ಕಥೆ - ಕುಮುದಾ ರಾವ್‌ 

ಅಜಿತ್‌ ಮತ್ತು ಸುರಭಿಯ ಮದುವೆ ಇದ್ದಕ್ಕಿದ್ದಂತೆ ನಿಶ್ಚಯವಾಯಿತು. ಮದುವೆ ಅಂದರೆ ಹಾರಾಡುತ್ತಿದ್ದ ಫ್ಯಾಷನ್‌ ಡಿಸೈನರ್ ಅಜಿತ್‌ ಅವಳನ್ನು ಯಾವುದೋ ಮದುವೆಯಲ್ಲಿ ನೋಡಿ  ಇಷ್ಟಪಟ್ಟಿದ್ದ . ಅವನ ತಾಯಿ ಕಮಲಾದೇವಿ ಅತಿಥಿಗಳಿಂದ ತುಂಬಿದ್ದ ಚಪ್ಪರದಲ್ಲಿ ಸುರಭಿಯ ತಾಯಿ ನೀಲಾರ ಎದುರಿಗೆ ಹೋಗಿ ತನ್ನ ದುಬಾರಿ ಸೀರೆಯ ಸೆರಗನ್ನು ಹರಡಿ, ``ನನ್ನ ಮಗ ಮೊದಲ ಸಲ ಒಬ್ಬ ಹುಡುಗಿಯಲ್ಲಿ ಆಸಕ್ತಿ ತೋರಿಸ್ತಿದ್ದಾನೆ. ಅವನು ನಿಮ್ಮ ಮಗಳನ್ನು ತೋರಿಸಿ ಈ ಹುಡುಗಿ ಜೊತೆ ಮದುವೆ ಮಾಡಿಸುವ ಹಾಗಿದ್ದರೆ ನಾನು ಸಿದ್ಧ ಅಂತ ಹೇಳಿದ. ನೀವು ಈ ಮದುವೆಗೆ ಹ್ಞೂಂ ಅನ್ನುವವರೆಗೆ ನಾನು ಹೀಗೇ ನಿಮ್ಮೆದುರು ನಿಂತಿರ್ತೀನಿ,'' ಎಂದಳು.

ಈ ರೀತಿಯ ಅನಿರೀಕ್ಷಿತ ಪ್ರಸ್ತಾಪದಿಂದ ಗಲಿಬಿಲಿಗೊಂಡು ನೀಲಾ ಏನಾದರೂ ಹೇಳುವ ಮೊದಲೇ ಅವಳ ಬಳಿ ನಿಂತಿದ್ದ ಮಹಿಳೆಯೊಬ್ಬಳು ಹೇಳಿದಳು. ``ಮೊದಲನೇ ಸಲ ಯಾರೋ ಒಬ್ಬ ಹುಡುಗೀನ ಮದುವೆಗೆ ಒಪ್ಪಿಕೊಂಡಿದೀಯ ಕಮಲಾ. ಆದರೆ ಫ್ಯಾಷನ್‌ ಡಿಸೈನರ್‌ ಯಾರೋ ಹುಡುಗಿಯಲ್ಲಿ ಮೊದಲ ಬಾರಿ ಆಸಕ್ತಿ ತೋರಿಸ್ತಿದ್ದಾನೆ ಅಂದರೆ ಜೀರ್ಣಿಸಿಕೊಳ್ಳಕ್ಕಾಗಲ್ಲ.'' ಹತ್ತಿರ ನಿಂತಿದ್ದ ಮಹಿಳೆಯರು ಜೋರಾಗಿ ನಕ್ಕರು. ನೀಲಾಗೆ ನಸುನಗದೆ ಇರಲಾಗಲಿಲ್ಲ. ಕಮಲಾ ಮಾತ್ರ ಹಿಂಜರಿಯದೆ, ``ಫ್ಯಾಷನ್‌ ಜಗತ್ತಿನ ಬಗ್ಗೆ ನಿನ್ನ ತಿಳಿವಳಿಕೆ ಬಹಳ ಕಡಿಮೆ ಅನ್ನಿಸುತ್ತೆ ಊರ್ಮಿಳಾ , ನನ್ನ ಮಗ ಗಂಡಸರ ಉಡುಪುಗಳ ಡಿಸೈನ್‌

ಮಾಡ್ತಾನೆ, ಹುಡುಗೀರದಲ್ಲ,'' ಎಂದಳು.

ನೀಲಾ ಕಮಲಾಳ ಹರಡಿದ ಸೆರಗನ್ನು ಕೈಗಳಿಂದ ಜೋಡಿಸಿ ಹೇಳಿದಳು, ``ಸುರಭಿ ಮತ್ತು ಅವಳ ತಂದೆಯ ಒಪ್ಪಿಗೆಯಿಲ್ಲದೆ ನಾನು ಮಾತ್ರ ಒಪ್ಪಿದರೆ ಅದಕ್ಕೇನು ಬೆಲೆ ಇದೆ? ಎಲ್ಲಿ, ಯಾವಾಗ ಭೇಟಿಯಾಗ್ಬೇಕು ಅನ್ನೋದನ್ನು ನಾನು ನಾಳೆ ಬೆಳಗ್ಗೆ ಫೋನ್‌ಮಾಡಿ ತಿಳಿಸ್ತೀನಿ,'' ಅವಳು ಹೇಳಿದ್ದು ಒಂದು ರೀತಿಯಲ್ಲಿ ಆಶ್ವಾಸನೆಯಾಗಿತ್ತು. ಮರುದಿನ ಅಜಿತನ ಕುಟುಂಬದವರ ಜೊತೆ ಅವನ ಸೋದರತ್ತೆಯೂ ಬಂದಿದ್ದಳು. ಮಾತನಾಡುವಾಗ ಆಕೆ, ``ನಿನ್ನೆ ಊರ್ಮಿಳೆ ಹೇಳಿದ ಮಾತುಗಳಿಂದ ನಿಮಗೂ  ನಮ್ಮ ಹುಡುಗ ಅದ್ಹೇಗೆ ಹುಡುಗಿಯರ ಕಡೆ ಆಕರ್ಷಿತನಾಗಿಲ್ಲ ಅಂತ ಅನುಮಾನ ಬರಬಹುದು. ನನ್ನ ಸೋದರಳಿಯನದು ಪರೋಪಕಾರಿ ಸ್ವಭಾವ. ತನ್ನ ಕೆಲಸವಲ್ಲದೆ, ಅವನು ಹೆಚ್ಚಿನ ಸಮಯ ಇತರರ ದುಃಖನೋವುಗಳನ್ನು ಹಂಚಿಕೊಳ್ಳುವುದರಲ್ಲಿ ಕಳೆಯುತ್ತದೆ. ತನ್ನ ಬಗ್ಗೆ ಯೋಚಿಸುವುದಕ್ಕೆ ಅವನಿಗೆ ಸಮಯವೇ ಸಿಗುವುದಿಲ್ಲ. ಇನ್ನು ಹುಡುಗಿಯರ ಬಗ್ಗೆ ಹೇಗೆ ಯೋಚಿಸುತ್ತಾನೆ?''

``ಅದ್ಭುತ ಅತ್ತೆ, ಎಷ್ಟು ಸರಳವಾಗಿ ನನ್ನನ್ನು ಸಾಧು.. ಸನ್ಯಾಸಿ ಮಾಡಿಬಿಟ್ಟಿರಿ. ಈಗ ಸುರಭಿ ನನ್ನನ್ನು ಮದುವೆಯಾಗಲು ಒಪ್ಪದಿದ್ದರೆ ಅವಳದು ತಪ್ಪು ಎಂದು ಹೇಳಲು ಆಗುವುದಿಲ್ಲ,'' ಅವನು ತಮಾಷೆ ಮಾಡಿದ್ದು ಕೇಳಿ ಎಲ್ಲರೂ ನಕ್ಕರು.

``ಸುರಭಿಯ ಇಷ್ಟ ಏನು ಎಂದು ತಿಳಿದುಕೊಳ್ಳೋದು ಒಳ್ಳೇದು. ಅವಳಿಗೆ ನೀನು ಸರಳ ಅಭ್ಯಾಸಗಳ ವ್ಯಕ್ತಿ ಎಂದು ಹೇಳಿಬಿಡು. ಅವಳನ್ನು ಎಲ್ಲಿಗಾದರೂ ತಿರುಗಾಡಲು ಕರೆದುಕೊಂಡು ಹೋಗು,'' ಅತ್ತೆ ಹೇಳಿದರು.

``ಇದಲ್ಲವೇ ಅತ್ತೆ ಸರಿಯಾದ ಮಾತು,'' ಅಜಿತ್‌ ಮತ್ತೆ ತಮಾಷೆ ಮಾಡಿದ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ