ಕಥೆ - ಲತಾ ಶೇಖರ್

ಮಿಥುನ್ದುಷ್ಟ ವ್ಯಕ್ತಿಯಾಗಿದ್ದ. ಹೆಂಡತಿಯನ್ನು ಕಾಲಕಸ ಎಂಬಂತೆ ಭಾವಿಸುತ್ತಿದ್ದ. ಅವನ ಇದೇ ಯೋಚನೆ ಒಂದು ದಿನ ದುಬಾರಿಯಾಗಿ ಪರಿಣಮಿಸಿತ್ತು......!

ಬಂಗ್ಲೆಗೆ ಕಾಲಿಡುತ್ತಿದ್ದಂತೆ ಗೀತಾಳಿಗೆ ಒಂದು ನಿಶ್ಚಿಂತೆಯಂತೂ ಇತ್ತು. ಅದೆಂದರೆ ಈಗ ಕೇವಲ ಮಿಥುನ್‌ ಮಾತ್ರ ತನ್ನನ್ನು ಭೇಟಿಯಾಗುತ್ತಾನೆಂದು. ಮಿಥುನ್‌ ಬೆಡ್‌ ರೂಮಿನಲ್ಲಿ ಕಾಲು ಚಾಚಿಕೊಂಡು ಲ್ಯಾಪ್‌ ಟಾಪ್‌ ನಲ್ಲಿ ಆಫೀಸ್‌ ಕೆಲಸದಲ್ಲಿ ಮಗ್ನನಾಗಿದ್ದ. ಅವನ ಬೆನ್ನು ಬಾಗಿಲ ಕಡೆ ಇತ್ತು. ಗೀತಾ ಮಿಥುನ್‌ ನ ಬೆನ್ನ ಮೇಲೆ ನಿಧಾನವಾಗಿ ಕೈಯಿಂದ ತಟ್ಟಿದಳು.

ಮಿಥುನ್‌ ಒಮ್ಮೆಲೆ ಅಚ್ಚರಿಗೊಳಗಾದ. ಅವನು ತನ್ನನ್ನು ತಾನು ಸಂಭಾಳಿಸಿಕೊಳ್ಳುತ್ತಾ, ``ಓಹ್‌... ನೀನು ನಾದಿನಿ ಗೀತಾ....'' ಎಂದ.

``ಹೌದು ಭಾವ ನಾನೇ..... ಅಂದಹಾಗೆ ನೀವು ಅಕ್ಕನಿಗಾಗಿ ಕಾಯುತ್ತಿದ್ದೀರಾ? ಅವಳು ಆಸ್ಪತ್ರೆಗೆ ಹೋಗಿರಬೇಕಲ್ವಾ.....?''

``ಇಲ್ಲ.... ಇಲ್ಲ.... ನಾನು ನಿನ್ನನ್ನೇ ನೆನಪಿಸಿಕೊಳ್ತಿದ್ದೆ.''

``ಹಾಗಿದ್ದರೆ, ನಾವು ಈಗಲೇ ಒಂದು ಸೆಲ್ಛೀ ತೆಗೆದುಕೊಳ್ಳೋಣ. ನಿಮ್ಮ ಮದುವೆಯಾಗಿ 5 ವರ್ಷ ಆಯಿತು. ಈ ನಿಮ್ಮ ಏಕೈಕ ನಾದಿನಿಯ ಜೊತೆಗೆ ಒಂದೇ ಒಂದು ಸೆಲ್ಛೀ ಕೂಡ ಇಲ್ಲ,'' ಎಂದು ನಾದಿನಿ ಗೀತಾ ತನ್ನ ದೂರು ಹೇಳಿಕೊಂಡಳು.

``ಹೇಗಿರಬೇಕು ಸೆಲ್ಛೀ? ಈ 5 ವರ್ಷಗಳಲ್ಲಿ ನೀನು ಹಾಲುಗಲ್ಲದ ಹಸುಳೆ ಥರ ಇದ್ದೆ. ನನ್ನ ಹತ್ತಿರ ಎಲ್ಲಿ ಸುಳಿಯುತ್ತಿದ್ದೆ?'' ಎಂದು ಹೇಳುತ್ತಾ ಅವಳ ನಿಕಟ ಹೋಗಿ, ಕಣ್ಣಲ್ಲಿ ಇಣುಕಿದ.

ಗೀತಾಳ ಮೈಮನದಲ್ಲಿ ಅದೇನೋ ಪುಳಕ. ಅವಳು ಭಾವನ ಮೈಗೆ ಅಂಟಿಕೊಂಡು ಸೆಲ್ಛೀ ತೆಗೆದುಕೊಳ್ಳತೊಡಗಿದಳು. ಅವಳು ಅಷ್ಟು ಹತ್ತಿರ ಬಂದಿರುವುದನ್ನು ನೋಡಿ ಅವನಿಗೆ ಉಸಿರೇ ನಿಂತಂತಾಯಿತು. ಸೆಲ್ಛೀ ಕ್ಲಿಕ್ಕಿಸಿಕೊಂಡ ಬಳಿಕ ನಾದಿನಿ, ``ನೋಡಿ ಭಾವ, ಸೆಲ್ಛಿಯಲ್ಲೂ ನಾವು ಅದೆಷ್ಟು ಚೆನ್ನಾಗಿ ಕಾಣ್ತಿದ್ದೇವೆ,'' ಎಂದು ಹೇಳಿದಳು.

ಮಿಥುನ್‌ ಲ್ಯಾಪ್‌ ಟಾಪ್‌ ಬಿಟ್ಟು ಬೆಡ್‌ ಮೇಲೆ ಬರುತ್ತಾ ಗೀತಾಳನ್ನು ಒಮ್ಮೆಲೆ ಬಾಹುಗಳಲ್ಲಿ ಬಂಧಿಸಿದ.

``ಭಾವ, ಅಕ್ಕನಿಗೆ ಇದು ಗೊತ್ತಾಗಿಬಿಟ್ಟರೆ.....?''

``ಕಳೆದ ಅನೇಕ ದಿನಗಳಿಂದ ನಾನು ನಿನ್ನ ಹೃದಯದಲ್ಲಿ ಆಗುತ್ತಿದ್ದ ಭಾವನೆಗಳನ್ನು ಗಮನಿಸುತ್ತಿದ್ದೆ. ಈಗ ನಿನ್ನ ಅಕ್ಕನನ್ನು ಮರೆತುಬಿಡು. ಮನೆಯವಳನ್ನು ಹೇಗೆ ಹದ್ದುಬಸ್ತಿನಲ್ಲಿಡಬೇಕೆಂದು ನನಗೆ ಚೆನ್ನಾಗಿ ಗೊತ್ತು.''

ಗೀತಾ ಆವರೆಗೆ ಮಿಥುನ್‌ ನ ಬಾಹುಗಳಲ್ಲಿ ಬಂಧಿಯಾಗಿಬಿಟ್ಟಿದ್ದಳು. 23 ವರ್ಷದ ನವ ಯುವತಿ 35 ವರ್ಷದ ಮಿಥುನ್‌ ನ ಪೌರುಷವನ್ನು ತನ್ನ ವಶಕ್ಕೆ ಪಡೆದಿದ್ದಳು.

ಪ್ರಥಮ ಅನುಭವದ ಲೀಲೆ ಮುಗಿದ ಬಳಿಕ ಗೀತಾಳ ಮನಸ್ಸು ತಳಮಳಗೊಂಡಿತು.

``ಭಾವ, ನನ್ನಿಂದ ತಪ್ಪಾಗಿ ಹೋಯ್ತಾ?''

ಮಿಥುನ್‌ ಅವಳ ತುಟಿಗೆ ತನ್ನ ತುಟಿ ಸೇರಿಸುತ್ತಾ ಅವಳಿಗೆ ಭರವಸೆ ಕೊಡುತ್ತಾ, ``ಹೆಂಡತಿ ತನ್ನ ಗಂಡನನ್ನು ಸದಾ ಖುಷಿಯಾಗಿಡಬೇಕು ಎನ್ನುವುದು ನಮ್ಮ ಪರಂಪರೆ. ಈಗ ನಾನು ಹೇಗೆ ಖುಷಿಯಾಗುತ್ತೇನೆ ಎಂದು ತಿಳಿದುಕೊಳ್ಳುವ ಅಗತ್ಯವೇ ಇಲ್ಲ. ನೀನು ಇದರ ಬಗ್ಗೆ ಹೆಚ್ಚು ಯೋಚಿಸಬೇಡ. ನೀನು ಕಾಲೇಜಿನ ವಿದ್ಯಾಭ್ಯಾಸ ಆದಷ್ಟು ಬೇಗ ಮುಗಿಸು. ಬಳಿಕ ನಿನ್ನನ್ನು ನನ್ನದೇ ಡಿಪಾರ್ಟ್‌ ಮೆಂಟ್‌ ನಲ್ಲಿ ಕೆಲಸಕ್ಕೆ ಸೇರಿಸಿಕೊಳ್ತೀನಿ. 11 ಗಂಟೆ ಆಗ್ತಾ ಬಂತು. ನಾನೂ ಕೂಡ ಆಫೀಸಿಗೆ ಹೋಗಬೇಕಿದೆ,'' ಎಂದು ಹೇಳಿದ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ