ಬೆಳಗ್ಗೆ 5 ಗಂಟೆಗೆ ಸರಿಯಾಗಿ ಅಲಾರಂ ಹೊಡೆಯಿತು. ಸುಧಾ ಕೈ ಚಾಚಿ ಅಲಾರಂ ನಿಲ್ಲಿಸಿದಳು. ಅವಳಿಗಿನ್ನೂ ಪೂರ್ತಿ ಎಚ್ಚರವಾಗಿರಲಿಲ್ಲ. ಆದರೂ ಏನೋ ನೆನಪಿಗೆ ಬಂದು ಅವಳ ತುಟಿಗಳ ಮೇಲೆ ಒಂದು ಮಧುರ ಮುಗುಳ್ನಗೆ ಮೂಡಿತು. ಅವಳು ಮೊಣಕೈ ಆಧಾರದಲ್ಲಿ ಕೊಂಚ ಎದ್ದು ಪಕ್ಕದಲ್ಲಿ ಮಲಗಿದ್ದ ಗಂಡ ವಿಶ್ವನ ಮುಖವನ್ನು ಪ್ರೀತಿಯಿಂದ ನೋಡ ತೊಡಗಿದಳು. ನಂತರ ಭಾವ ತೀವ್ರತೆಯಿಂದ ವಿಶ್ವನ ಹಣೆಗೆ ಮುತ್ತಿಟ್ಟು ಹಾಸಿಗೆ ಬಿಟ್ಟು ಏಳತೊಡಗಿದಳು.

ಅವಳು ಏಳುತ್ತಿದ್ದಂತೆ ಥಟ್ಟನೆ ವಿಶ್ವ ಅವಳನ್ನು ಎಳೆದು ತನ್ನ ಮೇಲೆ ಬೀಳಿಸಿಕೊಂಡ.

``ಅರೆ, ಏನು ಮಾಡ್ತಿದ್ದೀರಿ?'' ಅವನ ಹಿಡಿತದಿಂದ ತಪ್ಪಿಸಿಕೊಳ್ಳಲು ಸುಧಾ ಹೆಣಗತೊಡಗಿದಳು.

``ಏನಿಲ್ಲ. ನಿನ್ನನ್ನು ಕೊಂಚ ತೂಗುತ್ತಿದ್ದೇನೆ,'' ವಿಶ್ವ ತುಂಟತನದಿಂದ ಹೇಳಿದ.

``ನಾನು ದಪ್ಪಗಿದ್ದೀನೀಂತ ಹಾಸ್ಯ ಮಾಡಬೇಡಿ. ಇವತ್ತಿನಿಂದ ವಾಕ್‌ಗೆ ಹೋಗುತ್ತಿದ್ದೇನೆ.''

``ಅದಕ್ಕೆ ಇವತ್ತು ನಿನ್ನ ಸೊಂಟದ ಅಳತೆ ತಗೋಬೇಕಾಗಿದೆ. ಏಕೆಂದರೆ ನೀನು ನಿಜವಾಗಿ ವಾಕ್‌ ಮಾಡ್ತಿಯೋ ಅಥವಾ ನಿನ್ನ ಗೆಳತಿಯರ ಜೊತೆ ಹರಟೆ ಹೊಡೀತಿರ್ತಿಯೋ ಗೊತ್ತಾಗಲ್ಲ.''

``ನನ್ನ ಮೇಲೆ ಕಣ್ಣಿಡೋಕೆ ನೀವು ಜೊತೇಲೇ ಬರಬಹುದಿತಲ್ಲಾ?''

``ಸರಿಯಾಗಿ 1 ವರ್ಷದ ಹಿಂದೆ ನೀನು ನವ ವಧುವಾಗಿ ಈ ಮನೆಗೆ ಬಂದಿದ್ದೆ. ಆಗ ನಾನು ಸಿಐಡಿ ಕೆಲಸ ಮಾಡಲಿಲ್ಲ. ಈಗ್ಯಾಕೆ ಮಾಡ್ಲಿ?''

``ಹ್ಯಾಪಿ ಮ್ಯಾರೇಜ್‌ ಆ್ಯನಿರ್ಸರಿ ಡಿಯರ್‌,'' ಸುಧಾ ಪ್ರೀತಿಯಿಂದ ವಿಶ್ವನ ಕೆನ್ನೆಯನ್ನು ಚುಂಬಿಸಿದಳು.

``ಥ್ಯಾಂಕ್ಯು ಡಾರ್ಲಿಂಗ್‌. ನಮ್ಮ ವೈವಾಹಿಕ ಜೀವನದ ಸಂತಸಗಳನ್ನು ಉಳಿಸಿಕೊಳ್ಳುವ ನಮ್ಮ ನಿರ್ಧಾರವನ್ನು ಎಂದೂ ಬದಲಿಸಬಾರದು. ಒಳ್ಳೆಯ ಮನಸ್ಸಿನಿಂದ ಹೊಸದಾಗಿ ಆರಂಭಿಸಲು ದೃಢ ಸಂಕಲ್ಪ ಮಾಡೋಣ.''

``ಹೌದು,'' ಉಕ್ಕಿ ಬಂದ ಕಣ್ಣೀರು ವಿಶ್ವನಿಗೆ ಕಾಣದಂತೆ ಸುಧಾ ಅವನನ್ನು ಅಪ್ಪಿಕೊಂಡಳು.

1 ಗಂಟೆಯ ನಂತರ ಅವಳು ಬೆವರಿನಿಂದ ತೊಯ್ದು ಮನೆಗೆ ಬಂದಾಗ ವಿಶ್ವ ಪ್ರೀತಿಯಿಂದ ನಿಂಬೆ ಜೂಸ್‌ ತಂದುಕೊಟ್ಟ.

ಅವನ ಈ ಪುಟ್ಟ ಸೇವೆಯಿಂದ ಸುಧಾಳ ಮುಖ ಗುಲಾಬಿಯಂತೆ ಅರಳಿತು. ನಗುತ್ತಾ ಗಂಡನಿಗೆ ಥ್ಯಾಂಕ್ಸ್ ಹೇಳಿ ಜೂಸ್‌ನ ಪ್ರತಿ ಗುಟುಕಿನ ಸ್ವಾದವನ್ನು ಅನುಭವಿಸತೊಡಗಿದಳು.

``ನೀನು ಒಂದು ದಿನದಲ್ಲೇ ಸಣ್ಣಗಾದ ಹಾಗೆ ಕಾಣ್ತೀಯ,'' ವಿಶ್ವ ಅವಳಿಗೆ ಉತ್ಸಾಹ ತುಂಬಲು ಹೊಗಳಿದ.

``ನಿಮ್ಮ ಸುಳ್ಳು ಹೊಗಳಿಕೆಗೆ ಧನ್ಯವಾದಗಳು,'' ಸುಧಾ ಖುಷಿಯಿಂದ ಹೇಳಿದಳು.

``ಹಾಗೇನಿಲ್ಲ.. ಆದ್ರೂ ಇದು ನೀನು ಬದಲಾಗ್ತಿರೋ ಸೂಚನೆ.''

``ಸರಿಯಾಗಿ ಹೇಳಿದ್ರಿ. ನಿಮ್ಮ ಸಂತೋಷಕ್ಕಾಗಿ ಹಾಗೂ ನನ್ನ ಆರೋಗ್ಯಕ್ಕಾಗಿ ಈ ನಿಮ್ಮ ದಾಸಿ ಸದಾ ಫಿಟ್‌ ಆಗಿರಬೇಕ್ವಾ?''

``ಹೌದು. ಈಗ ಸುತ್ತಾಡಲು ಹೋಗೋಕೆ ಎಷ್ಟು ಹೊತ್ತಿಗೆ ರೆಡಿಯಾಗ್ತೀಯಾ?''

``ಅಂದರೆ, ಇವತ್ತಿನ ವಿಶೇಷ ಪಯಣಕ್ಕೆ ಸಿದ್ಧಳಾಗಲು ನಾನು ಎಷ್ಟು ಹೊತ್ತು ತೆಗೆದುಕೊಳ್ತೀನಿ ಅಂತಾನಾ?''

``ಅದನ್ನೇ ತಿಳ್ಕೋಬೇಕೂಂತಿದ್ದೀನಿ.''

``ಮಹಾಸ್ವಾಮಿ, ನಾನು ರೆಡಿಯಾಗಲು ಬಹಳ ಹೊತ್ತು ತೆಗೆದುಕೊಳ್ತೀನೀಂತ ಇನ್ನು ಮೇಲೆ ನೀವು ದೂರೋಕಾಗಲ್ಲ. ನಾವು ಸರಿಯಾಗಿ 8 ಗಂಟೆಗೆ ಮನೆ ಬಿಡೋಣ,'' ಎಂದು ಚಿಟಿಕೆ ಹೊಡೆಯುತ್ತಾ ಸುಧಾ ಎದ್ದು ಸ್ವಲ್ಪ ಹೊತ್ತು ವಿಶ್ವನ ಕೂದಲಿನೊಂದಿಗೆ ಆಟವಾಡಿ ನಂತರ ಬಚ್ಚಲು ಮನೆಗೆ ಹೋದಳು. ಇಬ್ಬರೂ ಡ್ರೆಸ್‌ ಮಾಡಿಕೊಂಡು ಮಹಡಿಯಿಂದ ಕೆಳಗಿಳಿದು ಬಂದರು. ಕೆಳಗಿನ ಮನೆಯಲ್ಲಿ ಸುಧಾಳ ಅತ್ತೆ, ಮಾವ, ಹಿರಿಯ ವಾರಗಿತ್ತಿ, ಭಾವ ಮತ್ತು ಒಬ್ಬ ನಾದಿನಿ ಇದ್ದರು. ವಾರಗಿತ್ತಿ ಜ್ಯೋತಿ ಅವರಿಬ್ಬರಿಗೂ ಮೊದಲನೇ ವಿವಾಹ ವಾರ್ಷಿಕೋತ್ಸವಕ್ಕೆ ಶುಭಾಶಯ ಕೋರಿದರು. ಸುಧಾ ತನ್ನ ಪರ್ಸ್‌ನಿಂದ ಚಾಕಲೇಟ್‌ ತೆಗೆದು ಅವರಿಗೆ ಕೊಟ್ಟಾಗ ಅವರು ಖುಷಿಯಾದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ