ಕಥೆ ದೀಪಾ ಹಿರೇಮಠ

ಸ್ವಾರ್ಥಿ ಗಂಡನಿಂದ ದೂರವಾಗಿ, ಅಂಗವಿಕಲ ಮಗುವಿನ ತಾಯಿಯಾಗಿ, ಮನೋಹರಿ ಯಾವ ರೀತಿ ಜೀವನದಲ್ಲಿ ಸಾರ್ಥಕತೆ ಕಂಡುಕೊಳ್ಳಲು ಸಾಧ್ಯವಾಯಿತು? ಅವಳ ಹೋರಾಟ ಯಶಸ್ವಿಯಾಯಿತೇ......?

``ಯಾರ ಮಗು ಇದು! ಇಂಥ ದೊಡ್ಡ ಪಾರ್ಟಿಯಲ್ಲಿ ಕರೆದುಕೊಂಡು ಬಂದಿದ್ದಾರೆ! ನೋಡಿ ಆ ಮಗು ಹೇಗಿದೆ? ನೋಡಲಾಗುತ್ತಿಲ್ಲ....''

``ಮಗಾ.... ಅದು ಸ್ಪೆಷಲ್ ಚೈಲ್ಡ್ ಸುಮ್ಮನಿರೋ....''

``ಏನು ಸುಮ್ಮನಿರುವುದು.... ಯಾರು ಈ ಮಗುವಿನ ಪೇರೆಂಟ್ಸ್.....?'' ಜೋರಾಗಿ ಕೇಳಿದ.

``ಅದು ನನ್ನ ಮಗು.....''

ಎಲ್ಲರೂ ಆಶ್ಚರ್ಯದಿಂದ ತಿರುಗಿ ನೋಡಿ, ``ಮೇಡಂ..... ಮೇಡಂ.... ಇದು ನಿಮ್ಮ ಮಗುನಾ....?''

``ಹೌದು ಇವಳು ನನ್ನ ಮಗಳು ಐಶ್ವರ್ಯಾ..... ಐಶ್ವರ್ಯಾ  ಐಶ್ವರ್ಯಾ ಇಂಡಸ್ಟ್ರಿಯ ಏಕೈಕ ವಾರಸುದಾರಳು.''

``ಸಾರಿ ಮೇಡಂ.....''

``ಇರಲಿ ಬಿಡು ಹರೀಶ್‌. ನಿನಗೇನು ಗೊತ್ತು....''

``ಎಕ್ಸ್ ಟ್ರೀಮ್ಲಿ ಸಾರಿ ಮೇಡಂ.''

``ನನ್ನ ಮಗಳಿಗೆ, ತಾಯಿಯ ಪ್ರತಿ ಏಳಿಗೆ, ಪ್ರತಿ ಯಶಸ್ಸನ್ನು ಅನುಭವಿಸುವ ಹಕ್ಕು ಇದೆ. ಅದನ್ನು ಅವಳಿಂದ ಯಾರೂ ಕಸಿದುಕೊಳ್ಳಲು ಆಗದು.''

ವೇದಿಕೆ ಮೇಲೆ ನಿಂತ ಗಣ್ಯರೆಲ್ಲರೂ ಚಪ್ಪಾಳೆ ತಟ್ಟಿದರು. ಅವರೊಂದಿಗೆ ಸಭೆಗೆ ಬಂದ ಅತಿಥಿಗಳೆಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟಿದರು.

ಪತ್ರಕರ್ತರು ಮುಂದೆ ಬಂದು, ``ಮೇಡಂ, ನೀವು ಕಾರ್ಪೋರೇಟ್‌ ಜಗತ್ತಿನಲ್ಲಿ ಮಹಾರಾಣಿ. ನಿಮ್ಮ ಕಂಪನಿ ಸಾಧಿಸಬೇಕಾದ್ದು ಏನೂ ಉಳಿದಿಲ್ಲ. ಎಲ್ಲ ಕ್ಷೇತ್ರಗಳಲ್ಲಿ ಐಶ್ವರ್ಯ ಇಂಡಸ್ಟ್ರಿ ಹೆಸರು ಮಾಡಿದೆ. ಆದರೆ ಈ ಬೃಹತ್‌ ಸಮಾರಂಭದಲ್ಲಿ ಝಗಮಗಿಸುವ ಬೆಳಕಲ್ಲಿ ನಿಮ್ಮ ಜೀವನದ ಒಂದು ಭಾಗ ಕತ್ತಲೆಯಲ್ಲಿಯೇ ಇದೆ ಅಂತ ಅನಿಸುವುದಿಲ್ಲವೇ?'' ಎಂದು ಕೇಳಿಯೇಬಿಟ್ಟರು.

``ನೀವು ತಪ್ಪು ಹೇಳುತ್ತಿದ್ದೀರಾ. ಅಂದರೆ, ಈ ಝಗಮಗಿಸುವ ಬೆಳಕಿನಲ್ಲಿ ನನ್ನ ಜೀವನದ ಒಂದು ಭಾಗ ನೂರರಷ್ಟು ಪ್ರತಿದಿನ, ಪ್ರತಿ ಕ್ಷಣ ಬೆಳಕನ್ನು ಹೊರಸೂಸುತ್ತದೆ. ಆ ಬೆಳಕು ನನಗಾಗಿ ಮಾತ್ರ,'' ಮನೋಹರಿ ಮುಗುಳ್ನಗುತ್ತಾ ಅದೇ ಆತ್ಮವಿಶ್ವಾಸದಿಂದ ಹೇಳಿದಳು.

ಪತ್ರಕರ್ತರಿಗೆ ಒಂದು ಎಳೆ ಸಿಕ್ಕರೆ ಸಾಕು ಬಿಟ್ಟಾರೆಯೇ? ಮುಂದಿನ ಪ್ರಶ್ನೆ ಕೇಳಿದರು, ``ಹಾಗಾದರೆ ಇಂದು ಆ ಬೆಳಕಿನ ಬಗ್ಗೆ ಹೇಳುತ್ತೀರಾ ಮೇಡಂ...?''

``ಅಮ್ಮಾ.....'' ಎಂದು ಐಶ್ವರ್ಯಾ ಕೂಗಿದಳು. ಮನೋಹರಿ ಮಗಳ ಭುಜದ ಮೇಲೆ ಕೈ ಇಟ್ಟಳು. ಅವಳು ನಗುತ್ತಾ ತಾಯಿಯ ಮುಖ ತಿರುಗಿ ನೋಡಿ ತನ್ನ ಎರಡೂ ಕೈಗಳನ್ನು ಹರಡಿಸುತ್ತಾ ಚಪ್ಪಾಳೆ ತಟ್ಟುತ್ತಿದ್ದಳು. ಬಾಯಿ ಸ್ವಲ್ಪ ವಾರೆ ಇದ್ದುದರಿಂದ ಜೊಲ್ಲು ಸೋರುತ್ತಿತ್ತು. ಮತ್ತೆ ಹಿಂದೆ ತಿರುಗಿದಳು. ಗೋಣು ಅಲುಗಾಡುತ್ತಲೇ ಇತ್ತು. ಮನೋಹರಿ ತನ್ನ ಕೈಯಲ್ಲಿದ್ದ ಟಿಶ್ಯೂ ಪೇಪರ್‌ ನಿಂದ ಜೊಲ್ಲು ಒರೆಸಿದಳು.

ಮೀಡಿಯಾದ ಕ್ಯಾಮೆರಾ, ಸ್ಪೀಕರ್‌ ಗಳು, ಪತ್ರಕರ್ತರು ಅವಳನ್ನು ಸುತ್ತುವರೆದರು. ಸಮಾರಂಭದಲ್ಲಿ ಉಪಸ್ಥಿತರಿದ್ದ ಸಾವಿರಾರು ಕಣ್ಣುಗಳು ಅವಳನ್ನೇ ನೋಡುತ್ತಿದ್ದವು. ಆದರೆ ಎರಡು ಕಣ್ಣುಗಳಲ್ಲಿ ಮಾತ್ರ ಆತಂಕ ಮನೆ ಮಾಡಿತ್ತು.

``ಇಂದು ನನ್ನ ಜೀವನದ ಉತ್ಸಾಹ, ಖುಷಿ, ಸಂತೋಷ, ನನ್ನ ಪ್ರೇರಣೆ, ನನ್ನ ಸ್ವಾಭಿಮಾನ ಎಲ್ಲವೂ ಆದ ನನ್ನ ಮಗಳನ್ನು ನಿಮಗೆ ಪರಿಚಯಿಸುವೆ. ಇವಳೇ ನನ್ನ ಮಗಳು ಐಶ್ವರ್ಯಾ! ದಿ ಗ್ರೇಟ್‌ ಬಿಸ್‌ ನೆಸ್‌ ಐಕಾನ್‌ ಮನೋಹರಿಯ ಒಬ್ಬಳೇ ಮಗಳು,'' ಎಂದು ನಕ್ಕಳು ಮನೋಹರಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ