರಳಲಿದ್ದ ಹಾರವನ್ನು ಆ ತಾಯಿಯ ಕೊರಳಿಗೆ ಹಾಕಿ ಪಾದ ಮುಟ್ಟಿ ನಸಮ್ಕರಿಸಿದಾಗ, ನೆರೆದಿದ್ದ ಜನಸ್ತೋಮದಿಂದ ಭಾರೀ ಕರತಾಡನ!

ಆದರೆ ಹಿಂದೆ ಕುರ್ಚಿಯಲ್ಲಿ ಕುಳಿತು ಇದನ್ನೆಲ್ಲಾ ನೋಡುತ್ತಿದ್ದ ಒಬ್ಬ ಹೆಂಗಸಿನ ಕಣ್ಣಲ್ಲಿ ಮಾತ್ರ ನೀರು ಸುರಿಯುತ್ತಿತ್ತು. ಅವಳೇ ಮುನಿಯಮ್ಮ. ನಡೆಯುತ್ತಿದ್ದ ದೃಶ್ಯವನ್ನು ಕಣ್ತುಂಬಿಕೊಂಡು ಅಲ್ಲಿಂದ ತನ್ನ ಹಟ್ಟಿಯತ್ತ ನಡೆದಳು.

ಮುನಿಯಮ್ಮನಿಗೂ ಕಸಗುಡಿಸುವ ಕೆಲಸ. ಬೆಳಗ್ಗೆ ಬೇಗ ಎದ್ದು ತನ್ನ ಮನೆಗೆಲಸ ಮುಗಿಸಿ, ಬೀದಿ ಬೀದಿ ಕಸ ಗುಡಿಸಿ, ಮನೆ ಮನೆಗಳಿಗೆ ಹೋಗಿ ಕೆಲಸ ಮಾಡುತ್ತಾಳೆ. ವಾಸಕ್ಕೆ ಚಿಕ್ಕ ಗುಡಿಸಲು, ಅವಳಿಗೂ ಒಬ್ಬ ಮಗ. 10ನೇ ತರಗತಿ ಓದುತ್ತಿದ್ದಾನೆ.  ಬುದ್ಧಿ ಬಂದ ಮೇಲೆ ತಾಯಿಯ ಮೇಲೆ ಸಿಟ್ಟು, ಅಸಮಾಧಾನ! ವಿನಾಕಾರಣ ರೇಗಾಡುತ್ತಾನೆ.

ಒಂದು ದಿನ ಮಗ ಹಸಿದುಕೊಂಡು ಊಟದ ಡಬ್ಬಿಯನ್ನೂ ತೆಗೆದುಕೊಳ್ಳದೆ ಶಾಲೆಗೆ ಹೋದನೆಂದು ಬಾಕ್ಸ್ ನಲ್ಲಿ ಊಟವನ್ನು ತೆಗೆದುಕೊಂಡು ಮಗನ ಶಾಲೆಗೆ ಹೋದಳು. ಅವಳನ್ನು ಕಂಡೊಡನೆ ಕಿಡಿಕಿಡಿಯಾದ ಮಗ ಬಾಯಿಗೆ ಬಂದಂತೆ ಬಯ್ಯುತ್ತಾ, ``ಎಷ್ಟು ಸರ್ತಿ ನಿನಗೆ ಹೇಳೋದು..... ಶಾಲೆಯ ಹತ್ತಿರ ಬಂದು ನನಗೆ ಅವಮಾನ ಮಾಡಬೇಡ ಅಂತ. ಬೀದಿ ಕಸ ಕುಡಿಸುವವಳ ಮಗನೆಂದು ಎಲ್ಲರೂ ನನ್ನನ್ನು ಕೀಳಾಗಿ ಕಾಣುತ್ತಾರೆ. ನನ್ನ ಕರ್ಮ ನಿನ್ನ ಮಗನಾಗಿ ಹುಟ್ಟಿದ್ದೇ ನನ್ನ ಅಕ್ಷಮ್ಯ ಅಪರಾಧ, ನಡೀ ಇಲ್ಲಿಂದ....'' ಎಂದು ಕೂಗಾಡಿದ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ